HOME » NEWS » State » DOUBLE DEKKER BUS SERVICE AVAILABLE IN MYSORE NOW AND PEOPLE CAN TRAVEL PAY 250 RS PMTV LG

ಮೈಸೂರಿನ ಬೀದಿ ಬೀದಿಗಳಲ್ಲಿ ಅಂಬಾರಿ ಸಂಚಾರ; 250 ಕೊಟ್ಟರೆ ಯಾರು ಬೇಕಾದ್ರೂ ಅಂಬಾರಿ ಏರಬಹುದು..!

ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಳು, ವೃತ್ತಗಳು, ಪ್ರವಾಸಿ ತಾಣಗಳ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಸಂಚಾರ ಮಾಡುವಾಗ ಪ್ರವಾಸಿಗರಿಗೆ ಅಂಬಾರಿ ರೀತಿ ನಗರದ ಎತ್ತರದ ಪ್ರದೇಶದಲ್ಲಿ ಕುಳಿತುಕೊಳ್ಳುವ ಅನುಭವ ಸಿಗಲಿದೆ.

news18-kannada
Updated:March 3, 2021, 2:23 PM IST
ಮೈಸೂರಿನ ಬೀದಿ ಬೀದಿಗಳಲ್ಲಿ ಅಂಬಾರಿ ಸಂಚಾರ; 250 ಕೊಟ್ಟರೆ ಯಾರು ಬೇಕಾದ್ರೂ ಅಂಬಾರಿ ಏರಬಹುದು..!
ಡಬಲ್ ಡೆಕ್ಕರ್ ಬಸ್
  • Share this:
ಮೈಸೂರು(ಮಾ.03): ಅಂಬಾರಿ ಈ ಪದ ಕೇಳಿದ ತಕ್ಷಣ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಬಿಂಬಿತವಾಗಿರುವ ಅರಮನೆಗಳ ನಗರಿಯಲ್ಲಿ ನಡೆಯುವ ಮೈಸೂರು ದಸರಾ ನೆನಪಾಗುತ್ತದೆ. ಮೈಸೂರು ದಸರಾದ ಕೊನೆ ದಿನ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ವಿರಾಜಮಾನಳಾಗಿರುತ್ತಾಳೆ. ಈ ದೃಶ್ಯ ಕಂಡು ಪುಳಕಿತರಾಗುವ ಜನ ಅಂಬಾರಿಯನ್ನು ಅಷ್ಟೇ ಕೌತುಕದಿಂದ ನೋಡುತ್ತಾರೆ. ರಾಜರ ಆಳ್ವಿಕೆ ಕಾಲದಲ್ಲಿ ಈ ಚಿನ್ನದ ಅಂಬಾರಿ ಮೇಲೆ ಸ್ವತಹ ಮಹಾರಾಜರೇ ಕುಳಿದು ಮೆರವಣಿಗೆ ಹೋಗುತ್ತಿದ್ದರು. ಜನತಂತ್ರ ವ್ಯವಸ್ಥೆ ಜಾರಿಗೆ ಬಂದ ಮೇಲೆ ನಾಡದೇವಿಯ ಉತ್ಸವಮೂರ್ತಿಯ ಮೆರವಣಿಗೆ ನಡೆಯುತ್ತಿದೆ. ಆದ್ರೆ ಇನ್ಮುಂದೆ 250 ರೂ ಹಣ ಕೊಟ್ಟು ಯಾರು ಬೇಕಾದ್ರು ಅಂಬಾರಿ ಮೇಲೆ ಕೂರಬಹುದಾಗಿದೆ. ಹಾಗಂದ ತಕ್ಷಣ ಅದು ಚಿನ್ನದ ಅಂಬಾರಿ ಮೇಲೆ ಅಂದುಕೊಳ್ಳಬೇಡಿ, ಬದಲಿಗೆ ಪ್ರವಾಸೋಧ್ಯಮ ಇಲಾಖೆಯ ಅಂಬಾರಿ ಡಬಲ್‌ ಡೆಕ್ಕರ್ ಬಸ್‌ ಮೇಲೆ.

ಹೌದು, ಮೈಸೂರಿನಲ್ಲಿ ಇಂದಿನಿಂದ ನಿತ್ಯ ಮೈಸೂರಿನಲ್ಲಿ ಅಂಬಾರಿ ಸವಾರಿ ಆರಂಭವಾಗಿದೆ. ವಿಶ್ವವಿಖ್ಯಾತ ಹಂಪಿ ಮತ್ತು ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆ ವಿಶೇಷ ಬಸ್  ವ್ಯವಸ್ಥೆ ಮಾಡಿರುವ ಪ್ರವಾಸೋಧ್ಯಮ ಇಲಾಖೆ ಲಂಡನ್‌ನಲ್ಲಿರುವ  ಬಿಗ್‌ಬಸ್ ಮಾದರಿ 06 ಡಬಲ್ ಡೆಕ್ಕರ್ ತೆರೆದ ಬಸ್‌ಗಳು ಸೇವೆ ಲೋಕಾರ್ಪಣೆ ಮಾಡಲಾಗಿದೆ. 5 ಕೋಟಿ ವೆಚ್ಚದಲ್ಲಿ ತಯಾರಾದ ಯೋಜನೆ ಬಸ್‌ಗಳ ಹೊರ ಮೈಯನ್ನ ವಿಶೇಷವಾಗಿ ವಿನ್ಯಾಸಗೊಳಿಸಿ ಸಜ್ಜುಗೊಳಿಸಲಾಗಿದೆ.

ಎಸ್ಎಸ್ಎಲ್​ಸಿ ಪಾಸಾದವರಿಗೆ ಸರ್ಕಾರಿ ಹುದ್ದೆ; ಅರ್ಜಿ ಆಹ್ವಾನಿಸಿದ ಎಸ್​ಎಸ್​ಸಿ

ಪ್ರಥಮ ಹಂತವಾಗಿ ಮೈಸೂರು ನಗರದಲ್ಲಿ ಕಾರ್ಯಾಚರಣೆ ಆರಂಭಿಸಿರುವ ಈ ಅಂಬಾರಿ ಬಸ್‌ಗಳು, ನಗರದ ಹೋಟೆಲ್ ಮಯೂರ ಹೊಯ್ಸಳ - ಜಿಲ್ಲಾಧಿಕಾರಿಗಳ ಕಛೇರಿ - ಕ್ರಾಫೋರ್ಡ್ ಹಾಲ್ - ಕುಕ್ಕರಹಳ್ಳಿ ಲೇಕ್ - ಮೈಸೂರು ಯೂನಿರ್ವಸಿಟಿ –ಜಾನಪದ ಮ್ಯೂಸಿಯಂ - ರಾಮಸ್ವಾಮಿ ಸರ್ಕಲ್ - ಅರಮನೆ ಕರಿಕಲ್ಲು ತೊಟ್ಟಿ - ಅರಮನೆ (ದಕ್ಷಿಣ ದ್ವಾರ) -ಜೈಮಾರ್ತಾಂಡ - ಮೃಗಾಲಯ - ಕಾರಂಜಿ ಲೇಕ್ – ಸಂಗೊಳ್ಳಿ ರಾಯಣ್ಣ ವೃತ್ತ, ಸ್ನೋ ಸಿಟಿ - ಚಾಮುಂಡಿ ವಿಹಾರ್ ಸ್ಟೇಡಿಯಂ - ಸೆಂಟ್ ಫಿಲೋಮಿನ ಚರ್ಚ್ - ಬನ್ನಿಮಂಟಪ - ರೈಲ್ವೆ ಸ್ಟೇಷನ್ - ಹೋಟೆಲ್ ಮಯೂರ ಹೊಯ್ಸಳ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಪ್ರತಿ ಅರ್ಧ ಗಂಟೆಯಂತೆ ಕಾರ್ಯಾಚರಣೆ ಮಾಡಲು ನಿರ್ಧಾರ ಮಾಡಿದ್ದು, ಇದು ವಾರದ ಎಲ್ಲ ದಿನದಲ್ಲು ಸೇವೆಗೆ ಸಿಗಲಿದೆ.

ಮಾರ್ಚ್‌ 2 ಸಂಜೆ ಮೈಸೂರಿನಲ್ಲಿ ಡಬಲ್‌ ಡೆಕ್ಕರ್ ಬಸ್‌ಗಳನ್ನ ಲೋಕಾರ್ಪಣೆ ಮಾಡಿದ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೆಶ್ವರ್, ಹಸಿರು ನಿಶಾನೆ ತೋರುವ ಮೂಲಕ ಡಬಲ್ ಡಕ್ಕರ್ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಟಿ ಶೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಸಾಂಸ್ಕೃತಿಕ ನಗರಿಯ ಸೊಬಗನ್ನು ಕಣ್ತುಂಬಿಕೊಳ್ಳಲು ಸದಾವಕಾಶ ಕಲ್ಪಿಸಿರುವ ಪ್ರವಾಸೋಧ್ಯಮ ಇಲಾಖೆ, ಲಂಡನ್ ಬಿಗ್ ಬಸ್ ಮಾದರಿಯ ಡಬಲ್ ಡಕ್ಕರ್ ಬಸ್‌ಗಳ ಸಂಚಾರ ಆರಂಭಿಸಿರೋದು ಪ್ರವಾಸೋಧ್ಯಮ ಅಭಿವೃದ್ದಿಗೂ ಸಹಕಾರಿಯಾಗಲಿದೆ.

ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಳು, ವೃತ್ತಗಳು, ಪ್ರವಾಸಿ ತಾಣಗಳ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಸಂಚಾರ ಮಾಡುವಾಗ ಪ್ರವಾಸಿಗರಿಗೆ ಅಂಬಾರಿ ರೀತಿ ನಗರದ ಎತ್ತರದ ಪ್ರದೇಶದಲ್ಲಿ ಕುಳಿತುಕೊಳ್ಳುವ ಅನುಭವ ಸಿಗಲಿದೆ. ಈ ಬಸ್‌ನಲ್ಲಿ  ಪ್ರತಿ ಪ್ರಯಾಣಿಕರಿಗೆ 250 ರೂ ಶುಲ್ಕ ನಿಗದಿ ಮಾಡಿದ್ದು, ಈ ಮೊದಲು ದಸರಾ ಸಂದರ್ಭದಲ್ಲಿ ಮಾತ್ರ ಇದ್ದ ಡಬಲ್ ‌ಡೆಕ್ಕರ್ ಬಸ್‌ಗಳು ಇದೀಗ ನಿತ್ಯ ಸಂಚಾರಕ್ಕೆ ಲಭ್ಯವಾಗಿವೆ.
Published by: Latha CG
First published: March 3, 2021, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories