• Home
  • »
  • News
  • »
  • state
  • »
  • Dr C N Manjunath: ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ.ಮಂಜುನಾಥ್ ಮುಂದುವರಿಕೆ; ಸರ್ಕಾರಕ್ಕೆ ವೈದ್ಯರ ಅಭಿನಂದನೆ

Dr C N Manjunath: ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ.ಮಂಜುನಾಥ್ ಮುಂದುವರಿಕೆ; ಸರ್ಕಾರಕ್ಕೆ ವೈದ್ಯರ ಅಭಿನಂದನೆ

ಡಾ.ಸಿ.ಎನ್. ಮಂಜುನಾಥ್

ಡಾ.ಸಿ.ಎನ್. ಮಂಜುನಾಥ್

ಸರ್ಕಾರ ಡಾ. ಸಿ ಎನ್ ಮಂಜುನಾಥ್ ಅವರ ಸಾಧನೆ ಮತ್ತು ಆಡಳಿತ ವೈಖರಿ ಪರಿಗಣಿಸಿ, ಒಂದು ವರ್ಷಕ್ಕೆ ವಿಸ್ತರಿಸಿದೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಡಾ‌. ಸಿ ಎನ್ ಮಂಜುನಾಥ್  ಅಭಿನಂದನೆ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಜು. 18): ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕರಾಗಿ (Director) ಡಾ.ಸಿ.ಎನ್.ಮಂಜುನಾಥ್ (C N Manjunath) ಮುಂದುವರಿಕೆ ಮಾಡಲಾಗಿದೆ. ನಾಳೆ ನಿರ್ದೇಶಕ ಸ್ಥಾನದ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದ ಹಿನ್ನಲೆ  ರಾಜ್ಯ ಸರ್ಕಾರ (Government) ಒಂದು ವರ್ಷದ ಅವಧಿ ವಿಸ್ತರಿಸಿದೆ. ಮುಖ್ಯಮಂತ್ರಿಗಳು ಡಾ. ಸಿ ಎನ್ ಮಂಜುನಾಥ್ ಅವರ ಸಾಧನೆ ಮತ್ತು ಆಡಳಿತ ವೈಖರಿ ಪರಿಗಣಿಸಿ, ಒಂದು ವರ್ಷಕ್ಕೆ ವಿಸ್ತರಿಸಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಡಾ‌. ಸಿ ಎನ್ ಮಂಜುನಾಥ್  ಅಭಿನಂದನೆ ತಿಳಿಸಿದ್ದಾರೆ.


ಸಿಎಂಗೆ ಪತ್ರ ಬರೆದಿದ್ದ ಜಯದೇವ ಆಸ್ಪತ್ರೆ ಸಿಬ್ಬಂದಿಗಳು


ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ  ಡಾ.ಸಿ.ಎನ್. ಮಂಜುನಾಥ್ ಅವರು  ನಿವೃತ್ತಿಯಾಗುತ್ತಿರುವುದು ಜಯದೇವ  ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಗೆ ಅಪಾರವಾದ ನೋವನ್ನುಂಟು ಮಾಡಿದೆ. ಅದಕ್ಕೆ ಸಿಬ್ಬಂದಿ ವರ್ಗವು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ರು. ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ  ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಪ್ರಕಾರ 70 ವರ್ಷದ ವರೆಗೆ ಸೇವೆ ಸಲ್ಲಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.


ಅಧಿಕೃತ ಪ್ರಕಟಣೆ


ಶ್ರೀ ಜಯದೇವ ಹೃದ್ರೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಯಾದ ನಾವುಗಳು ಈ ಮೂಲಕ ಕೋರುವುದೇನೆಂದರೆ, ಪ್ರಸ್ತುತ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ರವರ ಸೇವೆಯು ದಿನಾಂಕ: 19-07-2022ಕ್ಕೆ ಅಂತಿಮಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಅಪಾರವಾದ ನೋವನ್ನುಂಟುಮಾಡಿದೆ. ನಮ್ಮ ನಿರ್ದೇಶಕರ ಕರುಣೆ, ಶಿಸ್ತು, ಆಪ್ಯಾಯತೆ, ಸೂಕ್ತ ನಿರ್ದೇಶನ, ಮಾರ್ಗದರ್ಶನ ಮುಂತಾದ ಉನ್ನತ ಗುಣಗಳನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆಯುತ್ತಿರುವ ಸಂಸ್ಥೆಯ ಸಿಬ್ಬಂದಿ ಹಾಗೂ ಲಕ್ಷಾಂತರ ಬಡ ಹೃದ್ರೋಗಿಗಳಿಗೆ ಈ ವಿಷಯವು ಅತ್ಯಂತ ಖೇದ್ಯವುಂಟುಮಾಡಿದೆ.


ಇದನ್ನೂ ಓದಿ: Kasturi Rangan Report: ಕಸ್ತೂರಿ ರಂಗನ್ ವರದಿ ಒಪ್ಪಿಕೊಳ್ಳಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ ದೃಢ ಮಾತು


ಆದ್ದರಿಂದ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಪ್ರಕಾರ ಯಾವುದೇ ಸಂಸ್ಥೆಯ ಮುಖ್ಯಸ್ಠರು 70 ವರ್ಷಗಳವರೆಗೆ ಸೇವೆಯನ್ನು ನಿರ್ವಹಿಸಬಹುದು. ಅದರಂತೆ ಪ್ರಸ್ತುತ ಡಾ. ಸಿ.ಎನ್. ಮಂಜುನಾಥ್ ರವರಿಗೆ 65 ವರ್ಷ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಮತ್ತಷ್ಟು ವರ್ಷಗಳವರೆಗೆ ಆಡಳಿತ ನಿರ್ವಹಿಸುವ ನಾಯಕತ್ವ ಗುಣವಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಅಧೋಗತಿಯಲ್ಲಿ ಮುಳುಗುತ್ತಿದ್ದ ಜಯದೇವ ಆಸ್ಪತ್ರೆಯನ್ನು ಕೈಹಿಡಿದೆತ್ತಿದ್ದಾರೆ ಎಂದು ಬರೆದಿದ್ರು.


ಡಾ.ಸಿ.ಎನ್. ಮಂಜುನಾಥ್ ಅವರ ಸಾಧನೆಗಳು


- 5,27,437 ಹೊರ ರೋಗಿಗಳನ್ನು ನೋಡಿದ್ದಾರೆ
- 53,806 ರಲ್ಲಿ - 30,000 ರೋಗಿಗಳಿಗೆ ಸಬ್ಸಿಡಿ ವೆಚ್ಚವಾಗಿ ಚಿಕಿತ್ಸೆ ನೀಡಲಾಗಿದೆ
- 42,865 ಕ್ಯಾಥ್ ಲ್ಯಾಬ್ ಕಾರ್ಯವಿಧಾನ (ದೇಶದಲ್ಲಿ ಅತಿ ಹೆಚ್ಚು)
- 24,447 ಆಂಜಿಯೋಗ್ರಾಮ್‍ಗಳು
- 1500 ಮಿಟ್ರಲ್ ವಾಲ್ವುಲೋಪ್ಲ್ಯಾಸ್ಟಿಗಳು (ಜಗತ್ತಿನಲ್ಲಿ ಅತಿ ಹೆಚ್ಚು)
- 15,000 ಆಂಜಿಯೋಪ್ಲ್ಯಾಸ್ಟಿಗಳು (ದೇಶದಲ್ಲಿ ಅತಿ ಹೆಚ್ಚು ಪ್ರಮಾಣ)
- 3,000 ಬೈಪಾಸ್ ಮತ್ತು ವಾಲ್ವ್ ರಿಪ್ಲೇಸ್‍ಮೆಂಟ್ ಸರ್ಜರಿಗಳು
- 3,00,054 ಎಕೋ - ಕಾರ್ಡಿಯೋಗ್ರಾಮ್‍ಗಳು (ಜಗತ್ತಿನಲ್ಲಿ ಅತಿ ಹೆಚ್ಚು)
9. ಬಡ ರೋಗಿಗಳ ಕಾರ್ಪಸ್ ನಿಧಿಯ ರಚನೆ ರೂ. ವಿವಿಧೆಡೆಯಿಂದ 100 ಕೋಟಿ ರೂ
ಮೂಲಗಳು.


ಇದನ್ನೂ ಓದಿ: Bomb Threat: ಹುಚ್ಚ ವೆಂಕಟ್​ ಹೆಸರಲ್ಲಿ ಬಾಂಬ್ ಬೆದರಿಕೆ ಎಂದ್ರು ಡಿಕೆಶಿ; ಆತಂಕಪಡುವ ಅಗತ್ಯವಿಲ್ಲ-ಐಶ್ವರ್ಯಾ


ಡಾ.ಸಿ.ಎನ್. ಮಂಜುನಾಥ್ ಅವರಿಗೆ ದೊರೆತ ಪ್ರಶಸ್ತಿಗಳು


ಡಾ. ಮಂಜುನಾಥ್‍ರವರ ನಿಸ್ವಾರ್ಥ ವೈದ್ಯಕೀಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಹೃದ್ರೋಗ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸ್ಕಾಟ್ಲೆಂಡ್‍ನ ರಾಯಲ್ ಕಾಲೇಜ್ ಫಿಜಿಷಿಯನ್ಸ್‍ನ ಫೆಲೋಶಿಪ್‍ಗೆ (ಎಫ್‍ಆರ್‍ಸಿಪಿ) ಇವರು ಭಾಜನರಾಗಿದ್ದಾರೆ. ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಇವರ ಅಪ್ರತಿಮ ಸೇವೆಗೆ ದೇಶದ ಪ್ರತಿಷ್ಠಿತ ಪದ್ಮಶ್ರೀ ಗೌರವ ಸಂದಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಏಷಿಯಾ ಫೆಸಿಫಿಕ್ ವ್ಯಾಸ್ಕ್ಯೂಲರ್ ಸಮಾವೇಶದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ದೊರೆತಿದೆ. ಇಷ್ಟೆಲ್ಲಾ ಸೇವೆ ಸಲ್ಲಿಸಿರು ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರಿಸುವಂತೆ ಸಿಬ್ಬಂದಿ ವರ್ಗ ಸಿಎಂಗೆ ಮನವಿ ಮಾಡಿದೆ.

Published by:Pavana HS
First published: