ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿಲ್ಲ ವೈದ್ಯರು : ದಂತ  ವೈದ್ಯರೇ ಇಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡ್ತಾರೆ...!

news18
Updated:September 2, 2018, 6:38 PM IST
ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿಲ್ಲ ವೈದ್ಯರು : ದಂತ  ವೈದ್ಯರೇ ಇಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡ್ತಾರೆ...!
news18
Updated: September 2, 2018, 6:38 PM IST
-  ಶರಣು ಹಂಪಿ, ನ್ಯೂಸ್ 18 ಕನ್ನಡ 

ಬಳ್ಳಾರಿ (ಸೆ. 02)  : ಸರಕಾರಿ ಆಸ್ಪತ್ರೆಗಳು ಎಂದರೆ ಸಾಕು ಅಲ್ಲಿಯ ಅವ್ಯವಸ್ಥೆ ಕಣ್ಣೆದುರಿಗೆ ಬರುತ್ತೆ. ಆದರೆ ಗಣಿನಾಡು ಆಸ್ಪತ್ರೆಗೆ ಎಲ್ಲಿಲ್ಲಿದ ಡಿಮ್ಯಾಂಡ್. ಹಾಗಂತ ಇಲ್ಲಿ ಯಾವಾಗಲೂ ವೈದ್ಯರು ಸಿಗುತ್ತಾರೆ ಎಂದುಕೊಳ್ಳಬೇಡಿ. ವಾರಕ್ಕೊಮ್ಮೆ ಬರುವ ಪ್ರಸೂತಿ ಒಬ್ಬ ವೈದ್ಯರಿಗೆ ಎಲ್ಲಿಲ್ಲಿದ ಡಿಮ್ಯಾಂಡ್! ರಾತ್ರಿಯಿಡಿ ಕ್ಯೂ ನಿಂತು ನೂಕುನುಗ್ಗಲಿನಲ್ಲಿ ಚಿಕಿತ್ಸೆ ಪಡೆಯಬೇಕು. ಉಳಿದ ದಿನಗಳಲ್ಲಿಯೇ ಎಂಬಿಬಿಎಸ್ ಮಾಡದ ದಂತ ವೈದ್ಯರು, ಆಯುಷ್ ವೈದ್ಯರೇ ಗರ್ಭಿಣಿ ಮಹಿಳೆಯರಿಗೆ ಚಿಕಿತ್ಸೆ ನೀಡುವ ಡೆಂಜರ್ ಆಸ್ಪತ್ರೆಯಿದು. ಹಾಗಾದ್ರೆ ಯಾವುದು ಆಸ್ಪತ್ರೆ ಗೊತ್ತಾ? ಈ ಸ್ಟೋರಿ ಓದಿ.

ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಧ್ಯ ರಾತ್ರಿಯಿಂದಲೇ ಕ್ಯೂ ನಿಂತು ಹೀಗೆ ನೂಕುನುಗ್ಗಲಿನಲ್ಲಿ ಭಾಗಿಯಾದ್ರೆ ಮಾತ್ರ ಗರ್ಭಿಣಿಯರಿಗೆ ಚಿಕಿತ್ಸೆ ಸಿಗುತ್ತೆ. ಪ್ರತಿ ಬುಧವಾರದಂದು ಗರ್ಭಿಣಿಯರಿಗೆ ಸಂಡೂರಿನಿಂದ ಬರುವ ನುರಿತ ಪ್ರಸೂತಿ ತಜ್ಞರಿಂದ ತಪಾಸಣೆ ಮಾಡಲಾಗುತ್ತೆ. ಆದ್ರೆ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರು ಇರೋದ್ರಿಂದ ಗರ್ಭಿಣಿಯರು ಚಿಕಿತ್ಸೆಗಾಗಿ ಇಷ್ಟೊಂದು ಸರ್ಕಸ್ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ

ಜನಸಂಖ್ಯೆಗೆ ಅನುಗುಣವಾಗಿ, ಇಲ್ಲಿ ವೈದ್ಯರಿಲ್ಲ..!

ಸಂಡೂರು ತಾಲೂಕಿನ ತೋರಣಗಲ್ ಪಟ್ಟಣ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ಜಿಂದಾಲ್ ನ ಬೃಹತ್ ಕಾರ್ಖಾನೆಯಿರುವ ಹಿನ್ನೆಲೆಯಲ್ಲಿ ಹೆಚ್ಚಿರುವ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರು ಹುದ್ದೆಗಳು ಖಾಲಿಯಿವೆ. ಇರುವ ಡೆಪುಟೇಷನ್ ಮೇಲೆ ಬರುವ ಪ್ರಸೂತಿ ಓರ್ವ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಪ್ರತಿ ಬುಧುವಾರದಂದು ಮಹಿಳೆಯರು ಚಿಕಿತ್ಸೆ ಪಡೆಯಲು ಸಾಕಷ್ಟು ಕಷ್ಟಪಡುತ್ತಾರೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಕ್ಯೂ ನಿಂತು ಟೋಕನ್ ಪಡೆಯಲು ಗರ್ಭಿಣಿ ಮಹಿಳೆಯರು ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಹರಸಾಹಸ ಮಾಡ್ತಾರೆ.

ದಂತ  ವೈದ್ಯರೇ ಇಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡ್ತಾರೆ...!

ಉಳಿದ ದಿನಗಳಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಸಹ ಮಾಡದ ದಂತ ಹಾಗೂ ಆಯುಷ್ ವೈದ್ಯರೇ ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚು ದುಡ್ಡು ತೆತ್ತು ಖಾಸಗಿ ಆಸ್ಪತ್ರೆಗೆ ಹೋಗದವರು ದಂತ ಹಾಗೂ ಆಯುಷ್ ವೈದ್ಯರ ಬಳಿಯೇ ಗರ್ಭಿಣಿಯರು, ಮಹಿಳಾಮಣಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸರಕಾರಿ ಆಸ್ಪತ್ರೆಯ ಡಾ. ಗೋಪಾಲ್ ರಾವ್ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
Loading...

ಮನವಿಗೂ ಸ್ಪಂದಿಸದ ಅಧಿಕಾರಿಗಳು.!

ತೋರಣಗಲ್ ಸರ್ಕಾರಿ ಆಸ್ಪತ್ರೆಗೆ ಹೆರಿಗೆ ವೈದ್ಯರನ್ನ ನೀಡಿ ಎಂದು ಗ್ರಾಮಸ್ಥರು ಕಂಡ ಕಂಡ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಉಪಯೋಗವಾಗಿದ್ದಿಲ್ಲ. ನೂತನ ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ್ ಅವರ ಗಮನಕ್ಕೆ ಬರುತ್ತಿದ್ದಂತೆ ಗೈನಾಕಾಲಜಿಸ್ಟ್ ವೈದ್ಯರೊಬ್ಬರನ್ನು ತೋರಣಗಲ್ ಸರಕಾರಿ ಆಸ್ಪತ್ರೆಗೆ ನಿಯೋಜನೆ ಮಾಡಲಾಗಿದೆ. ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸಲಾಗುವುದು ಎಂದು ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ