ಈ ಬಾರಿಯ ದಸರಾ ಉತ್ಸವಕ್ಕೆ ಡಾ. ಸುಧಾ ಮೂರ್ತಿ ಚಾಲನೆ

news18
Updated:August 29, 2018, 1:51 PM IST
ಈ ಬಾರಿಯ ದಸರಾ ಉತ್ಸವಕ್ಕೆ ಡಾ. ಸುಧಾ ಮೂರ್ತಿ ಚಾಲನೆ
news18
Updated: August 29, 2018, 1:51 PM IST
ನ್ಯೂಸ್​18 ಕನ್ನಡ

ಮೈಸೂರು (ಆ. 28): ಈ ಬಾರಿಯ ಐತಿಹಾಸಿಕ ಮೈಸೂರು ದಸರಾ ಉತ್ಸವವನ್ನು ಇನ್​ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಉದ್ಘಾಟಿಸಲಿದ್ದಾರೆ.

ಕೊಡಗಿನಲ್ಲಿ ಉಂಟಾದ ಭಾರೀ ಪ್ರವಾಹ ಮತ್ತು ಗುಡ್ಡಕುಸಿತದಿಂದ ಸಾವಿರಾರು ಜನರು ಮನೆ, ಜಮೀನು ಕಳೆದುಕೊಂಡಿರುವುದರಿಂದ ವಿಜೃಂಭಣೆಯ ದಸರಾ ಉತ್ಸವ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿನಂತೆ ಸಾಂಪ್ರದಾಯಿಕ ದಸರಾ ಆಚರಿಸಲು ತೀರ್ಮಾನ ಮಾಡಿರುವುದರಾಗಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಸಿಎಂ, 365 ದಿನವೂ ದಸರಾ ವಸ್ತು ಪ್ರದರ್ಶನ ಆಯೋಜಿಸಲು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಹಾಗೇ, ವರ್ಷವಿಡೀ ಜನಪದ ಉತ್ಸವ ನಡೆಸಲು ಚಿಂತಿಸಲಾಗಿದೆ. ಶಾಶ್ವತ ವಸ್ತುಪ್ರದರ್ಶನ ಪ್ರಾಧಿಕಾರ ರಚನೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ದಿನಾಂಕ ನಿಗದಿಯಾಗಿಲ್ಲ:

12 ವರ್ಷಗಳ ಹಿಂದೆ ಮೈಸೂರು ದಸರಾ ಉತ್ಸವಕ್ಕೆ ಎಚ್​.ಡಿ. ಕುಮಾರಸ್ವಾಮಿ ಅವರೇ ಚಾಲನೆ ನೀಡಿದ್ದರು. ಮೈಸೂರಿನಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿದ ನಂತರ ದಸರಾ ಉತ್ಸವದ ದಿನಾಂಕವನ್ನು ಪ್ರಕಟಿಸಲಾಗುವುದು. ಈ ಬಾರಿ ಸೆಪ್ಟೆಂಬರ್ 2ರಂದು ಅರ್ಜುನ ನೇತೃತ್ವದಲ್ಲಿ ಮೊದಲ ಗಜಪಡೆ ಮೈಸೂರಿಗೆ ಪಯಣ ಬೆಳೆಸಲಿದೆ. ನಾಗರಹೊಳೆ ಅಭಯಾರಣ್ಯದಂಚಿನ ನಾಗಪುರ ಗಿರಿಜನ ಆಶ್ರಮಶಾಲೆಯಿಂದ ಗಜಪಯಣ ಆರಂಭವಾಗಲಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...