Ramanagara: ಸಿದ್ದರಾಮಯ್ಯ ಸನ್ಯಾಸತ್ವ ಪಡೆಯಲಿ‌ ಎಂದ ಅಶ್ವಥ್ ನಾರಾಯಣ್

ಇವರಿಗೆ ರಾಜಕೀಯದಲ್ಲಿ ನೈತಿಕತೆ ಇಲ್ಲ, ಸನ್ಯಾಸತ್ವ ತೆಗೆದುಕೊಂಡು ಹೋಗಬೇಕು ಎಂದು  ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ರಾಮನಗರ(ಜೂ.01):  ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಸಚಿವ ಅಶ್ವಥ್ ನಾರಾಯಣ (Ashwath Narayan) ರಾಮನಗರದಲ್ಲಿ (Ramanagara) ತೀವ್ರತರವಾಗಿ ವಾಗ್ದಾಳಿ ನಡೆಸಿದರು.‌‌ ಗರೀಬ್ ಕಲ್ಯಾಣ್ ಸಮ್ಮೇಳನದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ಭಾಗಿಯಾಗಿದ್ದ ಅಶ್ವಥ್ ನಾರಾಯಣ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು. ಇದಕ್ಕೂ ಮುನ್ನ ಮಾತನಾಡಿ RSS ನಲ್ಲಿ ಬೇರೆ ಜಾತಿಗೆ ಅವಕಾಶ ಇಲ್ಲ ಎಂದಿದ್ದ ಸಿದ್ದರಾಮಯ್ಯ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದರು. ಈ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದರು. ಈಗಾಗಲೇ ನಾಗೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಯಾರ್ಯಾರು ಎಷ್ಟು ಜನ ಕೆಲಸ ಮಾಡಿದ್ದಾರೆಂದು, ಈಗ ಚರ್ಚೆ ಬೇಡ. ಅವರ ರಾಜಕೀಯ ಉಳಿವಿಗೆ, ಓಲೈಕೆಗೆ ಅಸಂಬದ್ಧ ಹೇಳಿಕೆ ಕೊಡ್ತಿದ್ದಾರೆ. RSS ನಲ್ಲಿ ಎಲ್ಲಾ ಜಾತಿ, ಸಮುದಾಯಕ್ಕೆ ಸೇರಿದವರು ಕೆಲಸ ಮಾಡ್ತಿದ್ದಾರೆ.

ಸುದ್ದಿಯಲ್ಲಿರಲು ಹೇಳಿಕೆ ಕೊಡ್ತಿದ್ದಾರೆ ಸಿದ್ದರಾಮಯ್ಯ

ಅವರ ಅಸ್ತಿತ್ವ ಉಳಿಸಿಕೊಳ್ಳಲು, ಸುದ್ದಿಯಲ್ಲಿರಲು ಸಿದ್ದರಾಮಯ್ಯ ಇಂತಹ ಹೇಳಿಕೆ ಕೊಡ್ತಾರೆ. ನಾವು RSS ಭಾಗದವರೇ, ನಾವಲ್ಲದೇ ಇನ್ಯಾರು ಮಾತನಾಡಬೇಕಂತೆ, ನಾವು ಬಿಜೆಪಿ - RSS ನಲ್ಲಿದ್ದೇವೆ, ನಾವೇ ಹೇಳಿಕೆ ಕೊಡ್ತೇವೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಸಿದ್ದರಾಮಯ್ಯ ವಾಚ್, ಶೂ ವಿಚಾರ ಗೊತ್ತಿದೆ

ಇನ್ನು ಅವರು 5 ವರ್ಷ ಹೇಗೆ ಸರ್ಕಾರ ನಡೆಸಿದರೂ, ಅವರು ಹೇಗಿದ್ದರೂ, ಹೇಗಾದರೂ ಅವರ ವಾಚ್, ಶೂ ವಿಚಾರ ಏನು ಗೊತ್ತಿದೆ. ಯಾವ ಹಿನ್ನೆಲೆಯಲ್ಲಿ ಬಂದರೂ, ಹೇಗಾದರೂ ಅದಕ್ಕೆ ಲೆಕ್ಕಾಚಾರ ಇದೆಯಾ.‌ ಅವರು ಹಾಕುವ ಕನ್ನಡಕ, ವಾಚ್, ಶೂ ಅವರ ಜೀವನ ಎಲ್ಲಿಂದ ಬಂತು ಇವರಿಗೆ. ಯಾವ ರೀತಿ ನೈತಿಕತೆ, ಮೌಲ್ಯ ಇಟ್ಟುಕೊಂಡಿದ್ದಾರ ಇವರು ಎಂದು ಪ್ರಶ್ನೆ ಮಾಡಿದರು.‌

ಇದನ್ನೂ ಓದಿ: Rajya Sabha Election: ರಾಜ್ಯಸಭಾ ಅಭ್ಯರ್ಥಿಗಳ ಆಸ್ತಿ ವಿವರ; ಯಾರ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?

ಇನ್ನು 5 ವರ್ಷ ಅವರನ್ನ ನಿದ್ದೆರಾಮಯ್ಯ ಎಂದು ಕರೆಯುತ್ತಿದ್ದರು. ನಿದ್ರೆ ಮಾಡಿಕೊಂಡು ಹೋಗ್ತಿದ್ದಂತಹ ಸಿದ್ದರಾಮಯ್ಯ, ಯಾವ ರೀತಿ ಜನಪರವಾಗಿ ಕೆಲಸ ಮಾಡಿದರೂ, ಎಷ್ಟು ರೈತರ ಆತ್ಮಹತ್ಯೆ ಆಯ್ತು.  ಅರ್ಕಾವತಿ ಬಡಾವಣೆ ವಿಚಾರ, ಮರಳು ದಂಧೆ, ಭ್ರಷ್ಟಾಚಾರ ಎಷ್ಟಿದೆ ಅವರ ವಿಚಾರದಲ್ಲಿ. ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಾತಿಯಲ್ಲಿ ಎಲ್ಲಿ ನೋಡಿದರೂ ಸ್ಯಾಂಡಲ್ ಇತ್ತು ಎಂದಿದ್ದಾರೆ.

'ಭ್ರಷ್ಟಾಚಾರದಲ್ಲಿ ತುಂಬಿತುಳುಕುತ್ತಿದ್ದ ಮನುಷ್ಯ ಸಿದ್ದರಾಮಯ್ಯ'

ಯಾವ ನೈತಿಕತೆ ಇಲ್ಲದೇ ಭ್ರಷ್ಟಾಚಾರದಲ್ಲಿ ತುಂಬಿತುಳುಕುತ್ತಿದ್ದ ಮನುಷ್ಯ ಸಿದ್ದರಾಮಯ್ಯ. ಇಂತಹವರು RSS ಬಗ್ಗೆ ಮಾತನಾಡುವಂತಹ ಅರ್ಹತೆ ಇಲ್ಲ.  ಇವರೆಲ್ಲ ಪ್ರಾರಂಭದಲ್ಲಿ ರಾಜಕೀಯ ನಿವೃತ್ತಿ ಪಡೆದುಕೊಳ್ತೇನೆ ಅಂದರುಎಲ್ಲಿದೆ ಇವರಿಗೆ ನೈತಿಕತೆ, ಅಧಿಕಾರದ ರುಚಿ ನೋಡಿದ್ದಾರೆ ಇವರು ಎಂದಿದ್ದಾರೆ.

ಇದನ್ನೂ ಓದಿ: Karnataka Politics: ಟಿಪ್ಪು, ಬಾಬರ್, ಘಜ್ನಿ ಬಗ್ಗೆ ಟೀಕೆ ಮಾಡಿದ್ರೆ ಸಿದ್ದರಾಮಯ್ಯ ಏಕೆ ಎದೆ ಬಡಿದುಕೊಳ್ತಾರೆ; ಸಿ ಟಿ ರವಿ

ಅಧಿಕಾರದಿಂದ ವೈಭವೀಕರಣ, ಮಜಾ ಮಾಡಬಹುದು ಎಂಬ ಕಲ್ಪನೆಯಲ್ಲಿದ್ದಾರೆ.  ಕಡುಬಡತನದಿಂದ ಬಂದ ವ್ಯಕ್ತಿ ಹೇಗಿರಬೇಕು ಇವರು,  ಇವರಿಗೆ ರಾಜಕೀಯದಲ್ಲಿ ನೈತಿಕತೆ ಇಲ್ಲ, ಸನ್ಯಾಸತ್ವ ತೆಗೆದುಕೊಂಡು ಹೋಗಬೇಕು ಎಂದು  ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ಕೆಲವು ದಿನಗಳಿಂದ ಸಿದ್ದರಾಮಯ್ಯ ಅವರ ಟ್ವೀಟ್ ವಿಚಾರವಾಗಿ ಬಿಜೆಪಿ ಮುಖಂಡರಿಂದ ತೀವ್ರ ವಾಗ್ದಾಳಿ ಎದುರಿಸುತ್ತಿದ್ದಾರೆ ಮಾಜಿ ಸಿಎಂ.
Published by:Divya D
First published: