• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಧಾರವಾಡದಲ್ಲಿ ಡಬಲ್ ಮರ್ಡರ್, ಇತ್ತ ಬೆಂಗ್ಳೂರು, ಮಂಡ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿತ್ತು ಹೆಣ!

Crime News: ಧಾರವಾಡದಲ್ಲಿ ಡಬಲ್ ಮರ್ಡರ್, ಇತ್ತ ಬೆಂಗ್ಳೂರು, ಮಂಡ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿತ್ತು ಹೆಣ!

ಕೊಲೆಯಾದವರು

ಕೊಲೆಯಾದವರು

Murder: ಎಲ್ಲಾ ಆಯಾಮದಲ್ಲೂ ತನಿಖೆ ಆಗುತ್ತಿದ್ದು, ಪ್ರಕರಣ ಸಂಬಂಧ ಮೂರು ಮಾರಕಾಸ್ತ್ರಗಳು ಸಿಕ್ಕಿವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲಾಗುವುದು. ಆರೋಪಿಗಳ ಪತ್ತೆಗೆ ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ರಮಣಗುಪ್ತಾ ಹೇಳಿದ್ದಾರೆ.

  • Share this:

ಧಾರವಾಡ: ನಗರದ ಕಮಲಾಪುರ (Kamalapura, Dharwad) ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ (Businessman) ಸೇರಿ ಇಬ್ಬರ ಹತ್ಯೆ ನಡೆದಿದೆ. ಮಹಮ್ಮದ ಕುಡಚಿ, ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ. ಮನೆ ಎದುರು ಕುಳಿತಾಗ ದಾಳಿ ಮಾಡಿದ ಗುಂಪು ಮಚ್ಚಿನಿಂದ ಕೊಚ್ಚಿ ಮಹಮ್ಮದ್ ಕುಡಚಿ ಅವರನ್ನ ಕೊಲೆ ಮಾಡಿದೆ. ಅನತಿ ದೂರದಲ್ಲಿಯೇ ಮತ್ತೊಂದು ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಮಾರಕಾಸ್ತ್ರಗಳಿಂದ ದಾಳಿಗೆ ಒಳಗಾಗಿ ಮನೆಯಿಂದ ಓಡುತ್ತಲೇ ಹೋಗಿದ್ದ ಕಾರಣ ರಸ್ತೆಯಲ್ಲೆಲ್ಲ ರಕ್ತದ ಕಲೆಗಳು ಕಾಣಿಸಿವೆ. ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ರಮಣ ಗುಪ್ತಾ ಭೇಟಿ  ನೀಡಿ ಪರಿಶೀಲನೆ ನಡೆದಿದೆ.


ಕಮಲಾಪೂರ ಬಡಾವಣೆಯಲ್ಲಿ ಡಬಲ್ ಮರ್ಡರ್ (Double Murder) ಆಗಿದೆ. ನಾನು‌ ಸೇರಿ ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದೇವೆ. ವೈಜ್ಞಾನಿಕ ತಳಹದಿಯಲ್ಲಿ  ತನಿಖೆ ಮಾಡುತ್ತಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ಆಗುತ್ತಿದ್ದು, ಪ್ರಕರಣ ಸಂಬಂಧ ಮೂರು ಮಾರಕಾಸ್ತ್ರಗಳು ಸಿಕ್ಕಿವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲಾಗುವುದು. ಆರೋಪಿಗಳ ಪತ್ತೆಗೆ ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ರಮಣಗುಪ್ತಾ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಯುವಕನ ಕೊಲೆ


ಕ್ಷುಲ್ಲಕ ಕಾರಣಕ್ಕೆ ಬೆಂಗಳೂರಿನ ಮಹದೇವಪುರದಲ್ಲಿ 24 ವರ್ಷದ ಯುವಕನ ಹೆಣ ಬಿದ್ದಿದೆ. ರೇಣುಕುಮಾರ್ ಕೊಲೆಯಾದ ಯುವಕ. ಆರೋಪಿ ಏರಿಯಾದಲ್ಲಿ ನಿನ್ನದು ಜಾಸ್ತಿ ಆಗಿದೆ ಅಂತ ಕ್ಷುಲ್ಲಕ ಕಾರಣಕ್ಕೆ ರೇಣುಕುಮಾರ್ ಜೊತೆ ಜಗಳ ಮಾಡಿಕೊಂಡಿದ್ದನು.


ಇದೇ ಗಲಾಟೆ ವೇಳೆ ರೇಣುಕುಮಾರ್​ಗೆ ಚಾಕುವಿನಿಂದ ಇರಿಯಲಾಗಿದೆ. ಯುವತಿಯ ವಿಚಾರಕ್ಕೆ ಕೊಲೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಮಂಡ್ಯ: ಗೆಳೆಯರಿಂದಲೇ ಕೊಲೆ


ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ ನಡೆದಿದ್ದು, ಈ ಸಮಯದಲ್ಲಿ ಓರ್ವನ ಪ್ರಾಣಪಕ್ಷಿ ಹಾರಿ ಹೋಗಿದೆ. ಮಂಡ್ಯದ ಮದ್ದೂರಿನ ಬೋರಾಪುರದ ಬಳಿ ಈ ಕೊಲೆ ನಡೆದಿದೆ. ಚಿಕ್ಕರಸಿನಕೆರೆ ಗ್ರಾಮದ ಪುನೀತ್ ಕೊಲೆಯಾದ ಯುವಕ.


ಇದನ್ನೂಓದಿ:  Ashwath Narayan ವಿರುದ್ಧ ಎಫ್​ಐಆರ್ ದಾಖಲು; ಕ್ಷುಲ್ಲಕ, ಸೇಡಿನ ರಾಜಕಾರಣ ಎಂದ ನಟ


ಗುರುವಾರ ರಾತ್ರಿ ಹಣದ ವಿಚಾರವಾಗಿ ಪುನೀತ್ ಮತ್ತು ಆತನ ಸ್ನೇಹಿತರ ನಡುವೆ ಗಲಾಟೆ ನಡೆದಿತ್ತು.  ಗಲಾಟೆ ವೇಳೆ ಪುನೀತ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಕೂಡಲೇ ಪುನೀತ್​ನನ್ನು  ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆ.ಎಂ ದೊಡ್ಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

top videos
    First published: