KSRTC Employees Strike: ಸಾಯುವಾಗ ಸರ್ಕಾರಿ ನೌಕರರಾಗಿಯೇ ಸಾಯುತ್ತೇವೆ; ಸಾರಿಗೆ ನೌಕರ ಆಕ್ರೋಶ

KSRTC Employees Strike: ಸಾರಿಗೆ ನೌಕರರ ಮುಷ್ಕರ ಭುಗಿಲೆದ್ದಿದ್ದು, ದೊಡ್ಡಬಳ್ಳಾಪುರದ ಸಾರಿಗೆ ನೌಕರರು ಪ್ರತಿಭಟನಾ ಮೆರವಣಿಗೆ  ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರದಲ್ಲಿ ಸಾರಿಗೆ ನೌಕರರ ಮುಷ್ಕರ

ದೊಡ್ಡಬಳ್ಳಾಪುರದಲ್ಲಿ ಸಾರಿಗೆ ನೌಕರರ ಮುಷ್ಕರ

  • Share this:
ದೊಡ್ಡಬಳ್ಳಾಪುರ (ಡಿ.14): ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲವೆಂದು  ಹೇಳಿದ್ದರಿಂದ  ಅಕ್ರೋಶಗೊಂಡ  ಸಾರಿಗೆ ನೌಕರ ಸಚಿವರ ವಿರುದ್ಧ ಏಕವಚನದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಸತ್ತರೆ ಸರ್ಕಾರಿ ನೌಕರರಾಗಿ ಸಾಯುತ್ತೇವೆ ಎಂದು ಅವರು ಹೇಳಿದ್ದಾರೆ. ಸಾರಿಗೆ ನೌಕರರನ್ನು ಸರ್ಕಾರಿ  ನೌಕರರನ್ನಾಗಿ  ಮಾಡುವಂತೆ ಒತ್ತಾಯಿಸಿ ಬಿಎಂಟಿಸಿ  ಮತ್ತು  ಕೆಎಸ್​ಆರ್​ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ.  ಸಾರಿಗೆ ನೌಕರರ ಮುಷ್ಕರ ಭುಗಿಲೆದ್ದಿದ್ದು, ದೊಡ್ಡಬಳ್ಳಾಪುರದ ಸಾರಿಗೆ ನೌಕರರು ಪ್ರತಿಭಟನಾ ಮೆರವಣಿಗೆ  ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರ ನಗರದ ಕೆಎಸ್ಆರ್​ಟಿಸಿ ಬಸ್ ಡಿಪೋ ದಿಂದ ಎಪಿಎಂಸಿ  ಮಾರುಕಟ್ಟೆವರೆಗೂ ಪ್ರತಿಭಟನೆ ನಡೆಸಿದ  ಸಾರಿಗೆ ನೌಕರರು ಸರ್ಕಾರದ ವಿರುದ್ಧ  ತಮ್ಮ  ಅಕ್ರೋಶ  ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ರಾಮು ಎಂಬ ನೌಕರ ಸಾರಿಗೆ ಸಚಿವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಾಯೋವಾಗ ಸರ್ಕಾರಿ ನೌಕರರಾಗೇ ಸಾಯುತ್ತೇವೆ, ಸರ್ಕಾರಿ ನೌಕರರನ್ನಾಗಿ  ಮಾಡುವವರೆಗೂ ಉಪವಾಸ ಸತ್ಯಾಗ್ರಹ ಮಾಡುತ್ತೇವೆ.   ಕುಟುಂಬದವರೊಂದಿಗೆ ಡಿಪೋ ಮುಂದೆ ಪ್ರತಿಭಟನೆ ಮಾಡುತ್ತೇವೆ.  ನಾವು ಗೆಲ್ಲುತ್ತೇವಾ ಅಥವಾ  ನಿನ್ನ ಆದೇಶ ಗೆಲ್ಲುತ್ತಾ ನೋಡೋಣ ಎಂದು ಸಾರಿಗೆ ಸಚಿವರಿಗೆ ಓಪನ್ ಚಾಲೆಂಜ್  ಹಾಕಿದರು.

ಸಾರಿಗೆ ಸಚಿವ ಕಾರ್ಮಿಕರೆಂದರೆ ಏನಂತ  ತಿಳಿದುಕೊಂಡಿದ್ದಾನೆ, ಮೂರು ದಿನದಿಂದ ಕೇಳುತ್ತಿದ್ದೇವೆ. ಅವನು ಮಾಡಲ್ಲ, ಮಾಡಲ್ಲ ಅಂತಿದ್ದಾನೆ.  ನೆರೆ ರಾಜ್ಯ ಆಂಧ್ರ  ಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ  ನೌಕರರನ್ನಾಗಿ ಹೇಗೆ ಮಾಡಿದರು?  ಬೇರೆ ರಾಜ್ಯದಲ್ಲಿ ಬಸ್​ಗಳು ಖಾಲಿ ಓಡಾಡುತ್ತಿವೆ. ನಾವು ಸ್ಟಾಂಡಿಂಗ್ ನಲ್ಲಿ ನಡೆಸುತ್ತಿದ್ದೇವೆ  ದೇಶದಲ್ಲೇ ನಮ್ಮ ಸಾರಿಗೆ ಮೊದಲನೇ ಸ್ಥಾನದಲ್ಲಿದೆ. ಅಧಿಕಾರಿಗಳಿಂದ ನಷ್ಟವಾಗಿದೆಯೇ  ಹೊರತು, ನೌಕರರಿಂದ ಸಾರಿಗೆಗೆ ನಷ್ಟ ಆಗಿಲ್ಲ. ಸವದಿ ನಮ್ಮ ಬೇಡಿಕೆಯನ್ನು ಈಡೇರಿಸೋಕೆ ಆಗಲ್ಲ ಅಂತ ಹೇಳಿದ್ದಾನೆ, ನಾವು ಬಿಡಲು ಆದೋದಿಲ್ಲ. ಸಂಸಾರ ಸಮೇತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಸಾರಿಗೆ ನೌಕರ ಸವಾಲ್  ಹಾಕಿದ್ದಾರೆ.
Published by:Sushma Chakre
First published: