4 ದಿನಗಳ ನಂತರ ಅಂತಿಮ ನಿರ್ಧಾರ ತಿಳಿಸುತ್ತೇನೆ, ಅಲ್ಲಿಯವರೆಗೆ ನನ್ನ ಬಿಟ್ಟುಬಿಡಿ; ರಮೇಶ್​ ಜಾರಕಿಹೊಳಿ

10 ದಿನಗಳಿಂದ ತಮ್ಮ ಪಕ್ಷದ ನಾಯಕರಿಂದ ಮತ್ತು ಮಾಧ್ಯಮದವರಿಂದ ಅಂತರ ಕಾಯ್ದುಕೊಂಡು ಅಜ್ಞಾತ ಸ್ಥಳಕ್ಕೆ ಹೋಗಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಇಂದು ತಮ್ಮ ಆಪ್ತರ ಮೂಲಕ ಸಂದೇಶ ಕಳುಹಿಸಿದ್ದಾರೆ.

sushma chakre | news18
Updated:January 3, 2019, 1:37 PM IST
4 ದಿನಗಳ ನಂತರ ಅಂತಿಮ ನಿರ್ಧಾರ ತಿಳಿಸುತ್ತೇನೆ, ಅಲ್ಲಿಯವರೆಗೆ ನನ್ನ ಬಿಟ್ಟುಬಿಡಿ; ರಮೇಶ್​ ಜಾರಕಿಹೊಳಿ
ರಮೇಶ್​ ಜಾರಕಿಹೊಳಿ
  • News18
  • Last Updated: January 3, 2019, 1:37 PM IST
  • Share this:
ಚಂದ್ರಕಾಂತ್​ ಸುಗಂಧಿ

ಗೋಕಾಕ್​ (ಜ. 3):  ತಮ್ಮನ್ನು ಸಂಪುಟದಿಂದ ಕೈಬಿಟ್ಟು ಸತೀಶ್​ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಟ್ಟ ಬಳಿಕ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಜ್ಞಾತವಾಸಕ್ಕೆ ತೆರಳಿದ್ದರು. ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಕಳೆದ 10 ದಿನಗಳಿಂದ ಯಾರಿಗೂ ಮಾಹಿತಿ ಇರಲಿಲ್ಲ. ಇದೀಗ ತಮ್ಮ ಆಪ್ತರ ಮೂಲಕ ಸಂದೇಶವನ್ನು ಕಳುಹಿಸಿರುವ ರಮೇಶ್​ ಜಾರಕಿಹೊಳಿ ವಿನಾಕಾರಣ ನನ್ನನ್ನು ಕಾಯಬೇಡಿ. 4 ದಿನಗಳ ನಂತರ ನನ್ನ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

10 ದಿನಗಳಿಂದ ನಾಪತ್ತೆಯಾಗಿದ್ದ ರಮೇಶ್​ ಜಾರಕಿಹೊಳಿ ನಿನ್ನೆ ಇದ್ದಕ್ಕಿದ್ದಂತೆ ಬೆಳಗಾವಿಯ ಗೋಕಾಕ್​ನಲ್ಲಿರುವ ತಮ್ಮ ಮನೆಯಲ್ಲಿ ಪ್ರತ್ಯಕ್ಷವಾಗಿದ್ದರು. ಕಾಂಗ್ರೆಸ್​ ಪಕ್ಷದವರ ವಿರುದ್ಧ ಸಿಟ್ಟಾಗಿದ್ದ ರಮೇಶ್​ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ರಮೇಶ್​ ಜಾರಕಿಹೊಳಿಯವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​ನ ಅತೃಪ್ತ ಶಾಸಕರಿಗೆ ಬಿಜೆಪಿ ಬಲೆ ಬೀಸುತ್ತಿದೆ ಎಂಬ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು.

ಇದನ್ನೂ ಓದಿ: ಕೊನೆಗೂ ಪ್ರತ್ಯಕ್ಷರಾದ ರಮೇಶ್​ ಜಾರಕಿಹೊಳಿ; 9 ದಿನದ ಅಜ್ಞಾತವಾಸದ ಬಳಿಕ ತಣ್ಣಗಾಯ್ತಾ ಸಿಟ್ಟು?

ನಿನ್ನೆ ಗೋಕಾಕ್​ನ ತಮ್ಮ ಮನೆಯಲ್ಲಿ ಕಾಣಿಸಿಕೊಂಡಿದ್ದರೂ ರಮೇಶ್​ ಜಾರಕಿಹೊಳಿ ಯಾವ ನಾಯಕರೊಂದಿಗೂ ಮಾತಿಗೆ ಸಿಕ್ಕಿರಲಿಲ್ಲ. ಮಾಧ್ಯಮಗಳಿಂದಲೂ ಅಂತರ ಕಾಯ್ದುಕೊಂಡಿದ್ದರು. ಇಂದು ತಮ್ಮ ಆಪ್ತರ ಮೂಲಕ ಸಂದೇಶವೊಂದನ್ನು ಕಳುಹಿಸಿರುವ ರಮೇಶ್ ಜಾರಕಿಹೊಳಿ, ಇನ್ನು 4 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುತ್ತೇನೆ. ಅಲ್ಲಿಯವರೆಗೆ ಯಾವುದೇ ಮಾಧ್ಯಮದವರನ್ನು ಭೇಟಿ ಮಾಡುವುದಿಲ್ಲ. ವಿನಾಕಾರಣ ನಮ್ಮ ಮನೆಯ ಬಳಿ ಕಾಯಬೇಡಿ. ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಡಿಕೆಶಿ ಕೈಯಿಂದ ಬಳ್ಳಾರಿ ಉಸ್ತುವಾರಿ ಕಿತ್ತುಕೊಳ್ಳಲು ಮೂವರ ಪೈಪೋಟಿ; ಯಾರಿಗೆ ಸಿಗುತ್ತೆ ಗಣಿನಾಡ ಜವಾಬ್ದಾರಿ?

ನಾಲ್ಕು ದಿನಗಳ ನಂತರ ನಾನೇ ನನ್ನ ಅಂತಿಮ ನಿರ್ಧಾರವನ್ನು ಹೇಳುತ್ತೇನೆ. ಮಾಧ್ಯಮದವರಿಗೆ ತಿಳಿಸದೆ ಯಾವ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ. ನಾನಾಗೇ ಹೇಳುವವರೆಗೆ ಕಾಯಿರಿ ಎಂದು ರಮೇಶ್ ಜಾರಕಿಹೊಳಿ ಅವರ ಆಪ್ತ ಪ್ರಶಾಂತ ಕಾಗಲ ಅವರ ಮೂಲಕ ಸಂದೇಶ ರವಾನಿಸಿದ್ದಾರೆ.
First published:January 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ