ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೈಕ್​ ಕೊಡಿಸದಂತೆ ಪೋಷಕರಿಗೆ ಮಂಡ್ಯ ಜಿಲ್ಲಾಧಿಕಾರಿ ಮನವಿ

ಅಪಘಾತಕ್ಕೆ ಈಡಾದವರ ಬಗ್ಗೆ ಮತ್ತು ಅದರಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗೆ ಹೇಳಿ, ಅವರಲ್ಲಿ ಅರಿವು ಮೂಡಿಸುವಂತೆ ಕಾಲೇಜಿನ ಪ್ರಾಚಾರ್ಯರು ಮತ್ತು ಮುಖ್ಯೋಪಾಧ್ಯಾಯರಿಗೆ ಜ್ಞಾಪನ ಪತ್ರವನ್ನು ಜಿಲ್ಲಾಧಿಕಾರಿ ಹೊರಡಿಸಿದ್ದಾರೆ.

HR Ramesh | news18
Updated:June 27, 2019, 9:50 PM IST
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೈಕ್​ ಕೊಡಿಸದಂತೆ ಪೋಷಕರಿಗೆ ಮಂಡ್ಯ ಜಿಲ್ಲಾಧಿಕಾರಿ ಮನವಿ
ಬೈಕ್ ಸ್ಟಂಟ್ (ಪ್ರಾತಿನಿಧಿಕ ಚಿತ್ರ)
  • News18
  • Last Updated: June 27, 2019, 9:50 PM IST
  • Share this:
ಮಂಡ್ಯ: ಹದಿಹರೆಯದ ಯುವಕರ ಕೈಗೆ ಬೈಕ್​​ ಸಿಕ್ಕರೆ ಸಾಕು, ಮನಸೋಇಚ್ಛೆ ವೇಗವಾಗಿ ಚಲಾಯಿಸಿ ಅಪಘಾತಕ್ಕೆ ಈಡಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬೈಕ್, ಸ್ಕೂಟರ್ ಕೊಡಿಸದಂತೆ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಪೋಷಕರಲ್ಲಿ ಮನವಿ ಮಾಡಿದ್ದಾರೆ.

ಚಾಲನಾ ಪರವಾನಗಿ ಇಲ್ಲದೆ ಬೈಕ್ ಚಲಾಯಿಸಿ, ಯುವಕರು ಅಪಘಾತ ಈಡಾಗುತ್ತಿದ್ದಾರೆ. ಇದರಿಂದ ಈಗಾಗಲೇ ಹಲವು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರೆ, ಮತ್ತೆ ಕೆಲವರು ಅಂಗವಿಕಲತೆಗೆ ಒಳಗಾಗಿದ್ದಾರೆ. ಹೀಗಾಗಿ ಪೋಷಕರಲ್ಲಿ ಅರಿವು ಮೂಡಿಸುವಂತೆ ಶಾಲಾ ಕಾಲೇಜಿಗೆ ಜಿಲ್ಲಾಧಿಕಾರಿ ಜ್ಞಾಪನ‌ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಇದನ್ನು ಓದಿ: ಚೊಚ್ಚಲ ಬಜೆಟ್​ ಮಂಡನೆಗೂ ಮುನ್ನ ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್​ ಭೇಟಿಯಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹದಿಹರೆಯದ ಯುವಕ-ಯುವತಿಯರಿಗೆ ಚಾಲನೆ ಬಗ್ಗೆ ಅನುಭವ ಇಲ್ಲದೆ, ಮನಬಂದಂತೆ ಬೈಕ್​ ಚಲಾಯಿಸಿ, ಅಪಘಾತಕ್ಕೆ ಈಡಾದವರ ಬಗ್ಗೆ ಮತ್ತು ಅದರಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗೆ ಹೇಳಿ, ಅವರಲ್ಲಿ ಅರಿವು ಮೂಡಿಸುವಂತೆ ಕಾಲೇಜಿನ ಪ್ರಾಚಾರ್ಯರು ಮತ್ತು ಮುಖ್ಯೋಪಾಧ್ಯಾಯರಿಗೆ ಜ್ಞಾಪನ ಪತ್ರವನ್ನು ಜಿಲ್ಲಾಧಿಕಾರಿ ಹೊರಡಿಸಿದ್ದಾರೆ.

First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ