Udupi: ಎರಡು ಕೊಲೆ, ನಾಲ್ಕು ಸಂಬಂಧ: ಚೆಲುವಿ ಹೆಸರಿನ ಚೆಲುವೆಯ ಕೊಲೆ: ಬಚಾವ್ ಆಗಲು ಮಗುವನ್ನ ಕೊಂದ ನೀಚ

ಆ ದಿನ ರಾತ್ರಿ ಕೂಡ ಇದೇ ವಿಚಾರದಲ್ಲಿ ಗಲಾಟೆಯಾಗಿದೆ. ಮೊದಲೇ ಕುಡಿದು ಬಂದಿದ್ದ ಹರೀಶ್ ಚೂಡಿದಾರದ ಶಾಲಿನಿಂದ ಕುತ್ತಿಗೆಯನ್ನು ಬಿಗಿದು ಬೆನ್ನಿಗೆ ಗುದ್ದಿ ಚೆಲುವಿಯನ್ನು ಕೊಲೆ ಮಾಡಿದ್ದಾನೆ

ಕೊಲೆಯಾದ ಚೆಲುವಿ

ಕೊಲೆಯಾದ ಚೆಲುವಿ

  • Share this:
ಆಕೆ ಗಂಡನಿಂದ (Husband) ದೂರವಾಗಿದ್ರೂ ಇಬ್ಬರು ಮಕ್ಕಳನ್ನು (Children) ಸಾಕಿ ಸಲಹುತ್ತಿದ್ದಳು. ಇಷ್ಟೇ ಆಗಿದ್ರೆ ಆಕೆ ನೆಮ್ಮದಿಯಿಂದ ಬಾಳಿ ತನ್ನ ಪುಟ್ಟ ಮಕ್ಕಳಿಗೆ ಒಂದೊಳ್ಳೆ ಜೀವನವನ್ನು ಕೊಡಿಸಬಹುದಿತ್ತು.‌ ಆದ್ರೆ ಆಕೆ ಆತನೊಂದಿಗೆ ಇಟ್ಟುಕೊಂಡಿದ್ದ ಸಂಬಂಧ ಇನ್ನು ಮತ್ತೊಂದು ಅನ್ನೋ ಅಕ್ರಮ ಸಂಬಂಧ (Illicit Relationship) ಇದೀಗ ಆಕೆಯ ಮತ್ತು ಪುಟ್ಟ ಬಾಲಕಿಯ ಜೀವವನ್ನೇ ಬಲಿ ತೆಗೆದುಕೊಂಡಿದೆ.‌ ಹಾಗಾದ್ರೆ ಆ ಜೋಡಿ ಕೊಲೆಯ (Double Murder) ಹಿನ್ನೆಲೆಯಾದ್ರೂ ಏನು ಅನ್ನೋದನ್ನ ಹೇಳ್ತೀವಿ ಕೇಳಿ. ಚೆಲುವಿ ಎಂಬ ಹೆಸರಿನ ಚೆಲುವೆಯೊಬ್ಬಳು ಕೊಲೆಯಾಗಿದ್ದಾಳೆ. ತಾಯಿಯ (Mother) ಜೊತೆಗೆ ಮಗಳನ್ನು (Daughter) ಕೂಡ ಕೊಲೆಗಡುಕ ಬಲಿ ಪಡೆದಿದ್ದಾನೆ. ಎರಡು ಕೊಲೆ 4 ಸಂಬಂಧಗಳ ನಿಗೂಢ ಪ್ರಕರಣವನ್ನ  48 ಗಂಟೆಯೊಳಗೆ ಪೊಲೀಸರು ಭೇದಿಸಿದ್ದಾರೆ. ಚೆಲುವಿಯ ಕೊಲೆಗೆ ಕಾರಣ ಇದೆ. ಆದರೆ ಅಮಾಯಕ ಮಗುವಿನ ಸಾವು ಮಾತ್ರ ಎಲ್ಲರ ಮನ ಕಲಕುವಂತೆ ಮಾಡಿದೆ.

28 ವರ್ಷದ  ಚೆಲುವಿ ಕೊಲೆಯಾದ ಚೆಲುವೆ. ಆ ಬಾಲಕಿ ಹೆಸರು ಚೆಲುವಿಯ ಮಗಳು 10 ವರ್ಷದ ಪ್ರಿಯಾ. ಈ ಚೆಲುವಿ ಹೆಸರಿಗೆ ತಕ್ಕಂತೆ ತಕ್ಕಮಟ್ಟಿಗೆ ಸುಂದರಿ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹೋಂ ನರ್ಸ್ ಆಗಿ ಉದ್ಯೋಗ ಮಾಡುತ್ತಿದ್ದವಳು. ಆರೈಕೆ ಮಾಡಲು ಯಾರು ಇರದ ಶ್ರೀಮಂತ ರೋಗಿಗಳ ಉಸ್ತುವಾರಿಗೆ ಚೆಲುವಿ ಯಂತಹ ಹೋಂ ನರ್ಸುಗಳನ್ನು ಬಾಡಿಗೆಗೆ ಗೊತ್ತು ಮಾಡಲಾಗುತ್ತದೆ.

ಅನೇಕ ಬಡ ಯುವತಿಯರಿಗೆ ಹೋಂ ನರ್ಸ್ ಸ್ವಾವಲಂಬನೆ ಕಲಿಸಿಕೊಟ್ಟ ಉದ್ಯೋಗ. ಚೆಲುವಿ ಕೂಡ ಹೋಂ ನರ್ಸ್ ಆಗಿ ದುಡಿಯಲು ಪ್ರಾರಂಭಿಸಿದ ನಂತರವೇ ತನ್ನ ಕಾಲ ಮೇಲೆ ತಾನು ನಿಂತಿದ್ದಳು.

ಮಣಿಪಾಲದ ಅತ್ರಾಡಿಯಲ್ಲಿ ವಾಸ

ಈಕೆ ತಮಿಳುನಾಡು ಮೂಲದವಳು, ಇವರೆಲ್ಲ ಗುಂಪುಗುಂಪಾಗಿ ಶಿವಮೊಗ್ಗದ ಭದ್ರಾವತಿ ಕಡೆಗೆ ಕಾಲುವೆ ಕೆಲಸಕ್ಕೆ ಎಂದು ವಲಸೆ ಬಂದವರು. ಹತ್ತಾರು ವರ್ಷಗಳ ಹಿಂದೆ ಭದ್ರಾವತಿಗೆ ಬಂದು, ನಂತರ ಜೀವನೋಪಾಯ ಅರಸುತ್ತಾ ಮಣಿಪಾಲ ಸಮೀಪದ ಅತ್ರಾಡಿ ಯಲ್ಲಿ ನೆಲೆನಿಂತವರು.‌ ಚೆಲುವಿಯ ಕುಟುಂಬವೂ ಸೇರಿದಂತೆ ಈ ಪರಿಸರದಲ್ಲಿ ಹತ್ತಾರು ತಮಿಳು ವಲಸೆ ಕಾರ್ಮಿಕರ ಮನೆಗಳಿವೆ. ಸರಕಾರದ ಜತೆ ಗುದ್ದಾಡಿ ತಮ್ಮ ಹೆಸರಿಗೆ ಮಾಡಿಸಿಕೊಂಡ ಮೂರು- ಐದು ಸೆಂಟ್ಸ್ ಭೂಮಿಯಲ್ಲಿ, ಸ್ವಂತಕ್ಕೊಂದು ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ.

ಇದನ್ನೂ ಓದಿ:  Crime News: ಬುಡಕಟ್ಟು ಮಹಿಳೆಯ ರೇಪ್ ಮಾಡಿ ಕೊಂದು ಮೃತದೇಹದ ಮೇಲೂ ಅತ್ಯಾಚಾರ ಮಾಡಿದ!

ಚೆಲುವೆಯ ಮನೆ ಕೂಡ ಆತ್ರಾಡಿ ಸಮೀಪದ ಮದಗ ಎಂಬ ಗ್ರಾಮದಲ್ಲಿದೆ. ಈಕೆಯ ಮನೆಯ ಕೂಗಳತೆಯ ದೂರದಲ್ಲೇ ಇವಳ ತಾಯಿ ಮುನಿಯಮ್ಮನ  ಮನೆ ಇದೆ. ಅಲ್ಲೇ ಅಕ್ಕಪಕ್ಕದಲ್ಲಿ ಇವಳ ತಂಗಿಯ ಮನೆಯೂ ಇದೆ. ಆದರೆ ಚೆಲುವೆಯ ಕೊಲೆ ನಡೆದಾಗ ತಾಯಿ ದೂರದ ತಮಿಳುನಾಡಿಗೆ ಹೋಗಿದ್ದರು.

ಮಗಳ ಜೊತೆಯಲ್ಲಿ ಮನೆಯಲ್ಲಿದ್ದ ಚೆಲುವಿ

ಮುನಿಯಮ್ಮನ ಜೊತೆಗೆ ಚೆಲುವಿಯ ಮಗ ಕೂಡ ಹೋಗಿದ್ದ. ಚೆಲುವಿಗೆ ಒಂದು ಗಂಡು ಒಂದು ಹೆಣ್ಣು ಮಗು. ಹೆಣ್ಣು ಮಗು ಪ್ರಿಯಾ ಇವಳ ಜೊತೆಗೆನೇ ಇದ್ದಳು. ಸಂಬಂಧಿಕರ ಬೊಜ್ಜಕ್ಕೆಂದು ತಮಿಳುನಾಡಿಗೆ ಹೋದ ಕಾರಣ ಚೆಲುವಿ ರಜೆ ಮಾಡಿಕೊಂಡು ಮಗಳ ಜೊತೆ ಮನೆಯಲ್ಲೇ ಇದ್ದಳು.

ಚೆಲುವಿಯ ತಾಯಿ ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಾರೆ. ತಮಿಳುನಾಡಿನಿಂದ ಭದ್ರಾವತಿ ಮೂಲಕ ಆತ್ರಾಡಿಗೆ ಬರಲು ಇವರು ಬಸ್ಸು ಹತ್ತಿದ್ದರು. ರಾತ್ರಿ ಹತ್ತು ಗಂಟೆಯವರೆಗೂ ಮಗಳ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದರು. ಮೊಮ್ಮಗಳು ಕೂಡ ಅಜ್ಜಿಯ ಜೊತೆ ಮಾತನಾಡಿದ್ದಳು. ಅಮ್ಮನಿಗೆ ಬೇಗ ವಾಪಸು ಬರುವಂತೆ ತಾಕೀತು ಮಾಡಿದ್ದ ಚೆಲುವಿ, ನನಗೆ ಕೆಲಸಕ್ಕೆ ಹೋಗಬೇಕು ಮಗಳನ್ನು ನೋಡಿಕೊಳ್ಳಲು ಯಾರೂ ಇಲ್ಲ ನೀನು ಬೇಗ ಬಾ ಎಂದು ತಾಯಿಗೆ ಒತ್ತಾಯಿಸಿದ್ದಳು.

ಮೃತ ಸೋದರಿಯ ಪುತ್ರನನ್ನು ಸಾಕೋದಾಗಿ ಹೇಳಿದ್ದಳು

ಹೌದು, ಚೆಲುವಿ ತನ್ನ ಇಬ್ಬರು ಮಕ್ಕಳನ್ನು ತುಂಬಾ ಪ್ರೀತಿಸ್ತಾ ಇದ್ಲು. ತನ್ನ ಮಕ್ಕಳು ಮಾತ್ರವಲ್ಲ ವರ್ಷದ ಹಿಂದೆ ಸತ್ತ ತನ್ನ ಅಕ್ಕನ ಮಗುವನ್ನು ಕೂಡ ತನ್ನ ಮನೆಗೆ ಕರೆತರುವಂತೆ ತಾಯಿಗೆ ಹೇಳಿದ್ದಳು. ತಾಯಿಗೂ ಕಷ್ಟಕಾಲದಲ್ಲಿ ನೆರವಾಗುತ್ತಿದ್ದಳು. ತಮಿಳುನಾಡಿಗೆ ಹೊರಟಾಗ ಸಾಲಸೋಲ ಮಾಡಿ ಒಂದಿಷ್ಟು ಹಣ ಕೂಡಾ ಕೊಟ್ಟಿದ್ದಳು. ಅಕ್ಕನ ಮಗುವನ್ನು ಕೂಡಾ ನಾನೇ ನೋಡಿಕೊಳ್ಳುತ್ತೇನೆ ಎಂದು ತಾಯಿಗೆ ಹೇಳಿದ್ದಳು.

ಕರೆ ಸ್ವೀಕರಿಸದ ಮಗಳು, ಅಮ್ಮನಿಗೆ ಕ್ಷಣ ಕ್ಷಣಕ್ಕೂ ಅತಂಕ

ತಮಿಳುನಾಡಿನಿಂದ ಅಕ್ಕಿ, ಶೇಂಗಾ ಇತ್ಯಾದಿ ಮೂಟೆಗಳನ್ನು ಹೊತ್ತು ಕೊಂಡು ತಾಯಿ ಮುನಿಯಮ್ಮ ಭದ್ರಾವತಿಯ ಸಹೋದರನ ಮನೆಗೆ  ಬಂದು ಬೆಳಗ್ಗೆ ನಾಲ್ಕು ಗಂಟೆಗೆ ತಲುಪಿದ್ದರು. ಭದ್ರಾವತಿ ತಲುಪಿದ ನಂತರ ಮಗಳು ಚೆಲುವಿಗೆ ಪದೇಪದೇ ಕರೆ ಮಾಡುತ್ತಿದ್ದರು. ಎಷ್ಟೇ ಕರೆ ಮಾಡಿದರೂ ಮಗಳು ಕರೆ ಸ್ವೀಕರಿಸಿರಲಿಲ್ಲ. ಕರೆಮಾಡಿ ಸುಸ್ತಾಗಿದ್ದ ಮುನಿಯಮ್ಮ ತನ್ನ ಇನ್ನೊಬ್ಬಳು ಮಗಳಿಗೆ ಚೆಲುವೆಯ ಮನೆಗೆ ಹೋಗಿ ನೋಡಿ ಬರುವಂತ ತಿಳಿಸಿದ್ದಳು. ಆದರೆ ಅಕ್ಕ-ತಂಗಿಯ ನಡುವೆ ಅದೇನೋ ಮನಸ್ತಾಪ, ಹಾಗಾಗಿ ತಂಗಿ ತಾನು ಹೋಗದೆ ತನ್ನ ಮಗನನ್ನು ಚೆಲುವಿಗೆ ಮನೆಗೆ ಕಳಿಸಿದಳು.

ಕಿಟಕಿಯಲ್ಲಿ ಚೆಲುವಿಯ ಮನೆಯೊಳಗೆ  ಇಣುಕಿ ಬಂದಿದ್ದ ಬಾಲಕ ದೊಡ್ಡಮ್ಮ ಮತ್ತು ಅಕ್ಕ ಮಲಗಿದ್ದಾರೆ ಎಂದು ಹೇಳಿದ್ದ. ಗಂಟೆ ಹತ್ತಾದರೂ ಇನ್ನೂ ಮಲಗಿಯೇ ಇರುವುದರಿಂದ ಸಂಶಯಗೊಂಡ ಮುನಿಯಮ್ಮ ನಿಮ್ಮ ನಡುವೆ ಕೋಪ ಇದ್ದರೂ ತೊಂದರೆಯಿಲ್ಲ ನೀನೇ ಹೋಗಿ ನೋಡಿ ಬಾ ಎಂದು ತನ್ನ ಮಗಳಲ್ಲಿ ಹೇಳಿದ್ದಾಳೆ.

ಮಗಳ ಸಾವಿನ ಸುದ್ದಿ

ಭದ್ರಾವತಿಯಲ್ಲಿ ಇದ್ದ ಮುನಿಯಮ್ಮನಿಗೆ ಅದೇನೋ ಸಂಕಟ. ಬೇಡವೆಂದರೂ ಕೂಗುತ್ತಿರುವ ಕಾಗೆಯನ್ನು ನೋಡಿ ಆತಂಕ. ಅದೇನು ಅಪಶಕುನವಾಗಿದೆಯೋ ಗೊತ್ತಿಲ್ಲ ನನ್ನ ದೊಡ್ಡ ಮಗಳು ಸತ್ತಾಗಲೂ ಹೀಗೇ ಆಗಿತ್ತು, ಚೆಲುವಿಗೂ ಕೂಡ ಏನೋ ಆಗಿದೆ ಎಂದು ತನ್ನ ಸಹೋದರರಲ್ಲಿ ಹೇಳುತ್ತಿದ್ದಳು. ಆತ್ರಾಡಿಯಲ್ಲಿದ್ದ ತನ್ನ ಮತ್ತೊಬ್ಬ ಮಗಳನ್ನು ಒತ್ತಾಯಪೂರ್ವಕವಾಗಿ ಚೆಲುವಿಯ ಮನೆಗೆ ಕಳುಹಿಸಿದಾಗ. ಆಘಾತಕಾರಿ ಮಾಹಿತಿ ಸಿಕ್ಕಿತು.

Double murder in manipal accused arrested in 48 hours psudp mrq
ಹರೀಶ್


ಮನೆ ಒಳಗೆ ಕವುಚಿ ಮಲಗಿದ ಸ್ಥಿತಿಯಲ್ಲಿ ಚೆಲುವಿ ಇದ್ದಳು. ಆಕೆಯ ಪಕ್ಕದಲ್ಲೇ ಮಗಳು ಪ್ರಿಯಾ ಕೂಡ ಮಲಗಿದ್ದಳು. ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಇಬ್ಬರೂ ಕೊಲೆಯಾಗಿರುವುದು ಗೊತ್ತಾಗಿದೆ. ಚೆಲುವಿಯ ಕುತ್ತಿಗೆಯಿಂದ ರಕ್ತ ಹೊರಬರುತ್ತಿತ್ತು. ಏನೂ ಅರಿಯದ ಹತ್ತು ವರ್ಷ ಪ್ರಾಯದ ಪುಟ್ಟಮಗು ಪ್ರಿಯಾ ಕೂಡ ಶವವಾಗಿ ಬಿದ್ದಿದ್ದಳು.

ಇದನ್ನೂ ಓದಿ:  SSLC Result: ಮುಂದಿನ ವಾರ ಹೊರಬೀಳಲಿದೆ SSLC ಫಲಿತಾಂಶ; ರಿಸಲ್ಟ್​ ನೋಡಲು ಹೀಗೆ ಮಾಡಿ

ಕುತ್ತಿಗೆ ತೋಳಿನಲ್ಲಿ ಗಾಯದ ಗುರುತುಗಳು

ಆರಂಭದಲ್ಲಿ ತಾಯಿ ಮಗಳ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವದಂತಿ ಆಗಿತ್ತು. ಆದರೆ ಇವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯಾವುದೇ ಕಾರಣ ಇರಲಿಲ್ಲ. ಮೇಲಾಗಿ ಕುತ್ತಿಗೆ ಮತ್ತು ತೋಳಿನಲ್ಲಿ ಗಾಯದ ಗುರುತುಗಳು ದಟ್ಟವಾಗಿ ಕಾಣುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇದೊಂದು ಕೊಲೆ ಎಂದು ಆಗಲೇ ಖಚಿತ ಪಡಿಸಿದ್ದರು. ಆದರೆ ಕೊಲೆ ಮಾಡಿದವರು ಯಾರು ಎಂಬುದು ಗೊತ್ತಾಗಿರಲಿಲ್ಲ.

ಸ್ಥಳವನ್ನು ಪರಿಶೀಲನೆ ನಡೆಸಿದಾಗ ಚೆಲುವಿ ಬಳಸುತ್ತಿದ್ದ ಮೊಬೈಲು, ಕೆಲವೊಂದು ಫೋಟೋಗಳು, ಮತ್ತು ಸುಮಾರು 50 ಸಾವಿರ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಕಳ್ಳತನದ ಸಲುವಾಗಿ ಕೊಲೆ ಮಾಡಲಾಗಿದೆ ಎಂದು ಬಿಂಬಿಸುವ ಪ್ರಯತ್ನ ಇದಾಗಿತ್ತು. ಆದರೆ ಇದು ದರೋಡೆಕೋರರು ಮಾಡಿದ ಕೊಲೆಯಲ್ಲ, ಪರಿಚಯದ ವ್ಯಕ್ತಿಯೇ ಬಂದು ನಡೆಸಿದ ಕೊಲೆ ಎಂಬುದು ಪೊಲೀಸರಿಗೆ ಅದಾಗಲೇ ಗೊತ್ತಾಗಿತ್ತು.‌

ಸಾವಿನ ಚೆಲುವಿಯ ರಹಸ್ಯಗಳು ರಿವೀಲ್

ಚೆಲುವಿ ಸತ್ತ ನಂತರ ಅನೇಕ ರಹಸ್ಯಗಳು ಬಯಲಾಗಿದೆ. ಮೊದಲು ಚೆಲುವಿಗೆ ತನ್ನ ಸಂಬಂಧಿಕನೊಬ್ಬನ ಜೊತೆಗೆ ಮದುವೆಯಾಗಿತ್ತು. ಆತ ಕುಡಿದು ಚೆಲುವಿಗೆ ಹಿಂಸೆ ನೀಡುತ್ತಿದ್ದ. ಇಬ್ಬರು ಮಕ್ಕಳನ್ನು ಕೂಡ ಚೆಲುವಿಗೆ ಕರುಣಿಸಿದ್ದ. ಆದರೆ ಈತನ ಚಿತ್ರಹಿಂಸೆಯಿಂದ ಚೆಲುವಿ ನಲುಗಿ ಹೋಗಿದ್ದಳು. ಪತಿ ಇದ್ದಾಗಲೇ ಇನ್ನೊಬ್ಬ ಗೆಳೆಯನ ಜೊತೆ ಸಖ್ಯ ಬೆಳೆಸಿದ್ದಳು.

ಮಣಿಪಾಲದ ಬಾರೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅನ್ಯಕೋಮಿನ ಯುವಕನ ಜೊತೆ ಈಕೆ ಸಂಬಂಧ ಬೆಳೆಸಿದ್ದಳು. ಈತನ ಜೊತೆ ಇದ್ದ ಪ್ರೇಮ ವ್ಯವಹಾರ ಗೊತ್ತಾಗುತ್ತಿದ್ದಂತೆ ಮೊದಲ ಪತಿ ಬಿಟ್ಟುಹೋಗಿದ್ದ. ಪತಿ ಬಿಟ್ಟು ಹೋದರೂ ತಲೆಕೆಡಿಸಿಕೊಳ್ಳದ ಚೆಲುವಿ ಮುಸಲ್ಮಾನ ಗೆಳೆಯನ ಜೊತೆ ಮುಂಬೈಗೆ ತೆರಳಿದ್ದಳು. ಆತನ ಜೊತೆ ಮುಂಬೈನಲ್ಲಿ ಎರಡು ವರ್ಷ ಸಂಸಾರ ನಡೆಸಿದ್ದಳು.  ಆಮೇಲೆ ಅದೇನಾಯ್ತೋ ಗೊತ್ತಿಲ್ಲ ಇಬ್ಬರು ಬೇರೆ ಆಗಿದ್ದರು. ಆ ಬಳಿಕ ಹೋಂ ನರ್ಸ್ ಕೆಲಸ ಮಾಡಿಕೊಂಡು ಮಣಿಪಾಲ ಮತ್ತು ಅತ್ರಾಡಿ ನಡುವೆ ಓಡಾಡುತ್ತಿದ್ದಳು. ಈ ಎಲ್ಲಾ ವಿಚಾರಗಳನ್ನು ತನಿಖೆಯಿಂದ ತಿಳಿದುಕೊಂಡ ಪೊಲೀಸರು ಅದಾಗಲೇ ಅಲರ್ಟ್ ಆಗಿದ್ದರು.

ಮರಳಿನ ಮೇಲೆ ಕುಳಿತು ಫೋನ್ ನಲ್ಲಿ ಮಾತು

ಗೆಳೆಯನಿಂದ ಬೇರೆ ಆದನಂತರ ಚೆಲುವಿ  ಓರ್ವ ವ್ಯಕ್ತಿಯ ಜೊತೆ ಕಳೆದ ಮೂರು ವರ್ಷಗಳಿಂದ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿರುವ ವಿಷಯ ಪೊಲೀಸರ ಗಮನಕ್ಕೆ ಬಂದಿದೆ.  ಈ ವಿಚಾರವನ್ನು ತಾಯಿ ಕೂಡ ತಿಳಿಸಿದ್ದಾಳೆ. ಚೆಲುವಿಯ ಮನೆಯಲ್ಲಿ ಶೌಚಾಲಯ ಇರಲಿಲ್ಲ. ಹಾಗೂ-ಹೀಗೂ ದುಡಿದು ಸಂಪಾದಿಸಿದ ಹಣದಲ್ಲಿ ಒಂದು ಶೌಚಾಲಯ ಕಟ್ಟಿಸಬೇಕು ಎಂದು ಮನೆ ಎದುರು ಮರುಳು ರಾಶಿ ಹಾಕಿಸಿದ್ದಳು. ಇದೇ ಮರಳಿನ ರಾಶಿಯ ಮೇಲೆ ಕುಳಿತುಕೊಂಡು ಚೆಲುವಿ ಯಾರ ಜೊತೆಗೂ ಯಾವಾಗ ನೋಡಿದ್ರೂ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಈಕೆಯ ಫೋನಿಗೆ ಬರುವ ಕರೆಗಳು ಮತ್ತು ಸ್ಥಳದ ಆಸುಪಾಸಿನ ಸಿಸಿಟಿವಿ ಫೂಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಆಸುಪಾಸಿನಲ್ಲಿದ್ದ ಸಂಬಂಧಿಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆಗಡುಕನ ಜಾಡು ಪೊಲೀಸರಿಗೆ ಸಿಕ್ಕಿತ್ತು.

ಅಂದು ಮನೆಗೆ ಬಂದವನೇ ಹರೀಶ್

ಚೆಲುವಿ ಸದ್ಯ ಏಕಾಂಗಿ ಆಗಿರುವುದನ್ನು ತಿಳಿದುಕೊಂಡ ಆಕೆಯ ದೂರದ ಸಂಬಂಧಿಯೊಬ್ಬ ಪದೇಪದೇ ಇವರ ಮನೆಗೆ ಬರುತ್ತಿದ್ದ. ಭದ್ರಾವತಿ ಮೂಲದ ಈತ ಚೆಲುವೆಗೆ ಮೋಡಿ ಮಾಡಿ ಆಕೆ ಜೊತೆ ಸಂಬಂಧ ಇರಿಸಿಕೊಂಡಿದ್ದ. ಆಗಿಂದಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಊರು ಪರಿಸರದ ಸಿಸಿಟಿವಿ ಪರಿಶೀಲಿಸಿದಾಗ ಆಟೋ ಮೂಲಕ ಕೊಲೆಯಾದ ಹಿಂದಿನ ರಾತ್ರಿ ಕೂಡ ಚೆಲುವೆಯ ಮನೆಗೆ ಆತ ಬಂದಿದ್ದ. ಹಾಗೆ ಬಂದವನೇ ಕೊಲೆಗಡುಕ ಹರೀಶ್.

ಈ ಹರೀಶ್ ಗೂ ಹಿಂದೇನೇ ಮದುವೆಯಾಗಿದೆ. ಇವನಿಗೂ ಇಬ್ಬರು ಮಕ್ಕಳು ಕೂಡ ಇದ್ದಾರೆ. ಒಂದು ಗಂಡು ಒಂದು ಹೆಣ್ಣು ಮಗು.  ಇಷ್ಟಾದರೂ ಚೆಲುವಿಯ ಜೊತೆ ಸಂಬಂಧ ಇರಿಸಿಕೊಂಡು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಜೊತೆಗೆ ಬೇರೆ ಯಾರ ಜೊತೆಗೂ ಮಾತನಾಡದಂತೆ ತಾಕೀತು ಮಾಡುತ್ತಿದ್ದ. ಈತನ ಜೊತೆ ಸಂಬಂಧ ಇರಿಸಿಕೊಂಡಿದ್ದ ಚೆಲುವಿ ಅಷ್ಟು ಸಾಲದು ಎಂಬಂತೆ ಇತ್ತೀಚೆಗೆ ಬೇರೊಬ್ಬರ ಜೊತೆ ಮೊಬೈಲ್ ನಲ್ಲಿ ಯಾವತ್ತೂ ಮಾತನಾಡುತ್ತಿದ್ದಳು.

ಮಲಗಿದ್ದ ಮಗುವನ್ನ ಸಹ ಕೊಂದ ಪಾಪಿ

ಈ ಬಗ್ಗೆ ಹರೀಶ್ ಆಕ್ಷೇಪ ಮಾಡಿದ್ದ. ಆ ದಿನ ರಾತ್ರಿ ಕೂಡ ಇದೇ ವಿಚಾರದಲ್ಲಿ ಗಲಾಟೆಯಾಗಿದೆ. ಮೊದಲೇ ಕುಡಿದು ಬಂದಿದ್ದ ಹರೀಶ್ ಚೂಡಿದಾರದ ಶಾಲಿನಿಂದ ಕುತ್ತಿಗೆಯನ್ನು ಬಿಗಿದು ಬೆನ್ನಿಗೆ ಗುದ್ದಿ ಚೆಲುವಿಯನ್ನು ಕೊಲೆ ಮಾಡಿದ್ದಾನೆ. ಈತ ರಾತ್ರಿ ಮನೆಗೆ ಬಂದಿರುವ ವಿಷಯ ಮಗಳು ಪ್ರಿಯಾಗಿ ಗೊತ್ತಾಗಿತ್ತು. ಪಾಪ ಆ ಮಗು ಏನೆಂದೂ ಅರಿಯದೆ ಹಾಯಾಗಿ ಮಲಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಮಗುವನ್ನು ಏನು ಮಾಡೋದು ಎಂದು ಆಲೋಚಿಸುತ್ತ ಕುಳಿತಿದ್ದ ಕೊಲೆಗಡುಕ ಹರೀಶ, ತಾನು ಅಪಾಯದಲ್ಲಿ ಸಿಲುಕುವ ಭಯದಿಂದ ಮಗುವನ್ನು ಕೂಡಾ ಹಗ್ಗದಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ.

Double murder in manipal accused arrested in 48 hours psudp mrq
ಹರೀಶ್


ಹೀಗೆ ಎರಡೆರಡು ಕೊಲೆಗಳನ್ನು ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ ಕೊಲೆಗಡುಕ ಪಾಪಿ ಹರೀಶ್.  ಹೋಗುವಾಗ ಇದೊಂದು ದರೋಡೆಗಾಗಿ ನಡೆದ ಕೊಲೆ ಎಂದು ಬಿಂಬಿಸುವ ಪ್ರಯತ್ನದಲ್ಲಿ ಮೊಬೈಲ್ , ಚಿನ್ನ , ಫೋಟೋ ದಾಖಲೆಗಳನ್ನು ಕೊಂಡೊಯ್ದಿದ್ದಾನೆ. ಅಲ್ಲಿಂದ ನೇರ ತನ್ನ ಹುಟ್ಟೂರು ಭದ್ರಾವತಿಗೆ ಹೋಗಿದ್ದಾನೆ. ಚೆಲುವೆಯ ಅಕ್ಕನ ಗಂಡ ಆರ್ಮುಗಮ್ ಹರೀಶನ ಊರವನೇ ಈತನೂ ಕೂಡ ಆರೋಪಿ ಹರೀಶ ಭದ್ರಾವತಿಯಲ್ಲಿರುವ ಸುಳಿವು ನೀಡಿದ್ದ.. ಹೀಗಾಗಿ ಪೊಲೀಸರಿಗೆ ಪ್ರಕರಣವನ್ನು ಬೇಧಿಸಲು ಹೆಚ್ಚು ಸಮಯ ಹಿಡಿಯಲಿಲ್ಲ.

48 ಗಂಟೆಗಳಲ್ಲಿ ಪಾಪಿ ಅಂದರ್

ಘಟನೆ ನಡೆದ 48ಗಂಟೆಯೊಳಗೆ ಆರೋಪಿ ಅಂದರ್ ಆಗಿದ್ದಾನೆ. ಇಬ್ಬರ ಜೊತೆ ಸಂಸಾರ ಮಾಡಿ ಮೂರನೇ ವ್ಯಕ್ತಿಯ ಜೊತೆ ಸಂಬಂಧ ಬೆಳೆಸಿ ನಾಲ್ಕನೆಯವನು ಜೊತೆ ಸಂಪರ್ಕದಲ್ಲಿದ್ದ ಚೆಲುವಿ‌ ಕೊಲೆಯಾಗಿದ್ದಾಳೆ. ಆದರೆ ಏನು ತಪ್ಪು ಮಾಡದೆ ಇನ್ನೂ ಸರಿಯಾಗಿ ಜಗತ್ತಿನ್ನೂ ನೋಡದ ಹತ್ತು ವರ್ಷ ಪ್ರಾಯದ ಹೆಣ್ಣು ಮಗು ಪ್ರಿಯಾ ಸಾವು ಮಾತ್ರ ತನಿಖೆ ನಡೆಸಿದ ಪೊಲೀಸರೂ ಸೇರಿದಂತೆ ಸ್ಥಳೀಯ ಜನರ ಮನಕಲಕುವಂತೆ ಮಾಡಿದೆ.

ಹರೀಶ್ ಪಕ್ಕಾ 420 ಆಸಾಮಿ

ಇನ್ನು ಈ ಪಾಪಿ‌ ಹರೀಶ್ ಪಕ್ಕಾ 420 ಆಸಾಮಿ.. ಭದ್ರಾವತಿಯಲ್ಲಿ ಮೊಬೈಲ್‌ ರಿಪೇರಿಗೆ ಪಡೆದು ಅದನ್ನ ಬೇರೆಯವರಿಗೆ ಮಾರೋದು ಹೀಗೆ ಮೋಸ ಮಾಡೋ ಖಯಾಲಿ ಇತ್ತು ಇವನಿಗೆ.‌  ಇಂತ 420 ಹರೀಶ್ ಈ ಚೆಲುವಿಯೊಂದಿಗೆ ಸಂಪರ್ಕ ಇರೋದು ತಿಳಿಯುತ್ತಿದ್ದಂತೆ ಚೆಲುವಿ ಅಕ್ಕನ ಗಂಡ ಆರ್ಮುಗಮ್ ಹರೀಶನಿಗೆ ವಾರ್ನ್ ಮಾಡಿದ್ದ.. ಚೆಲುವಿಯಿಂದ ದೂರ ಇರು ಅಂತಾನೂ ಹೇಳಿದ್ದ ಆದ್ರೆ ಇದ್ಯಾವುದಕ್ಕೆ ಸೊಪ್ಪು ‌ನೀಡಿಲ್ಲ ಹರೀಶ.‌ ಇದೀಗ ಒಂದು ಪುಟ್ಟ ಮಗುವನ್ನೂ ಕತ್ತು ಹಿಸುಕಿ ಸಾಯಿಸಿದ್ದಾನೆ ಕಿರಾತಕ ಹರೀಶ್ಸುಳಿವು ಸಿಕ್ಕ 48 ಗಂಟೆಯಲ್ಲಿ ಬಂಧಿಸುವ ಮೂಲಕ ಹರೀಶನ ಹೆಡೆಮುರಿ ಕಟ್ಟಿದ್ದಾರೆ.
Published by:Mahmadrafik K
First published: