Breaking News: ಹಲ್ಲಿನ ಚಿಕಿತ್ಸೆಗೆ ಅಂತ ಹೋದವಳ ಮುಖವೇ ವಿರೂಪವಾಗಿ ಹೋಯ್ತು! ನಟಿ ಬಾಳಲ್ಲಿ ವಿಲನ್ ಆದ ಡಾಕ್ಟರ್

ಬೆಂಗಳೂರಿನ ಕೊತ್ತನೂರಿನಲ್ಲಿರುವ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಒಳ್ಳೆ ಅಭಿಪ್ರಾಯ ಇತ್ತಂತೆ. ಫೈವ್ ಸ್ಟಾರ್ ಕೊಟ್ಟಿದ್ದಾರೆ ಅಂತ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ರಂತೆ. ಆದರೆ ಇದೀಗ ಅದೇ ಆಸ್ಪತ್ರೆ ವೈದ್ಯರು ಈ ನಟಿಯ ಬಾಳಿನಲ್ಲಿ ವಿಲನ್ ಆಗಿದ್ದಾರೆ.

ಸಂಕಷ್ಟಕ್ಕೆ ಒಳಗಾದ ನಟಿ ಸ್ವಾತಿ

ಸಂಕಷ್ಟಕ್ಕೆ ಒಳಗಾದ ನಟಿ ಸ್ವಾತಿ

  • Share this:
ಬೆಂಗಳೂರು: ನಿಮಗೆ ನಟಿ ಚೇತನಾ ರಾಜ್‌ (Actress Chetana Raj) ಅವರ ಹೆಸರು ನೆನಪಿರಬಹುದು. ಕೆಲ ತಿಂಗಳ ಹಿಂದಷ್ಟೇ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತೊರೆದ ಉದಯೋನ್ಮುಖ ನಟಿ ಚೇತನಾರಾಜ್. ಕೆಲ ಧಾರಾವಾಹಿ (Serials) ಹಾಗೂ ಸಿನಿಮಾಗಳಲ್ಲಿ (Cinema) ನಟಿಸಿದ್ದ ಚೇತನಾ ರಾಜ್, ಬೊಜ್ಜು (Fat) ಕರಗಿಸುವ ಚಿಕಿತ್ಸೆಗಾಗಿ (Treatment) ಆಸ್ಪತ್ರೆಗೆ ದಾಖಲಾಗಿದ್ದು. ಈ ವೇಳೆ ವೈದ್ಯರ (Doctors) ಯಡವಟ್ಟಾಗಿ ಚೇತನಾ ರಾಜ್ ಪ್ರಾಣ ಬಿಟ್ಟಿದ್ದರು. ಇದೀಗ ವೈದ್ಯರ ಎಡವಟ್ಟಿನಿಂದಾಗಿ ಸ್ಯಾಂಡಲ್‌ವುಡ್‌ನ (Sandalwood) ಮತ್ತೋರ್ವ ನಟಿ ತನ್ನ ಹಲ್ಲು (Teeth) ಒಂದೇ ಅಲ್ಲ, ತನ್ನ ಸೌಂದರ್ಯವನ್ನೇ (Beauty) ಕಳೆದುಕೊಂಡಿದ್ದಾರೆ. ಹೌದು, ನಟಿ ಸ್ವಾತಿ (Swathi) ಎಂಬುವರು ಹಲ್ಲು ನೋವಿನ ಚಿಕಿತ್ಸೆ ಪಡೆದು, ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಟಿಯಾಗಿ ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಿದ್ದ ಸ್ವಾತಿ ಅವರ ಮುಖ ಇದೀಗ ವಿರೂಪವಾಗಿದೆ. ವೈದ್ಯರ ತಪ್ಪಿಗೆ ಇದೀಗ ಸ್ವಾತಿ ಸಂಕಷ್ಟಪಡುವಂತಾಗಿದೆ.

ದಂತ ಚಿಕಿತ್ಸೆ ಪಡೆದ ನಟಿಯ ಮುಖವೇ ವಿರೂಪ

ಕನ್ನಡ ಚಿತ್ರರಂಗದ ನವ ನಟಿ ಸ್ವಾತಿ ಎಂಬುವರು ಇದೀಗ ವೈದ್ಯರ ಎಡವಟ್ಟಿನಿಂದಾಗಿ ತಮ್ಮ ಸೌಂದರ್ಯವನ್ನೇ ಕಳೆದುಕೊಳ್ಳುವಂತಾಗಿದೆ. ಸ್ವಾತಿ ಅವರು ರೂಟ್ ಕ್ಯಾನಲ್ ಮಾಡಿಸೋಕೆ ಅಂತ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅವರ ಮುಖವೇ ಇದೀಗ ವಿರೂಪವಾಗಿದ್ಯಂತೆ.

ಯಾರು ಈ ಸ್ವಾತಿ?

ಬೆಂಗಳೂರಿನ ಜೆಪಿ ನಗರ ನಿವಾಸಿಯಾದ ನಟಿ ಸ್ವಾತಿ ಅವರು ಕನ್ನಡ ಚಿತ್ರರಂಗದಲ್ಲಿ ಇನ್ನೂ ಬೆಳೆಯುತ್ತಿರುವ ನಟಿ. ನಟ ವಿಜಯ್ ರಾಘವೇಂದ್ರ ಅಭಿನಯದ ಎಫ್ಐಆರ್‌ 6 ಟು 6 ಎಂಬ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸ್ವಾತಿ ನಟಿಸಿದ್ದಾರೆ.

ಇದನ್ನೂ ಓದಿ:  Fake Brand: ನಕಲಿ ಬ್ರ್ಯಾಂಡ್ ದಂಧೆ ಪತ್ತೆ; ದೊಡ್ಡ ಕಂಪನಿಗಳ ಚಿಹ್ನೆ ಬಳಸಿ ಮಾರಾಟ

ಫೈವ್ ಸ್ಟಾರ್ ರಿವ್ಯೂ ನೋಡಿ ಹೋಗಿದ್ದ ನಟಿ

ಬೆಂಗಳೂರಿನ ಕೊತ್ತನೂರಿನಲ್ಲಿರುವ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಒಳ್ಳೆ ಅಭಿಪ್ರಾಯ ಇತ್ತಂತೆ. ಫೈವ್ ಸ್ಟಾರ್ ಕೊಟ್ಟಿದ್ದಾರೆ ಅಂತ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ರಂತೆ. ಆದರೆ ಇದೀಗ ಅದೇ ಆಸ್ಪತ್ರೆ ವೈದ್ಯರು ಈ ನಟಿಯ ಬಾಳಿನಲ್ಲಿ ವಿಲನ್ ಆಗಿದ್ದಾರೆ.

ಸರಿಯಾಗಿ ಸ್ಪಂದಿಸದ ವೈದ್ಯರು

ವೈದ್ಯರು ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ಎಂದು ಹೇಳಿದ್ದರಂತೆ. ಆದ್ರೆ 20 ದಿನಗಳು ಕಳೆದ್ರೂ ಒರಿಜಿನಲ್ ಫೇಸ್ ವಾಪಸ್ಸಾಗ್ಲೇ ಇಲ್ಲ. ಆಸ್ಪತ್ರೆಗೆ ಕಾಲ್ ಮಾಡಿಸ ಹೀಗಾಗಿದೆ ಅಂತ ಹೇಳಿದ್ರೆ ಸರಿಯಾಗಿ ರೆಸ್ಪಾನ್ಸ್ ಮಾಡಿಲ್ವಂತೆ. ಡಾಕ್ಟರ್‌ಗೆ ಕಾಲ್ ಮಾಡಿದ್ರೆ ನಾನು ಮುಂಬೈಲ್ಲಿ ಇದ್ದೀನಿ ಅಂತಿದ್ದಾರಂತೆ.

ಮುಖ ಊದಿಕೊಂಡು ಮನೆಯಿಂದ ಹೊರಬರಲಾಗದೇ ನರಳಾಟ

ವೈದ್ಯರ ಎಡವಟ್ಟಿನಿಂದ ಸ್ವಾತಿ ಅವರ ಮುಖದ ಒಂದು ಕಡೆ ಫುಲ್ ಊದಿಕೊಂಡಿದೆ. ನಟಿಯಾಗಿದ್ದ ಅವರ ಮುಖ, ಈಗ ನೋಡಲೂ ಆಗದಂತೆ ವಿಕಾರವಾಗಿದೆ. ಹೀಗಾಗಿ ವಿರೂಪಗೊಂಡ ಬಳಿಕ ಮನೆಯಿಂದ ಹೊರಬರಲಾರದೆ ನಟಿ ಸ್ವಾತಿ ತೊಂದರೆ ಅನುಭವಿಸುತ್ತಿದ್ದಾರೆ.

ಚಿತ್ರೀಕರಣಕ್ಕೆ ಹೋಗಲಾಗದೇ ತೊಂದರೆ

ನಟಿ ಸ್ವಾತಿ ಇದಕ್ಕೂ ಮುನ್ನ ಹಲವಾರು ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದರು. ಅವೆಲ್ಲ ಇನ್ನೂ ಮಾತುಕತೆಯ ಹಂತದಲ್ಲಿಯೇ ಇದ್ದವು. ಆದರೆ ಈಗ ಇವರ ಮುಖ ನೋಡಿದ ಕೂಡಲೇ ಅವಕಾಶಗಳು ಕೈತಪ್ಪುತ್ತಿವೆಯಂತೆ. ಹೀಗಾಗಿ ಚಿತ್ರೀಕರಣಕ್ಕೂ ಹೋಗಲಾಗದೇ, ಬೇರೆ ಕೆಲಸವೂ ಮಾಡಲಾಗದೇ ಸ್ವಾತಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನು ವಾಯ್ಸ್ ಓವರ್ ಡಬ್ಬಿಂಗ್ ಮಾಡ್ತಿದ್ದ ನಟಿ, ಈಗ ಅದೂ ಕೈತಪ್ಪಿದ್ಯಂತೆ.

ಇದನ್ನೂ ಓದಿ: Acid Attack: ಆಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತೆಗೆ ಐವರು ಪೊಲೀಸರಿಂದ ರಕ್ತದಾನ

ಬೇಜವಾಬ್ದಾರಿ ವೈದ್ಯರ ಬಳಿ ಹೋಗದಂತೆ ಮನವಿ

ಇದೀಗ ವೈದ್ಯರ ಯಡವಟ್ಟಿನಿಂದ ಸ್ವಾತಿ ಕಂಗಾಲಾಗಿದ್ದಾರೆ. ನನಗಾದ ಗತಿ ಬೇರೆ ಯಾರಿಗೂ ಆಗೋದು ಬೇಡ, ದಯವಿಟ್ಟು ಯಾರೂ ಓರಿಕ್ಸ್ ಡೆಂಟಲ್ ಕ್ಲಿನಿಕ್‌ಗೆ ಹೋಗಬೇಡಿ ಅಂತ ಮನವಿ ಮಾಡಿದ್ದಾರೆ. ಇದೀಗ ಬೇರೆ ಕಡೆ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ಇನ್ನು  ವೈದ್ಯರ ಯಡವಟ್ಟಿನ ಕುರಿತು ಈವೆರಗೂ ಯಾವುದೇ ದೂರು ದಾಖಲಾಗಿಲ್ಲ.
Published by:Annappa Achari
First published: