• Home
  • »
  • News
  • »
  • state
  • »
  • Dominos Pizza ಆರ್ಡರ್ ಮಾಡುವವರೇ ಎಚ್ಚರ! ಕ್ರೆಡಿಟ್ ಕಾರ್ಡ್ ಸೇರಿ ವೈಯಕ್ತಿಕ ಮಾಹಿತಿ ಹ್ಯಾಕರ್ಸ್ ಪಾಲು!

Dominos Pizza ಆರ್ಡರ್ ಮಾಡುವವರೇ ಎಚ್ಚರ! ಕ್ರೆಡಿಟ್ ಕಾರ್ಡ್ ಸೇರಿ ವೈಯಕ್ತಿಕ ಮಾಹಿತಿ ಹ್ಯಾಕರ್ಸ್ ಪಾಲು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಿಜ್ಜಾ ಆರ್ಡರ್​ ಮಾಡಿದವರ ಕ್ರೆಡಿಟ್ ಕಾರ್ಡ್​​ ಮಾಹಿತಿ, ಮೊಬೈಲ್​​ ಸಂಖ್ಯೆ, ಮೇಲ್​​ ಐಡಿ, GPS ಲೊಕೇಷನ್​​​ ಸೋರಿಕೆಯಾಗಿದೆಯಂತೆ. ಬರೋಬ್ಬರಿ 18 ಕೋಟಿ ಮಂದಿ ವೈಯಕ್ತಿಕ ಮಾಹಿತಿ ಡಾರ್ಕ್​​ ವೆಬ್​​ನಲ್ಲಿ ಪ್ರಕಟವಾಗಿದೆ. 10 ಲಕ್ಷಕ್ಕೂ ಹೆಚ್ಚು ಕ್ರೆಡಿಟ್​​ ಕಾರ್ಡ್​​ಗಳ ಮಾಹಿತಿ ಸೋರಿಕೆಯಾಗಿದೆ.

ಮುಂದೆ ಓದಿ ...
  • Share this:

ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್​ಡೌನ್​​ ಹೇರಲಾಗಿದೆ. ಮನೆಯಲ್ಲಿ ಬಂಧಿಯಾಗಿರುವ ಜನಕ್ಕೆ ಆನ್​​ಲೈನ್​ ಮೂಲಕ ಫುಡ್​ ಆರ್ಡರ್​ ಮಾಡುವ ಅವಕಾಶವಿದೆ. ಮನೆಯಲ್ಲೇ ಇದ್ದು, ಮನೆಯೂಟದಿಂದ ಬೋರ್​ ಆದ ಮಂದಿ ಆನ್​​ಲೈನ್​ ಮೂಲಕ ಫುಡ್​ ಆರ್ಡರ್​ ಮಾಡಲು ಭಾರೀ ಸಂಖ್ಯೆಯಲ್ಲಿ ಮುಂದಾಗುತ್ತಿದ್ದಾರೆ. ಸ್ವಿಗ್ಗಿ, ಜೊಮ್ಯಾಟೋ ಆ್ಯಪ್​​ಗಳ ಮೂಲಕ ಇಷ್ಟದ ಖಾದ್ಯಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಫಿಜ್ಜಾ ಪ್ರಿಯರೂ ಹೆಚ್ಚಾಗಿ ಡಾಮಿನೋಸ್​ ಮೊರೆ ಹೋಗುತ್ತಿದ್ದಾರೆ. ಡಾಮಿನೋಸ್​ ಕೂಡ ಕೊರೋನಾ ಸಮಯದಲ್ಲಿ ಹೆಚ್ಚಿನ ಜಾಗ್ರತೆಯಿಂದ ಪಿಜ್ಜಾ ತಯಾರಿಸಿ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.


ಹೀಗಾಗಿ ಬಹುತೇಕ ಮಂದಿ ಡಾಮಿನೋಸ್​ ಪಿಜ್ಜಾವನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದಾರೆ. ಆದರೆ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು, ಡಾಮಿನೋಸ್​ಪಿಜ್ಜಾ ಆರ್ಡರ್​ ಮಾಡಿದವರು ಸೇಫ್​​ ಇಲ್ಲ ಎನ್ನುತ್ತಿದೆ. ಪಿಜ್ಜಾ ಆರ್ಡರ್​​ ಮಾಡಿದವರ ಎಲ್ಲಾ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಪಿಜ್ಜಾ ಆರ್ಡರ್​ ಮಾಡಿದವರ ಕ್ರೆಡಿಟ್ ಕಾರ್ಡ್​​ ಮಾಹಿತಿ, ಮೊಬೈಲ್​​ ಸಂಖ್ಯೆ, ಮೇಲ್​​ ಐಡಿ, GPS ಲೊಕೇಷನ್​​​ ಸೋರಿಕೆಯಾಗಿದೆಯಂತೆ. ಬರೋಬ್ಬರಿ 18 ಕೋಟಿ ಮಂದಿ ವೈಯಕ್ತಿಕ ಮಾಹಿತಿ ಡಾರ್ಕ್​​ ವೆಬ್​​ನಲ್ಲಿ ಪ್ರಕಟವಾಗಿದೆ. 10 ಲಕ್ಷಕ್ಕೂ ಹೆಚ್ಚು ಕ್ರೆಡಿಟ್​​ ಕಾರ್ಡ್​​ಗಳ ಮಾಹಿತಿ ಸೋರಿಕೆಯಾಗಿದೆ.


18 ಕೋಟಿ ಡಾಮಿನೋಸ್​ ಗ್ರಾಹಕರ ಮಾಹಿತಿಯನ್ನು ಹ್ಯಾಕರ್ಸ್​​​​​​ ಕದ್ದಿದ್ದಾರೆ. ಬರೋಬ್ಬರಿ 13 TBಯಷ್ಟು ಮಾಹಿತಿಯನ್ನು ಕದಿಯಲಾಗಿದೆ. ಪಿಜ್ಜಾ ಆರ್ಡರ್​ ಮಾಡಿದವರ ಮಾಹಿತಿಯನ್ನು ಹ್ಯಾಕ್​​ ಮಾಡಿ ಡಾರ್ಕ್​​ ವೆಬ್​ಗಳಿಗೆ ನೀಡಲಾಗಿದೆ. ಈ ಮಾಹಿತಿ ಮೂಲಕ ಡಾಮಿನೋಸ್​ ಗ್ರಾಹಕರ ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕಬಹುದು. ಮೊಬೈಲ್​​ ಸಂಖ್ಯೆ, ಮೇಲ್​​ ಐಡಿ, GPS ಲೊಕೇಷನ್​​​ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಆತಂಕ ಸೃಷ್ಟಿಯಾಗಿದೆ. ಇದರಿಂದ ಆನ್​​ಲೈನ್​ ವಂಚನೆ ಪ್ರಕರಣಗಳು ಹೆಚ್ಚಾಗಲಿವೆ.


ಇದನ್ನೂ ಓದಿ: ಲಸಿಕೆಗೆ ಹೆದರಿ ನದಿಗೆ ಹಾರಿದ ಹಳ್ಳಿಯ ಜನ.. ಕಾರಣ ಕೇಳಿ ಬೆಚ್ಚಿಬಿದ್ದ ಆರೋಗ್ಯ ಕಾರ್ಯಕರ್ತರು!


ಇನ್ನು ತಮ್ಮ ಗ್ರಾಹಕರ ಮಾಹಿತಿ ಹ್ಯಾಕ್​​ ಆಗಿರುವುದನ್ನು ಡಾಮಿನೋಸ್​​ ಇಂಡಿಯಾ ಒಪ್ಪಿಕೊಂಡಿದೆ. ಆದರೆ ಕ್ರಿಡಿಟ್​ ಕಾರ್ಡ್​​, ಬ್ಯಾಂಕ್​ ಖಾತೆ ಮಾಹಿತಿಗಳು ಸೋರಿಕೆಯಾಗಿರುವುದನ್ನು ಅಲ್ಲಗಳೆದಿದ್ದಾರೆ. ಆದರೆ 2015ರಿಂದ 201ರವರೆಗೆ ಡಾಮಿನೋಸ್​​ ಇಂಡಿಯಾ ಸರ್ವರ್​​ಗೇ ಹ್ಯಾಕರ್ಸ್​​ ಕನ್ನ ಹಾಕಿದ್ದು, ಎಲ್ಲಾ ಮಾಹಿತಿಗಳು ಸೋರಿಕೆಯಾಗಿವೆ ಎನ್ನಲಾಗುತ್ತಿದೆ. ಆತಂಕಕಾರಿ ಸಂಗತಿ ಎಂದರೆ ಕದ್ದ ಮಾಹಿತಿ ಮೂಲಕ ಸ್ಪೈ ಮಾಡಲಾಗುತ್ತಿದೆಯಂತೆ. ವ್ಯಕ್ತಿಗಳ ಮೇಲೆ ಗೂಢಚಾರಿಕೆ ಮಾಡಲು ಮಾಹಿತಿಯನ್ನು ಬಳಸಲಾಗುತ್ತಿದೆಯಂತೆ.

Published by:Kavya V
First published: