Bengaluru: ದಿಢೀರ್ ಸೇತುವೆ ಕುಸಿದು 30 ಅಡಿ ರಾಜಕಾಲುವೆಗೆ ಬಿದ್ರು 7 ಕಾರ್ಮಿಕರು

ಮೇಲ್ಸೇತುವೆ ಕಾಮಗಾರಿ

ಮೇಲ್ಸೇತುವೆ ಕಾಮಗಾರಿ

ರಾಜಕಾಲುವೆಯ ಮೇಲ್ಚಾವಣಿ ಹಾಕೋ ಕೆಲಸ ನಡೀತಾ ಇತ್ತು. ಆದ್ರೆ 11 ಗಂಟೆ ವೇಳೆಗೆ ಕಾಂಕ್ರೀಟ್ ಹಾಕುವಾಗ ಏಕಾಏಕಿ ಕುಸಿದಿದೆ. ಕೆಲಸ ಮಾಡ್ತಾ ಇದ್ದ 7 ಕಾರ್ಮಿಕರು ನೋಡ ನೋಡ್ತಿದ್ದಂತೆ 30 ಅಡಿ ಆಳದ ರಾಜಕಾಲುವೆಗೆ ಕುಸಿದು ಬಿದ್ದಿದ್ದರು.

  • Share this:

ಬೆಂಗಳೂರಿನಲ್ಲಿ (Bengaluru) ಇವತ್ತು ಒಂದು ದೊಡ್ಡ ಅನಾಹುತ ತಪ್ಪಿದೆ ಅಂತಾನೆ ಹೇಳಬಹುದು. ಇವತ್ತು ಬೆಳಿಗ್ಗೆ ಬಹುಶ ಆ ಕೂಲಿ (Coolie) ಕಾರ್ಮಿಕರ ಟೈಂ‌ ಚೆನ್ನಾಗಿತ್ತು ಅಂತ ಕಾಣುತ್ತೆ, ಯಾಕಂದ್ರೆ ಸ್ವಲ್ಪ‌ ಗ್ರಹಚಾರ ಕೆಟ್ಟಿದ್ರೂ ಅಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಸಾವು ಆಗ್ತಾ ಇತ್ತು. ಸಾವಿನಿಂದ ಹೊರಬಂದು ಏಳು ಕಾರ್ಮಿಕರು ಆಸ್ಪತ್ರೆ (Hospital) ಸೇರಿದ್ದಾರೆ. ಇಡೀ ಏರಿಯಾ ಜನ ಬಿಬಿಎಂಪಿ (BBMP) ಕಳಪೆ ಕಾಮಗಾರಿಗೆ ಕ್ಯಾಕರಿಸಿ ಉಗೀತಾ ಇದ್ದಾರೆ. ಶ್ರೀನಗರದ (Srinagara) ಕಾಳಿದಾಸ ಬಸ್ ಸ್ಟಾಪ್ ನಲ್ಲಿ ಇವತ್ತು ರಾಜಕಾಲುವೆಯ ಮೇಲ್ಚಾವಣಿ ಹಾಕೋ ಕೆಲಸ ನಡೀತಾ ಇತ್ತು. ಆದ್ರೆ 11 ಗಂಟೆ ವೇಳೆಗೆ ಕಾಂಕ್ರೀಟ್ ಹಾಕುವಾಗ ಏಕಾಏಕಿ ಕುಸಿದಿದೆ. ಕೆಲಸ ಮಾಡ್ತಾ ಇದ್ದ 7 ಕಾರ್ಮಿಕರು ನೋಡ ನೋಡ್ತಿದ್ದಂತೆ 30 ಅಡಿ ಆಳದ ರಾಜಕಾಲುವೆಗೆ ಕುಸಿದು ಬಿದ್ದಿದ್ದರು.


15 ವರ್ಷದ ಮೀರ್ ಖಾಸಿಂ ಮೇಲೆ ಸಿಮೆಂಟ್ ಹಾಗು ಕಬ್ಬಿಣ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಕಾರ್ಮಿಕರ ಕಿರುಚಾಟ ಕೇಳಿದ ಸ್ಥಳೀಯರು ರಾಜಕಾಲುವೆಗೆ ಇಳಿದು ಎಲ್ಲರನ್ನೂ ರಕ್ಷಿಸೊ ಕೆಲಸ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ಮೀರ್ ಖಾಸಿಂನ ಸ್ಥಿತಿ ಗಂಭೀರವಾಗಿದ್ದು,ಘಟನೆಯಲ್ಲಿ ಕೋಲ್ಕತ್ತಾ ಮೂಲದ ಆರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗ್ತಿದೆ.


ಕಳಪೆ ಕಾಮಗಾರಿ ಅಂತ ಹೇಳಿದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ..!


ರಾಜಕಾಲುವೆ ಮೇಲ್ಛಾವಣಿ ಕುಸಿಯಲು ಕಳಪೆ ಕಾಮಗಾರಿಯೇ ಕಾರಣ ಎನ್ನಲಾಗ್ತಿದೆ. ತಡೆಗೋಡೆಗಳನ್ನ ನಿನ್ನೆ ಮೊನ್ನೆ ನಿರ್ಮಿಸಲಾಗಿತ್ತು. ಆದ್ರೆ ಅದು ಕ್ಯೂರ್ ಆಗಿರಲಿಲ್ಲ. ಅಷ್ಟರಲ್ಲಾಗಲೆ ಮೇಲ್ಛಾವಣಿ ಕಾಂಕ್ರೀಟ್ ಹಾಕೋಕೆ ಹೊರಟಿದ್ರು. ಇದ್ರಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಅಂತಾ ಸ್ಥಳೀಯರು ಆಕ್ರೋಶ ಹೊರಹಾಕಿದ್ರು. ಸಾಲದು ಅಂತ ನಿನ್ನೆಯೇ ದೂರು ಕೊಟ್ರು ಬಿಬಿಎಂಪಿ‌ ಇಂಜನಿಯರ್ ಗಳು ಕ್ಯಾರೆ ಅಂದಿಲ್ಲ.‌


ಇದನ್ನೂ ಓದಿ: BESCOM: ಹೋಟೆಲ್​ಗಳಿಗೆ ಬೆಸ್ಕಾಂ ಗುಡ್ ನ್ಯೂಸ್, ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ! ಕಂಡೀಷನ್ಸ್ ಏನು?


ಆದ್ರೆ ಇವತ್ತು ಕಾಂಕ್ರೀಟ್ ಹಾಕುವಾಗ ಏಕಾಏಕಿ ಕುಸಿದಿದ್ದು, ಮೊದಲು ಬೇನಾಮಿ ಕಾಂಟ್ರ್ಯಾಕ್ಟ್ ಗಳನ್ನ ನಿಲ್ಲಿಸಿ ಅಂತಾ ಸ್ಪಾಟ್ ಗೆ ಬಂದ ಎಂಎಲ್ಎ ರವಿಸುಬ್ರಮಣ್ಯಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡ್ರು. ಈ ವೇಳೆ ಯಾರು ತಪ್ಪಿತಸ್ಥರಿದ್ದಾರೆ ಅವರನ್ನು ಖಂಡಿತ ಕಾನೂನು ಅಡಿಯಲ್ಲಿ ಏನ್ ಶಿಕ್ಷೆ ಕೊಡಬೇಕೋ ಅದನ್ನ ಕೊಡ್ತೀನಿ ಅಂದ್ರು ಶಾಸಕರಾದ ರವಿಸುಬ್ರಮಣ್ಯಂ.


ಸ್ಥಿತಿ ಚಿಂತಾಜನಕ


ಘಟನೆಯಲ್ಲಿ ಕಲ್ಕತ್ತಾ ಮೂಲದ ಅಸಿಬುಲ‌್, ಶಿವಪ್ರಸಾದ್, ರೆಹಮಾನ್ ಗೆ ಗಾಯಗಳಾಗಿದ್ರೆ, ಮೀರ್ ಖಾಸಿಂ ಸ್ಥಿತಿ ಚಿಂತಾಜನಕವಾಗಿದೆ. ಕಾಂಟ್ರ್ಯಾಕ್ಟರ್ ಸತೀಶ್ ಈ ವರೆಗೂ ಸ್ಪಾಟ್ ಗೆ ಎಂಟ್ರಿ ಕೊಡದೆ ಇರೋದು ಹಲವು ಅನುಮಾನಗಳಿಗೆ ಕಾರಣ ಆಗಿದೆ. ಕಳಪೆ ಕಾಮಗಾರಿಗೆ ಬ್ರೇಕ್ ಹಾಕಬೇಕಾದ ಜನಪ್ರತಿನಿಧಿಗಳು ಅದೇಕೆ ಸುಮ್ಮನಿದ್ದಾರೊ ಗೊತ್ತಿಲ್ಲ.


ಇದನ್ನೂ ಓದಿ: Morning Digest: ಶಾಸಕರ ಕಾರ್ ಅಪಘಾತ, ತೆಲುಗು ನಿರ್ದೇಶಕನ ಕೊಳಕು ಹೇಳಿಕೆ, ಮಿನಿಸ್ಟರ್ ಮನೆಗೆ ಬೆಂಕಿ: ಬೆಳಗಿನ ಟಾಪ್ ನ್ಯೂಸ್ ಗಳು


BBMP ನಿರ್ಲಕ್ಷ್ಯ


ಒಟ್ನಲ್ಲಿ ದಿನೇ ದಿನೇ  ಕಳೆಪೆ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಲೂಟಿಯಾಗ್ತಿದ್ರೆ, ಅತ್ತ ಅಮಾಯಕ ಜನರ ಪ್ರಾಣ ಹೋಗ್ತಿದ್ರೂ ಬಿವಿಎಂಪಿ ತಲೆಕೊಡಿಸಿಕೊಳ್ಳದೇ ಇರೋದು ವಿಪರ್ಯಾಸ.

Published by:Divya D
First published: