ಹೆರಿಗೆ ಆಸ್ಪತ್ರೆ ವೈದ್ಯರಿಗೂ ಕೊರೋನಾ ಬಿಸಿ - ಗರ್ಭಿಣಿ ಮಹಿಳೆಯರಿಗೂ ಬಂತು ಆಪತ್ತು

ಸ್ತ್ರೀರೋಗ ಮತ್ತು ಅರವಳಿಕೆ ತಜ್ಞರಿಗೂ ಕೊರೋನಾ ಸೋಂಕು ತಗುಲುತ್ತಿದೆ. ಹೀಗಾಗಿ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮಾಡಿಸಲು ಸಮಸ್ಯೆ ಎದುರಾಗಿದೆ. ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುತ್ತಿದ್ದರು. ಆದರೆ, ಈಗ ಕೊರೋನಾ ವಾರಿಯರ್ ವೈದ್ಯರಿಗೂ ಸೋಂಕು ವಕ್ಕರಿಸಿದ್ದರಿಂದ ಸಿಸೇರಿಯನ್ ಹೆರಿಗೆಗೆ ಭಾರೀ ತೊಂದರೆಯಾಗಿದೆ.

news18-kannada
Updated:August 9, 2020, 5:14 PM IST
ಹೆರಿಗೆ ಆಸ್ಪತ್ರೆ ವೈದ್ಯರಿಗೂ ಕೊರೋನಾ ಬಿಸಿ - ಗರ್ಭಿಣಿ ಮಹಿಳೆಯರಿಗೂ ಬಂತು ಆಪತ್ತು
ಪ್ರಾತಿನಿಧಿಕ ಚಿತ್ರ.
  • Share this:
ವಿಜಯಪುರ(ಆ.09): ಈ ಆಸ್ಪತ್ರೆ ಬಡ ಮತ್ತು ಮಧ್ಯಮ ವರ್ಗದವರ ಪಾಲಿಗೆ ಆಸರೆಯಾಗಿದೆ. ಪ್ರತಿನಿತ್ಯ ಇಲ್ಲಿ ಸುಮಾರು 30 ರಿಂದ 40 ಹೆರಿಗೆಯಾಗುತ್ತಿದ್ದು, ಅದರಲ್ಲಿ ಸುಮಾರು ಶೇ.10ರಷ್ಟು ಜನರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗುತ್ತಿದೆ.  ಪ್ರತಿ ತಿಂಗಳು ಇಲ್ಲಿ ಸುಮಾರು 1000 ರಿಂದ 1200ರ ವರೆಗೆ ಹೆರಿಗೆಗಳಾಗುತ್ತಿದ್ದು, ಸುಮಾರು 250 ರಿಂದ 300 ಗರ್ಭಿಣಿಯರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗುತ್ತಿದೆ.

ಆದರೆ, ಈ ಆಸ್ಪತ್ರೆಯ ಮೇಲೂ ಕೊರೋನಾ ಕಣ್ಣು ಬಿದ್ದಿದೆ. ಇಲ್ಲಿ ಗರ್ಭಿಣಿ ಮಹಿಳೆಯರಿಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಕೊರೋನಾ ವಕ್ಕರಿಸಿದೆ. ಇದು ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಥೆ ಅಷ್ಟೇ ಅಲ್ಲ. ಇಲ್ಲಿಗೆ ಬರುವ ಗರ್ಭಿಣಿಯರಿಗೆ ವ್ಯಥೆಯನ್ನೂ ಉಂಟು ಮಾಡುತ್ತಿದೆ.

ಸ್ತ್ರೀರೋಗ ಮತ್ತು ಅರವಳಿಕೆ ತಜ್ಞರಿಗೂ ಕೊರೋನಾ ಸೋಂಕು ತಗುಲುತ್ತಿದೆ. ಹೀಗಾಗಿ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮಾಡಿಸಲು ಸಮಸ್ಯೆ ಎದುರಾಗಿದೆ. ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುತ್ತಿದ್ದರು. ಆದರೆ, ಈಗ ಕೊರೋನಾ ವಾರಿಯರ್ ವೈದ್ಯರಿಗೂ ಸೋಂಕು ವಕ್ಕರಿಸಿದ್ದರಿಂದ ಸಿಸೇರಿಯನ್ ಹೆರಿಗೆಗೆ ಭಾರೀ ತೊಂದರೆಯಾಗಿದೆ.  ಇಲ್ಲಿ ಸದ್ಯಕ್ಕೆ ಸಾಮಾನ್ಯ ಹೆರಿಗೆಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಸಿಸೇರಿಯನ್ ಹೆರಿಗೆ ಅಗತ್ಯವಾಗಿರುವ ಗರ್ಭಿಣಿ ಮಹಿಳೆಯರು ಈಗ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ.

ಇಬ್ಬರೂ ಸ್ತ್ರೀರೋಗ ತಜ್ಞರು, ಮೂವರು ಅರವಳಿಕೆ ತಜ್ಞರು ಹಾಗೂ ಓರ್ವ ಪೆಥಾಲಾಜಿಸ್ಟ್ ವೈದ್ಯರಿಗೆ ಕೊರೋನಾ ಸೋಂಕು ತಗುಲಿದೆ. ರೋಗ ಲಕ್ಷಣ ಕಾಣಿಸಿಕೊಂಡ ನಂತರ ಈ ವೈದ್ಯರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಐದಾರು ದಿನಗಳ ನಂತರ ಇವರಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. ಇದರಿಂದ ರೋಗಿಗಳಿಗೆ ಸಂಪರ್ಕ ಬರಲು ಸಾಧ್ಯವಾಗಿಲ್ಲ.

ಈಗಾಗಲೇ ಓರ್ವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಉಳಿದವರು ಹೋಂ ಐಸೋಲೇಶನ್​​ನಲ್ಲಿದ್ದಾರೆ. ವಿಜಯಪುರ ಜಿಲ್ಲೆಯ ಇತರ ತಾಲೂಕುಗಳಿಂದ ವೈದ್ಯರನ್ನು ಹೆಚ್ಚುವರಿ ಸೇವೆ ಮೇಲೆ ಪಡೆಯಲಾಗುತ್ತಿದೆ. ಪ್ರತಿನಿತ್ಯ ಸುಮಾರು 15 ರಿಂದ 20 ಸಿಸೇಸರಿಯನ್​​ ಆಗುತ್ತಿದೆ.  ವಿಜಯಪುರ ಜಿಲ್ಲಾಸ್ಪತ್ರೆಯ ಮುಖ್ಯಸ್ಥ ಡಾ. ಶರಣಪ್ಪ ಕಟ್ಟಿ ತಿಳಿಸಿದ್ದಾರೆ.

ಈ ಮೊದಲು ಈ ಸರ್ಕಾರಿ ಆಸ್ಪತ್ರೆಯಲ್ಲಿ 35ರಿಂದ 40 ಹೆರಿಗೆಗಳು ಆಗುತ್ತಿದ್ದವು.  ಅವುಗಳಲ್ಲಿ ಹೆಚ್ಚಾಗಿ ಸಿಜರಿಯನ್ ಮೂಲಕವೇ ಆಗುವ ಕಾರಣ ಇಲ್ಲಿನ ವೈದ್ಯರಿಗೆ ಬಿಡುವಿಲ್ಲದ ಕೆಲಸವಿತ್ತು.  ಆದರೆ, ಈ ಮಧ್ಯೆ ಕೆಲವು ವೈದ್ಯರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿರುವ ಪರಿಣಾಮ ಆರು ಜನ ವೈದ್ಯರ ಕೊರತೆ ಉಂಟಾಗಿದೆ. ಸೇವೆ ಪೂರ್ಣ ನಿಂತಿಲ್ಲ.  ಆದರೆ, ಕಡಿಮೆಯಾಗಿದೆ.  ಇದಕ್ಕಾಗಿ ವಿಷಾಧಿಸುವುದಾಗಿ ಡಾ. ಶರಣಪ್ಪ ಕಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರಹ್ಮಗಿರಿ ದುರಂತ: ಎರಡೇ ದಿನದಲ್ಲಿ ಕಾರ್ಯಾಚರಣೆ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವ ಆರ್.​​​ ​ಅಶೋಕ್​​ ಸೂಚನೆ

ಮೊದಲೇ ವಿಜಯಪುರ ಜಿಲ್ಪಾಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಶಕಿಯರ ಕೊರತೆಯಿದೆ.  ಈಗ ಕೊರೋನಾ ಕಾಣಿಸಿಕೊಂಡ ಮೇಲೆ ವೈದ್ಯರ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಮಧ್ಯೆಯೇ ಕೊರೋನಾ ವಾರಿಯರ್ಸ್​ಗೆ ಸೋಂಕು ವಕ್ಕರಿಸುತ್ತಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣವಾಗುವಂತೆ ಮಾಡಿದೆ.
Published by: Ganesh Nachikethu
First published: August 9, 2020, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading