ವರದಕ್ಷಿಣೆ ದಾಹಕ್ಕೆ ಮತ್ತೋರ್ವ ಗೃಹಿಣಿ ಬಲಿ - ಮಾವನ ಮನೆಗೂ ಕನ್ನ ಹಾಕಿ ಮಗಳಿಗೆ ಬೆಂಕಿ ಹಚ್ಚಿದ ಭೂಪ

ಪತಿ ಸುರೇಶ್ ಕಡ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ, ಹೆಂಡತಿಯನ್ನು ಕರೆತರಲು ಹೋದಾಗ ಮಾವನ ಮನೆಗೇ ಕನ್ನ ಹಾಕಿದ್ದ ಎನ್ನಲಾಗಿದೆ

G Hareeshkumar | news18india
Updated:December 7, 2018, 9:38 PM IST
ವರದಕ್ಷಿಣೆ ದಾಹಕ್ಕೆ ಮತ್ತೋರ್ವ ಗೃಹಿಣಿ ಬಲಿ - ಮಾವನ ಮನೆಗೂ ಕನ್ನ ಹಾಕಿ ಮಗಳಿಗೆ ಬೆಂಕಿ ಹಚ್ಚಿದ ಭೂಪ
ಸಾಂದರ್ಭಿಕ ಚಿತ್ರ
G Hareeshkumar | news18india
Updated: December 7, 2018, 9:38 PM IST
ಶಿವರಾಮ ಅಸುಂಡಿ

ಕಲಬುರ್ಗಿ ( ಡಿ07) :  ವರದಕ್ಷಿಣೆ ದಾಹಕ್ಕೆ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೋರ್ವ ಮಹಿಳೆ ಬಲಿಯಾಗಿದ್ದಾಳೆ. ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಗೃಹಿಣಿಯ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಲಾಗಿದೆ. ಮೃತಳನ್ನು ಈಶ್ವರಿ ಎಂದು ಗುರುತಿಸಲಾಗಿದೆ.

ಪತಿ ಸುರೇಶ್ ಕಡ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ, ಹೆಂಡತಿಯನ್ನು ಕರೆತರಲು ಹೋದಾಗ ಮಾವನ ಮನೆಗೇ ಕನ್ನ ಹಾಕಿದ್ದ ಎನ್ನಲಾಗಿದೆ. ತಿಜೋರಿಯಲ್ಲಿದ್ದ 25 ಸಾವಿರ ಕದ್ದು ತಮ್ಮ ಊರಿಗೆ ವಾಪಸ್ಸಾಗಿದ್ದ. ಅದಾದ ನಂತರವೂ ವರದಕ್ಷಿಣೆ ತರುವಂತೆ ಪೀಡಿಸಿ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಇದನ್ನು ಓದಿ : ಲಕ್ಕಸಂದ್ರದಲ್ಲಿ ರೌಡಿ ಶೀಟರ್ ಕೇಬಲ್ ವಿಜಿ ಬರ್ಬರ ಹತ್ಯೆ

ವರದಕ್ಷಿಣೆಗಾಗಿ ಪ್ರೀತಿಸಿ ಮದುವೆಯಾದವಳನ್ನೇ ಪೀಡಿಸಿ ಆತ್ಮಹತ್ಯೆಗೆ ಕಾರಣವಾಗಿದ್ದ ಘಟನೆ ನಿನ್ನೆ ಕಲಬುರ್ಗಿ ನಗರದಲ್ಲಿ ನಡೆದಿತ್ತು. ಅದರ ಬೆನ್ನ ಹಿಂದೆಯೇ ವರದಕ್ಷಿಣೆ ದಾಹಕ್ಕೆ ಜಿಲ್ಲೆಯಲ್ಲಿ ಮತ್ತೋರ್ವ ಮಹಿಳೆ ಬಲಿಯಾಗಿದ್ದಾಳೆ.

ಅಳ್ಳೊಳ್ಳಿಯ ಸುರೇಶ್ ಕಡ್ಲಿ ಎಂಬಾತನ ಜೊತೆ 10 ವರ್ಷಗಳ ಹಿಂದೆ ಈಶ್ವರಿಯ ವಿವಾಹವಾಗಿತ್ತು. 10 ವರ್ಷಗಳಾದರೂ ಮಕ್ಕಳಾಗಿಲ್ಲವೆಂದು ಗಂಡನ ಮನೆಯವರು ವ್ಯಂಗ್ಯವಾಡಿ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಇದರ ಜೊತೆಗೆ ವರದಕ್ಷಿಣೆ ತರುವಂತೆಯೂ ಪೀಡಿಸುತ್ತಿದ್ದರೆನ್ನಲಾಗಿದೆ. ಪತಿ ಮತ್ತು ಮನೆಯವರ ಕಾಟಕ್ಕೆ ತಾಳಲಾರದೆ ಈಶ್ವರಿ ತವರು ಮನೆಗೆ ಹೋಗಿದ್ದಳು.

ನಂತರ ಈಶ್ವರಿಯ ಪೋಷಕರನ್ನು ಭೇಟಿಯಾಗಿದ್ದ ಸುರೇಶ್, ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಿ ವಾಪಸ್ ಕರೆತಂದಿದ್ದ. ಕರೆತಂದ 10 ದಿನಗಳ ನಂತರ ಮತ್ತೆ ಕಿರುಕುಳ ಆರಂಭಿಸಿದ್ದ ಎನ್ನಲಾಗಿದೆ. ಅಲ್ಲದೆ ಹಣ ತಾರದೇ ಇದ್ದಲ್ಲಿ ಬೆಂಕಿ ಹಚ್ಚಿ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಮೃತಳು ಸಾಯುವ ಮುನ್ನ ಹೇಳಿಕೆ ನೀಡಿದ್ದಾಳೆ ಕಿರಾತಕ ಗಂಡ ಬೆದರಿಕೆ ಹಾಕಿದಂತೆಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
Loading...

ಇದನ್ನು ಓದಿ : ಹಾಸನದಲ್ಲಿ ಖಾರದ ಪುಡಿ ಎರಚಿ ರೌಡಿಶೀಟರ್ ಕೊಲೆ

ಆತನ ಜೊತೆಗೆ ಈಶ್ವರಿಯ ಮಾವ, ಅತ್ತೆ ಮತ್ತಿತರರು ಓಡಿ ಹೋಗಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಈಶ್ವರಿಯನ್ನು ಕಲಬುರ್ಗಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.  ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...