Halal Controversy: ಯುಗಾದಿ ವರ್ಷತೊಡಕಿಗೆ ಹಲಾಲ್ ಮಾಂಸ ಖರೀದಿ ಮಾಡ್ಬೇಡಿ, ಹಿಂದೂ ಜನ ಜಾಗೃತಿ ಸಮಿತಿ ಕರೆ

ಹಲಾಲ್ ಮಾಂಸ ಖರೀದಿ ಮಾಡದಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂಗಳಿಗೆ ಸಂದೇಶ ರವಾನೆ ಮಾಡಲಾಗಿದೆ. ಹಿಜಾಬ್, ವ್ಯಾಪಾರ ಧರ್ಮದ ಬಳಿಕ ಈಗ ಹಲಾಲ್ ವಿವಾದ ತಲೆದೋರಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾ.28) :  ಯುಗಾದಿ ಹಬ್ಬ (Ugadi Festival)  ಹತ್ತಿರ ಬರ್ತಿದೆ  ಏಪ್ರಿಲ್​ 2 ಶನಿವಾರದಂದು ಯುಗಾದಿ ಹಬ್ಬವಿದ್ದು,  ಮಾರನೆಯ ದಿನ ಅಂದರೆ, ಭಾನುವಾರ ವರ್ಷತೊಡಕು (hosa todaku) ಹಬ್ಬ ಆಚರಣೆಯಿರುತ್ತದೆ. ಆದರೆ ಈ ಬಾರಿ ಈ ಹಬ್ಬದ ಸಮಯದಲ್ಲಿ ಹಲಾಲ್ ಮಾಂಸ ಖರೀದಿ ಮಾಡಬೇಡಿ. ಹಲಾಲ್ (Halal) ಮಾಡಿದ ಮಾಂಸವನ್ನ (Meat) ಬಾಯ್ಕಾಟ್ (Boycott) ಮಾಡಿ. ಹಲಾಲ್ ಮಾಡಿದ ಮಾಂಸವನ್ನ ಅಲ್ಲಾಗೆ ಅರ್ಪಣೆ ಮಾಡಿರ್ತಾರೆ. ಹಲಾಲ್ ವೇಳೆ ಅಲ್ಲಾನಿಗೆ ಅರ್ಪಣೆ ಮಾಡಲಾಗಿರುತ್ತೆ. ಹೀಗಾಗಿ ಹಲಾಲ್ ಮಾಂಸ ಖರೀದಿ  ಮಾಡದಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂಗಳಿಗೆ  ಸಂದೇಶ ರವಾನೆ ಮಾಡಲಾಗಿದೆ. ಹಿಜಾಬ್, ವ್ಯಾಪಾರ ಧರ್ಮದ ಬಳಿಕ ಈಗ ಹಲಾಲ್ ವಿವಾದ ತಲೆದೋರಿದೆ.

 ಜನ ಜಾಗೃತಿ ಸಮಿತಿಯಿಂದ ಪ್ರಕಟಣೆ

ಸಮಸ್ತ ಹಿಂದೂಗಳು ಯುಗಾದಿಯ ಹಬ್ಬದ ಸಮಯದಲ್ಲಿ ಹಲಾಲ್ ಮಾಂಸ, ಹಲಾಲ್ ಉತ್ಪನ್ನಗಳನ್ನು ಬಹಿಷ್ಕಾರ ಮಾಡಿರಿ. ಭಾರತದಲ್ಲಿ ಇಂದು ಎಲ್ಲ ಉತ್ಪನ್ನಗಳಲ್ಲಿ ಹಲಾಲ್ ಪ್ರಮಾಣಪತ್ರವನ್ನು ಪಡೆಯುವ ಇಸ್ಲಾಮಿಕ್ ಷಡ್ಯಂತ್ರ್ಯದ ಪದ್ದತಿಯು ಶುರುವಾಗಿದೆ. ಹಲಾಲ್ ಉತ್ಪನ್ನದ ಮೂಲಕ ಸಾವಿರಾರು ಕೋಟಿ ಹಣವನ್ನು ಜಿಹಾದಿ ಸಂಘಟನೆಗಳು, ಸಂಗ್ರಹ ಮಾಡಿ ಅದನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿರುವುದು ಗಮನಕ್ಕೆ ಬಂದಿದೆ.

ಭಯೋತ್ಫಾದನೆಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಭಯೋತ್ಫಾಧಕರಿಗೆ ಭಾರತದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಅವರಿಗೆ ಕಾನೂನು ಸಹಾಯ ಮಾಡುತ್ತೀವೆ. ಈ ಹಲಾಲ್ ಪ್ರಮಾಣಪತ್ರಕ್ಕೆ ಯಾವುದೇ ಕಾಯಿದೆಯ ಮಾನ್ಯತೆ ಇಲ್ಲ. ಇದು ಕಾನೂನು ಬಾಹಿರ ಪ್ರಮಾಣ ಪತ್ರವಾಗಿದೆ. ಜಾತ್ಯಾತೀತ ಸಂವಿಧಾನದಲ್ಲಿ ಮತ, ಜಾತಿಯ ಆಧಾರದ ಮೇಲೆ ಉತ್ಪತ್ನಕ್ಕೆ ಪ್ರಮಾಣಪತ್ರ ನೀಡುವುದು ಸಂವಿಧಾನಕ್ಕೆ ವಿರುದ್ದವಾಗಿದೆ.

‘ಅಲ್ಲಾಗೆ ಅವರು ಅರ್ಪಣೆ ಮಾಡಿದ್ದಾರೆ’

ಅಷ್ಟೇ ಅಲ್ಲದೇ ಇಸ್ಲಾಮ್ ಪದ್ದತಿಯ ಪ್ರಕಾರ ಈಗಾಗಲೇ ಅವರ ಮತದ ದೇವರಿಗೆ ಅರ್ಪಣೆ ಮಾಡಿರುವುದನ್ನು, ಪುನಃ ಹಿಂದೂಗಳು ಯುಗಾದಿಯ ದಿನ ಹಿಂದೂ ದೇವರಿಗೆ ಅರ್ಪಣೆ ಮಾಡುವುದು ಅಯೊಗ್ಯವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಹಿಂದೂಗಳು ಯುಗಾದಿಯ ಸಮಯದಲ್ಲಿ ಇರಬಹುದು, ಅನ್ಯ ಯಾವುದೇ ಸಮಯದಲ್ಲಿ ಹಲಾಲ್ ಮಾಂಸವನ್ನು ಖರೀದಿಸ ಬಾರದು & ಹಲಾಲ್ ಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.

ಇದನ್ನೂ ಓದಿ: Muslim Shops: ಮುಸ್ಲಿಮರ ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂ ಸಂಘಟನೆಗಳ ಚಿಂತನೆ

‘ಹಿಂದೂಗಳು ಬೇರೆಯಲ್ಲ, ಮುಸ್ಲಿಮರು ಬೇರೆಯಲ್ಲ’

ಹಾಸನ (ಮಾ.28) : ಬೇಲೂರಿ ತಾಲ್ಲೂಕಿನ ಹಿಂದೂಯೇತರ ದೇವಸ್ಥಾನ ಮತ್ತು ಜಾತ್ರೆಗಳಲ್ಲಿ ಮುಸ್ಲಿಂರಿಗೆ ಯಾವುದೇ ವ್ಯಾಪಾರ, ವಹಿವಾಟು ನಡೆಸದಂತೆ ನಿರ್ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿಕೊಂಡಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗರಂ ಆಗಿದ್ದಾರೆ. ಮುಸ್ಲಿಮರಿಗೆ ಅಡೆತಡೆ ತಂದರೆ, ಯಾವ ಸಂಘ, ಸಂಸ್ಥೆ, ಯಾವ ಪಾರ್ಟಿಯವರಿದ್ದರೂ ನಾವು ಸುಮ್ಮನೆ ಇರಲ್ಲ. ಈ ಜಿಲ್ಲೆಯಲ್ಲಿ ಹಿಂದೂಗಳು ಬೇರೆಯಲ್ಲ, ಮುಸ್ಲಿಮರು ಬೇರೆಯಲ್ಲ. ನಾವೆಲ್ಲ ಈ ಜಿಲ್ಲೆಯಲ್ಲಿ ಐಕ್ಯತೆಯಿಂದ ಹೋಗುತ್ತಿದ್ದೇವೆ. ಒಂದು ಸಮಾಜವನ್ನು ಗುರಿ ಇಟ್ಟುಕೊಂಡು ಹೋಗುವುದಾದರೆ ನಮ್ಮದು ಖಂಡಿತ ವಿರೋಧವಿದೆ ಎಂದು ಗುಡುಗಿದರು.

ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ವಿರುದ್ಧ ಕಿಡಿ

ಹಿಂದುಗಳಿರಲಿ, ಮುಸ್ಲಿಂರಿರಲಿ ಹಿಂದಿನಿಂದ ಹೇಗೆ ನಡೆದುಕೊಂಡು ಹೋಗುತ್ತಿತ್ತು ಅದಕ್ಕೆ ಅಡ್ಡಿ ತರಬಾರದು. ಅಡ್ಡಿ ತಂದರೆ ಅವರ ಮೇಲೆ ಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ನಾವೆಲ್ಲ ಅಣ್ಣ-ತಮ್ಮಂದಿರ ತರಹ ಹೋಗಬೇಕು. ಪರಿಶಿಷ್ಟ, ಮುಸ್ಲಿಂ, ಕ್ರಿಶ್ಚಿಯನ್ ಸಮಾಜ ಇರಬಹುದು. ಅದಕ್ಕೆ ಯಾವುದೇ ತರಹದ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ಕೂಲಿ ಮಾಡಿಕೊಂಡು ಜೀವನ ಮಾಡುವವರಿಗೆ ಅಡೆ ತಡೆ ತಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Bengaluru: ‘ಹಿಂದೂಗಳೇ ಮುಸ್ಲಿಂ ಹೋಟೆಲ್​ಗಳಿಗೆ ಹೋಗ್ಬೇಡಿ‘, ‘ಅವ್ರ ಅಂಗಡಿಯಲ್ಲಿ ಮಾಂಸ ಖರೀದಿಸಬೇಡಿ’; ಕಾಳಿ ಸ್ವಾಮೀಜಿ ಕರೆ

ಯಾರೋ ನಾಲ್ಕು ಜನ ಕೇಸರಿ ಶಾಲು ಹಾಕಂಡು ಬಂದರೆ ಅದಕ್ಕೆ ಕೇರ್ ಮಾಡಲು ಆಗಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ತ್ಯಾಗಕ್ಕೂ ನಾವು ಸಿದ್ಧವಿದ್ದೇವೆ. ಸಮಾಜದಲ್ಲಿ ಕಲ್ಮಶ ವಾತಾವರಣ ತರಬಾರದು. ಸಾಬರ್ ಆಗಿ ಹುಟ್ಟಿದರೆ ಅವರಿಗೆ ಜೀವನ ಮಾಡಬೇಡಿ ಅಂತ ಹೇಳಲು ಆಗುತ್ತಾ? ಪರಿಶಿಷ್ಟ ಸಮಾಜದವರು ವ್ಯಾಪಾರ ಮಾಡ್ತಾರೆ ಅವರಿಗೆ ಮಾಡಬೇಡಿ ಅಂಥಾ ಹೇಳಲು ಆಗುತ್ತಾ? ದೇವಸ್ಥಾನಕ್ಕೆ ಬರಬೇಡಿ ಎಂದು ಹೇಳಲು ಆಗುತ್ತಾ? ಎಲ್ಲರನ್ನೂ ಐಕ್ಯತೆಯಿಂದ ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದರು.

ನಮ್ಮ ಜಿಲ್ಲೆಯಲ್ಲಿ ಅಂತಹದ್ದಕ್ಕೆ ಅವಕಾಶವಿಲ್ಲ

ನಮ್ಮ ಜಿಲ್ಲೆಯಲ್ಲಿ ಅಂತಹದ್ದಕ್ಕೆ ಅವಕಾಶವಿಲ್ಲ. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಸಮಾಜಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ವ್ಯಾಪಾರಕ್ಕೆ ನಿರ್ಬಂಧ ಮಾಡಬಾರದು. ಬೇಲೂರು ಜಾತ್ರೆಗೆ ಮುಸ್ಲಿಂರಿಗೆ ನಿರ್ಬಂಧ ಮಾಡಿದರೆ ನಮ್ಮ ಕಾರ್ಯಕರ್ತರಿಗೆ ಹೇಳುತ್ತೇನೆ. ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡಬೇಡಿ ಎಂದು ಜಿಲ್ಲಾಧಿಕಾರಿಗಳು ಮತ್ತು ಎಸ್ ಪಿ ಅವರ ಬಳಿ ಮನವಿ ಮಾಡಿಕೊಂಡರು.
Published by:Pavana HS
First published: