Dowry Harassment: ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಧನದಾಹಿ ಪತಿ, ಗಂಡನನ್ನೇ ತಬ್ಬಿಕೊಂಡ ಹೆಂಡತಿ ಸಾವು!

ಹರದನಹಳ್ಳಿ ಗ್ರಾಮದ ಹರೀಶ್ ವರದಕ್ಷಿಣೆ ವಿಚಾರವಾಗಿ ತಡರಾತ್ರಿ ಪತ್ನಿ ಜೊತೆ ಗಲಾಟೆ ಮಾಡಿ, ಬಳಿಕ ತಾಳ್ಮೆ ಕಳೆದುಕೊಂಡು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:


ಮೈಸೂರು (ಸೆ.13) : ದೇಶ ಎಷ್ಟೇ ಮುಂದುವರಿದರು ವರದಕ್ಷಿಣೆ (Dowry) ಎನ್ನುವ ಪೆಡಂಭೂತ ಮಾತ್ರ ತೊಲಗಿಲ್ಲ. ಇದು ನಮ್ಮ ಸಮಾಜದಲ್ಲಿ ಬೇರೂರಿ ಬಿಟ್ಟಿದೆ. ನಿತ್ಯವೂ ವರದಕ್ಷಿಣೆ ಕೂಗು ಕೇಳಿಬರ್ತಿದ್ದು, ಅದೆಷ್ಟೋ ನೊಂದ ಜೀವಗಳು ವರದಕ್ಷಿಣೆ ಕಿರುಕುಳಕ್ಕೆ (Dowry Harassment) ಬಲಿಯಾಗಿವೆ. ಇಂತಹದ್ದೇ ಒಂದು ಘಟನೆ  ಮೈಸೂರು (Mysuru) ಜಿಲ್ಲೆಯಲ್ಲಿ ನಡೆದಿದೆ. ಕೆ.ಆರ್‌.ನಗರ (K.R Nagara) ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಪತಿ ವರದಕ್ಷಿಣೆ ಸಂಬಂಧ ಪತ್ನಿಗೆ ಕಿರುಕುಳ ನೀಡಿ ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ. ಬೆಂಕಿ ಪತಿಯನ್ನು ಪತ್ನಿ ತಬ್ಬಿಕೊಂಡಿದ್ದು, ಆತನಿಗೂ ಬೆಂಕಿ ಹಚ್ಚಿಕೊಂಡಿದೆ. ಘಟನೆಯಲ್ಲಿ ಮಹಿಳೆ ರಾಜೇಶ್ವರಿ (28) ಮೃತಪಟ್ಟಿದ್ದಾರೆ. ಮಹಿಳೆ ಪತಿ ಹರೀಶ್ ಬದುಕುಳಿದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ಹೆಂಡತಿಗೆ ಸೀಮೆ ಎಣ್ಣೆ ಸುರಿದು ಬೆಂಕಿಯಿಟ್ಟ ಗಂಡ

ವರದಕ್ಷಿಣೆ ವಿಷಯಕ್ಕೆ ರಾಜೇಶ್ವರಿ ಹಾಗೂ ಪತಿ ಹರೀಶ್ ನಡುವೆ ಜಗಳ ಶುರುವಾಗಿದೆ. ಈ ವೇಳೆ ಕೋಪಗೊಂಡ ಹರೀಶ್​, ರಾಜೇಶ್ವರಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದನಂತೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಜೀವ ಭಯದಿಂದ ಪತ್ನಿಯು ಪತಿಯನ್ನು ಅಪ್ಪಿಕೊಂಡಿದ್ದಾಳೆ. ಮಹಿಳೆ ದೇಹ ಸಂಪೂರ್ಣವಾಗಿ ಸುಟ್ಟಿದ್ದರಿಂದ ಮೃತಪಟ್ಟಿದ್ದಾರೆ. ಆದರೆ ಪತಿಯ ದೇಹ ಭಾಗಶಃ ಸುಟ್ಟುಹೋಗಿದ್ದು, ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ತಡರಾತ್ರಿ ವರದಕ್ಷಿಣೆಗಾಗಿ ಹರೀಶ್​ ಕ್ಯಾತೆ

ಹರದನಹಳ್ಳಿ ಗ್ರಾಮದ ಹರೀಶ್ ವರದಕ್ಷಿಣೆ ವಿಚಾರವಾಗಿ ತಡರಾತ್ರಿ ಪತ್ನಿ ಜೊತೆ ಗಲಾಟೆ ಮಾಡಿ, ಬಳಿಕ ತಾಳ್ಮೆ ಕಳೆದುಕೊಂಡು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನೆರೆ ಹೊರೆಯವರು ಬಂದು ಬೆಂಕಿ ನಂದಿಸುವಷ್ಟರಲ್ಲಿ ಇಬ್ಬರಿಗೂ ಸಾಕಷ್ಟು ಸುಟ್ಟಗಾಯಗಳಾಗಿದ್ದವು. ರಾಜೇಶ್ವರಿ ಮೃತಪಟ್ಟಿದ್ದು, ಹರೀಶ್ಗೆ ಸ್ಥಿತಿ ಗಂಭೀರವಾಗಿದೆ.

ಮಹಿಳೆ ಪೋಷಕರಿಂದ ದೂರು

ವರದಕ್ಷಿಣೆ ಸಂಬಂಧ ತಮ್ಮ ಮಗಳ ಮೇಲೆ ಅಳಿಯ, ಅವನ ತಂದೆ ತಾಯಿ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಪೊಲೀಸ್ ಮೆಟ್ಟಿಲೇರಿದ್ದೆವು ಮತ್ತು ಹಲವು ಬಾರಿ ನ್ಯಾಯ ಪಂಚಾಯ್ತಿ ಕೂಡ ಮಾಡಲಾಗಿತ್ತು ಎಂದು ರಾಜೇಶ್ವರಿ ತಂದೆ ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Dowry Harassment: ಹೆಚ್ಚಿನ ವರದಕ್ಷಿಣೆ ತರದಿದ್ದಕ್ಕೆ ಸೊಸೆಯಿಂದ ಮಗನ ಕಾಲು ನೆಕ್ಕಿಸಿದ ಪಾಪಿ ಅತ್ತೆ!

 ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಈ ಹಿಂದೆ ಮೈಸೂರಿನಲ್ಲಿ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ರು.  ಮದುವೆ ಸಂದರ್ಭದಲ್ಲಿ 100 ಗ್ರಾಂ ಚಿನ್ನ, ಒಂದು ಲಕ್ಷ ಹಣವನ್ನ ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಬಸವರಾಜ್ ಕೃಷಿ ಮಾಡಿಕೊಂಡು ಜೀವನ‌ ನಡೆಸುತ್ತಿದ್ದ. ಶ್ವೇತ ಹಾಗೂ ಬಸವರಾಜ್ ದಂಪತಿಗೆ ಒಂದುವರೆ ವರ್ಷದ ಮಗು ಸಹ ಇತ್ತು. ಮದುವೆಯಾದ ದಿನದಿಂದಲೂ ಗಂಡ ಮತ್ತು ಹೆಂಡತಿಯ ನಡುವೆ ಜಗಳ ನಡೆಯುತ್ತಲೇ ಇತ್ತಂತೆ. ಬಸವರಾಜ್ ದಿನ ನಿತ್ಯ  ನಿಮ್ಮ ಅಪ್ಪನ ಬಳಿ ಹಣ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನಂತೆ.

ಇದನ್ನೂ ಓದಿ: Liv-In Partner: ಗರ್ಭಿಣಿ ಪ್ರೇಯಸಿಯ ಆರೈಕೆಗೆ ಖೈದಿಗೆ 3 ವಾರಗಳ ಬೇಲ್ ನೀಡಿದ ಕೋರ್ಟ್

ನಾಲೆಗೆ ಬಿದ್ದು ಆತ್ಮಹತ್ಯೆಗೂ ಯತ್ನಿಸಿದ್ರೂ

ಶ್ವೇತ ಮೂರು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನಾಲೆಗೆ ಬಿದ್ದು ಆತ್ಮಹತ್ಯೆಗೂ ಸಹ ಯತ್ನಿಸಿದ್ದಾಳೆಂತೆ. ಎರಡು ಕುಟುಂಬದವರು ಸಾಕಷ್ಟು ಬಾರಿ ರಾಜೀ ಪಂಚಾಯತಿ  ಸಹ ಮಾಡಿದ್ಧಾರೆ. ಇಷ್ಟಾದ್ರು ಸಹ ಗಂಡ, ಮಾವ, ಅತ್ತೆಯ ಕಾಟಕ್ಕೆ ಬೇಸತ್ತ ಶ್ವೇತ ಜೂನ್ 1 ರಂದು ವಿಷ ಕುಡಿದು ತಾಯಿಯ ಮನೆಗೆ ಫೋನ್ ಮಾಡಿ ವಿಚಾರ ತಿಳಿಸಿದ್ದರು. ಮೈಸೂರಿನ‌ ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ಧಾರೆ. ಮೂರು ದಿನಗಳ‌ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದ ಶ್ವೇತ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದರು.

Published by:ಪಾವನ ಎಚ್ ಎಸ್
First published: