ಚಾಮರಾಜನಗರ: ಜಿಲ್ಲೆ (Chamarajanagar) ಹನೂರು ತಾಲೂಕು ಬೂದುಬಾಳು ಪುಣ್ಯಕ್ಷೇತ್ರಕ್ಕೆ (Budubalu Temple) ವರನಟ ಡಾ. ರಾಜಕುಮಾರ್ (Dr.Rajkumar) ಕುಟುಂಬ ಸದಸ್ಯರು ಭೇಟಿ ನೀಡಿದ್ದರು. ಗುಡಿಹಟ್ಟಿ ವೆಂಕಟರಮಣಸ್ವಾಮಿ ದೇವರ ದರ್ಶನವನ್ನು ನಟ ರಾಘವೇಂದ್ರ ರಾಜಕುಮಾರ್ (Raghavendra Rajkumar ), ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಹಾಗೂ ಯುವ ರಾಜಕುಮಾರ್ (Yuva Rajkumar) ಪಡೆದು, ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ದೊಡ್ಮನೆ ಕುಟುಂಬವನ್ನು ಕಣ್ತುಂಬಿಕೊಳ್ಳಲು ನೂರಾರು ಅಭಿಮಾನಿಗಳು ಜಮಾಯಿಸಿದ್ದರು.
ವರನಟ ಡಾ. ರಾಜಕುಮಾರ್ ಅವರ ಹುಟ್ಟೂರು ಹನೂರು ತಾಲೂಕಿನ ಸಿಂಗಾನಲ್ಲೂರು ಗ್ರಾಮ ಇಡೀ ಕರ್ನಾಟಕಕ್ಕೆ ಪರಿಚಿತ. ಮಂಗಳವಾರ ಇಡೀ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕ ರತ್ನ ದಿ. ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಕುಟುಂಬದವರು ಇಲ್ಲಿನ ಬೂದುಬಾಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಗುಡಿಹಟ್ಟಿ ವೆಂಕಟರಮಣ ಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Puneeth Rajkumar: 30 ವರ್ಷ ಹಿಂದೆ ಅಪ್ಪಾಜಿಗೆ ಕರ್ನಾಟಕ ರತ್ನ ಸಿಕ್ಕಿತ್ತು, ತಮ್ಮನ ನೆನೆದು ರಾಘವೇಂದ್ರ ರಾಜ್ಕುಮಾರ್ ಭಾವುಕ
ವೆಂಕಟರಮಣ ಸ್ವಾಮಿಗೆ ವಿಶೇಷ ಪೂಜೆ
ಬೂದುಬಾಳು ವೆಂಕಟರಮಣ ಸ್ವಾಮಿ ದೇವಾಲಯಕ್ಕೂ ಡಾ. ರಾಜಕುಮಾರ್ ಹಾಗೂ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಕಾಲದಿಂದಲೂ ಅವಿನಾವಭಾವ ಸಂಬಂಧವಿದೆ. ವೆಂಕಟರಮಣ ಸ್ವಾಮಿಯು ಮನೆ ದೇವರಾಗಿರುವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಈ ಕುರಿತಂತೆ ಮಾತನಾಡಿದ ದೇವಾಲಯ ಅರ್ಚಕ ಮಧುಸೂದನ್ ಅವರು, ಡಾ. ರಾಜಕುಮಾರ್ ಅವರ ಮೂವರು ಮಕ್ಕಳು ಒಟ್ಟಾಗಿ ಬಂದು ಪೂಜೆ ಸಲ್ಲಿಸುವುದಾಗಿ ಹೇಳಿದ್ದರು. ಅದೃಷ್ಟವಶಾತ್ ಪುನೀತ್ ಅವರ ಅಕಾಲಿಕ ನಿಧನದಿಂದ ಬರಲು ಆಗಿರಲಿಲ್ಲ. ಈಗ ಬಂದು ಪೂಜೆ ಸಲ್ಲಿಸಿದ್ದಾರೆ. ಮನೆ ದೇವರಿಗೆ ಇನ್ನಮುಂದೆ ಪ್ರತಿ ವರ್ಷ ಬರೋದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಕೊಳ್ಳೇಗಾಲ ಅಭಿಮಾನಿಗಳಿಗೆ "ವೇದ" ತಂಡದಿಂದ ಹೃತ್ಪೂರ್ವಕ ಅಭಿನಂದನೆಗಳು
ನಿಮ್ಮ ಪ್ರೋತ್ಸಾಹ ಸದಾ ನಮ್ಮ ಜೊತೆ ಇರಲಿ
ಪ್ರೀತಿ, ಶಿವಣ್ಣ#Vedha #VedhaInCinemasNow pic.twitter.com/CtXoBtWQQM
— DrShivaRajkumar (@NimmaShivanna) December 28, 2022
ನಟ ಶಿವರಾಜ್ಕುಮಾರ್ (Shivarajkumar), ವೇದ (Veda) ಚಿತ್ರದ ಪ್ರಮೋಷನ್ಗಾಗಿ ತಿ.ನರಸೀಪುರದ ವಿಜಯ್ ಭಗವಾನ್ ಚಿತ್ರಮಂದಿರಕ್ಕೆ (Vijay Bhagavan Theatre) ಭೇಟಿ ನೀಡಿದ್ರು. ಶಿವಣ್ಣನನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ರು. ಶಿವಣ್ಣ ಕೂಡಾ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸಿದ್ರು. ಶಿವರಾಜ್ಕುಮಾರ್ಗೆ ಪತ್ನಿ ಗೀತಾ (Geetha Shivarajkumar), ನಿರ್ದೇಶಕ ಹರ್ಷ (Director Harsha), ಶ್ವೇತಾಚಂಗಪ್ಪ (Shwetha Chengappa) ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ: OM Film Part-2: ತೆರೆ ಮೇಲೆ ಅಬ್ಬರಿಸಲು ಬರುತ್ತಾ ಓಂ-2 ಚಿತ್ರ? ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಏನ್ ಹೇಳ್ತಾರೆ?
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ವೇದ ಸಿನಿಮಾ ಡಿಸೆಂಬರ್ 23ರಂದು ಬಿಡುಗಡೆಯಾಗಿದ್ದು, ಮಹಿಳಾ ಪ್ರಧಾನ ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ವೇದ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರೊಂದಿಗೆ ನಾಲ್ಕು ಮಹಿಳಾ ಪ್ರಧಾನ ಪಾತ್ರಗಳು ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಈ ನಾಲ್ಕು ಪ್ರಧಾನ ಪಾತ್ರಗಳಲ್ಲಿ ಉಮಾಶ್ರೀ, ಅದಿತಿ ಸಾಗರ್, ಗಾನವಿ, ಶ್ವೇತಾ ಚಂಗಪ್ಪ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು, ವೇದ ಸಿನಿಮಾ ಶಿವರಾಜ್ಕುಮಾರ್ ಅವರ 125ನೇ ಸಿನಿಮಾ ಎನ್ನುವುದು ದೊಡ್ಡ ವಿಶೇಷವಾಗಿದ್ದು, ಹೊಸ ಮೈಲಿಗಲ್ಲನ್ನು ಸೃಷ್ಠಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ