• Home
  • »
  • News
  • »
  • state
  • »
  • New Year Celebrations: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಿಸ್​ ಫೈರ್​​; ಗುಂಡು ಹಾರಿಸಿದವ ಹೃದಯಾಘಾತಕ್ಕೆ ಬಲಿ, ಗುಂಡೇಟು ತಿಂದವ ಇಂದು ಸಾವು

New Year Celebrations: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಿಸ್​ ಫೈರ್​​; ಗುಂಡು ಹಾರಿಸಿದವ ಹೃದಯಾಘಾತಕ್ಕೆ ಬಲಿ, ಗುಂಡೇಟು ತಿಂದವ ಇಂದು ಸಾವು

ಮೃತ ನವೀನ್

ಮೃತ ನವೀನ್

ಹೊಸ ವರ್ಷ ಸ್ವಾಗತಕ್ಕೆ ಏರ್ ಫೈರ್ ಮಾಡಲು ಹೋದವನಿಗೆ ಟ್ರಿಗ್ಗರ್ ಕೈಕೊಟ್ಟ ಕಾರಣ ಮಿಸ್ ಫೈರ್ ಆಗಿದ್ದು, ಈ ವೇಳೆ ಆತನ ಎದುರಿಗಿದ್ದ ವ್ಯಕ್ತಿ ಮೇಲೆ ಗುಂಡು ಹಾರಿದೆ. ಮಿಸ್​​ ಫೈರ್ ಆಗುತ್ತಿದ್ದಂತೆ ಗನ್ ಹಿಡಿದ ವ್ಯಕ್ತಿ ಆತಂಕಗೊಂಡ ಕಾರಣ ಹೃದಯಘಾತ ಉಂಟಾಗಿ ಆತ ಮೃತಪಟ್ಟಿದ್ದಾನೆ.

  • Share this:

ಶಿವಮೊಗ್ಗ: ಮಲೆನಾಡಿನ (Malenadu)  ಶಿವಮೊಗ್ಗದಲ್ಲಿ (Shivamogga) ಎಲ್ಲರೂ ಹೊಸ ವರ್ಷ ಸ್ವಾಗತದ ಸಂಭ್ರಮದಲ್ಲಿ ಇರುವಾಗಲೇ ಗುಂಡಿನ ಸದ್ದು ಕೇಳಿಸಿದೆ. ಶಿವಮೊಗ್ಗ ನಗರದಲ್ಲಿ ಎಲ್ಲರೂ 2023ನ್ನು ಸ್ವಾಗತಿಸಲು ಸಂಭ್ರಮಾಚರಣೆಯಲ್ಲಿದ್ದರು (New Year Celebrations). ಎಲ್ಲರೂ ಸಂತೋಷವಾಗಿರುವಾಗಲೇ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಹೊಸ ವರ್ಷ ಸ್ವಾಗತಕ್ಕೆ ಏರ್ ಫೈರ್ ಮಾಡಲು ಹೋದವನಿಗೆ ಟ್ರಿಗ್ಗರ್ ಕೈಕೊಟ್ಟ ಕಾರಣ ಮಿಸ್ ಫೈರ್ (Misfire) ಆಗಿದ್ದು, ಈ ವೇಳೆ ಆತನ ಎದುರಿಗಿದ್ದ ವ್ಯಕ್ತಿ ಮೇಲೆ (Air Gun) ಗುಂಡು ಹಾರಿದೆ. ಮಿಸ್​​ ಫೈರ್ ಆಗುತ್ತಿದ್ದಂತೆ ಗನ್ ಹಿಡಿದ ವ್ಯಕ್ತಿ ಆತಂಕಗೊಂಡ ಕಾರಣ ಹೃದಯಘಾತ ಉಂಟಾಗಿ ಆತ ಮೃತಪಟ್ಟಿದ್ದಾನೆ.


ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಬಳಿ ಇರುವ ಗೋಪಾಲ್ ಗ್ಲಾಸ್ ಹೌಸ್ ಮಾಲೀಕ ಮಂಜುನಾಥ್ ಓಲೈಕರ್ (55) ಎಂಬುವರ ಮನೆಯಲ್ಲಿ ಹೊಸವರ್ಷದ ನಿಮಿತ್ತ ಮತ್ತು ಅವರ ಮಗ ಸಂದೀಪ್ (30) ಹುಟ್ಟುಹಬ್ಬದ ಪ್ರಯುಕ್ತ ಪಾರ್ಟಿ ಏರ್ಪಡಿಸಲಾಗಿತ್ತು. ಈ ವೇಳೆ ದುರಂತ ಸಂಭವಿಸಿದೆ.


ಇದನ್ನೂ ಓದಿ: New Year: ಹೊಸ ವರ್ಷಾಚರಣೆ ವೇಳೆ ಕಟ್ಟಡದಿಂದ ಬಿದ್ದ ಯುವಕ ಸಾವು; ಅಪಘಾತದಲ್ಲಿ ಬೈಕ್ ಸವಾರನ ಮರಣ


New Year s Resolutions for 2023 according to zodiac sign
ಸಾಂದರ್ಭಿಕ ಚಿತ್ರ


ಅಸಲಿಗೆ ಆಗಿದ್ದೇನು?


ಸಂದೀಪ್​ ಹುಟ್ಟುಹಬ್ಬದ ಪ್ರಯಕ್ತ ಆಯೋಜಿಸಿದ್ದ ಪಾರ್ಟಿಗೆ ಆತನ ಗೆಳೆಯರು ಮತ್ತು ನಗರದಲ್ಲಿ ವಾಸಿಸುತ್ತಿದ್ದ ನಾಲ್ಕು ಕುಟುಂಬಗಳ ಸದಸ್ಯರು ಆಗಮಿಸಿದ್ದರು. ಹನ್ನೆರಡು ಗಂಟೆ ರಾತ್ರಿಯಲ್ಲಿ ಸಂಭ್ರಮಚಾರಣೆಯಲ್ಲಿದ್ದಾಗ ಮಂಜುನಾಥ್ ಅವರು ತಮ್ಮ ಮನೆಯಲ್ಲಿದ್ದ ಡಬಲ್ ಬ್ಯಾರೆಲ್ ಗನ್ ತೆಗೆದುಕೊಂಡು ಏರ್ ಫೈರ್ ಮಾಡಿ 2023ಕ್ಕೆ ಶುಭಕೋರಲು ಮುಂದಾಗಿದ್ದರು.


ಗಾಳಿಯಲ್ಲಿ ಫೈರ್ ಮಾಡಲು ರೌಂಡ್ಸ್ ತುಂಬುತ್ತಿರುವಾಗ ಅವಘಡ ಸಂಭವಿಸಿದ್ದು, ರೈಫಲ್​​ಅನ್ನು ಅಡ್ಡಲಾಗಿ ಹಿಡಿದು ತುಂಬುತ್ತಿದ್ದಾಗ ಎದುರು ಇದ್ದ ಮಗ ಸಂದೀಪ್ ಸ್ನೇಹಿತ ವಿದ್ಯಾನಗರದ ವಿನಯ್ (30) ಎಂಬುವವನಿಗೆ ಆಕಸ್ಮಿಕವಾಗಿ ಹೊಟ್ಟೆಗೆ ಗುಂಡು ತಗಲಿದೆ. ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಫೈರ್ ಮಾಡಿದ ಮಂಜುನಾಥ್ ಓಲೇಕಾರ್, ಗುಂಡು ಹಾರಿದ್ದರಿಂದ ಹೆದರಿಕೊಂಡಿದ್ದು, ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಲು ಪ್ರಯತ್ನಿಸಲಾಗಿದ್ದು, ಆದರೆ ದಾರಿ ನಡುವೆಯೇ ಅವರು ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: Liquor Sale: ಹೊಸ ವರ್ಷಕ್ಕೆ ಅಬಕಾರಿ ಇಲಾಖೆಗೆ ಹರಿದು ಬಂತು ಕೋಟಿ ಕೋಟಿ ಆದಾಯ


ಇನ್ನು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನಯ್​​ ಇಂದು ಚಿಕಿತ್ಸ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿನಯ್ ಅವರಿಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಹೊಸನಗರ ಮೂಲದ ವಿನಯ್, ವಾಲಿಬಾಲ್ ಆಟಗಾರನಾಗಿದ್ದು, ಜಿಮ್ಮಿ ಚಾರ್ಜ್ ವಾಲಿಬಾಲ್ ಕ್ಲಬ್ ಪರ ಹಲವು ವರ್ಷ ಆಡುತ್ತಿದ್ದರು. ಉಳಿದಂತೆ ಮಂಜುನಾಥ್ ಅವರ ಬಳಿ ಡಬ್ಬಲ್ ಬ್ಯಾರೆಲ್ ಗನ್ ಲೈಸೆನ್ಸ್ ಇತ್ತು ಎಂಬುದು ತಿಳಿದು ಬಂದಿದೆ. ಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಾಂದರ್ಭಿಕ ಚಿತ್ರ


ಎಣ್ಣೆ ನಶೆಯಲ್ಲಿದ್ದ ಯುವಕ ಅಪಘಾತದಲ್ಲಿ ಸಾವು!


ಹೊಸ ವರ್ಷದ ಪಾರ್ಟಿಯಿಂದ ಹಿಂದಿರುಗುತ್ತಿದ್ದ ಯುವಕ ಅಪಘಾತದಲ್ಲಿ ಮೃತನಾಗಿದ್ದಾನೆ. ಬೆಂಗಳೂರಿನ ಕುರುಬರಹಳ್ಳಿ ನಿವಾಸಿ ಗಿರೀಶ್ (18) ಮೃತ ಬೈಕ್ ಸವಾರ. ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಅಪಘಾತ ಸಂಭವಿಸಿದೆ.


ಸ್ನೇಹಿತರೊಂದಿಗೆ ಹೊಸ ವರ್ಷದ ಪಾರ್ಟಿಗೆ ಗಿರೀಶ್ ತೆರಳಿದ್ದರು. ಬೈಕ್​​ನಲ್ಲಿ ಬರುತ್ತಿರುವಾಗ ಬೈಕ್ ಅಪಘಾತಕ್ಕೆ ಒಳಗಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ ಮದ್ಯ ಸೇವಿಸಿರುವ ಅನುಮಾನಗಳು ವ್ಯಕ್ತವಾಗಿವೆ.

Published by:Sumanth SN
First published: