Double Murder: ಮನೆಯಲ್ಲಿ ಅನ್ನ ತಿಂದವನೇ ದಂಪತಿಯನ್ನು ಕೊಂದಿದ್ದ! ಬಲೆಗೆ ಬಿದ್ದಿದ್ದು ಹೇಗೆ ಹಂತಕ?

ಈ ಹಂತಕ ಅಪರಿಚಿತನೇನೂ ಅಲ್ಲ. ಕೊಲೆಯಾದ ಇಬ್ಬರಿಗೂ ಸಾಕಷ್ಟು ಪರಿಚಯದವನೇ ಆಗಿದ್ದ. ಆದರೆ ಅದೇ ಪರಿಚಯವೇ ಈಗ ದಂಪತಿ ಪಾಲಿಗೆ ಕಂಟಕವಾಯ್ತು!

ಅರೆಸ್ಟ್ ಆದ ಕೊಲೆ ಆರೋಪಿ

ಅರೆಸ್ಟ್ ಆದ ಕೊಲೆ ಆರೋಪಿ

 • Share this:
  ರಾಮನಗರ: ಅವರು ಏರ್ ಫೋರ್ಸ್‌ನ (Air Force) ಮಾಜಿ ಪೈಲೆಟ್ (Rd. Pilot). ರಾಜ್ಯದ ಪ್ರತಿಷ್ಠಿತ ರೆಸಾರ್ಟ್ ನಲ್ಲಿ (Resort) ವಿಲ್ಲಾ (Villa) ಖರೀದಿ ಮಾಡಿ ನಿವೃತ್ತಿ (Retired Life) ಜೀವನವನ್ನ ಕಳೆಯುತ್ತಿದ್ದರು. ಆದರೆ ಮನೆಯಲ್ಲಿದ್ದವನೇ ಕೊಲೆ (Murder)  ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ರಾಮನಗರ ಜಿಲ್ಲೆಯ ಬಿಡದಿಯ ಈಗಲ್ ರೆಸಾರ್ಟ್‌ನ (Eagle Resort) C ಬ್ಲಾಕ್ ನಲ್ಲಿ ಜೋಡಿ ಕೊಲೆ ನಡೆದಿತ್ತು. 70 ವರ್ಷ ವಯಸ್ಸಿನ ರಘುರಾಜನ್ ಹಾಗೂ 63 ವರ್ಷದ ಆಶಾ ಎಂಬ ದಂಪತಿ ಬರ್ಬರವಾಗಿ ಕೊಲೆಯಾಗಿದ್ದರು. ಇವರು ಮೂಲತಃ ತಮಿಳುನಾಡು ಮೂಲದವರು ಎನ್ನಲಾಗಿದೆ. ಇಬ್ಬರು ಮಕ್ಕಳು ದೆಹಲಿಯಲ್ಲಿ ವಾಸವಾಗಿದ್ದಾರೆ. ಗಂಡ - ಹೆಂಡತಿಯನ್ನ ಮನೆ ಕೆಲಸ ಮಾಡ್ತಿದ್ದವನೇ ಕೊಲೆ ಮಾಡಿ ಈಗ ಪೊಲೀಸರ ವಶದಲ್ಲಿದ್ದಾನೆ.

  ಜೋಡಿ ಕೊಲೆ ಮಾಡಿದ ಹಂತಕ ಯಾರು?

  ಜೋಗಿಂದರ್ ಕುಮಾರ್ ಯಾದವ್ ಕೊಲೆ ಮಾಡಿರುವ ಆರೋಪಿಯಾಗಿದ್ದು, ಮತ್ತೊಬ್ಬ ರವೀಂದ್ರ ಯಾದವ್ ಎಸ್ಕೇಪ್ ಆಗಿದ್ದಾನೆ. ಜೋಗಿಂದರ್ ಹಾಗೂ ರವೀಂದ್ರ ಯಾದವ್ ಇಬ್ಬರೂ ಸಂಬಂಧಿಕರು ಎನ್ನಲಾಗಿದೆ. ಮಧ್ಯರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆರೋಪಿ ಬಿಡದಿಯ ಕೇತಗಾನಹಳ್ಳಿ ಬಳಿ ಹೊಸದಾಗಿ ನಿರ್ಮಾಣವಾಗುತ್ತಿರುವ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

  ಬಂಧಿತನ ಬಳಿ 56 ಸಾವಿರ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ರವೀಂದ್ರ ಯಾದವ್ ಎಸ್ಕೇಪ್ ಆಗಿದ್ದಾನೆ. ಆತನನ್ನು ಹಿಡಿಯಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

  ಕೆಲಸ ಮಾಡುತ್ತಿದ್ದ ಮನೆಯಲ್ಲೇ ಜೋಡಿ ಕೊಲೆ

  ಈ ಜೋಗಿಂದರ್ ಕುಮಾರ್ ಅಪರಿಚಿತನೇನೂ ಅಲ್ಲ. ಕೊಲೆಯಾದ ಇಬ್ಬರಿಗೂ ಸಾಕಷ್ಟು ಪರಿಚಯದವನೇ ಆಗಿದ್ದ. ಮೃತ ಆಶಾ ಹಾಗೂ ರಘುರಾಜನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಜೋಗಿಂದರ್ ಕುಮಾರ್ ಯಾದವ್ ಇಬ್ಬರನ್ನೂ ಕೊಂದು ಮುಗಿಸಿದ್ದಾನೆ. ದಂಪತಿ ಬಳಿ ಇದ್ದ ಹಣಕ್ಕಾಗಿ ಈ ಕೆಲಸ ಮಾಡಿದ್ದಾನೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ವೃದ್ಧ ದಂಪತಿಗಳ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ FIR ದಾಖಲಾಗಿದೆ.

  ಇದನ್ನೂ ಓದಿ: Bengaluru: ಇವಳೆಂಥಾ ಕಳ್ಳಿ ಗೊತ್ತಾ? “ಥ್ಯಾಂಕ್ಸ್” ಅನ್ನುತ್ತಲೇ ಚೈನ್ ಕದೀತಾಳೆ ಈ ಲೇಡಿ!

  ಹಣಕ್ಕಾಗಿ ಕೊಂದೇ ಬಿಟ್ಟನಾ ಹಂತಕ?

  ಇನ್ನು ಪೊಲೀಸ್ ಮಾಹಿತಿ ಪ್ರಕಾರ ಹಣಕ್ಕಾಗಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗ್ತಿದೆ. ಅನ್ನ ಕೊಟ್ಟ ಧಣಿಗಳನ್ನೇ ಪಾಪಿಗಳಿಬ್ಬರು ಬರ್ಬರವಾಗಿ ಕೊಂದು ಹಾಕಿದ್ದಾರೆ. ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಬಗ್ಗೆ ಕಂಡುಬರುತ್ತಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಐಜಿ ಚಂದ್ರಶೇಖರ್ ಭೇಟಿ ನೀಡಿರಾಮನಗರ ಎಸ್ಪಿ ಸಂತೋಷ್ ಬಾಬು ಜತೆಗೆ ಚರ್ಚೆ ನಡೆಸಿದರು. ಕೊಲೆ ಬಗ್ಗೆ ಮಾಹಿತಿ ಪಡೆದ ಐಜಿ ಚಂದ್ರಶೇಖರ್ ಸ್ಥಳದಲ್ಲಿ ಶ್ವಾನದಳದಿಂದಲೂ ಪರಿಶೀಲನೆ ನಡೆಸಲಾಗಿತ್ತು.

  ಒಟ್ಟಾರೆ ನೆಮ್ಮದಿಯ ನಿವೃತ್ತಿ ಜೀವನ ಕಳೆಯುತ್ತಿದ್ದ ವೃದ್ಧ ದಂಪತಿಗಳಿಗೆ ಮನೆಯ ಕೆಲಸದಾಳುಗಳೇ ಕಂಟಕವಾಗಿದ್ದಾರೆ. ಆದರೆ ಈ ಕೊಲೆಯಿಂದ ನಿಜಕ್ಕೂ ತಂದೆತಾಯಿಯನ್ನ ಬಿಟ್ಟು ಎಲ್ಲೋ ಸಾಧನೆ ಮಾಡಬೇಕೆಂದು ಹೋಗುವ ಮಕ್ಕಳಿಗೆ ಇದೊಂದು ಪಾಠ ಎನ್ನಬಹುದು.‌

  ಇದನ್ನೂ ಓದಿ: Koppal: ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದ ರೈತನಿಗೆ ಅನುಮತಿ ಪತ್ರ ಕೊಟ್ಟ PDO..ಅನ್ನದಾತನಿಗೆ ಅವಮಾನ!

  ಮೂರೊತ್ತು ಊಟ, ಸಂಬಳ ನೀಡಿ ಚೆನ್ನಾಗಿ ನೋಡಿಕೊಳ್ತಿದ್ದ ಮನೆ ಮಾಲೀಕರಿಗೆ ಈ ರೀತಿ ಮಾಡಿದ್ದು ನಿಜಕ್ಕೂ ನಿಯತ್ತಿಗೆ ಬೆಲೆಯಿಲ್ಲ ಎಂಬುದು ತಿಳಿಯುತ್ತದೆ. ಈ ಕೊಲೆಯಾದ ವೃದ್ಧ ದಂಪತಿಗಳು ನಿಜಕ್ಕೂ ಇಂತಹ ಘಟನೆ ನಡೆಯುತ್ತದೆ ಎಂದು ಭಾವಿಸಿರಲಿಲ್ಲ. ಆದರೆ ಗ್ರಹಚಾರ ಕೆಟ್ಟರೆ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ.

  ಘಟನೆಯಿಂದ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಂತೂ ಸತ್ಯ. ಸದ್ಯ ಆರೋಪಿ ಅರೆಸ್ಟ್ ಆಗಿದ್ದು ತನಿಖೆ ನಡೆಯುತ್ತಿದೆ. ಇನ್ನೊಬ್ಬ ಆರೋಪಿಯೂ ಸಿಕ್ಕಿದರೆ ಕೊಲೆಯ ಸತ್ಯ ಬಯಲಾಗಲಿದೆ.

  ವರದಿ: ಎ.ಟಿ‌.ವೆಂಕಟೇಶ್
  Published by:Annappa Achari
  First published: