• Home
  • »
  • News
  • »
  • state
  • »
  • Bhadravati: ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕ ಬಲಿ, ಹೆತ್ತವರ ಮಡಿಲಲ್ಲಿ ಪ್ರಾಣ ಬಿಟ್ಟ ಕಂದ!

Bhadravati: ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕ ಬಲಿ, ಹೆತ್ತವರ ಮಡಿಲಲ್ಲಿ ಪ್ರಾಣ ಬಿಟ್ಟ ಕಂದ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಬಲಿ ಪಡೆದಿವೆ. ಬಾಲಕನ ಪೋಷಕರು ಮನೆ ಮುಂದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದು, ಈ ವೇಳೆ ಬಾಲಕನನ್ನುಬೈಕ್‌ನಲ್ಲಿ ಕೂರಿಸಿದ್ದಾರೆ.

  • News18 Kannada
  • Last Updated :
  • Bhadravati, India
  • Share this:

ಭದ್ರಾವತಿ(ಡಿ.02): ಬೀದಿನಾಯಿಗಳ (Stray Dogs) ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಅಮಾಯಕರು ಈ ಶ್ವಾನಗಳಿಗೆ ಬಲಿಯಾಗುತ್ತಿದ್ದಾರೆ. ಸದ್ಯ ಭದ್ರಾವತಿಯ (Bhardavati) ಸೈಯದ್ ನಸ್ರುಲ್ಲಾ ಅವರ ಪುತ್ರ ಸೈಯದ್ ಹರ್ಷದ್ ಮದನಿ ಕೂಡಾ ಈ ಸಾಲಿಗೆ ಸೇರ್ಪಡೆಯಾಗಿದ್ದಾನೆ. ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ,- ಆತನನ್ನು ಬಲಿ ಪಡೆದಿವೆ. ಬಾಲಕನ ಪೋಷಕರು ಮನೆ ಮುಂದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದ ವೇಳೆ ಈ ದುರಂತ ನಡೆದಿದೆ.


ಬೈಕ್ ಮೇಲಿದ್ದಾತ ಕೆಳಗಿಳಿದಿದ್ದ


ಹೌದು ಮನೆ ಬಳಿ ಕೆಲಸ ಮಾಡುತ್ತಿದ್ದ ಮಗುವಿನ ತಂದೆ ತಾಯಿ, ಆತನನ್ನು ಅಲ್ಲೇ ಇದ್ದ ಬೈಕ್​ ಮೇಲೆ ಕೂರಿಸಿದ್ದರು. ಆದರೆ ಈ ನಡುವೆ ಪುಟ್ಟ ಬಾಲಕ ಚೆಂಡಿನೊಂದಿಗೆ ಆಟವಾಡಲು ಬೈಕ್‌ನಿಂದ ಇಳಿದಿದ್ದಾನೆ. ಅಷ್ಟರೊಳಗೆ ಬೀದಿ ನಾಯಿಗಳ ದಂಡು ಆತನ ಮೇಲೆ ದಾಳಿ ನಡೆಸಿ ಎಳೆದಾಡಿದೆ. ತಲೆ ಸೇರಿದಂತೆ ದೇಹದ ಭಾಗಗಳನ್ನು ಕಚ್ಚಿ ರಸ್ತೆಯಲ್ಲೇ ಸ್ವಲ್ಪ ದೂರ ಎಳೆದೊಯ್ದಿವೆ.


ಇದನ್ನೂ ಓದಿ: Handcuff Rules: ಬಂಧನದ ವೇಳೆ ಸುಮ್ ಸುಮ್ಮನೆ ಕೈಗೆ ಕೋಳ ಹಾಕಿದ್ರೆ ಪೊಲೀಸರಿಗೆ ಲಕ್ಷ ಲಕ್ಷ ದಂಡ: ಹೈಕೋರ್ಟ್


ನಾಯಿಗಳು ಬೊಗಳುವುದನ್ನು ಕೇಳಿ ಎಚ್ಚೆತ್ತ ದಂಪತಿ


ನಾಯಿಗಳು ಬೊಗಳುವುದನ್ನು ಕೇಳಿ ನಸ್ರುಲ್ಲಾ ಸ್ಥಳಕ್ಕೆ ಧಾವಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕೂಡಲೇ ಬಾಲಕನನ್ನು ಭದ್ರಾವತಿಯ ತಾಲೂಕು ಜನರಲ್ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಧರೆ ಅಷ್ಟರಲ್ಲಾಗಲೇ ಸಮಯ ಮೀರಿದ್ದು, ಬಾಲಕ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.


ಇದನ್ನೂ ಓದಿ: ಹಿರಿಯ ಹಸುವಿನ ಅಂತ್ಯ ಸಂಸ್ಕಾರ ವೇಳೆ ನಡೆಯಿತು ಅಚ್ಚರಿ; ಗೋವುಗಳ ಅಂತಃಕರಣ ಕಂಡು ಸ್ವಾಮೀಜಿಗಳೇ ಮೂಕರಾದರು!


ಭದ್ರಾವತಿ ಗ್ರಾಮಾಂತರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಬೀದಿ ನಾಯಿಗಳ ಹಾವಳಿಗೆ ಮುಗ್ಧ ಜೀವವೊಂದು ಬಲಿಯಾಗಿದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು