ಬಿಜೆಪಿಗೆ ಯಡಿಯೂರಪ್ಪ ಬೇಡವಾದರೆ ಕಿತ್ತುಹಾಕಲಿ; ಆದರೆ ಆಟ ಆಡಿಸೋದು ಯಾಕೆ?: ಆರ್.ಬಿ. ತಿಮ್ಮಾಪುರ

ಯಡಿಯೂರಪ್ಪ ಅವರಿಗೆ ಅವಮರ್ಯಾದೆ ಮಾಡುತ್ತಿದ್ದು, ಇದು ರಾಜ್ಯದ ಜನತೆಗೆ ಅವಮಾನ ಮಾಡಿದಂತೆ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಮುಂದೆ ತಗ್ಗಿ ಬಗ್ಗಿ ನಡೆಯುವುದು ಸರಿಯಲ್ಲ ಎಂದರು

G Hareeshkumar | news18-kannada
Updated:February 8, 2020, 5:54 PM IST
ಬಿಜೆಪಿಗೆ ಯಡಿಯೂರಪ್ಪ ಬೇಡವಾದರೆ ಕಿತ್ತುಹಾಕಲಿ; ಆದರೆ ಆಟ ಆಡಿಸೋದು ಯಾಕೆ?: ಆರ್.ಬಿ. ತಿಮ್ಮಾಪುರ
ಆರ್​ಬಿ ತಿಮ್ಮಾಪುರ
  • Share this:
ಧಾರವಾಡ(ಫೆ.08) : ಬಿಜೆಪಿ ಹೈಕಮಾಂಡ್​​ ಗೆ ಯಡಿಯೂರಪ್ಪ ಬೇಡವಾದರೆ ಕಿತ್ತು ಹಾಕಲಿ. ಆದರೆ, ಆಟ ಆಡಿಸುವುದು ಯಾಕೆ ? ಬೇಕಿದ್ದರೇ ನಮ್ಮ ಕಾಂಗ್ರೆಸ್‌ನವರು ಇನ್ನೂ ಹತ್ತು ಜನರನ್ನು ತೆಗೆದುಕೊಳ್ಳಲಿ. ಮಂತ್ರಿ ಪದವಿ ಜಗಳ ಬಿಟ್ಟು ಅಭಿವೃದ್ದಿ ಕಡೆ ಗಮನ ಕೊಡಲಿ ಎಂದು ಮಾಜಿ ಸಚಿವ ಆರ್​ ಬಿ ತಿಮ್ಮಾಪುರ ಹೇಳಿದ್ದಾರೆ. 

ಸಿಎಂ ಯಡಿಯೂರಪ್ಪ ನವರಿಗೆ ಅವಮಾನ ಮಾಡಿದ್ರೆ ರಾಜ್ಯದ ಜನತೆಗೆ ಅವಮಾನ ಮಾಡಿದಂತೆ. ಯಡಿಯೂರಪ್ಪ ಅವರು ರಾಜ್ಯದ ಸಿಎಂ ಆಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್​ ಶಾ ಮುಂದೆ ತಗ್ಗಿ ಬಗ್ಗಿ ನಡೆಯುವುದು ಸರಿಯಲ್ಲ. ಇದು ರಾಜ್ಯದ ಜನರಿಗೆ ಮಾಡುವ ಅವಮಾನ ಎಂದರು.

ಡಿಸಿಎಂ ಲಕ್ಷ್ಮ ಸವದಿ ಎಂಎಲ್‌ಸಿ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯ ಕೆಲ ಶಾಸಕರೇ ಅಭ್ಯರ್ಥಿ ಹಾಕಿ ಅಂತಾ ಹೇಳಿರಬೇಕು. ಅದಕ್ಕಾಗಿಯೇ ಎಂಎಲ್‌ಸಿ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಪವರ್ ಗೇಮ್‌ನಲ್ಲಿ ಸವದಿ ಸೋಲಬಹುದು ಎಂದು ನಮ್ಮ ಭಾವನೆ ವಿರುದ್ಧ ನಡಿಯುತ್ತಿದೆ. ಅಂತಾ ಬಿಜೆಪಿಯ ಒಳಗಡೆ ಕೆಲವರಿಗೆ ಅನಿಸಿದೆ. ಅಲ್ಲಿನ ಕೆಲವು ಶಾಸಕರು ಅಭ್ಯರ್ಥಿ ಹಾಕುವಂತೆ ಹೇಳಿರಬೇಕು ಆ ಪಕ್ಷದಲ್ಲಿ ಬೇಗುದಿ ಇದೆ. ಪಕ್ಷೇತರ ಅಭ್ಯರ್ಥಿ ಬಿಜೆಪಿಯ ಅತೃಪ್ತರ ಜೊತೆ ಮಾತನಾಡಿಯೇ ಸ್ಪರ್ಧಿಸಿರಬೇಕು ಎಂದರು.

ಆರ್​ ಬಿ ತಿಮ್ಮಾಪುರ ಮೊದಲು ನಮ್ಮ ಪಕ್ಷಕ್ಕೆ ಬಂದು ಸೇರಲಿ : ಜಗದೀಶ್ ಶೇಟ್ಟರ್​

ಇತ್ತ ಆರ್ ಬಿ ತಿಮ್ಮಾಪೂರ ಯಡಿಯೂರಪ್ಪಗೆ ತೊಂದರೆ ಕೊಡುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಸಚಿವ ಜಗದೀಶ್ ಶೆಟ್ಟರ್​, ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಬ್ರಹ್ಮನಾ ಹೊರಟ್ಟಿ ಹಾಗೂ ತಿಮ್ಮಾಪೂರ ಹೇಳಿಕೆಗೆ ಉತ್ತರ ಕೊಡಬೇಕಾ ನಾವು ಎಂದು ಗರಂ ಆದ‌ ಶೆಟ್ಟರ್, ಅವರೇನು ಭವಿಷ್ಯ‌ ನುಡಿಯುವವರಾ, ತಿಮ್ಮಾಪುರ ಅವರೇ ಮೊದಲು ನಮ್ಮ ಪಕ್ಷಕ್ಕೆ ಬಂದು ಸೇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ವಾಲ್ಮೀಕಿ ಸಮುದಾಯಕ್ಕೆ ಸಿಎಂ ಅನ್ಯಾಯ ಮಾಡಲ್ಲ; ಮತ್ತೆ ಡಿಸಿಎಂ ಆಸೆ ತೆರೆದಿಟ್ಟ ಶ್ರೀರಾಮುಲು

ಕುಮಾರಸ್ವಾಮಿ ಕಿಂಗ್ ಮೇಕರ್ ಆಗುವರೆಂಬ ಹೊರಟ್ಟಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ  ಸಚಿವ ಜಗದೀಶ ಶೆಟ್ಟರ್, ಎಚ್.ಡಿ‌. ಕುಮಾರಸ್ವಾಮಿ ಹಾಗೂ ಹೊರಟ್ಟಿಗೆ ಹೇಗೆ ಸಂಬಂದ ಇದೆ ಅಂತಾ ನನಗೆ‌ ಗೊತ್ತಿಲ್ಲ. ಕುಮಾರಸ್ವಾಮಿ ಕಿಂಗ್‌‌‌ ಮೇಕರ್ ಆಗೊದನ್ನು ಕಾಯುತ್ತೇವೆ. ಕುಮಾರಸ್ವಾಮಿ, ಸಿದ್ಧರಾಮಯ್ಯ ಹಾಗೂ ಹೊರಟ್ಟಿ ಭ್ರಮೆಯಲ್ಲಿದ್ದಾರೆ ಸರ್ಕಾರ‌ ಗಟ್ಟಿಯಾಗಿದೆ, ಯಡಿಯೂರಪ್ಪ ನೇತೃತ್ವದಲ್ಲಿ ಮೂರೂವರೆ‌ ವರ್ಷ ಸರ್ಕಾರ ಮುಗಿಸುತ್ತೇವೆ ಎಂದರು.

 
First published: February 8, 2020, 5:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading