ಹಬ್ಬದ ದಿನ ಹಸುವಿಗೆ ಚಿನ್ನದ ಸರ ತೊಡಿಸಿ ಫಜೀತಿ ತಂದಿಟ್ಟುಕೊಂಡ ಕುಟುಂಬ.. ಅರಿಯದ ಗೋವಿಗೆ ನೋವು!

ತಪಾಸಣೆ ನಡೆಸಿದಾಗ ಆಕಳ ಹೊಟ್ಟೆಯಲ್ಲಿ ಸರ ಇರುವುದು ಕಂಡು ಬಂದಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಸರವನ್ನು ಹೊರ ತೆಗೆದಿದ್ದಾರೆ. ಮೂಕಜೀವಿ ಅರಿಯದೇ ಮಾಡಿದ ಕೆಲಸಕ್ಕೆ ಆಪರೇಷನ್​ನ ನೋವು ಭರಿಸುವಂತಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕಾರವಾರ: ಹಸುವಿನ ಹೊಟ್ಟೆ (Cow's Stomach ) ಸೇರಿದ ಪ್ಲ್ಯಾಸ್ಟಿಕ್ (Plastic) ಕಸವನ್ನು ಹೊರ ತೆಗೆದಿರುವ ಸುದ್ದಿ ಕೇಳಿದ್ದೇವೆ. ಆದರೆ  ಉತ್ತರ ಕನ್ನಡ (Uttara Kannada)  ಜಿಲ್ಲೆಯ ಶಿರಸಿಯ ಹೀಪನಳ್ಳಿ ಎಂಬ ಗ್ರಾಮದಲ್ಲಿ ಹಸುವಿನ ಹೊಟ್ಟೆಯಲ್ಲಿ ಚಿನ್ನದ ಸರವೇ ಸಿಕ್ಕಿದೆ.  ಶ್ರೀಕಾಂತ ಹೆಗಡೆ ಅವರಿಗೆ ಸೇರಿದ ಹಸುವಿನ ಹೊಟ್ಟೆಯಲ್ಲಿ ಸುಮಾರು 15 ಗ್ರಾಂ ತೂಕದ ಬಂಗಾರದ ಸರ ( Gold Chain) ಸಿಕ್ಕಿದೆ. ಇದು ಬಂಗಾರದ ಮೊಟ್ಟೆ ಹಾಕುವ ಕೋಳಿ ಕಥೆಯಲ್ಲ. ಹಾಗೆಂದು ಗಾಬರಿಗೊಳ್ಳುವ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ. ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲರಂತೆ ಗೋ ಪೂಜೆ ಮಾಡಿದ ಶ್ರೀಕಾಂತ ಹೆಗಡೆ ಕುಟುಂಬ ಮನೆ ಲಕ್ಷ್ಮಿಗೆ ಲಕ್ಷ್ಮೀ ಹಾರ ಹಾಕಿ ಪೂಜೆ ಮಾಡಿದ್ದರು. ಸಂಜೆ ವೇಳೆಗೆ ಬಂದು ನೋಡಿದರೆ ಹಾರ ಕಾಣುತ್ತಿರಲಿಲ್ಲ.

ಸಗಣಿಯಲ್ಲಿ ನಿತ್ಯ ಹುಡುಕಾಟ..! 

ಆತಂಕಕ್ಕೊಳಗಾದ ಕುಟುಂಬಸ್ತರು ಸರ ಪತ್ತೆಗೆ ಮುಂದಾದರು. ಎಷ್ಟು ಹುಡುಕಿದರೂ ಸರ ಕಾಣುತ್ತಿಲ್ಲ. ಹಸುವೇ ಸರ ತಿಂದಿರಬಹುದೆಂದು ತಿಂಗಳುಗಳ ಕಾಲ ಸಗಣಿಯಲ್ಲಿ ಸರ ಬರಬಹುದೆಂದು ಕಾದರು. ಆದರೂ ಸರ ಹೊರ ಬರದಿದ್ದಾಗ ಪಶುವೈದ್ಯರನ್ನು ಸಂಪರ್ಕಿಸಿದರು‌. ಹೀಗೆ ಕಾದು ಕಾದು ಸುಸ್ತಾದ ಮನೆಯವರು ಕೊನೆಯಲ್ಲಿ ಪಶು ವೈದ್ಯರನ್ನ ಸಂಪರ್ಕಿಸುವ ಮೊದಲು ದನದ ಕೊಟ್ಟಿಗೆಯನ್ನು ಇನ್ಮೊಮ್ಮೆ ಹುಡುಕಿದರು ಆದರು ಚಿನ್ನದ ಸರದ ಪತ್ತೆ ಆಗಿಲ್ಲ. ಆಗಿದ್ದು ಆಗಲಿ ಎಂದು ಕೊನೆಯಲ್ಲಿ ಮತ್ತೊಮ್ಮೆ ಪಶು ವೈದ್ಯರನ್ನ ಸಂಪರ್ಕಿಸಿದರು.

ಇದನ್ನೂ ಓದಿ: ಶಾಲೆಯ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಪಾಪಿಗಳು.. ಕೊನೆ ಕ್ಷಣದಲ್ಲಿ ದುರಂತ ತಪ್ಪಿದ್ದೇ ಪವಾಡ!

ಚಿನ್ನದ ಸರಕ್ಕಾಗಿ ಆಪರೇಷನ್ನೇ ಮಾಡಬೇಕಾಯಿತು..! 

ಸರವನ್ನು ಆಕಳು ತಿಂದಿದೆಯೋ ಅಥವಾ ಕರು ನುಂಗಿದೆಯೋ ಎನ್ನುವ ಗೊಂದಲದಲ್ಲಿ ಮನೆ ಮಾಲೀಕರಿದ್ದರು. ಸ್ಥಳಕ್ಕಾಗಮಿಸಿದ ಪಶುವೈದ್ಯ  ಡಾ. ಪಿ.ಎಸ್ ಹೆಗಡೆ ತಪಾಸಣೆ ನಡೆಸಿದರೂ ಸರ ಕಾಣಲಿಲ್ಲ. ಆದರೆ ಲೋಹ ಶೋಧದ ಮೂಲಕ ತಪಾಸಣೆ ನಡೆಸಿದಾಗ ಆಕಳ ಹೊಟ್ಟೆಯಲ್ಲಿ ಸರ ಇರುವುದು ಕಂಡುಬಂತು. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಸರವನ್ನು ಹೊರ ತೆಗೆದಿದ್ದಾರೆ. ಆದರೆ ಇದೇವೇಳೆ ಸರದ ಒಂದು ತಾಳಿ ಕರುವಿನ ದೇಹ ಸೇರಿರುವುದೂ ಗಮನಕ್ಕೆ ಬಂದಿದ್ದು, ಎರಡು  ಗಂಟೆಗೂ ಹೆಚ್ಚು ಕಾಲ ಚಿಕಿತ್ಸೆ ನಡೆಸಿ ಬಂಗಾರ ಹೊರ ತೆಗೆಯಲಾಗಿದೆ. ಹಸು ಆರೋಗ್ಯವಾಗಿದ್ದು, ಕೊನೆಗೂ ಲಕ್ಣ್ಮೀ ಸರ ಸಿಕ್ಕ ನೆಮ್ಮದಿ ಕುಟುಂಬದ್ದು.ಶಸ್ತ್ರ ಚಿಕಿತ್ಸೆಗೆ ಉಮ್ಮಚಗಿ ಪಶುವೈದ್ಯ ಡಾ. ರಾಜೇಶ್, ರಘುಪತಿ ಭಟ್, ವಾಣಿ ಮತ್ತು ಶ್ರೀಧರ್ ಸಹಕರಿಸಿದ್ದಾರೆ.

ಇದನ್ನೂ ಓದಿ: ಯಾರು ಏನನ್ನು ತಿನ್ನುತ್ತಾರೋ ಅದರ ಖರ್ಚನ್ನು ಸರ್ಕಾರ ನೀಡಲಿ.. ಮೊಟ್ಟೆ ವಿತರಣೆ ಬಗ್ಗೆ ಪೇಜಾವರ ಶ್ರೀ ಸಲಹೆ

ಏನಂತಾರೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು?

ಭಾವನೆಗಳಿಗೆ ಹೆಚ್ಚು ಮಹತ್ವ ನೀಡದೆ, ಬಂಗಾರವನ್ನು ಬದಿಗಿಟ್ಟು ಗೋ ಪೂಜೆ ಮಾಡಬೇಕು. ಇಂತಹಾ ಅವಾಂತರಗಳಿಗೆ ಎಡೆಮಾಡಿಕೊಡಬಾರದು. ಇಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಮೊದಲನೆಯದಾಗಿದ್ದು ಅಪರೂಪದ ಘಟನೆ ಆಗಿದೆ ಎಂದರು.  ಪ್ಲಾಸ್ಟಿಕ್ ಇನ್ನಿತರ ವಸ್ತುವನ್ನ ಹೊರತೆಗೆದಿದ್ದು ಇತಿಹಾಸ, ಆದ್ರೆ ಬಂಗಾರದ ಸರ ತಗೆದಿದ್ದು ಮೊದಲು ಅಂತೆ.

ಇನ್ನು  ಷಷ್ಠಿ ಹಬ್ಬವಾದ ಇಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡೋದು ಸಾಮಾನ್ಯ. ಆದ್ರೆ ಚಾಮರಾಜನಗರ ಜಿಲ್ಲೆ ಗ್ರಾಮಾಂತರ ಪ್ರದೇಶದ ಹಲವೆಡೆ ಹುತ್ತಕ್ಕೆ ಕೋಳಿ ರಕ್ತ ಎರೆದು ನಾಗಾರಾಧನೆ ಮಾಡಲಾಗುತ್ತದೆ.ಹುತ್ತದ ಮುಂದೆ ಕೋಳಿ ಕೊಯ್ದು ಅದರ ರಕ್ತ ಎರೆದು ಹುತ್ತಕ್ಕೆ ಕೋಳಿ ತಲೆ ಹಾಗೂ ಕೋಳಿಮೊಟ್ಟೆಯನ್ನು ಹಾಕಿ ನಾಗಪೂಜೆ ಮಾಡಲಾಗುತ್ತದೆ.ಹೊಲಗದ್ದೆಗಳಲ್ಲಿ ಸರ್ಪಗಳು ಕಾಣಿಸಿಕೊಳ್ಳಬಾರದು, ಅವುಗಳಿಂದ ತೊಂದರೆ ಯಾಗಬಾರದು ಎಂದು ಹರಕೆ ಕಟ್ಟಿಕೊಂಡವರು ಈ ರೀತಿ ಮಾಡ್ತಾರೆ.ಹರಕೆ ಹೊತ್ತು ಷಷ್ಠಿ ಹಬ್ಬದ ದಿನ ಹೀಗೆ ಪೂಜೆ ಸಲ್ಲಿಸುವುದು ಜಿಲ್ಲೆಯ ಗ್ರಾಮೀಣ ಜನರ ನಂಬಿಕೆಯ ಭಾಗವಾಗಿದೆ.  ಈ ಆಚರಣೆಯಿಂದ ಸರ್ಪಗಳಿಂದ ತೊಂದರೆ ಆಗಲ್ಲ ಎಂಬ ನಂಬಿಕೆ ಇಲ್ಲಿನವರದ್ದು.
Published by:Kavya V
First published: