HOME » NEWS » State » DOES SIDDARAMAIAH EATS CHICKEN BEFORE INAUGURATE THE TEMPLE IN GADAG GNR

ಮತ್ತೆ ಚಿಕನ್​​​, ಎಗ್​​​, ಮಟನ್​​ ತಿಂದು ದೇವಸ್ಥಾನ ಉದ್ಘಾಟನೆ ಮಾಡಿದ್ರಾ ಸಿದ್ದರಾಮಯ್ಯ?

ಸಿದ್ದರಾಮಯ್ಯ ಹೀಗೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಕೆಲವರು ಕೆಂಡಮಂಡಲರಾಗಿದ್ಧಾರೆ. ಇನ್ನೊಂದೆಡೆ ನಾವು ಕುರುಬ ಸಮಾಜದವರು. ನಮ್ಮಲ್ಲಿ ಮಾಂಸ ತಿನ್ನುವ ಪದ್ದತಿ ಇದೆ. ಅದರಂತೆಯೇ ಸಿದ್ದರಾಮಯ್ಯ ಮಾಂಸ ಸೇವಿಸಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಮಾಡಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎನ್ನುತ್ತಾರೆ ಅದೇ ಗ್ರಾಮದ ಕುರುಬ ಸಮುದಾಯದ ಮುಖಂಡರು. 

news18-kannada
Updated:January 28, 2020, 8:29 PM IST
ಮತ್ತೆ ಚಿಕನ್​​​, ಎಗ್​​​, ಮಟನ್​​ ತಿಂದು ದೇವಸ್ಥಾನ ಉದ್ಘಾಟನೆ ಮಾಡಿದ್ರಾ ಸಿದ್ದರಾಮಯ್ಯ?
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಗದಗ(ಜ.28): ಚಿಕನ್​, ಎಗ್​​​, ಮಟನ್​​​ ತಿಂದು ಮಾಜಿ ಸಿಎಂ ಸಿದ್ದರಾಮಯ್ಯ ದೇವಸ್ಥಾನ ಲೋಕಾರ್ಪಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಧರ್ಮಸ್ಥಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾಂಸಹಾರ ಸೇವಿಸಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗಿದ್ದ ವಿಚಾರ ಭಾರೀ ವಿವಾದಕ್ಕೀಡಾಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಚಿಕನ್​​ ಮತ್ತು ಮಟನ್​​ ಸೇವಿಸಿ ದೇವಸ್ಥಾನ ಉದ್ಘಾಟನೆ ಮಾಡಿದ್ಧಾರೆ ಎಂಬ ಆಪಾದನೆ ಇದೆ. ಹಾಗಾಗಿಯೇ ಈ ವಿಚಾರದ ಸುತ್ತ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಹೌದು, ಸೋಮವಾರ ಸಿದ್ದರಾಮಯ್ಯ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಿದರು. ಇಲ್ಲಿನ ವೇದಿಕೆಯನ್ನುದ್ದೇಶಿಸಿ ಮಾತಾಡಿದ ಬಳಿಕ ಸಿದ್ದರಾಮಯ್ಯ ಕೆಲಕಾಲ ದೇವಸ್ಥಾನದ ಬಳಿಯೇ ಸಮಯ ಕಳೆದರು. ಅದಾದ ಕೆಲವೇ ಹೊತ್ತಲ್ಲಿ ಸಿದ್ದರಾಮಯ್ಯ ಎಡವಟ್ಟು ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ.

ದೇವಸ್ಥಾನ ಲೋಕಾರ್ಪಣೆಗೂ ಮುನ್ನ ಸಿಂಗಟಾಲೂರು ಗ್ರಾಮಪಂಚಾಯತಿ ಅಧ್ಯಕ್ಷ ಮಂಜುನಾಥ್ ಮನೆಯಲ್ಲಿ ಸಿದ್ದರಾಮಯ್ಯ ಭರ್ಜರಿ ಬಾಡೂಟ ಸವೆದರು. ಬಾಡುವ ಸವಿದು ದೇವಸ್ಥಾನ ಲೋಕಾರ್ಪಣೆ ಮಾಡಿದರು ಎಂಬ ಆರೋಪ ಸಿದ್ದರಾಮಯ್ಯ ಮೇಲಿದೆ. ಸಿದ್ದರಾಮಯ್ಯ ಬಾಡೂಟ ಮಾಡುವ ವೇಳೆ ಶಾಸಕ ಪಿ. ಟಿ ಪರಮೇಶ್ವರ ನಾಯಕ್, ಮಾಜಿ ಶಾಸಕರಾದ ಜಿ. ಎಸ್ ಪಾಟೀಲ್, ರಾಮಕೃಷ್ಣ ದೊಡ್ಡಮನಿ, ಶಾಸಕ ರಾಘವೇಂದ್ರ ಹಿಟ್ನಾಳ್, ಸಲೀಂ ಅಹಮದ್ ಕೂಡ ಜೊತೆಯಲ್ಲೇ ಇದ್ದರು ಎನ್ನಲಾಗುತ್ತಿದೆ. ಇವರು ಸಿದ್ದರಾಮಯ್ಯ ಜೊತೆಗೆ ಮಾಂಸಹಾರ ಸೇವಿಸಿದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮ್ಯೂಸಿಕಲ್ ಚೇರ್​ನಂತಾಯ್ತು ಸಂಪುಟ ವಿಸ್ತರಣೆ ಆಟ: ಯಡಿಯೂರಪ್ಪ ವಿಲವಿಲ ಒದ್ದಾಟ

ಸಿದ್ದರಾಮಯ್ಯ ಹೀಗೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಕೆಲವರು ಕೆಂಡಮಂಡಲರಾಗಿದ್ಧಾರೆ. ಇನ್ನೊಂದೆಡೆ ನಾವು ಕುರುಬ ಸಮಾಜದವರು. ನಮ್ಮಲ್ಲಿ ಮಾಂಸ ತಿನ್ನುವ ಪದ್ದತಿ ಇದೆ. ಅದರಂತೆಯೇ ಸಿದ್ದರಾಮಯ್ಯ ಮಾಂಸ ಸೇವಿಸಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಮಾಡಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎನ್ನುತ್ತಾರೆ ಅದೇ ಗ್ರಾಮದ ಕುರುಬ ಸಮುದಾಯದ ಮುಖಂಡರು.

ಸಿದ್ದರಾಮಯ್ಯ ಹುಟ್ಟು ಮಾಂಸಾಹಾರಿಗಳು. ಹಾಗಾಗಿಯೇ ಮಾಂಸ ಸೇವನೆ ಮಾಡಿಯೇ ಸಿದ್ದರಾಮಯ್ಯ ದೇವಸ್ಥಾನ ಉದ್ಘಾಟನೆ ಮಾಡಿದ್ದಾರೆ. ಈ ಬಗ್ಗೆ ನಮಗೇನು ಅಸಮಾಧಾನ ಇಲ್ಲ. ಅಷ್ಟಕ್ಕೂ ಸಿದ್ದರಾಮಯ್ಯ ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಿಲ್ಲ. ಹೊರಗಿನಿಂದಲೇ ದೇವಸ್ಥಾನ ಲೋಕಾರ್ಪಣೆ ಮಾಡಿದರು ಎಂದು ಸಿದ್ದರಾಮಯ್ಯ ಪರ ಕುರುಬ ಸಮಾಜದ ಭಾಂದವರು ಬ್ಯಾಟ್​​ ಮಾಡಿದ್ದಾರೆ.

(ವರದಿ: ಸಂತೋಷ ಕೊಣ್ಣೂರ)
Youtube Video
First published: January 28, 2020, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories