• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Udupi: ಗೋಣಿಚೀಲದಲ್ಲಿ ಹಾಕಿ ದೊಣ್ಣೆಯಿಂದ ಹೊಡೆದು ನಾಯಿಯನ್ನ ಕೊಲೆಗೈದ ರಾಕ್ಷಸರು; ಉಡುಪಿಯಲ್ಲಿ ಮನಕಲಕುವ ಘಟನೆ

Udupi: ಗೋಣಿಚೀಲದಲ್ಲಿ ಹಾಕಿ ದೊಣ್ಣೆಯಿಂದ ಹೊಡೆದು ನಾಯಿಯನ್ನ ಕೊಲೆಗೈದ ರಾಕ್ಷಸರು; ಉಡುಪಿಯಲ್ಲಿ ಮನಕಲಕುವ ಘಟನೆ

ಕೊಲೆಯಾದ ನಾಯಿ ಫೋಟೋ

ಕೊಲೆಯಾದ ನಾಯಿ ಫೋಟೋ

ಕಾಲೇಜು ವಿದ್ಯಾರ್ಥಿನಿ ನಾಯಿ ಜೊತೆ ಆಟವಾಡಿದ್ದಕ್ಕೆ ನಾಯಿಯನ್ನೇ ಕೊಲೆ ಮಾಡಲಾಗಿದೆ. ಘಟನೆ ಸಂಬಂಧ ಮಂಜುಳಾ ಕರ್ಕೇರ ಎಂಬವರು ನೀಡಿದ ದೂರಿನ ಮೇಲೆ ಆರೋಪಿ ವಾರ್ಡನ್​ ರಾಜೇಶ್​, ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • News18 Kannada
  • 3-MIN READ
  • Last Updated :
  • Udupi, India
  • Share this:

ಉಡುಪಿ: ಕಾಲೇಜು ವಿದ್ಯಾರ್ಥಿನಿ (College Student) ನಾಯಿಯೊಂದಿಗೆ (Dog) ಆಟವಾಡಿದಳು ಎಂಬ ಕಾರಣಕ್ಕೆ ನಾಯಿಯನ್ನು ಗೋಣಿಚೀಲದಲ್ಲಿ ಹಾಕಿ ಬರ್ಬರವಾಗಿ ಬಡಿದುಕೊಲೆ ಮಾಡಿರುವ ಅಮಾನವೀಯ ಘಟನೆ ಉಡುಪಿ (Udupi ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ (Shirva Police Station) ನಡೆದಿದೆ. ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ (Shri Madhwa Vadiraja Institute of Technology and Management) ಘಟನೆ ನಡೆದಿದ್ದು, ಕಾಲೇಜಿನ ವಾರ್ಡನ್​ ರಾಜೇಶ್ ವಿಕೃತಿ ಎಂಬಾತ ವಿಕೃತಿ ಮೆರೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಲೇಜು ವಿದ್ಯಾರ್ಥಿನಿ ನಾಯಿ ಜೊತೆ ಆಟವಾಡಿದ್ದಕ್ಕೆ ನಾಯಿಯನ್ನೇ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಈ ಕೃತ್ಯದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಪಾಪಿ ವಾರ್ಡನ್ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮೊಬೈಲ್​​ನಲ್ಲಿ ಪಾಪಿ ಕೃತ್ಯ ಸೆರೆಯಾಗಿದೆ


ಘಟನೆ ಸಂಬಂಧ ಮಂಜುಳಾ ಕರ್ಕೇರ ಎಂಬವರು ನೀಡಿದ ದೂರಿನ ಮೇಲೆ ಆರೋಪಿ ವಾರ್ಡನ್​ ರಾಜೇಶ್​, ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಎನಿಮಲ್ ರೈಟ್ಸ್ ಲಾಯರ್ ಹಾಗೂ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಬಬಿತಾ ಮಧ್ವರಾಜ್, ವಾರ್ಡನ್ ನಾಗರಾಜ್ ಹಾಗೂ ರಾಜೇಶ್ ಗೋಣಿಚೀಲದಲ್ಲಿ ಹಾಕಿ ದೊಣ್ಣೆಯಿಂದ ಹೊಡೆದು ಕೊಲೆ ನಾಯಿಯನ್ನು ಕೊಲೆ ಮಾಡಿದ್ದಾರೆ. ಬಳಿಕ ಕಾಲೇಜಿನ ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಅದನ್ನು ವಿಲೇವಾರಿ ಮಾಡಿದ್ದಾರೆ.




ಇದನ್ನೂ ಓದಿ: Explained: ಸಮಾಜದಲ್ಲಿ ನಡೆಯುವ ಭೀಕರ ಹತ್ಯೆಗಳಿಗೆ ಸಿನಿಮಾ ನಂಟಿದೆಯಾ? ತಜ್ಞರು ಹೇಳೋದೇನು?


ಆರೋಪಿಗಳ ವಿರುದ್ಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲು 


ಮಂಜುಳ ಕರ್ಕೇರಾ ಎಂಬವರು ದೂರು ಕೊಟ್ಟು ಈ ಬಗ್ಗೆ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 428-29 ಮತ್ತು ಪಿಸಿಎ ಆಕ್ಟ್ 11 ಪ್ರಕಾರ ದೂರು ದಾಖಲಾಗಿದೆ. ಇದೊಂದು ಅಮಾನವೀಯ ಮತ್ತು ಕ್ರೂರ ಕೃತ್ಯವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಇದು ಯಾರು ಕೂಡ ಸಹಿಸುವ ಘಟನೆ ಅಲ್ಲ, ಈ ನಾಯಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.


ಆರೋಪಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ


ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವರು ಆರೋಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ದೃಶ್ಯಗಳನ್ನು ನೋಡಿದರೆ ಕರುಳು ಹಿಂಡಿ ಬರುತ್ತಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಧನ್ಯವಾದಗಳು. ಇಂತಹ ವ್ಯಕ್ತಿಗಳಿಗೆ ಭೂಮಿ ಮೇಲೆ ಬದುಕುವ ಯೋಗ್ಯತೆ ಇಲ್ಲ. ಇಷ್ಟು ಕ್ರೂರಿಯಾಗಿ ನಡೆದುಕೊಳ್ಳಲು ಹೇಗೆ ಸಾಧ್ಯ? ನಾಯಿಯನ್ನು ಕೊಂದಿರೋ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಮನುಷ್ಯರನ್ನು ಕೊಲೆ ಮಾಡಲು ಹೇಸುವುದಿಲ್ಲ. ಅವರನ್ನು ಕಂಬಿ ಹಿಂದೆ ಕಳುಹಿಸುವಂತೆ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.




ಇದನ್ನೂ ಓದಿ: Kodi Festival: ಉಡುಪಿಯ ಅತಿ ದೊಡ್ಡ ಹಬ್ಬದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ; ಕೋಡಿ ಹಬ್ಬದಲ್ಲೂ ಧರ್ಮ ದಂಗಲ್ !


ಭದ್ರಾವತಿ ಉಕ್ಕು ಕಾರ್ಖಾನೆ ಪರ ವಿನಯ್ ಗುರೂಜಿ ಬ್ಯಾಟಿಂಗ್


ನಾವು ನಮ್ಮ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಭದ್ರಾವತಿಯ VISL ಕಾರ್ಮಿಕರಿಗೆ (Bhadravathi VISL Factory) ವಿನಯ್ ಗುರೂಜಿ (Vinay Guruji) ಅಭಯ ನೀಡಿದ್ದಾರೆ. ಶಾಸಕ ಸಂಗಮೇಶ್ (MLA Sangamesh) ಎದುರಲ್ಲೇ ವಿನಯ್ ಗುರೂಜಿ ಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ. ದೇಶಕ್ಕೆ ಮಲ್ಟಿ ನ್ಯಾಷನಲ್ ಕಂಪೆನಿಗಳನ್ನು ಸ್ವಾಗತಿಸುವ ಸರ್ಕಾರಗಳು, ದೇಶಿಯ ಕಾರ್ಖಾನೆಗಳನ್ನು ಯಾಕೆ ಮುಚ್ಚುತ್ತವೆ? ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚಬಾರದು. ಈ ಬಗ್ಗೆ ಸಂಸದರ ಬಳಿ ಮಾತನಾಡುತ್ತೇನೆ ಎಂದು ಗುರೂಜಿ ಹೇಳಿದ್ದಾರೆ.

Published by:Sumanth SN
First published: