ದಾವಣಗೆರೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ರೈತರಿಂದ ಕತ್ತೆ ಮದುವೆ

news18
Updated:August 4, 2018, 3:14 PM IST
ದಾವಣಗೆರೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ರೈತರಿಂದ ಕತ್ತೆ ಮದುವೆ
news18
Updated: August 4, 2018, 3:14 PM IST
ನ್ಯೂಸ್ 18 ಕನ್ನಡ 

ದಾವಣಗೆರೆ ( ಆಗಸ್ಟ್ 04) :  ರಾಜ್ಯದ ವಿವಿಧೆಡೆ ಮಳೆ ಸುರಿಯುತ್ತಿದೆ. ಕೆರೆ ಕಟ್ಟೆಗಳು ತುಂಬಿದ್ದು ಡ್ಯಾಂಗಳಿಂದ ನೀರನ್ನು ಹೊರ ಬಿಡಲಾಗಿದೆ. ಆದರೆ ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಪ್ರದೇಶದ ಸುತ್ತಾಮುತ್ತ ಮಾತ್ರ ಮಳೆಯ ಸಿಂಚನವಿಲ್ಲ. ಇದರಿಂದ ವರುಣದೇವ ಮುನಿಸಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಕತ್ತೆಗಳಿಗೆ ಮದುವೆ ಮಾಡಿದ್ದಾರೆ.

ಎರಡೂ ಕತ್ತೆ ಗಳಿಗೆ ಮೈ ತೊಳೆದು ಅರಿಸಿನ ಹಚ್ಚಿ ಗಂಡು ಕತ್ತೆಗೆ ಹೊಸ ಪಂಚೆ ಅಂಗಿ ಹಾಗೂ ಹೆಣ್ಣು ಕತ್ತೆಗೆ ಹೊಸ ಸೀರೆ ಉಡಿಸಿ ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯ ಮಾಡಲಾಯಿತು.ಕತ್ತೆಗಳ ಮದುವೆಗೂ ಮುನ್ನ ಗಂಗೆ ಪೂಜೆ ಮಾಡಿ 5 ಕೊಡ ನೀರು ತಂದು ಕರಗಲ್ಲು ಪೂಜೆ ಮಾಡಿದರು. ಮದುವೆ ಮುಗಿದ ನಂತರ ವಿವಿಧ ವಾದ್ಯಗಳೊಂದಿಗೆ ಊರಿನ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು

ಒಟ್ಟಾರೆ ಮಳೆರಾಯನ ಕೃಪೆಗೆ ಕತ್ತೆ ಗಳ ಮದುವೆ ಹಾಗೂ ಕರಗಲ್ಲು ಪೂಜೆ ನಡೆದಿದ್ದು, ಇನ್ನಾದರೂ ಮಳೆದೇವ ಕಣ್ಣು ಬಿಡಲಿ ಎನ್ನುವುದು ರೈತರ ಆಶಯವಾಗಿದೆ. 
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...