ಇನ್ಮುಂದೆ ಕಾಂಗ್ರೆಸ್, ಜೆಡಿಎಸ್ ಟೀಕೆ ಬಿಟ್ಟು, ಪ್ರಾಮಾಣಿಕವಾಗಿ ಅಭಿವೃದ್ಧಿ ಕಡೆ ಗಮನ ಕೊಡಿ; ಸಿಎಂ ಬಿಎಸ್​ವೈ ಸಲಹೆ

ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ ಮಾಡುವುದರಿಂದ ನಮಗೇನು ಉಪ ಯೋಗವಿಲ್ಲ. ಅವರು ಹೀನಾಯ ಸೋಲು ಅನುಭವಿಸಿದ್ದಾರೆ. ಅವರು ಉತ್ತರ ಕೊಡದೆ ಇರುವ ಪರಿಸ್ಥಿತಿಗೆ ಬಂದಿದ್ದಾರೆ. ಅವರು‌ ಏನಾದರೂ ಮಾಡಿಕೊಳ್ಳಲಿ ಎಂದು ಉಭಯ ಪಕ್ಷಗಳ ನಾಯಕರಿಗೆ ಬಿಎಸ್​ವೈ ಚಾಟಿ ಬೀಸಿದರು.

ಸಿಎಂ  ಬಿ.ಎಸ್​. ಯಡಿಯೂರಪ್ಪ.

ಸಿಎಂ ಬಿ.ಎಸ್​. ಯಡಿಯೂರಪ್ಪ.

  • Share this:
ಬೆಂಗಳೂರು: ಈ ಫಲಿತಾಂಶದಿಂದ ದಾಖಲೆ ನಿರ್ಮಾಣ ಮಾಡಿದ್ದೇವೆ. ನಮ್ಮ ಪಕ್ಷದ ಮುಖಂಡರರು ಒಳ್ಳೆಯ ಕೆಲಸ ಮಾಡಿದ್ದಾರೆ. ಗೊತ್ತಿಲ್ಲದ ಊರಿನಲ್ಲಿ ಕಾರ್ಯಕರ್ತರು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಲೋಕಸಭೆಯಂತೆ ವಿಧಾನಸಭೆಯಲ್ಲಿ ದೊಡ್ಡ ಅಂತರದಿಂದ ಗೆದ್ದಿದ್ದೇವೆ. ಎಲ್ಲಾ ಕಡೆ ಈ ಅಂತರದಿಂದ ಗೆದ್ದಿದ್ದರೆ ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಏನಾಗಿದೆ ಅಂತಾ ಯೋಚನೆ ಮಾಡಿ. ಮೂರೂವರೇ ವರ್ಷ ನಮ್ಮ ಶಾಸಕರು, ಸಚಿವರು, ಕಾರ್ಯಕರ್ತರು ಜನರ ಆಪೇಕ್ಷೆಯಂತೆ ಮುಂದೆ ಹೋಗುತ್ತೇವೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ಹೆಜ್ಜೆ ಇಡಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು.

ಫಲಿತಾಂಶದ ಬಳಿಕ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಬರುವ ಬಜೆಟ್​ನಲ್ಲಿ ಕೃಷಿ, ನೀರಾವರಿ, ರೈತನ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕೈಗಾರಿಕೆಗೆ, ರಾಜ್ಯದ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಕೂಡ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ ಮಾಡುವುದರಿಂದ ನಮಗೇನು ಉಪ ಯೋಗವಿಲ್ಲ. ಅವರು ಹೀನಾಯ ಸೋಲು ಅನುಭವಿಸಿದ್ದಾರೆ. ಅವರು ಉತ್ತರ ಕೊಡದೆ ಇರುವ ಪರಿಸ್ಥಿತಿಗೆ ಬಂದಿದ್ದಾರೆ. ಅವರು‌ ಏನಾದರೂ ಮಾಡಿಕೊಳ್ಳಲಿ ಎಂದು ಉಭಯ ಪಕ್ಷಗಳ ನಾಯಕರಿಗೆ ಟಾಂಗ್ ನೀಡಿದರು.

ರಾಜ್ಯದ ಅಭಿವೃದ್ಧಿಗೆ ನಾವೆಲ್ಲರೂ ಕೆಲಸ ಮಾಡಬೇಕು. ಪಕ್ಷ ಸಂಘಟನೆ ಹಾಗೂ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಬೇಕು. ನಿರೀಕ್ಷೆ ಮೀರಿ ಗೆಲುವು ಕೊಟ್ಟ ಜನರ ಋಣ ತೀರಿಸಬೇಕು. ಮಂಡ್ಯದಲ್ಲಿ ಜೆಡಿಎಸ್​ಗೆ ಉಸಿರುಕಟ್ಟುವ ವಾತಾವರಣ ಇದೆ. ಇದನ್ನು ನಾವು ಬಳಸಿಕೊಂಡು ಮುಂದೆ ಅಲ್ಲಿ ಬಿಜೆಪಿ ಗೆಲ್ಲುವ ಕೆಲಸ ಮಾಡಬೇಕು. ಸರ್ಕಾರ, ಪಕ್ಷ ಒಟ್ಟಾಗಿ ಹೋದಾಗ ಮಾತ್ರ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬಹುದು. ಈ ಗೆಲುವು ಸಾಮೂಹಿಕ ನೇತೃತ್ವದ ಗೆಲುವು. ಅಂತರವನ್ನು ನಾವು ಕಲ್ಪನೆ ಕೂಡ ಮಾಡಿಕೊಳ್ಳೋಕೆ ಆಗಲ್ಲ ಎಂದು ಹೇಳಿದರು.

ಇದನ್ನು ಓದಿ: ಉಪಸಮರದಲ್ಲಿ ಕಮಲ ಕಮಾಲ್; ಹೈಕಮಾಂಡ್​ ನೀಡಿದ್ದ ಗುರಿ ತಲುಪಿ ಪ್ರಶ್ನಾತೀತ ನಾಯಕ ಎನಿಸಿಕೊಂಡ ಬಿಎಸ್​ವೈ

ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಬೇಕು. ಪ್ರಮಾಣಿಕತೆ ಎಲ್ಲರಿಗೂ ಮುಖ್ಯ. ಹೀಗಾಗಿ ನಾವು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಮೂರು ತಿಂಗಳ ಒಳಗೆ ಬೆಂಗಳೂರು ಸುಧಾರಣೆ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬೆಂಗಳೂರು ಕಸದ ಸಮಸ್ಯೆ ಬಗ್ಗೆ ವಿಶೇಷ ಗಮನ ಕೊಡಬೇಕು. ಬೆಂಗಳೂರು ಬಗ್ಗೆ ದೇಶದ ಗಮನ ಇದೆ.  ಅದನ್ನು ಕಟ್ಟಬೇಕು. ಪ್ರಾಮಾಣಿಕವಾಗಿ ಇದ್ದಾಗ ಮಾತ್ರ ಕೆಲಸ ಮಾಡೋಕೆ ಸಾಧ್ಯ! ನಿಷ್ಠುರ ಆದರೂ ಸರಿ ಕೆಲಸ ಮಾಡಿಸಬೇಕು. ಗುತ್ತಿಗೆದಾರ ಆಗ ಮಾತ್ರ ಕೆಲಸ ಮಾಡ್ತಾನೆ. ಪ್ರಾಮಾಣಿಕತೆ ಬೇಕು ಪರಿಶ್ರಮ ಬೇಕು ಎಂದು ಸಚಿವ ಆರ್. ಅಶೋಕ್​ಗೆ ಒತ್ತಿ ಒತ್ತಿ ಹೇಳಿದರು. ಬಳಿಕ ನಾಳೆ ನಿತಿನ್ ಗಡ್ಕರಿ ರಾಜ್ಯಕ್ಕೆ ಬರುತ್ತಿದ್ದಾರೆ. ಅವರ ಜೊತೆಗೆ ಅಭಿವೃದ್ಧಿ ಏನ್ ಆಗಬೇಕೋ ಅದರ ಬಗ್ಗೆ ನಾನು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

15 ಕ್ಷೇತ್ರಗಳ ಮತದಾರರಿಗೆ, ಪಕ್ಷದ ಗೆಲುವಿಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೆ ಹಾಗೂ ನೂತನ ಶಾಸಕರಿಗೆ ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದರು.
First published: