• Home
  • »
  • News
  • »
  • state
  • »
  • Dr M Srinivas: ಏಮ್ಸ್ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ; ಶ್ರೀನಿವಾಸ್ ಓದಿದ ಶಾಲೆಯಲ್ಲಿ ಸಂಭ್ರಮ

Dr M Srinivas: ಏಮ್ಸ್ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ; ಶ್ರೀನಿವಾಸ್ ಓದಿದ ಶಾಲೆಯಲ್ಲಿ ಸಂಭ್ರಮ

ಎಂ ಶ್ರೀನಿವಾಸ್

ಎಂ ಶ್ರೀನಿವಾಸ್

ಡಾ.ಶ್ರೀನಿವಾಸ್ ಅವರ ಬಾಲ್ಯದ ಸ್ನೇಹಿತ ಲಕ್ಷ್ಮೀನಾರಾಯಣ್ ಮಾತನಾಡಿ, ಗೆಳೆಯ ಏಮ್ಸ್ ನಿರ್ದೇಶಕನಾಗಿದ್ದು ಸಂತಸದ ವಿಚಾರ. ಕನ್ನಡ ಮಾಧ್ಯಮದಲ್ಲಿ ಓದಿ ಏಮ್ಸ್ ನಿರ್ದೇಶಕರಾಗಿರೋದು ಹೆಮ್ಮೆಯ ವಿಷಯ ಎಂದು ಹೇಳಿದರು.

  • Share this:

ಯಾದಗಿರಿ: ಅದು ದೇಶದಲ್ಲಿಯೇ ಹಿಂದುಳಿದ ಜಿಲ್ಲೆ ಅಂತಾನೇ ಖ್ಯಾತಿಯಾಗಿದೆ. ಹಿಂದುಳಿದ ಜಿಲ್ಲೆಯ ಯಾದಗಿರಿ (Yadagiri) ಜಿಲ್ಲೆಯ ಮೂಲದ ವೈದ್ಯನೀಗ, ದೇಶದ ಪ್ರತಿಷ್ಠಿತ ಸಂಸ್ಥೆಯ ಏಮ್ಸ್ ನಿರ್ದೇಶಕರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ (Kannada Medium) ಓದಿ ವೈದ್ಯಕೀಯ ಕ್ಷೇತ್ರದಲ್ಲಿ (Medical Sector) ಅಭ್ಯಾಸ ಮಾಡಿ ಸಾಧನೆ ಮಾಡಿದ್ದಾರೆ. ಕನ್ನಡಿಗನ ಸಾಧನೆ ಕೀರ್ತಿ ತಂದಿದೆ. ದೆಹಲಿಯ ಪ್ರತಿಷ್ಟಿತ ಏಮ್ಸ್ ನಿರ್ದೇಶಕರಾಗಿ (AIIMS New Director) ನೇಮಕವಾಗಿ ಈಗ ಡಾ.ಶ್ರೀನಿವಾಸ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ದೇಶದ ಪ್ರತಿಷ್ಠಿತ ದೆಹಲಿಯ ಏಮ್ಸ್ ಆಸ್ಪತ್ರೆ ನಿರ್ದೇಶಕರಾಗಿದ್ದಕ್ಕೆ ಯಾದಗಿರಿ ಜನರು ಖುಷಿಗೊಂಡಿದ್ದಾರೆ. ಡಾ.ಎಂ.ಶ್ರೀನಿವಾಸ್ ಅವರು, ಹೈದರಾಬಾದ್ ನಗರದ ESIC ಡೀನ್ ಕೆಲಸ ಮಾಡುತ್ತಿದ್ದರು. ಕೇಂದ್ರ ಸರಕಾರ ಅವರ ವೈದ್ಯಕೀಯ ಸಾಧನೆ ಪರಿಗಣಿಸಿ ಶ್ರೀನಿವಾಸ್ ಅವರನ್ನು ದೆಹಲಿಯ ಏಮ್ಸ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದೆ.


ರಣದೀಪ್ ಗುಲೇರಿಯಾ ಅವರ ಅವಧಿ ಮುಕ್ತಾಯವಾದ ಹಿನ್ನೆಲೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಸಹೋದರ ಆಯ್ಕೆಯಾಗಿದ್ದಕ್ಕೆ ತಮ್ಮ ಡಾ.ನಾಗರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಡಾ.ನಾಗರಾಜ್, ಕನ್ನಡ ಮಾಧ್ಯಮದಲ್ಲಿ ಓದಿ ವೈದ್ಯಕೀಯ ಕ್ಷೇತ್ರದಲ್ಲಿ ಅಣ್ಣ ಸಾಧನೆ ಮಾಡಿದ್ದಾರೆ. ಭಾರತ ಸರಕಾರ ಏಮ್ಸ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಬಾಲ್ಯದಿಂದಲೇ ರೋಗಿಗಳ ಹಾಗೂ ಜನರ ಕಾಳಜಿ ಹೊಂದಿದ್ದಾರೆ. ನನಗೆ ಅವರೇ ಸ್ಪೂರ್ತಿ ಎಂದು ಹೇಳಿದರು.


Karnataka Doctor M Srinivas appointed Director of AIIMS-Delhi
ಶ್ರೀನಿವಾಸ್ ಓದಿದ ಶಾಲೆ


ಹಿಮಲಾಪುರ ಮೂಲದವರು


ಯಾದಗಿರಿ ಮೂಲದ ಹುಡುಗ, ರಾಷ್ಟ್ರ ಮಟ್ಟದ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಡಾ.ಶ್ರೀನಿವಾಸ್ ಅವರು ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಹಿಮಲಾಪುರ ಗ್ರಾಮದ ನಿವಾಸಿಯಾಗಿದ್ದಾರೆ.


ತಂದೆ ಆಶೆಪ್ಪ ಹಾಗೂ ತಾಯಿ ಸರೋಜಾ ಆಗಿದ್ದು, ತಂದೆ ಉಪ ತಹಶೀಲ್ದಾರ್ ಆಗಿ ಯಾದಗಿರಿಗೆ ವರ್ಗಾವಣೆ ನಂತರ, ಇಲ್ಲಿಯ ಗಾಂಧಿನಗರದಲ್ಲಿ ವಾಸವಾಗಿದ್ದರು.


ಪ್ರಾಥಮಿಕ ಶಿಕ್ಷಣವನ್ನು  1978ರಲ್ಲಿ 7ನೇ ತರಗತಿ ವ್ಯಾಸಂಗ ಮಾಡಿದ್ದು, ಹೈಸ್ಕೂಲ್ ಶಿಕ್ಷಣವನ್ನು ನ್ಯೂ ಕನ್ನಡ ಶಾಲೆಯಲ್ಲಿ 1982 ರಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ಪಿಯುಸಿ ವ್ಯಾಸಂಗ ನಗರದ ಜೂನಿಯರ್ ಕಾಲೇಜ್ ನಲ್ಲಿ ಮಾಡಿದ್ದು, ಬಳ್ಳಾರಿಯಲ್ಲಿ ಎಂಬಿಬಿಎಸ್ ಅಭ್ಯಾಸ ಮಾಡಿದ್ದಾರೆ.


Karnataka Doctor M Srinivas appointed Director of AIIMS-Delhi
ಶ್ರೀನಿವಾಸ್ ಓದಿದ ಶಾಲೆಯ ದಾಖಲಾತಿ


ಇದನ್ನೂ ಓದಿ:  Hubballi: ಯುವಕನ ಮರ್ಮಾಂಗದ ತುದಿ ಕತ್ತರಿಸಿ ಮುಸ್ಲಿಂ ಧರ್ಮಕ್ಕೆ ಬಲವಂತದ ಮತಾಂತರ ಯತ್ನ


ದಾವಣಗೆರೆಯಲ್ಲಿ ಎಂಎಸ್


ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜ್​ನಲ್ಲಿ ಎಂಎಸ್ ವ್ಯಾಸಂಗ ಮಾಡಿ, ದೆಹಲಿಯ ಏಮ್ಸ್ ನಲ್ಲಿ ಎಂಸಿಎಚ್ ಅಭ್ಯಾಸ ಮಾಡಿದ್ದಾರೆ. ಏಮ್ಸ್ ನಲ್ಲಿ ಚಿಕ್ಕ ಮಕ್ಕಳ ಶಸ್ತ್ರ ಚಿಕಿತ್ಸೆ ವಿಶೇಷ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಾ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.


ನಂತರ ಹೈದರಾಬಾದ್ ನ ಇಎಸ್ಐಸಿ ಆಸ್ಪತ್ರೆಯ ಡೀನ್ ಆಗಿ ಕೆಲಸ ಮಾಡುತ್ತಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸುಧಾರಣೆ ತರುವ ಜೊತೆ ಅನೇಕ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಪರಿಗಣಿಸಿ ಕೇಂದ್ರ ಸರಕಾರ ಈಗ ಏಮ್ಸ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದೆ. ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆ, ಅವರು ಅಭ್ಯಾಸ ಮಾಡಿದ ಶಾಲೆಯಲ್ಲಿ, ಸಂಭ್ರಮ ಮನೆ ಮಾಡಿದೆ.


Karnataka Doctor M Srinivas appointed Director of AIIMS-Delhi
ಶ್ರೀನಿವಾಸ್ ಓದಿದ ಶಾಲೆ


ಶ್ರೀನಿವಾಸ್ ಓದಿದ ಶಾಲೆಯಲ್ಲಿ ಸಂಭ್ರಮ


ನ್ಯೂ ಕನ್ನಡ ಶಾಲೆಯಲ್ಲಿ, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಿ ಸಂಭ್ರಮ ಪಟ್ಟರು. ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದರು. ಡಾ.ಶ್ರೀನಿವಾಸ್ ಅವರ ಭಾವಚಿತ್ರ ಹಿಡಿದುಕೊಂಡು, ನಿರ್ದೇಶಕರಾಗಿ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದು, ಪ್ರತಿಯೊಬ್ಬ ಮಕ್ಕಳು ಶ್ರದ್ಧೆಯಿಂದ ಓದಿ ಸಾಧನೆ ಮಾಡಬೇಕೆಂದು ಶಿಕ್ಷಕರು ತಿಳಿಸಿದ್ದಾರೆ.


ಇದನ್ನೂ ಓದಿ:  Hubballi: ರಾಷ್ಟ್ರಪತಿಗಳ ಕಾರ್ಯಕ್ರಮದ ಪಟ್ಟಿಯಿಂದ ಜಗದೀಶ್ ಶೆಟ್ಟರ್ ಹೆಸರು ಕೈ ಬಿಟ್ಟಿದ್ದು ಯಾಕೆ?


ಡಾ.ಶ್ರೀನಿವಾಸ್ ಅವರ ಬಾಲ್ಯದ ಸ್ನೇಹಿತ ಲಕ್ಷ್ಮೀನಾರಾಯಣ್ ಮಾತನಾಡಿ, ಗೆಳೆಯ ಏಮ್ಸ್ ನಿರ್ದೇಶಕನಾಗಿದ್ದು ಸಂತಸದ ವಿಚಾರ. ಕನ್ನಡ ಮಾಧ್ಯಮದಲ್ಲಿ ಓದಿ ಏಮ್ಸ್ ನಿರ್ದೇಶಕರಾಗಿರೋದು ಹೆಮ್ಮೆಯ ವಿಷಯ ಎಂದು ಹೇಳಿದರು.

Published by:Mahmadrafik K
First published: