HOME » NEWS » State » DR K SUDHAKAR REPLIES TO MEDIA QUESTION ABOUT HE GOT HEALTH MINISTERSHIP MAK

ಶ್ರೀರಾಮುಲು ಗಮನಕ್ಕೆ ತಂದು ಖಾತೆ ಬದಲಾವಣೆ?; ಈ ಪ್ರಶ್ನೆಯನ್ನು ನೀವು ಸಿಎಂಗೆ ಕೇಳಬೇಕು ಎಂದ ಸಚಿವ ಸುಧಾಕರ್​!

ಆರೋಗ್ಯ ಖಾತೆಯನ್ನು ಸಚಿವ ಶ್ರೀರಾಮುಲು ಗಮನಕ್ಕೆ ತಂದು ಆನಂತರ ಬದಲಾವಣೆ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ನೀವು ಸಿಎಂ ಯಡಿಯೂರಪ್ಪ ಅವರ ಬಳಿಯೇ ಕೇಳಬೇಕು ಎಂದು ಸಚಿವ ಕೆ. ಸುಧಾಕರ್​ ತಿಳಿಸಿದ್ದಾರೆ.

news18-kannada
Updated:October 12, 2020, 10:46 AM IST
ಶ್ರೀರಾಮುಲು ಗಮನಕ್ಕೆ ತಂದು ಖಾತೆ ಬದಲಾವಣೆ?; ಈ ಪ್ರಶ್ನೆಯನ್ನು ನೀವು ಸಿಎಂಗೆ ಕೇಳಬೇಕು ಎಂದ ಸಚಿವ ಸುಧಾಕರ್​!
ಸಚಿವ ಡಾ.ಕೆ.ಸುಧಾಕರ್
  • Share this:
ಬೆಂಗಳೂರು (ಅಕ್ಟೋಬರ್​ 12); ರಾಜ್ಯದಲ್ಲಿ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದ ದಿನದಿಂದಲೂ ಆರೋಗ್ಯ ಖಾತೆ ಅಧಿಕಾರದ ಕುರಿತು ಸಚಿವರಾದ ಶ್ರೀರಾಮುಲು ಮತ್ತು ಕೆ. ಸುಧಾಕರ್​ ನಡುವೆ ಹಗ್ಗಾಜಗ್ಗಾಟ ನಡೆಯುತ್ತಲೇ ಇತ್ತು. ಈ ನಡುವೆ ನಿನ್ನೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸಚಿವ ಬಿ. ಶ್ರೀರಾಮುಲು ಅವರ ಖಾತೆಯನ್ನು ಕೊನೆಗೂ ಬದಲಾಯಿಸಿದ್ದಾರೆ. ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್​ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಸಚಿವ ಬಿ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ, ಸಿಎಂ ಯಡಿಯೂರಪ್ಪ ಏಕಾಏಕಿ ತಮ್ಮ ಗಮನಕ್ಕೆ ತರದೆ ಖಾತೆಯನ್ನು ಬದಲಿಸಿರುವ ಕುರಿತು ಸಚಿವ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಿಗೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಕೆ. ಸುಧಾಕರ್, "ಆರೋಗ್ಯ ಖಾತೆಯನ್ನು ಸಚಿವ ಶ್ರೀರಾಮುಲು ಗಮನಕ್ಕೆ ತಂದು ಆನಂತರ ಬದಲಾವಣೆ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ನೀವು ಸಿಎಂ ಯಡಿಯೂರಪ್ಪ ಅವರ ಬಳಿಯೇ ಕೇಳಬೇಕು" ಎಂದು ತಿಳಿಸಿದ್ದಾರೆ.

ಹೆಚ್ಚುವರಿಯಾಗಿ ಆರೋಗ್ಯ ಇಲಾಖೆಯನ್ನು ತಮಗೆ ನೀಡಿರುವ ಕುರಿತು ಇಂದು ಪತ್ರರ್ಕರ ಜೊತೆಗೆ ಮಾತನಾಡಿರುವ ಸಚಿವ ಕೆ. ಸುಧಾಕರ್​, "​ಆರೋಗ್ಯ ಖಾತೆಯನ್ನು ಸಚಿವ ಶ್ರೀರಾಮುಲು ಗಮನಕ್ಕೆ ತಂದು ಆನಂತರ ಬದಲಾವಣೆ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ನೀವು ಸಿಎಂ ಯಡಿಯೂರಪ್ಪ ಅವರ ಬಳಿಯೇ ಕೇಳಬೇಕು. ಆದರೆ, ಇದು ಬಯಸದೇ ಬಂದ ಭಾಗ್ಯ ಅನ್ನೋದಕ್ಕಿಂತ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ. ಈಗ ಅ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಹೀಗಾಗಿ ಈ ಎರಡೂ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಈ ಇಲಾಖೆ ವಹಿಸಿಕೊಂಡು ನನ್ನ ಮೊದಲ ಆದ್ಯತೆ ಕೊರೋನಾ ಸೋಂಕನ್ನು ನಿಯಂತ್ರಣ ಮಾಡೋದು. ಸಾವಿನ ಪ್ರಮಾಣ ಕಡಿಮೆ ಮಾಡೋದು ನನ್ನ ಗುರಿ. ಜನರಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತೆ ನಾನು ಕ್ರಮ ತೆಗೆದುಕೊಳ್ಳುತ್ತೇನೆ" ಎಂದು ಸಚಿವ ಸುಧಾಕರ್​ ಭರವಸೆ ನೀಡಿದ್ದಾರೆ.

ಈ ನಡುವೆ ಈ ಕುರಿತು ತಮ್ಮ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಶ್ರೀರಾಮುಲು, "ಕೋವಿಡ್ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬಾರದಿತ್ತು. ಕೋವಿಡ್ ಕಡಿಮೆ ಆದ ಮೇಲೆ ಬದಲಿಸಬೇಕಿತ್ತು. ಸಿಎಂ ಅವರ ಈ ನಿರ್ಧಾರದಿಂದಾಗಿ ಇದೀಗ ಆರೋಗ್ಯ ಇಲಾಖೆ ನಿರ್ವಹಿಸುವಲ್ಲಿ ನಾನು ಅಸಮರ್ಥ ಎಂಬ ಸಂದೇಶ ರಾಜ್ಯದ ಜನತೆಗೆ ರವಾನೆಯಾಗಲಿದೆ.

ಅಲ್ಲದೆ, ನಾನು ಕೇಳಿದಾಗ ನನಗೆ ಸಮಾಜ ಕಲ್ಯಾಣ ಖಾತೆ ನೀಡಿರಲಿಲ್ಲ. ಆದರೆ, ಇದೀಗ ಏಕಾಏಕಿ ಬದಲಿಸಿರುವುದು ಸರಿಯಲ್ಲ. ಈ ಸಂಬಂಧ ಸಿಎಂ ಜೊತೆ ಶೀಘ್ರದಲ್ಲೇ ಚರ್ಚಿಸುತ್ತೇನೆ" ಎಂದು ಶ್ರೀರಾಮುಲು ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಮೋದಿ ಓಡಾಡಲು 8400 ಕೋಟಿ ಬೆಲೆಯ ವಿಮಾನ, ಸೈನಿಕರಿಗೆ ಬುಲೆಟ್​ ಪ್ರೂಫ್​ ರಹಿತ ಟ್ರಕ್​; ರಾಹುಲ್ ಗಾಂಧಿ ಕಿಡಿ

ಈ ಹಿಂದಿನಿಂದಲೂ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ಖಾತೆಗೆ ಬೇಡಿಕೆ ಇಟ್ಟಿದ್ದರು. ಡಿಸಿಎಂ ಸ್ಥಾನ ನೀಡಲು ವಿಫಲರಾದರೇ, ಸಮಾಜ ಕಲ್ಯಾಣ ಸಚಿವ ಸ್ಥಾನವನ್ನಾದರೂ ನೀಡಿ ಎಂದಿದ್ದರು. ಆದರೆ, ಅವರಿಗೆ ಆರೋಗ್ಯ ಖಾತೆ ಜವಾಬ್ದಾರಿ ವಹಿಸಲಾಗಿತ್ತು. ಆದರೂ ರಾಮುಲು ಈ ಖಾತೆ ಬಗ್ಗೆ ಸಮಾಧಾನ ಹೊಂದಿರಲಿಲ್ಲ. ತಮ್ಮ ಖಾತೆ ಬದಲಾಯಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಅಷ್ಟರಲ್ಲಿ ಕೊರೋನಾ ರಾಜ್ಯಕ್ಕೆ ವಕ್ಕರಿಸಿತ್ತು.

ಹೀಗಾಗಿ ಅನಿವಾರ್ಯವಾಗಿ ರಾಮುಲು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಆದರೆ, ಇದೀಗ ಏಕಾಏಕಿ ಜವಾಬ್ದಾರಿ ಬದಲಿಸಿರುವುದು ಜನರ ನಡುವೆ ತನ್ನ ಬಗ್ಗೆ ಕೆಟ್ಟ ಮಾಹಿತಿ ರವಾನೆಯಾಗುತ್ತದೆ ಎಂಬುದು ಸಚಿವ ಶ್ರೀರಾಮುಲು ಅವರ ಅಂಬೋಣ. ಆದರೆ, ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.
Published by: MAshok Kumar
First published: October 12, 2020, 10:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories