ಬೆಂಗಳೂರು: ಜ್ವರ (Fever) ಬಂದಿತ್ತು ಅಂತ ಆಸ್ಪತ್ರೆಗೆ ಆಡ್ಮಿಟ್ ಆದ ಯುವಕ (Youth) ಮಸಣ ಸೇರಿರುವ ಘಟನೆ ಬೆಂಗಳೂರಿನ (Bengaluru) ರಾಮಮೂರ್ತಿ ನಗರದಲ್ಲಿ (Ramamurthy Nagar ) ನಡೆದಿದೆ. ಮೃತ ಯುವಕನನ್ನು 25 ವರ್ಷದ ವಿಜೇತ್ ಎಂದು ಗುರುತಿಸಲಾಗಿದೆ. ಈ ನಡುವೆ ಯುವಕ ಸಾವಿಗೆ ಆಸ್ಪತ್ರೆಯ (Hospital) ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಜ್ವರ ಬಂದಿದ್ದ ಕಾರಣ ವಿಜೇತ್ ಕ್ಲಿನಿಕ್ಗೆ ತೆರಳಿ ಇಂಜೆಕ್ಷನ್ ಪಡೆದುಕೊಂಡಿದ್ದ, ಆದರೆ ಇಂಜೆಕ್ಷನ್ (Injection) ಪಡೆದ ಬಳಿಕ ವಿಜೇತ್ಗೆ ಸೆಪ್ಟಿಕ್ ಆಗಿತ್ತಂತೆ. ಈ ಹಿನ್ನೆಲೆಯಲ್ಲಿ ಆತನ ರಾಮಮೂರ್ತಿ ನಗರದ ಕೋಶಿಸ್ ಆಸ್ಪತ್ರೆಗೆ ದಾಖಲಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಈ ವೇಳೆ ವೈದ್ಯರು (Doctor) ಜ್ವರ ಅಂತ ಹೋದ ಯುವಕನಿಗೆ ಸರ್ಜರಿ ಆಗಬೇಕು ಅಂತ ಸಲಹೆ ನೀಡಿದ್ದರಂತೆ. ಸರ್ಜರಿ ವೇಳೆ ತೀವ್ರ ರಕ್ತಸ್ರಾವ (Bleeding) ಹೆಚ್ಚಾಗಿತ್ತಂತೆ. ಈ ವೇಳೆ ರಕ್ತ ತರುವಂತೆ ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದರು. ಆದರೆ ರಕ್ತ ಹಾಕುವ ವೇಳೆ ಯುವಕನಿಗೆ ಕಾರ್ಡಿಯಾ ಅರೆಸ್ಟ್ ಆಗಿ ಯುವಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರಂತೆ.
ಇನ್ನು, ತಮ್ಮ ಮಗನ ಸಾವಿಗೆ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಮೃತ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕ ಇಂಜೆಕ್ಷನ್ ಇಂದ ಈಗ ಎಲ್ಲಾ ಯಡವಟ್ಟು ಆಗಿದೆ. ಈ ಖಾಸಗಿ ಆಸ್ಪತ್ರೆಯಲ್ಲಿ ಸಾಕಷ್ಟು ಈ ತರಹದ ಕೇಸ್ ನಡೆದಿದೆ. ಇನ್ಮುಂದೆ ಯಾರಿಗೂ ಈ ತರಹ ಪರಿಸ್ಥಿತಿ ಬರಬಾರದು ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
23ರಂದು ಘಟನೆ ನಡೆದಿದ್ದು, ಒಂದು ಕ್ಲಿನಿಕ್ ಅಲ್ಲಿ ಜ್ವರ ಅಂತ ಇಂಜೆಕ್ಷನ್ ತಗೊಂಡಿದ್ದಾನೆ. ಅದಾದ ಮೇಲೆ ಆತನಿಗೆ ಮೈ ತುಂಬಾ ಬೆವರು ಹೆಚ್ಚಾಗಿದೆ. ಆಗ ನೋವು ತಡೆದು ಕೊಳ್ಳಲು ಆಗದೇ ಯುವಕನನ್ನು ಆಸ್ಪತ್ರೆ ದಾಖಲು ಮಾಡಲಾಗಿತ್ತು.
ಮೊದಲು ಮೈನರ್ ಸರ್ಜರಿ ಅಂತ ಆಸ್ಪತ್ರೆಯವರು ದಾಖಲು ಮಾಡಿಕೊಂಡರು. ಆಮೇಲೆ ರಾತ್ರಿ 10:30ರ ಸುಮಾರಿಗೆ ರಕ್ತಸ್ರಾವ ಹೆಚ್ಚಾಗಿದೆ. ಬೆಳಗ್ಗೆ 7:30ರವರೆಗೂ ರಕ್ತಸ್ರಾವ ಆಗಿತ್ತು. ಯೂರಿನ್ ಅಲ್ಲಿಯೂ ಕೂಡ ರಕ್ತಸ್ರಾವ ಆಗಿತ್ತು. ಇದಕ್ಕೆ ಆಸ್ಪತ್ರೆ ವೈದ್ಯರ ನಿರ್ಲಕ್ಷವೇ ಇಷ್ಟಕ್ಕೆಲ್ಲಾ ಕಾರಣ.
ಸದ್ಯ ಯುವಕನ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಾವ ತಂದೆ ತಾಯಿಗೂ ಇಂತಹ ಪರಿಸ್ಥಿತಿ ಬರಬಾರದು ಎಂದು ಕುಟುಂಬಸ್ಥ ಸುನೀಲ್ ಹೇಳಿದ್ದಾರೆ.
ಇನ್ನು, ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯುವಕನ ಸಂಬಂಧಿ ರಘು ರಾಮ್, ವಿಜೇತ್ ಇಂಜೆಕ್ಷನ್ ಪಡೆದುಕೊಂಡ ನಯನಾ ಕ್ಲಿನಿಕ್ ಡಾಕ್ಟರ್ ಫೋನ್ ಸ್ವಿಚ್ ಆಫ್ ಆಗಿದೆ. ಘಟನೆ ನಡೆದ ಎರಡು ದಿನಗಳಿಂದ ಕ್ಲಿನಿಕ್ಗೆ ಬೀಗ ಹಾಕಿ ವೈದ್ಯರು ಪರಾರಿಯಾಗಿದ್ದಾರೆ.
ಇತ್ತ ಕೋಶಿಶ್ ಆಸ್ಪತ್ರೆಯಲ್ಲೂ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ. ಈ ಖಾಸಗಿ ಆಸ್ಪತ್ರೆಯಲ್ಲಿ ಇದೇ ಮೊದಲ್ಲ. ಇದೇ ರೀತಿಯಾಗಿ ಅನೇಕ ಬಾರಿ, ಹಲವರ ಪ್ರಾಣ ಹೋಗಿದೆ. ಈ ತರಹದ ಅನೇಕ ಸಲ ಆಗಿ ಹೋಗಿದೆ. ರಕ್ತಸ್ರಾವ ಹೆಚ್ಚಾಗುತ್ತಿದ್ದ ಬಗ್ಗೆ ಕೇಳಿದರೆ ಅದು ವೆಸ್ಟ್ ಬ್ಲೆಡ್ ಅಂತ ಹೇಳಿದರು. ಕೊನೆಯ ಕ್ಷಣದಲ್ಲಿ ರಕ್ತ ಬೇಕು ಎಂದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ