ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಖ್ಯಾತ ಸಾಹಿತಿ ಎಸ್​​.ಎಲ್​​ ಭೈರಪ್ಪ ಆಯ್ಕೆ

ದಸರಾದಲ್ಲಿ ಈ ವರ್ಷವೂ ವಸ್ತು ಪ್ರದರ್ಶನ ಇರಲಿದೆ. ಕಲಾವಿದರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ವಿದೇಶಿ ಪ್ರವಾಸಿಗರು ಸೇರಿದಂತೆ ಯಾರಿಗೂ ವ್ಯವಸ್ಥೆಯಲ್ಲಿ ಲೋಪ ಆಗಬಾರದು ಎಂದು ಸಿಎಂ ಖಡಕ್​​ ಸೂಚನೆ ನೀಡಿದ್ದಾರೆ.

news18
Updated:August 14, 2019, 4:32 PM IST
ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಖ್ಯಾತ ಸಾಹಿತಿ ಎಸ್​​.ಎಲ್​​ ಭೈರಪ್ಪ ಆಯ್ಕೆ
ಎಸ್​​​.ಎಲ್​​​ ಭೈರಪ್ಪ
  • News18
  • Last Updated: August 14, 2019, 4:32 PM IST
  • Share this:
ಬೆಂಗಳೂರು(ಆಗಸ್ಟ್​​.14): ಪ್ರತಿವರ್ಷದಂತೆಯೇ ಈ ವರ್ಷವೂ ನಡೆಯಲಿರುವ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಖ್ಯಾತ ಸಾಹಿತಿ ಎಸ್.ಎಲ್​​ ಭೈರಪ್ಪ ಅವರನ್ನು ಆಹ್ವಾನಿಸಲಾಗಿದೆ ಎಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ತಿಳಿಸಿದ್ದಾರೆ.

ಮೈಸೂರು ದಸರಾ ನಮ್ಮ ನಾಡಹಬ್ಬ. ಈ ಹಬ್ಬದ ಸಿದ್ಧತೆ ಕುರಿತು ಚರ್ಚಿಸಲು ಸಿಎಂ ಬಿ.ಎಸ್​​ ಯಡಿಯೂರಪ್ಪನವರೇ ಇಂದು ಸಭೆ ಕರೆದಿದ್ದರು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಮೈಸೂರು ಭಾಗದ ಬಿಜೆಪಿ ಸಂಸದರು ಮತ್ತು ಶಾಸಕರು ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಭೈರಪ್ಪನವರ ಹೆಸರು ಪ್ರಸ್ತಾಪವಾದ ಕಾರಣ, ಅವರನ್ನೇ ಆಯ್ಕೆ ಮಾಡಲಾಗಿದೆ ಎನ್ನುತ್ತಿವೆ ಮೂಲಗಳು.

ಉನ್ನತ ಮಟ್ಟದ ಸಭೆಯ ಬಳಿಕ ನ್ಯೂಸ್​​-18 ಕನ್ನಡದ ಜೊತೆಗೆ ಸಿಎಂ ಬಿ.ಎಸ್​​ ಯಡಿಯೂರಪ್ಪನವರು ಮಾತಾಡಿದರು. ಎಂದಿನಂತೆಯೇ ಈ ವರ್ಷವೂ ದಸರಾ ಆಚರಣೆ ಮಾಡಲಾಗುತ್ತದೆ. ಯಾವುದೇ ಕೊರತೆಯಾಗದಂತೆ ಆಚರಿಸಲು 20.5 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ರಾಜ್ಯದ ಪ್ರತಿಭಾವಂತ ಕಲಾವಿದರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಿದ್ದಾರೆ ಎಂದರು.

ಇದನ್ನೂ ಓದಿ: ಭಾರತ, ಚೀನಾ ಅಭಿವೃದ್ಧಿಶೀಲ ದೇಶಗಳಲ್ಲ, ಇನ್ನು ಮುಂದೆ ಯಾವುದೇ ಪ್ರಯೋಜನ ಪಡೆಯಲು ಬಿಡುವುದಿಲ್ಲ; ಟ್ರಂಪ್​

ದಸರಾದಲ್ಲಿ ಈ ವರ್ಷವೂ ವಸ್ತು ಪ್ರದರ್ಶನ ಇರಲಿದೆ. ಕಲಾವಿದರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ವಿದೇಶಿ ಪ್ರವಾಸಿಗರು ಸೇರಿದಂತೆ ಯಾರಿಗೂ ವ್ಯವಸ್ಥೆಯಲ್ಲಿ ಲೋಪ ಆಗಬಾರದು ಎಂದು ಸಿಎಂ ಖಡಕ್​​ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಸ‌ಂಸದ ಶ್ರೀನಿವಾಸ್ ಪ್ರಸಾದ್, ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಟ್, ಯತೀಂದ್ರ, ಬಿಜೆಪಿ ಶಾಸಕ ನಾಗೇಂದ್ರ, ರಾಮದಾಸ್ ಸೇರಿ ಹಲವರು ಭಾಗಿಯಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್​​​.ಎಲ್​​ ಭೈರಪ್ಪನವರು, "ನನ್ನನ್ನ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದ್ದು ಸಂತೋಷವಾಗಿದೆ. ಸರ್ಕಾರಕ್ಕೆ ನನ್ನ ಧನ್ಯವಾದ ತಿಳಿಸುತ್ತೇನೆ. ನಾನು ಎರಡು ಮೂರು ಬಾರಿ ಹತ್ತಿರದಿಂದ ದಸರಾ ನೋಡಿದ್ದೇನೆ ಅಷ್ಟೇ. 1949ರಿಂದಲೂ ದಸರಾ ನೋಡುತ್ತಾ ಬಂದಿದ್ದೇನೆ. ಅದರ ಬಗ್ಗೆ ಮಾತನಾಡುವಷ್ಟು ನೆನಪುಗಳು ನನ್ನಲ್ಲಿ ಇಲ್ಲ. ಆಗ ಮಹಾರಾಜರು ಅದ್ದೂರಿಯಾಗಿ, ವೈಭವದಿಂದ ದಸರಾ ನಡೆಸುತ್ತಿದ್ದರು. ಈಗ ನನ್ನನ್ನ ಆಯ್ಕೆ ಮಾಡಿರೋದು ಸಂತೋಷ ತಂದಿದೆ" ಎಂದರು.

"ಇನ್ನು ಕಳೆದ ವರ್ಷ ಕೊಡಗಿಗೆ ಮಳೆ ಬಂದಾಗ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ನೀರು ಕೇಳುವ ತಮಿಳುನಾಡಿನಿಂದ ಕೊಡಗಿಗೆ ಹಣ ಕೇಳಿ ಎಂದಿದ್ದೆ. ಅವರು ನನ್ನ ಪತ್ರಕ್ಕೆ ಉತ್ತರವು ಬರೆಯಲಿಲ್ಲ ಅದನ್ನ ಗಂಭೀರವಾಗಿಯೂ ಪರಿಗಣಿಸಲಿಲ್ಲ. ಈಗಲೂ ಅದೆ ಒತ್ತಾಯ ಮಾಡ್ತಿನಿ. ರಾಜ್ಯದಲ್ಲಿ ಹೆಚ್ಚು ನೆರೆ ಬಂದಿದೆ. ನಮ್ಮ ಬಳಿ ಇಲ್ಲದಿದ್ದಾಗಲೂ ನೀರು ಕೇಳುವ ತಮಿಳುನಾಡಿನ ನಿಲುವು ಏನು ಅಂತ ಕೇಳಿ. ಈ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದರೆ ನಾಳೆ ಅದು ಉಪಯೋಗ ಆಗಲಿದೆ. ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ ಸರ್ಕಾರವನ್ನ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸುತ್ತೇನೆ" ಎಂದು ಎಸ್​​.ಎಲ್​​ ಭೈರಪ್ಪನವರು ಆಗ್ರಹಿಸಿದರು.-----------------
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ