Bagalakote: ಬಾದಾಮಿಗೆ ಬೈ ಬೈ ಹೇಳ್ತಾರಾ ಸಿದ್ದರಾಮಯ್ಯ, ಹೋದಲೆಲ್ಲಾ ವಿದಾಯ ಭಾಷಣದ ಗುಟ್ಟೇನು?

ಮತ್ತೆ ಬಾದಾಮಿಯಿಂದಲೇ ಸ್ಫರ್ಧೆ  ಮಾಡುವಂತೆ ಅಭಿಮಾನಿಗಳ ಮನವಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನೋಡೋಣ, ಎಲೆಕ್ಷನ್ ಇನ್ನೂ ಒಂದು ವರ್ಷ ಇದೆ. ಮುಂದಿನ ದಿನಗಳಲ್ಲಿ ನಿರ್ಧಾರ ಮಾಡ್ತೀನಿ ಎಂದಿದ್ದಾರೆ

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

 • Share this:
  ಬಾಗಲಕೋಟೆ (ಏ.7): ಈ ಬಾರಿ ಬಾದಾಮಿ (Badami)ಯಿಂದ ಸ್ಫಧೆ೯ ಮಾಡದೆ ಮಾಜಿ ಸಿ ಎಂ ಸಿದ್ದು ಹಿಂದಕ್ಕೆ ಸರಿಯುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಎರಡು ದಿನಗಳಿಂದ ಬಾದಾಮಿ ಪ್ರವಾಸ ದಲ್ಲಿ ಇದ್ದ ಸಿದ್ದರಾಮಯ್ಯ (Siddaramaiah) ಶಾಲೆಯ ಕಟ್ಟಡ ಉದ್ಘಾಟನೆ ಹಾಗೂ ಇತರ ಸಮಾರಂಭ ದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪರೋಕ್ಷವಾಗಿ ವಿದಾಯ ಭಾಷಣ (Farewell speech) ಮಾಡಿದಂತೆ ಕಂಡು ಬಂತು ಈ ಬಗ್ಗೆ ರಾಜಕೀಯದಲ್ಲಿ (Political) ಚರ್ಚೆ ಕೂಡ ನಡೀತಿದೆ.

  ಬಾದಾಮಿಯಿಂದಲೇ ಸ್ಫರ್ಧೆಗೆ ಒತ್ತಡ

  ಮತ್ತೆ ಬಾದಾಮಿಯಿಂದಲೇ ಸ್ಫರ್ಧೆ  ಮಾಡುವಂತೆ ಅಭಿಮಾನಿಗಳ ಮನವಿಗೆ ಸಿದ್ದು ಪ್ರತಿಕ್ರಿಯೆ ನೀಡಿ, ನೋಡೋಣ, ಎಲೆಕ್ಷನ್ ಇನ್ನೂ ಒಂದು ವಷ೯ ಇದೆ. ಕೂಸು ಹುಟ್ಟುವ ಮುನ್ನವೇ ಕುಲಾಯಿ ಹಾಕೋಳ್ಳೋಕೆ ಆಗುತ್ತಾ. ಆದರೆ ಬಾದಾಮಿ ದೂರ ಅನ್ನೋದು ಬಿಟ್ಟರೆ, ಬಾದಾಮಿ ಜನ ಬಹಳ ಒಳ್ಳೆಯವರು. ಕೇವಲ ಶಾಸಕನಾಗಿದ್ರೆ ವಾರದಲ್ಲಿ ಎರಡು ದಿನ ಬಂದು ಜನರ ಸಮಸ್ಯೆ ಕೇಳಬಹುದಾಗಿತ್ತು. ನಾನು ಬರೀ ಎಂಎಲ್ ಎ ಅಲ್ಲ,  ವಿಧಾನ ಸಭೆ ವಿಪಕ್ಷ ನಾಯಕ. ಹೀಗಾಗಿ ಬೇರೆ ಬೇರೆ ಕಡೆ ಹೋಗಬೇಕಾಗುತ್ತೆ, ಟೂರ್  ಮಾಡಬೇಕಾಗುತ್ತೆ. ಸಮಸ್ಯೆಗಳಿವೆ‌. ಅಸೆಂಬ್ಲಿ ಇತ್ತು, ಪಾದಯಾತ್ರೆ ಇತ್ತು, ಕಳೆದ ತಿಂಗಳಿಂದ ಬರೋಕಾಗ್ಲಿಲ್ಲ. ನಮ್ಮ ಸಮಸ್ಯೆ ಇದೆ ಅಂತ ಹೇಳಿದ್ರೆ ಕ್ಷೇತ್ರದ ಜನ ಕೇಳ್ತಾರಾ‌, ನಾನೊಬ್ಬ ಶಾಸಕನಾಗಿ ನನಗೂ ಜವಾಬ್ದಾರಿ ಇದೆ, ತೃಪ್ತಿ ಆಗಬೇಕಲ್ಲ ಎಂದರು.

  ‘ಇನ್ನೂ 1 ವರ್ಷವಿದೆ ನೋಡೋಣ’

  ಇನ್ನು ಸಿದ್ದರಾಮಯ್ಯನವರನ್ನ ಈ ಕ್ಷೇತ್ರದ ಜನ ಬಹಳ ಪ್ರೀತಿ, ಅಭಿಮಾನದಿಂದ ನೋಡಿಕೊಂಡಿದ್ದಾರೆ ಮುಂದಿನ ಚುನಾವಣೆ ಬಗ್ಗೆ ನೋಡೋಣ ಎಂದ ಹೇಳಿ ಸ್ಪರ್ಧೆ ಮಾಡುವ ಬಗ್ಗೆ ಖಚಿತ ಪಡಿಸಲಿಲ್ಲ. ಇದೇ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಲ್ಲ ಅಂತ ಹೇಳುತ್ತಾ ಗರಂ ಆದ ಘಟನೆ ಸಹ ನಡೆದಿದೆ.

  ಇದನ್ನೂ ಓದಿ: RamaNavamiಯಂದು ಬೆಂಗಳೂರಲ್ಲಿ ರಾಮರಥಯಾತ್ರೆ; ಸರ್ವ ಧರ್ಮದವರಿಗೂ ವ್ಯಾಪಾರಕ್ಕೆ ಅವಕಾಶ

  ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಗರಂ

  ಸಚಿವ ಈಶ್ವರಪ್ಪ ಪ್ರಶ್ನೆಗೆ  ಮಾಧ್ಯಮಗಳ ಮೇಲೆಯೇ ಗರಂ ಆದರು. ಸಿದ್ದರಾಮಯ್ಯ ಅಲಖೈದಾ ಮುಖಂಡರಾಗಿದ್ರಾ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ ಸಿದ್ದು ಗರಂ ಆಗಿ, ನಾನು ಈಶ್ವರಪ್ಪನ ಬಗ್ಗೆ ರಿಯಾಕ್ಟ್ ಮಾಡಲ್ಲ, ಮತ್ತೇ ಮತ್ತೇ ಬಂದು ಕೇಳಿದ್ರೆ ಏನು ಹೇಳಲಿ ಎಂದು ಗರಂ ಆದ್ರು.

  ಇಬ್ರಾಹಿಂ ನಾಟ್ ಇನ್ ಅವರ್ ಪಾಟಿ೯

  ಇದೆ ಸಮಯದಲ್ಲಿ ಮಾತನಾಡಿದ ಅವರು,ಸಿಎಂ ಇಬ್ರಾಹಿಂ ಅವರು ರೋಷನ್ ಬೇಗ್ &  ಆತನ ಪುತ್ರನನ್ನ ಕರೆ ತಂದು ಹೆಬ್ಬಾಳ , ಶಿವಾಜಿನಗರಕ್ಕೆ ಸ್ಪಧೆ೯ ಮಾಡಿಸುತ್ತಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ,ರೋಷನ್ ಬೇಗ್ ಈಸ್ ನಾಟ್ ಇನ್ ಅವರ್ ಕಾಂಗ್ರೆಸ್ ಪಾಟಿ೯. ಅದರ ಬಗ್ಗೆ ಮಾತನಾಡಿ ಏನು ಪ್ರಯೋಜನ, ಹೀ ಈಜ್ ನಾಟ್ ಇನ್ ಅವರ್ ಪಾಟಿ೯, ಇಬ್ರಾಹಿಂ ನಾಟ್ ಇನ್ ಅವರ್ ಪಾಟಿ೯ , ನಾವ್ಯಾಕೆ ಅವರ ಬಗ್ಗೆ ಕಮೆಂಟ್ ಮಾಡಬೇಕು ಎಂದು, ಅವರು ಎಲ್ಲಿಯಾದ್ರೂ ನಿಂತುಕೊಳ್ಳಲಿ. ಈ ಬಗ್ಗೆ ಕೊನೆಗೆ ಜನರೇ ತೀಮಾ೯ನ ಮಾಡುತ್ತಾರೆ ಎಂದರು.

  ಕಾರ್ಯಕರ್ತರ ಮಧ್ಯೆ ಗಲಾಟೆ

  ಬೆಳ್ಳಿಗೆ ಖಾಸಗಿ ಹೋಟೆಲ್ ನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಿದರು. ಇದೇ ಸಮಯದಲ್ಲಿ ಕಾರ್ಯಕರ್ತರ ಮಧ್ಯೆ ಗಲಾಟೆ ಉಂಟಾಗಿ, ಕೆಲ ಸಮಯ ಗೊಂದಲಮಯ ವಾತಾವರಣ ನಿರ್ಮಾಣ ವಾಯಿತು.ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ಎರಡು ಗುಂಪಿನ ಮಧ್ಯೆ ವಾಕ್ಸಮರ ನಡೆಯಿತು. ಸಿದ್ದರಾಮಯ್ಯ ಮುಂದೆ ವಾಗ್ದಾಳಿ. ಪರಸ್ಪರ ತಳ್ಳಾಟ ನೂಕಾಟ ಸಹ ನಡೆಯಿತು.

  ಬೇಲೂರ ಹೆಸ್ಕಾಮ್ ಸೆಕ್ಷನ್ ಆಫಿಸರ್ ಬಗ್ಗೆ ಗ್ರಾಮಸ್ಥರು ದೂರು ನೀಡಿದರು. ಇದರಿಂದ ಆಫಿಸರ್ ಗೆ   ಸಿದ್ದರಾಮಯ್ಯ ತರಾಟೆ ತೆಗೆದುಕೊಂಡರು. ಬಾದಾಮಿ ಪುರಸಭೆಯ ಅಧ್ಯಕ್ಷರು ಸದಸ್ಯರು ಸೇರಿಕೊಂಡು, ಸಿದ್ದರಾಮಯ್ಯ ನವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

  ಇದನ್ನೂ ಓದಿ: Bengaluru ರಾಘವೇಂದ್ರ ಮಠಕ್ಕೆ ಮಂತ್ರಾಲಯದ ಪೀಠಾಧಿಪತಿಗಳ ಆಗಮನ; ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದ CM

  ಸಿದ್ದರಾಮಯ್ಯಗೆ ಕುರಿ ಗಿಫ್ಟ್​

  ಈ ಸಮಯದಲ್ಲಿ ಅಭಿಮಾನಿ ಯೊಬ್ಬರು, ಕುರಿ ಗಿಫ್ಟ್ ನೀಡಿ ಗಮನ ಸೆಳೆದರು. ಗುರು ಸಂಗಪ್ಪ ಕೊಡಲಿ ಎಂಬುವವರು, ಸಿದ್ದರಾಮಯ್ಯ ಕುರಿ ನೀಡಿದರು. ಈ ಸಂದರ್ಭದಲ್ಲಿ ಇದು ಗಂಡೋ, ಹೆಣ್ಣೋ ಎಂದು ಕೇಳಿದ ಸಿದ್ದರಾಮಯ್ಯ, ಈ ಕುರಿ ನನಗೆ ಕೂಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ಕೆಂದೂರ ಕೆರೆಗೆ ನೀರು ಹಾಯಿಸುವ ಯೋಜನೆಗೆ ಚಾಲನೆ ನೀಡಿ ವಾಪಸ್ಸು ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತೆರಳಿದರು.

  ವರದಿ: ಮಂಜುನಾಥ್ ತಳವಾರ
  Published by:Pavana HS
  First published: