HOME » NEWS » State » DODDABALLAPUR POLICE DENIED 380 GANJA AND 70 ACCUSED LG

ಡ್ರಗ್ಸ್ ವಿರುದ್ಧ ದೊಡ್ಡಬಳ್ಳಾಪುರ ಪೊಲೀಸರ ಸಮರ; 380 ಕೆ.ಜಿ ಗಾಂಜಾ ಮತ್ತು 70 ಆರೋಪಿಗಳ ವಶ

ಇದುವರೆಗೂ ಸುಮಾರು 380 ಕೆ.ಜಿ ಗಾಂಜಾ ವಶಕ್ಕೆ ಪಡೆದಿರುವ ಗ್ರಾಮಾಂತರ ಪೊಲೀಸರು 70 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

news18-kannada
Updated:September 29, 2020, 2:23 PM IST
ಡ್ರಗ್ಸ್ ವಿರುದ್ಧ ದೊಡ್ಡಬಳ್ಳಾಪುರ ಪೊಲೀಸರ ಸಮರ; 380 ಕೆ.ಜಿ ಗಾಂಜಾ ಮತ್ತು 70 ಆರೋಪಿಗಳ ವಶ
ಗಾಂಜಾ ವಶಪಡಿಸಿಕೊಳ್ಳುತ್ತಿರುವ ಪೊಲೀಸರು
  • Share this:
ದೊಡ್ಡಬಳ್ಳಾಪುರ(ಸೆ.29): ಡ್ರಗ್ಸ್  ವಿರುದ್ಧ  ಸಮರ ಸಾರಿರುವ  ದೊಡ್ಡಬಳ್ಳಾಪುರ  ಪೊಲೀಸರು  ಮಾದಕ ವಸ್ತುಗಳ ಕಳ್ಳಸಾಗಾಣಿಕೆಗೆ ಕಡಿವಾಣ  ಹಾಕಲು ವಾಹನಗಳ ತಪಾಸಣೆ  ಸೇರಿದಂತೆ, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಸ್ಯಾಂಡಲ್​​ವುಡ್ ನಲ್ಲಿ   ಡ್ರಗ್ಸ್  ದಂಧೆ ಬೆಳಕಿಗೆ ಬಂದ ಹಿನ್ನೆಲೆ ಡ್ರಗ್ಸ್  ದಂಧೆಗೆ  ಕಡಿವಾಣ  ಹಾಕಲು  ರಾಜ್ಯ  ಸರ್ಕಾರ ನಿರ್ಧಾರ  ಮಾಡಿದ್ದು, ಡ್ರಗ್ಸ್  ವಿರುದ್ದ ವಾರ್ ಕಾರ್ಯಚರಣೆ  ನಡೆಸಿದೆ.   ಇದರ ಅಂಗವಾಗಿ ದೊಡ್ಡಬಳ್ಳಾಪುರ  ಉಪ ವಿಭಾಗದ  ಪೊಲೀಸರು  ಡಿವೈಎಸ್ಪಿ  ರಂಗಪ್ಪ  ನೇತೃತ್ವದಲ್ಲಿ  ವಾಹನಗಳ ತಪಾಸಣೆ  ತಪಾಸಣೆ  ನಡೆಸಿದರು. ಇದುವರೆಗೂ ಸುಮಾರು 380 ಕೆ.ಜಿ ಗಾಂಜಾ ವಶಕ್ಕೆ ಪಡೆದಿರುವ ಗ್ರಾಮಾಂತರ ಪೊಲೀಸರು 70 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರ  ನಗರದ ಡೈರಿ ಸರ್ಕಲ್  ನಲ್ಲಿ ವಾಹನಗಳ ಡಿಕ್ಕಿ, ಸೀಟ್ ಸೇರಿದಂತೆ  ಕೂಲಂಕುಷವಾಗಿ ವಾಹನಗಳ ತಪಾಸಣೆ ನಡೆಸಿದರು. ಕಳ್ಳ ಸಾಕಾಣಿಕೆಯ ಮೂಲಕ ಮಾದಕ ವಸ್ತುಗಳು ವ್ಯಸನಿಗಳ  ಕೈ ಸೇರುತ್ತಿದೆ. ವಾಹನಗಳ  ತಪಾಸಣೆ  ಕಾರ್ಯಾಚರಣೆ ನಡೆಸಿ ಮಾದಕ ವಸ್ತುಗಳ ವಿರುದ್ಧ ಸಮರ ನಡೆಸಿದರು.

ಇದೇ ಸಮಯದಲ್ಲಿ ಡಿಎಲ್,  ಹೆಲ್ಮೆಟ್,  ಮಾಸ್ಕ್  ಧರಿಸದ ವಾಹನ ಸವಾರರಿಗೆ  ದಂಡ ವಿಧಿಸಿದರು. ದೇವನಹಳ್ಳಿ, ವಿಜಯಪುರ, ಹೊಸಕೋಟೆ, ದಾಬಸ್​ ಪೇಟೆ ರಸ್ತೆಗಳಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಾಹನಗಳ  ತಪಾಸಣೆ  ಕಾರ್ಯಾಚರಣೆ  ಮುನ್ನ ಮಾದಕ ವಸ್ತು ವಿರುದ್ದ ಸಮರ ಕುರಿತಂತೆ ನಗರದ ನಗರದ ಬಸವ ಭವನದಲ್ಲಿ  ಸಭೆ ಮಾಡಲಾಗಿತು. ಪೊಲೀಸ್ ಇಲಾಖೆ ಆಯೋಜಿಸಿದ್ದ ಸಭೆಯಲ್ಲಿ   ಹೋಟೆಲ್, ಬಾರ್, ರೆಸಾರ್ಟ್, ರೆಸ್ಟೋರೆಂಟ್, ಲಾಡ್ಜ್  ಮಾಲೀಕರು  ಭಾಗವಹಿಸಿದ್ದರು. ಮಾಲೀಕರುಗಳಿಗೆ ಸಭೆಯಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ನಾಳೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ; ಅಡ್ವಾಣಿ, ಜೋಶಿ ಭವಿಷ್ಯ ನಿರ್ಧಾರ

ಸಭೆಯಲ್ಲಿ ಮಾತನಾಡಿದ  ಡಿವೈ ಎಸ್ಪಿ ಟಿ.ರಂಗಪ್ಪ ಡ್ರಗ್ಸ್  ದಂಧೆ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಸಂಪೂರ್ಣ ಸಿದ್ದವಾಗಿದೆ. ಮಾದಕ ವಸ್ತು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಎನ್‌ಡಿಪಿಎಸ್‌ ಕಾಯಿದೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಮಾಡುವವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ನಿಯಂತ್ರಿಸಲು ಮಾದಕ ವಸ್ತುಗಳನ್ನು ಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

ಮಾದಕ ವಸ್ತುಗಳಾದ ಗಾಂಜಾ, ಅಫೀಮು, ಚರಸ್ ಮತ್ತಿತರ ಪ್ರಜ್ಞೆ ತಪ್ಪಿಸುವಂತಹ ಆರೋಗ್ಯಕ್ಕೆ ಮಾರಕವಾಗುವಂತಹ ಚಟುವಟಿಕೆಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು, ಹಾಗೇನಾದರೂ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ನಂತರ ಮಾತನಾಡಿದ  ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಬರಲಿರುವ ಹೊಸ ವರ್ಷದ ಆಚರಣೆ ಸಂಪೂರ್ಣ ನಿಷೇಧವಿರಲಿದೆ, ರೆಸಾರ್ಟ್, ರೆಸ್ಟೋರೆಂಟ್ಗಳು ಯಾವುದೇ ಬುಕಿಂಗ್ ಮತ್ತಿತರ ಚಟುವಟಿಕೆ ನಡೆಸಬಾರದು. ನಂದಿ ವ್ಯಾಪ್ತಿಯಲ್ಲಿ ರೆಸ್ಟಾರ್ಟ್ ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿದ್ದು, ಅಲ್ಲಿನ ರೆಸ್ಟೋರೆಂಟ್, ರೆಸಾರ್ಟ್‌ಗಳ ಸಿಸಿ ಟಿವಿ ಆನ್ಲೈನ್ ಸಂಪರ್ಕ ಪೊಲೀಸ್ ಠಾಣೆಗೆ ಕಲ್ಪಿಸಿಕೊಂಡು‌ ನಿಗಾವಹಿಸಲಾಗುವುದೆಂದರು.
ನಿನ್ನೆ ಸಹ ವಾಹನಗಳ ತಪಾಸಣೆ ವೇಳೆ ದೇವನಹಳ್ಳಿ ಹೊರವಲಯದ ವಿಜಯಪುರ ವೃತ್ತದಲ್ಲಿ ಸುಮಾರು 43 ಕೆ.ಜಿ ಗಾಂಜ ಪತ್ತೆಯಾಗಿದ್ದು, ಇನ್ನು ಮುಂದೆ ದಿನಂಪ್ರತಿ ಕಾರ್ಯಾಚರಣೆ ಮುಂದುವರೆಯಲಿದೆ. ಪ್ರತಿದಿನ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Published by: Latha CG
First published: September 29, 2020, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories