Crime News: ನೇಣಿಗೆ ಕೊರಳೊಡ್ಡಿದ ನವವಿವಾಹಿತೆ, ಇತ್ತ ವಿಷ ಸೇವಿಸಿದ ಗರ್ಭಿಣಿ; ಶಿವಮೊಗ್ಗದಲ್ಲಿ ನೀರುಪಾಲಾದ ಪೋರ

ಕಡೂರು ತಾಲ್ಲೂಕು ಬೋಳನಹಳ್ಳಿಯ ರವಿಕುಮಾರ್ ಹೇಮಾವತಿ ದಂಪತಿಯ ಎರಡನೇ ಪುತ್ರಿಯಾಗಿರುವ ಅಂಜು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ ಮಾಡಿದ್ದರು. ಕಳೆದ ಐದು ವರ್ಷಗಳಿಂದ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ರು.

ಅಂಜು ಅಂಜನ್

ಅಂಜು ಅಂಜನ್

  • Share this:
ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ನವವಿವಾಹಿತೆ (Newly Married Woman) ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. 26 ವರ್ಷದ ಅಂಜು ಅಂಜನ್ ಆತ್ಮಹತ್ಯೆಗೆ ಶರಣಾದ ಮಹಿಳೆ. ಮೃತ ಅಂಜು ಚಿಕ್ಕಮಗಳೂರು ಜಿಲ್ಲೆ ಬೋಳನಹಳ್ಳಿಯ ಮೂಲದವರಾಗಿದ್ದು, ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ (Engineer) ಅಗಿ ಕೆಲಸ ಮಾಡುತ್ತಿದ್ದರು. ಅಂಜನ್ ಕಣಿಯಾರ್ (28) ಎಂಬಾತನನ್ನ ಪ್ರೀತಿಸಿ (Love) ನಾಲ್ಕು ತಿಂಗಳ ಹಿಂದೆ ಪೋಷಕರನ್ನು ಒಪ್ಪಿಸಿ ಅಂಜು ಮದುವೆಯಾಗಿದ್ದರು. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಅಂಜು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಅಂಜನ್ ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ಮಗಳಿಗೆ  ವರದಕ್ಷಿಣೆ ಕಿರುಕುಳ ನೀಡಲಾಗಿತ್ತು ಎಂದು ಅಂಜು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಅಂಜು ಪೋಷಕರು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂಜು ಮೃತದೇಹ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡೂರು ತಾಲ್ಲೂಕು ಬೋಳನಹಳ್ಳಿಯ ರವಿಕುಮಾರ್ ಹೇಮಾವತಿ ದಂಪತಿಯ ಎರಡನೇ ಪುತ್ರಿಯಾಗಿರುವ ಅಂಜು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ ಮಾಡಿದ್ದರು. ಕಳೆದ ಐದು ವರ್ಷಗಳಿಂದ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ರು.

ಹಾಸನದಲ್ಲಿ ಓದುವಾಗ ಲವ್ ಆಗಿತ್ತು

ಹಾಸನದಲ್ಲಿ ಓದುವಾಗ ಅರಕಲಗೂಡು ನಿವಾಸಿ ಯುವಕ ಅಂಜನ್ ಜೊತೆ ಪ್ರೀತಿಯಾಗಿತ್ತು.  ನಂತರ ಪೋಷಕರನ್ನ ಒಪ್ಪಿಸಿ ಅಂಜನ್ ಮದುವೆಯಾಗಿದ್ದರು. ಕಳೆದ ಫೆಬ್ರವರಿಯಲ್ಲಿ ಕಡೂರಿನ ಬಳ್ಳೆಕೆರೆಯಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಅಂಜುಗೆ ಪತಿಯ ಪೋಷಕರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಅಂಜು ತನ್ನ ತಾಯಿ ಜೊತೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಹುಡುಗನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಅಂಜು ಪೋಷಕರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:  Hijab: ವರದಿಗಾರ ಶಾಲು ಎಳೆದ ಅಂತಾ ಸುಳ್ಳು ದೂರು ನೀಡಿದ ಹಿಜಾಬ್ ವಿದ್ಯಾರ್ಥಿನಿ; ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮೈಸೂರು: ವಿಷ ಸೇವಿಸಿ ಗರ್ಭಿಣಿ ಆತ್ಮಹತ್ಯೆ

ಪಿರಿಯಾಪಟ್ಟಣದ ಕಿತ್ತೂರು ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳ ಹಿನ್ನೆಲೆ ಗರ್ಭಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ವೇತಾ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಕೆಲ್ಲೂರು ಗ್ರಾಮದ ಶ್ವೇತಾ ಅವರನ್ನು  ಕಿತ್ತೂರು ಗ್ರಾಮದ ಬಸವರಾಜು ಜೊತೆ ಮದುವೆ ಮಾಡಿಕೊಡಲಾಗಿತ್ತು.

ಮದುವೆಗೆ 100 ಗ್ರಾಂ ಚಿನ್ನ ಒಂದು ಲಕ್ಷ ನಗದು ವರದಕ್ಷಿಣೆನ ನೀಡಲಾಗಿತ್ತು. ಮತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಮೂರು ತಿಂಗಳ ಹಿಂದೆ ಶ್ವೇತಾ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ವಿಚಾರವೂ ಬೆಳಕಿಗೆ ಬಂದಿದೆ.

ಇದೀಗ ಶ್ವೇತಾ ಪೋಷಕರು ಪತಿ ಬಸವರಾಜ್,ಅತ್ತೆ ಸರೋಜಮ್ಮ ಹಾಗೂ ನಾದಿನಿ ಲತಾ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಮೂವರು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಬಾಲಕ ಸಾವು

ಹಸು ಮೈ ತೊಳೆಯಲು ಕೆರೆಗೆ ಹೋದ ಬಾಲಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ತ್ಯಾಗರ್ತಿಯ ಹೊಸಂತೆ ಗ್ರಾಮದಲ್ಲಿ ನಡೆದಿದೆ. ಸಂದೇಶ್ (15) ನೀರುಪಾಲದ ದುರ್ದೈವಿ. ಶನಿವಾರ ಮಧ್ಯಾಹ್ನ ಹಸು ಮೈ ತೊಳೆಯಲು ಕೆರೆಗೆ ಹೋಗಿದ್ದ ಸಂದೇಶ್ ನೀರು ಪಾಲಾಗಿದ್ದಾನೆ.

ಇದನ್ನೂ ಓದಿ:  Srishaila: ಸುಕ್ಷೇತ್ರ ಶ್ರೀಶೈಲದಲ್ಲಿ ಮತ್ತೆ ಕನ್ನಡಿಗರ ಮೇಲೆ ದಾಳಿ; ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ

ಸಂದೇಶ್ ಹೊಸಂತೆ ಗ್ರಾಮದ ಸುಧಾ ಹಾಗೂ ರಮೇಶ್ ದಂಪತಿಗಳ ಪುತ್ರ. ಪೋಷಕರು ಊರಲ್ಲಿ ಇರದಿರೋದನ್ನ ಗಮನಿಸಿದ ಸಂದೇಶ್ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಬೆಲೆಸಿನಕೆರೆಗೆ ಬಂದಿದ್ದನು. ಹಸು ಮೈ ತೊಳೆಯುವ ವೇಳೆ ಕಾಲು ಜಾರಿ ನೀರು ಪಾಲಾಗಿದ್ದಾನೆ. ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತ ದೇಹವನ್ನು ಮೇಲೆತ್ತಿದ್ದಾರೆ.
Published by:Mahmadrafik K
First published: