• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Prediction: ರಾಜ್ಯ ರಾಜಕಾರಣದ ಬಗ್ಗೆ ಗೊಂಬೆ ಭವಿಷ್ಯ; ಧಾರವಾಡ ಜಿಲ್ಲೆಯಲ್ಲೊಂದು ವಿಸ್ಮಯ

Prediction: ರಾಜ್ಯ ರಾಜಕಾರಣದ ಬಗ್ಗೆ ಗೊಂಬೆ ಭವಿಷ್ಯ; ಧಾರವಾಡ ಜಿಲ್ಲೆಯಲ್ಲೊಂದು ವಿಸ್ಮಯ

ಗೊಂಬೆ ಭವಿಷ್ಯ

ಗೊಂಬೆ ಭವಿಷ್ಯ

ಗ್ರಾಮದ ಹಳ್ಳದ ದಂಡೆಯಲ್ಲಿ ಈ ವಿಸ್ಮಯ ನಡೆಯುತ್ತದೆ. ಯುಗಾದಿ ಅಮವಾಸ್ಯೆ ದಿನ ರಾತ್ರಿ ಹಳ್ಳದ ದಂಡೆಯಲ್ಲಿ ಗೊಂಬೆಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪಾಡ್ಯ ದಿನ ನಸುಕಿನ ಜಾವ ಆ ಸ್ಥಳಕ್ಕೆ ಹೋಗಿ ಗ್ರಾಮದ ಹಿರಿಯರು ಪರಿಶೀಲನೆ ನಡೆಸುತ್ತಾರೆ.

  • News18 Kannada
  • 2-MIN READ
  • Last Updated :
  • Dharwad, India
  • Share this:

ಧಾರವಾಡ : ರಾಜ್ಯ ರಾಜಕಾರಣದಲ್ಲಿ (Karnataka Politics) ನಾಯಕತ್ವ ಬದಲಾವಣೆ (Leadership Changing) ಆಗುತ್ತೆ ಅನ್ನೋ ಸುಳಿವನ್ನು ಧಾರವಾಡದ (Dharwad) ಗೊಂಬೆ ಭವಿಷ್ಯ ನುಡಿದಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ (Uppina Betageri) ವ್ಯಾಪ್ತಿಯ ಹನುಮನಕೊಪ್ಪದ ಗೊಂಬೆ ಭವಿಷ್ಯ (Gombe Bhavishya) ನುಡಿಯಲಾಗಿದೆ. ಯುಗಾದಿ ದಿನ (Ugadi Day) ಈ ಭವಿಷ್ಯವನ್ನು ನುಡಿಯಲಾಗಿದೆ. ಎರಡು ವರ್ಷದ ಹಿಂದೆಯೂ ಗೊಂಬೆ ಭವಿಷ್ಯ (Ugadi Predication) ನುಡಿಯಲಾಗಿತ್ತು. ಈ ಭವಿಷ್ಯ ನುಡಿದ ನಂತರ ಬಿಎಸ್ ಯಡಿಯೂರಪ್ಪನವರು (Former CM BS Yediyurappa) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಮತ್ತೆ ನುಡಿದಿರುವ ಗೊಂಬೆ ಭವಿಷ್ಯ ಅದೇ ರೀತಿಯಲ್ಲಿದ್ದು, ಮತ್ತೆ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.


ಕರ್ನಾಟಕದ ದಿಕ್ಕಿನ ಗೊಂಬೆ ಕಾಲಿಗೆ ಧಕ್ಕೆ ಎಂದು ಭವಿಷ್ಯ ನುಡಿಯಲಾಗಿದೆ. ಈ ಮೂಲಕ ನಾಯಕತ್ವ ಬದಲಾವಣೆಯ ಮುನ್ಸೂಚನೆಯನ್ನ ನೀಡಲಾಗಿದೆ. ಎರಡು ವರ್ಷಗಳ ಹಿಂದೆ ಯಡಿಯೂರಪ್ಪನವರ ರಾಜೀನಾಮೆಯ ಭವಿಷ್ಯವನ್ನು ನಾಲ್ಕು ತಿಂಗಳ ಮುಂಚೆಯೇ ನುಡಿಯಲಾಗಿತ್ತು ಎಂದು ಇಲ್ಲಿಯ ಗ್ರಾಮಸ್ಥರು ಹೇಳುತ್ತಾರೆ.


ಏನಿದು ಗೊಂಬೆ ಭವಿಷ್ಯ?


ಗ್ರಾಮದ ಹಳ್ಳದ ದಂಡೆಯಲ್ಲಿ ಈ ವಿಸ್ಮಯ ನಡೆಯುತ್ತದೆ. ಯುಗಾದಿ ಅಮವಾಸ್ಯೆ ದಿನ ರಾತ್ರಿ ಹಳ್ಳದ ದಂಡೆಯಲ್ಲಿ ಗೊಂಬೆಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪಾಡ್ಯ ದಿನ ನಸುಕಿನ ಜಾವ ಆ ಸ್ಥಳಕ್ಕೆ ಹೋಗಿ ಗ್ರಾಮದ ಹಿರಿಯರು ಪರಿಶೀಲನೆ ನಡೆಸುತ್ತಾರೆ.


ಆಯಾ ದಿಕ್ಕಿನ ಗೊಂಬೆಯ ಪರಿಸ್ಥಿತಿ ಆಧರಿಸಿ ರಾಜಕೀಯ ಭವಿಷ್ಯ ನುಡಿಯಲಾಗುತ್ತದೆ. ಗೊಂಬೆಯ ಅಂಗಾಗಳಿಗೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬ ಭವಿಷ್ಯವನ್ನು ವಿಶ್ಲೇಷಣೆ ಮಾಡಲಾಗುತ್ತದೆ.




ಇಲಾಳ ಫಲ ಭವಿಷ್ಯ


ಚಂಡಮಾರುತ ಆರ್ಭಟಿಸುತ್ತೆ, ರೋಗ ವ್ಯಾಪಿಸುತ್ತೆ. ಅಲ್ಲಲ್ಲಿ ಭೂಕಂಪ, ವಿಮಾನ‌ ಅಪಘಾತ ನಡೆಯುತ್ತೆ. ಅಬ್ಬ!  ರಣಭಯಂಕರ ಎನ್ನುವಂತಿದೆ ಮುಂದಿನ ಒಂದು ವರ್ಷದ ಈ (Ugadi Phala Bhavishya) ಫಲ ಭವಿಷ್ಯ.


ಅಂದಹಾಗೆ ಇದು ಬಾಗಲಕೋಟೆಯ ಇಲಾಳ ಮೇಳದಿಂದ ಹೊರಬಿದ್ದ ಫಲ ಭವಿಷ್ಯ. ಆದ್ರೆ ಈ ಭವಿಷ್ಯವಾಣಿ ಕೇಳ್ತಿದ್ರೆ, ಕೈಕಾಲು ನಡುಗೋದು ಗ್ಯಾರಂಟಿ. ಆ ಮಟ್ಟಿಗೆ ರಣ ಭಯಂಕರ ಎನಿಸುವಂತಿದೆ. ಗುಳೇದಗುಡ್ಡದ ಇಲಾಳ ಮೇಳ ಮಾರವಾಡಿ ಬಗಿಚ್​ನಲ್ಲಿ ಯುಗಾದಿ ಪಾಡ್ಯದಂದು ನಡೆಯುವ ಫಲ ಭವಿಷ್ಯದಲ್ಲಿ ಇಂತಹ ಮಾತುಗಳು ಉದ್ಘರಿಸಿದವು.


ಇದನ್ನೂ ಓದಿ: Karnika: ಅಂಬಲಿ ಹಳಸಿ ಕಂಬಳಿ ಬಿಸಿತಲೆ ಪರಾಕ್ ಎಂದು ಕಾರ್ಣಿಕ ನುಡಿದ ಗೊರವಯ್ಯ; ರೈತರು ಖುಷ್, ರಾಜಕಾರಣಿಗಳಿಗೆ ಢವ ಢವ

top videos


    ಪ್ರತಿ ವರ್ಷದಂತೆ ಈ ವರ್ಷದ ಭವಿಷ್ಯವು ನುಡಿಯಲಾಗಿದ್ದು, ಕೊಂಚ ಮಟ್ಟಿಗೆ ಭಯ ಮೂಡಿಸುವಂತೆ ಮಾಡಿದೆ.

    First published: