Black Magic ವಾಮಾಚಾರಕ್ಕೆ ಪತ್ನಿಯನ್ನ ಕೊಂದಿದ್ದ ಪತಿ : 9 ತಿಂಗಳು ಬಳಿಕ ಬಯಲಾಯ್ತು ಕೊಲೆ ರಹಸ್ಯ: ಬೆಳಕಿಗೆ ಬಂದಿದ್ದೇಗೆ ಈ ಪ್ರಕರಣ?

ಶಿಲ್ಪಾ ಪೋಷಕರಿಗೆ ಫೋನ್ ಮಾಡಿದ್ದ ಚನ್ನೇಶಪ್ಪ, ನಿಮ್ಮ ಮಗಳಿಗೆ ಬಿಪಿ ಲೋ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ. ನೀವೂ ಆಸ್ಪತ್ರೆಗೆ ಬನ್ನಿ ಎಂದು ಹೇಳಿದ್ದನು.ಆದ್ರೆ ಶಿಲ್ಪಾ ದೇಹದ ಮೇಲೆ ಇಂಜೆಕ್ಷನ್ ಮಾಡಿರುವ ಗುರುತು ಕಂಡಿದ್ದ ತಾಯಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಾವಣಗೆರೆ: ವಾಮಾಚಾರ(Black Magic)ಕ್ಕಾಗಿ ಪತ್ನಿಯನ್ನು ಕೊಂದಿದ್ದ ವೈದ್ಯ ಗಂಡನ (Doctor Husband) ಕೊಲೆ ರಹಸ್ಯ ಬಯಲಾಗಿದೆ. ಬರೋಬ್ಬರಿ  9 ತಿಂಗಳ ಬಳಿಕ ವೈದ್ಯ ಗಂಡನ ಸಂಚು ಬಟಾಬಯಲಾಗಿದೆ. ದಾವಣಗೆರೆ (Davanagere) ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರದಲ್ಲಿ ಈ ಘಟನೆ ನಡೆದಿತ್ತು. ಇದೀಗ ಎಫ್ಎಸ್ಎಲ್ ವರದಿ (FSL Report) ಬಂದಿದ್ದು, ರಿಪೋರ್ಟ್ ನಲ್ಲಿ ಪತ್ನಿಗೆ ಹೈ ಡೋಸ್ ಇಂಜೆಕ್ಷನ್ (High dose Injection)ಮಾಡಿದ್ದರಿಂದ ಸಾವನ್ನಪ್ಪಿರೋದು ದೃಢಪಟ್ಟಿದೆ ಎಂದು ನ್ಯೂಸ್ 18ಗೆ ಮಾಹಿತಿ ಲಭ್ಯವಾಗಿದೆ. ಪತ್ನಿಯನ್ನು ಕೊಂದ ಬಳಿಕ ಸಹಜ ಸಾವು ಎಂಬಂತೆ ಬಿಂಬಿಸಲು ಪಾಪಿ ಪತಿ ಪ್ರಯತ್ನಿಸಿದ್ದನು. ಅತ್ತೆ ದೂರು ನೀಡಿದ ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಳಿಯನೇ ಮಗಳನ್ನು ಕೊಂದಿರುವ ಬಗ್ಗೆ ಮಹಿಳೆಯ ಪೋಷಕರು ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.

ಏನಿದು ಪ್ರಕರಣ?

ಫೆಬ್ರವರಿ 11, 2021ರಂದು ರಾಮಶ್ವೇರ ಗ್ರಾಮದ ಡಾ.ಚನ್ನೇಶಪ್ಪ (45) ಪತ್ನಿ ಶಿಲ್ಪಾ ಸಾವನ್ನಪ್ಪುತ್ತಾರೆ. ಚನ್ನೇಶಪ್ಪ ಕಡಿಮೆ ರಕ್ತದೊತ್ತಡದಿಂದಾಗಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದನು. ಆರೋಪಿ ಡಾ.ಚನ್ನೇಶಪ್ಪ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದನು. 18 ವರ್ಷಗಳ ಹಿಂದೆ ಹಿರೇಕೆರೂರಿನ ಶಿಲ್ಪಾ ಜೊತೆ ಚನ್ನೇಶಪ್ಪನ ಮದುವೆ ನಡೆದಿತ್ತು. ಮದುವೆ ವೇಳೆ ಶಿಲ್ಪಾ ಪೋಷಕರು ವರದಕ್ಷಿಣೆ ರೂಪದಲ್ಲಿ 700 ಗ್ರಾಂ ಬಂಗಾರ, ಒಂದು ಕೆಜಿ ಬೆಳ್ಳಿ ಮತ್ತು 7 ಲಕ್ಷ ರೂಪಾಯಿ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ವೈದ್ಯನಾಗಿದ್ದ ಚನ್ನೇಶಪ್ಪ ಸಹ ಸಿರಿವಂತನಾಗಿದ್ದರಿಂದ ಮದುವೆ ಸಹ ಅದ್ಧೂರಿಯಾಗಿ ಮಾಡಕೊಡಲಾಗಿತ್ತು.38 ಎಕರೆ ಜಮೀನು ಹೊಂದಿದ್ದ ಚನ್ನೇಶಪ್ಪ, ಕುಡಿತ ಮತ್ತು ಕ್ಯಾಸಿನೋ (ಜೂಜಾಟ)ಗೆ ದಾಸನಾಗಿದ್ದನು. ಹೀಗಾಗಿ ಪತ್ನಿಗೆ ತವರಿನಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದನು.ಇದರ ಜೊತೆಗೆ ನಿಧಿ ಆಸೆಗಾಗಿ ವಾಮಾಚಾರ ಮಾಡುತ್ತಿದ್ದನು ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ:  Double Murder: ಬೆಂಗಳೂರು ಹೊರವಲಯದಲ್ಲಿ ಜೋಡಿ ಕೊಲೆ; 15 ಸಾವಿರ ಹಣಕಾಸು ವಿಚಾರಕ್ಕೆ ಡಬಲ್ ಮರ್ಡರ್ ಶಂಕೆ!

 ಬಿಪಿ ಲೋ ಆಗಿದೆ ಆಸ್ಪತ್ರೆಗೆ ಬನ್ನಿ ಅಂತ ಹೇಳಿದ್ದ

ಫೆಬ್ರವರಿ 11ರಂದು ಶಿಲ್ಪಾ ಪೋಷಕರಿಗೆ ಫೋನ್ ಮಾಡಿದ್ದ ಚನ್ನೇಶಪ್ಪ, ನಿಮ್ಮ ಮಗಳಿಗೆ ಬಿಪಿ ಲೋ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ. ನೀವೂ ಆಸ್ಪತ್ರೆಗೆ ಬನ್ನಿ ಎಂದು ಹೇಳಿದ್ದನು.ಆದ್ರೆ ಶಿಲ್ಪಾ ದೇಹದ ಮೇಲೆ ಇಂಜೆಕ್ಷನ್ ಮಾಡಿರುವ ಗುರುತು ಕಂಡಿದ್ದ ತಾಯಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅನುಮಾನ ವ್ಯಕ್ತವಾದ ಹಿನ್ನೆಲೆ ಶಿಲ್ಪಾ ಪೋಷಕರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮರಣೋತ್ತರ ಶವ ಪರೀಕ್ಷಗೆ ಒತ್ತಾಯಿಸಿದ್ದರು, ಪೋಷಕರ ಒತ್ತಾಯದ ಮೇರೆಗೆ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿತ್ತು. ಇದೀಗ ಎಫ್ಎಸ್ ವರದಿಯಲ್ಲಿ ಸಾವಿನ ರಹಸ್ಯ ಬಯಲಾಗಿದೆ.

ಇದನ್ನೂ ಓದಿ:  Mysuru Double Murder​: ಅಪ್ಪನ ಅಕ್ರಮ ಸಂಬಂಧ ಸಹಿಸದ ಮಗನಿಂದ ತಂದೆ ಜೊತೆ ತಂದೆ ಪ್ರೇಯಸಿ ಕೊಲೆ

ಕೊಲೆ ಮಾಡಿದ್ದೇಕೆ ಪಾಪಿ ಗಂಡ?:

ಕುಡಿತ ಮತ್ತು ಜೂಜಾಟಕ್ಕೆ ದಾಸನಾಗಿದ್ದ ವೈದ್ಯ ಚನ್ನೇಶಪ್ಪ, ನಿಧಿ ಪಡೆದುಕೊಳ್ಳಲು ವಾಮಾಚಾರ ಮಾಡಿಸುತ್ತಿದ್ದನು. ಮನೆಯಲ್ಲಿ ಪೂಜಾರಿಗಳನ್ನು ಕರೆಸಿ ಪೂಜೆ, ಹೋಮ-ಹವನ ನಡೆಸುತ್ತಿದ್ದನು. ಈ ನಿಧಿ ಆಸೆಗಾಗಿಯೇ ಪತ್ನಿ ಶಿಲ್ಪಾ ಅವರನ್ನು ಕೊಲೆ ಮಾಡಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಪ್ರಕರಣದ ಪೂರ್ಣ ತನಿಖೆಯ ಬಳಿಕ ಸತ್ಯಾಂಶ ಹೊರ ಬೀಳಲಿದೆ. ವರದಕ್ಷಿಣೆ ನೀಡಿದ್ದರೂ ನಿಧಿ ಆಸೆಗಾಗಿಯೇ ಮಗಳನ್ನು ಅಳಿಯ ಕೊಲೆ ಮಾಡಿದ್ದಾನೆ ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ.
Published by:Mahmadrafik K
First published: