ದಾವಣಗೆರೆ: ಕೊಲೆಯಾದವನ ಬೆವರಿನ ವಾಸನೆ ಆಧರಿಸಿ ಆರೋಪಿ ಹಿಡಿದ ತುಂಗಾ ಹೆಸರಿನ ಶ್ವಾನ

ಚಂದ್ರನಾಯ್ಕ ಇತ್ತೀಚೆಗೆ ದಾವಣೆಗೆರೆಯ ಸೂಳೆಕೆರೆ ಗುಡ್ಡದಲ್ಲಿ ಕೊಲೆಯಾಗಿದ್ದ. ಕೊಲೆ ಆರೋಪಿಗಳನ್ನು ಹಿಡಿಯುವುದಕ್ಕೆ ಪೊಲೀಸರು ತಲೆಕೆಡಿಸಿಕೊಂಡಿದ್ದಾಗ ನೆನಪಾಗಿದ್ದೇ ಡಾಗ್ ಸ್ಕ್ವಾಡ್ ನ  ತುಂಗಾ ಎಂಬ ಪೊಲೀಸ್ ನಾಯಿ. ತುಂಗಾ 11 ಕಿ.ಮೀ ಸಂಚರಿಸಿ ನಾಗರಕಟ್ಟೆಯ ನಿವಾಸಿ ಚೇತನ್ ಸೇರಿದಂತೆ ಇತರೆ ಆರೋಪಿಗಳನ್ನು ಹಿಡಿದುಕೊಟ್ಟಿದೆ.

news18-kannada
Updated:July 18, 2020, 12:53 PM IST
ದಾವಣಗೆರೆ: ಕೊಲೆಯಾದವನ ಬೆವರಿನ ವಾಸನೆ ಆಧರಿಸಿ ಆರೋಪಿ ಹಿಡಿದ ತುಂಗಾ ಹೆಸರಿನ ಶ್ವಾನ
ತುಂಗಾ ಶ್ವಾನ
  • Share this:
ದಾವಣೆಗೆರೆ (ಜು.18):  ಕೊಲೆಗಾರನ ಬೆವರಿನ ವಾಸನೆ ಹಿಡಿದು ನಾಯಿಯೊಂದು ಹಂತಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಚನ್ನಗಿರಿ ತಾಲೂಕಿನ ನಾಗರಕಟ್ಟೆ ಗ್ರಾಮದ ಚಂದ್ರನಾಯ್ಕ ಎಂಬ ಯುವಕನ ಕೊಲೆಯಾಗಿತ್ತು. ಈ ಪ್ರಕರಣದ ಆರೋಪಿಯನ್ನು ಹಿಡಿಯಲು ನಾಯಿಯೊಂದು ಯಶಸ್ವಿಯಾಗಿದೆ.

ಚಂದ್ರನಾಯ್ಕ ಇತ್ತೀಚೆಗೆ ದಾವಣೆಗೆರೆಯ ಸೂಳೆಕೆರೆ ಗುಡ್ಡದಲ್ಲಿ ಕೊಲೆಯಾಗಿದ್ದ. ಕೊಲೆ ಆರೋಪಿಗಳನ್ನು ಹಿಡಿಯುವುದಕ್ಕೆ ಪೊಲೀಸರು ತಲೆಕೆಡಿಸಿಕೊಂಡಿದ್ದಾಗ ನೆನಪಾಗಿದ್ದೇ ಡಾಗ್ ಸ್ಕ್ವಾಡ್ ನ  ತುಂಗಾ ಹೆಸರಿನ ಪೊಲೀಸ್ ನಾಯಿ. ತುಂಗಾ 11 ಕಿ.ಮೀ ಸಂಚರಿಸಿ ನಾಗರಕಟ್ಟೆಯ ನಿವಾಸಿ ಚೇತನ್ ಸೇರಿದಂತೆ ಇತರೆ ಆರೋಪಿಗಳನ್ನು ಹಿಡಿದುಕೊಟ್ಟಿದೆ.

ಪತ್ತೆ ಮಾಡಿದ್ದು ಹೀಗೆ:

ಕೊಲೆಯಾಗಿದ್ದವನ ಟೋಪಿಯ ವಾಸನೆಯನ್ನು ಪೊಲೀಸರಿಗೆ ತೋರಿಸಲಾಯಿತು. ತದ ನಂತರ  ಕೊಲೆಯಾಗಿದ್ದ ವ್ಯಕ್ತಿಯ ಬೆವರಿನ ವಾಸನೆ, ಗಾಳಿ ವಾಸನೆ ಹಿಡಿದು ಆರೋಪಿಗಳು ಓಡಾಡಿದ್ದ ಕೆರಬಿಳಚಿ, ಸೋಮಲಾಪುರ, ಸೋಮಲಾಪುರ ತಾಂಡ, ಕಾಶೀಪುರಕ್ಕೆ ನಾಯಿ ಹೋಯಿತು. ತದನಂತರ ಆರೋಪಿಗಳು ಹೋಗಿದ್ದ ಮದ್ಯದಂಗಡಿ, ಹೋಟೆಲ್, ಅಂತಿಮವಾಗಿ ಆರೋಪಿ ವಾಸ್ತವ್ಯ ಹೂಡಿದ್ದ ಮನೆಗೆ ಕರೆದುಕೊಂಡು ಹೋದಾಗ ಆರೋಪಿ ಚೇತನ್ ಸಿಕ್ಕಿಬಿದ್ದಿದ್ದಾನೆ‌.

ಶವ ಪತ್ತೆ ಮಾಡಿದ ನಾಯಿ : ಆರೋಪಿಗಳು ಗುಡ್ಡದಲ್ಲಿ ಹಣಕ್ಕಾಗಿ ಚಂದ್ರನಾಯ್ಕ್ ನನ್ನು ಹತ್ಯೆ ಮಾಡಿ ತೆರಳಿದ್ದ ವೇಳೆ ನಾಯಿ ಚಾನಲ್ ಏರಿ ಮುಖಾಂತರ ಗುಡ್ಡಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿ ಶವ ಪತ್ತೆ ಮಾಡಿದೆ. ತದನಂತರ ಆರೋಪಿಗಳು ಓಡಾಡಿದ್ದ ಜಾಗವನ್ನು ಪತ್ತೆ ಮಾಡಿ, ಕಾಶೀಪುರದಲ್ಲಿದ್ದ ಆರೋಪಿ ಚೇತನ್ ನನ್ನು ಹಿಡಿದುಕೊಡುವಲ್ಲಿ ಯಶಸ್ವಿ ಆಗಿದೆ.

ಅಜ್ಜಿ ಹಬ್ಬ ದಿನ ಕೊಲೆ : ಅಂದು ಅಜ್ಜಿ  ಹಬ್ಬವಾಗಿತ್ತು. ಚಂದ್ರನಾಯ್ಕ್​ನನ್ನು ಆರೋಪಿ ಚೇತನ್ ತನ್ನ ಮನೆಗೆ ಕರೆದುಕೊಂಡು ಹೋಗಿ‌ ಹೋಳಿಗೆ ಊಟ ಹಾಕಿಸಿದ್ದ. ತದನಂತರ ಹಣ ಕೊಡುವುದಾಗಿ ಗುಡ್ಡದಲ್ಲಿ ಕರೆಸಿಕೊಂಡು ಗುಡ್ಡದಲ್ಲಿ ಕೊಲೆ ಮಾಡಿದ್ದರು.

ಪಿಸ್ತೂಲ್ ಬಳಸಿ ಯುವಕನ ಕೊಲೆ: ಧಾರವಾಡದ ಮನೆಯೊಂದರಲ್ಲಿ ಕಳವು ಮಾಡಿದ ಪಿಸ್ತೂಲ್ ಬಳಸಿ ಚಂದ್ರನಾಯ್ಕ್ ನನ್ನು ಕೊಲೆ ಮಾಡಲಾಗಿತ್ತು. ಈ ಪಿಸ್ತೂಲ್ ನನ್ನು ಕಲ್ಲಿನಲ್ಲಿ ಮುಚ್ಚಿಡಲಾಗಿತ್ತು. ಇದನ್ನು ತುಂಗಾ ಪತ್ತೆ ಮಾಡಿತ್ತು. ಈ ಪ್ರಕರಣದಲ್ಲಿ ಮೂರರಿಂದ ನಾಲ್ಕು ಜನ  ಭಾಗಿಯಾಗಿರುವ ಶಂಕೆ ಇದ್ದು. ಅವರ ಪತ್ತೆ ಕಾರ್ಯ ಮುಂದುವರಿದಿದೆ.  ಬಂಧಿತ ಆರೋಪಿಗೆ ಇದೀಗ ತಾನೆ 25 ವರ್ಷ ಆಗಿದೆ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ಹೇಳಿದ್ದಾರೆ.ಕೊಲೆಗೆ ಕಾರಣ ಏನು : ಮೃತ ಚಂದ್ರನಾಯ್ಕ ಆರೋಪಿ ಚೇತನ್‌ಗೆ 1.70 ಲಕ್ಷ ರೂ ಹಣವನ್ನು ಸಾಲವಾಗಿ ನೀಡಬೇಕಿತ್ತು. ಈ ಹಣ ನೀಡುವಂತೆ ಚಂದ್ರನಾಯ್ಕ ಪದೇ ಪದೇ ಕೇಳುತ್ತಿದ್ದ. ಮತ್ತೊಂದೆಡೆ ಆರೋಪಿ ಚೇತನ್ ಕೆಲ ಕಳ್ಳತನ ಕೃತ್ಯಗಳನು ಭಾಗಿಯಾಗಿರುವುದು ಕೂಡ ಚಂದ್ರನಾಯ್ಕನಿಗೆ ತಿಳಿದಿತ್ತು. ಈ ವಿಚಾರವನ್ನು ಪೊಲೀಸರಿಗೆ ಮತ್ತು ಗ್ರಾಮಸ್ಥರಿಗೆ ತಿಳಿಸುವುದಾಗಿ ಚಂದ್ರನಾಯ್ಕ ಹೇಳುತ್ತಿದ್ದ. ಇದರಿಂದ ಬೆದರಿದ ಚೇತನ್ ಮತ್ತು ಇತರರು ಸೂಳೆಕೆರೆ ಗುಡ್ಡದ ಬಳಿಗೆ ಚಂದ್ರನಾಯ್ಕನನ್ನು ಕರೆಯಿಸಿ ಪಿಸ್ತೂಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು.

ತುಂಗಾ ಹಿನ್ನೆಲೆ : ತುಂಗಾ ಡಾಬರ್ ಮನ್ ಹೆಣ್ಣು ನಾಯಿಯಾಗಿದ್ದು, ಒಂಭತ್ತು ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದೆ. ಒಟ್ಟು 4 ಶ್ವಾನಗಳಿದ್ದು ಎರಡನ್ನು ಬಾಂಬ್ ಪತ್ತೆ ದಳಕ್ಕೆ ಮತ್ತೆರಡನ್ನು ಅಪರಾಧ ಪತ್ತೆ ಹಚ್ಚಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಚನ್ನಗಿರಿ ಡಿವೈಎಸ್‌ಪಿ ಪ್ರಶಾಂತ್ ಜಿ. ಮುನ್ನೂಳಿ, ಚನ್ನಗಿರಿ ಸಿಪಿಐ ಆರ್, ಆರ್,ಪಾಟೀಲ, ಡಾಗ್ ಸ್ಕ್ವಾಡ್ ನ ಪ್ರಕಾಶ್, ಪಿಎಸ್‌ಐಗಳಾದ ಎಸ್.ಎಸ್.ಮೇಟಿ, ಭಾರತಿ ಕಂಣವಾಡಿ, ರೂಪ್ಲಿಬಾಯಿ, ಸಿಬ್ಬಂದಿಗಳಾದ ರುದ್ರೇಶ್, ಧರ್ಮಪ್ಪ, ಮಹೇಶ್ ನಾಯ್ಕ, ಮಂಜಾನಾಯ್ಕ, ರವಿಕುಮಾರ್ ಇತರರ ತಂಡ ಯಶಸ್ವಿಯಾಗಿದೆ.
Published by: Rajesh Duggumane
First published: July 18, 2020, 12:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading