ದೊಡ್ಡಬಳ್ಳಾಪುರದಲ್ಲಿ 4 ವರ್ಷದ ಮಗುವಿನ ಕೆನ್ನೆ ಕಚ್ಚಿದ ವ್ಯಕ್ತಿಗೆ ಸ್ಥಳೀಯರಿಂದ ಗೂಸಾ

ನಾಗರಾಜ್ ಎಂಬ 30 ವರ್ಷದ ವ್ಯಕ್ತಿ ಕೂಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದ. ಮಹಿಳೆ ಮನೆಯಲ್ಲಿ ಇಲ್ಲದ ವೇಳೆ ಆಕೆಯ ಮಗುವಿನ ಮೇಲೆ ಹಲ್ಲೆ ನಡೆಸಿರುವ ನಾಗರಾಜ್ 4 ವರ್ಷದ ಮಗುವಿನ ಕೆನ್ನೆ, ಕೈ, ಭುಜಕ್ಕೆ ಕಚ್ಚಿ ಗಾಯಗೊಳಿಸಿದ್ದಾನೆ.

news18-kannada
Updated:January 12, 2020, 11:11 AM IST
ದೊಡ್ಡಬಳ್ಳಾಪುರದಲ್ಲಿ 4 ವರ್ಷದ ಮಗುವಿನ ಕೆನ್ನೆ ಕಚ್ಚಿದ ವ್ಯಕ್ತಿಗೆ ಸ್ಥಳೀಯರಿಂದ ಗೂಸಾ
ಸಾಂದರ್ಭಿಕ ಚಿತ್ರ
  • Share this:
ದೊಡ್ಡಬಳ್ಳಾಪುರ (ಜ. 12): ಮನೆಯವರ ಜೊತೆ ಪರಿಚಯ ಮಾಡಿಕೊಂಡ ವ್ಯಕ್ತಿಯೋರ್ವ ಮಗುವಿನ ಮುಖಕ್ಕೆ ಕಚ್ಚಿ, ದೈಹಿಕ ಹಲ್ಲೆ ನಡೆಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಯಳ್ಳುಪುರ ಎಂಬ ಗ್ರಾಮದಲ್ಲಿ ನಡೆದಿದೆ.

ನಾಗರಾಜ್ ಎಂಬ 30 ವರ್ಷದ ವ್ಯಕ್ತಿ ಕೂಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದ. ಆಗಾಗ ಆಕೆಯ ಮನೆಗೂ ಬಂದು ಹೋಗುತ್ತಿದ್ದ. ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಆ ಮಹಿಳೆ ಮನೆಯಲ್ಲಿ ಇಲ್ಲದ ವೇಳೆ ಆಕೆಯ ಮಗುವಿನ ಮೇಲೆ ಹಲ್ಲೆ ನಡೆಸಿರುವ ನಾಗರಾಜ್ 4 ವರ್ಷದ ಮಗುವಿನ ಕೆನ್ನೆ, ಕೈ, ಭುಜಕ್ಕೆ ಕಚ್ಚಿ ಗಾಯಗೊಳಿಸಿದ್ದಾನೆ. ಪರಿಚಯಸ್ಥ ಎಂದು ಮನೆಯೊಳಗೆ ಬಿಟ್ಟುಕೊಂಡ ತಪ್ಪಿಗೆ ಆ ಮಹಿಳೆಯ ಮಗುವಿನ ಮೇಲೇ ದೈಹಿಕ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: ಪ್ರೇಯಸಿಯ ಕತ್ತು ಸೀಳಿ ಬರ್ಬರ ಹತ್ಯೆ; ಪ್ರಿಯಕರನ ರೂಮಿಗೆ ಹೋದ ಯುವತಿಯ ದುರಂತ ಅಂತ್ಯ

ಮೈಮೇಲೆ ಹಲ್ಲೆ ಮಾಡುತ್ತಿದ್ದಂತೆ ಮಗು ಜೋರಾಗಿ ಕಿರುಚಿಕೊಂಡಿದೆ. ಆಗ ಓಡಿಬಂದ ತಾಯಿ ಮತ್ತು ಅಕ್ಕಪಕ್ಕದ ಮನೆಯವರಿಗೆ ಮಗುವಿನ ಮೈಮೇಲೆ ಗಾಯಗಳಾಗಿರುವುದು ಗೊತ್ತಾಗಿದೆ. ಮಗು ಸರಿಯಾಗಿ ಓದುತ್ತಿರಲಿಲ್ಲ ಅದಕ್ಕೆ ಹೀಗೆ ಮಾಡಿದೆ ಎಂದು ನಾಗರಾಜ್ ಹೇಳಿಕೊಂಡಿದ್ದಾನೆ. ಆತನ ಮಾತನ್ನು ಒಪ್ಪದ ಅಕ್ಕಪಕ್ಕದ ಮನೆಯವರು ಸರಿಯಾಗಿ ಥಳಿಸಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

(ವರದಿ: ನವೀನ್)
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ