ನೋಡಲು ಚೆನ್ನಾಗಿಲ್ಲ, ವಯಸ್ಸಾಗಿದೆ ಎಂದು ಹೆಂಡತಿಗೆ ವಾಟ್ಸಾಪ್​ ಮೂಲಕ ತಲಾಖ್​ ನೀಡಿದ ವೈದ್ಯ

ನಿನಗೆ ವಯಸ್ಸಾಗಿದೆ. ನೀನು ನೋಡಲು ಸುಂದರವಾಗಿಲ್ಲ. ಇದಕ್ಕಾಗಿ ನೀನು ನನಗೆ ಬೇಡ ಎಂದು ತಲಾಖ್​ ನೀಡಲು ಕಾರಣ ನೀಡಿದ್ದಾನೆ.

ತಲಾಖ್​ ನೀಡಿದ ವೈದ್ಯ

ತಲಾಖ್​ ನೀಡಿದ ವೈದ್ಯ

  • News18
  • Last Updated :
  • Share this:
ಸೌಮ್ಯ ಕಳಸ

ಬೆಂಗಳೂರು (ಡಿ.28): ಸುಗ್ರೀವಾಜ್ಞೆ ತರುವ ಮೂಲಕ ತ್ರಿವಳಿ ತಲಾಖ್​ ಮಸೂದೆಯನ್ನು ಕೇಂದ್ರ ಸರ್ಕಾರ ನಿನ್ನೆ ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಮುಸ್ಲಿಂ ವೈದ್ಯನೊಬ್ಬ ತನ್ನ ಹೆಂಡತಿಗೆ ವಾಟ್ಸಾಪ್​ ಮೂಲಕ ತನ್ನ ಹೆಂಡತಿಗೆ ತಲಾಖ್​ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು ಮೂಲದ ವೈದ್ಯರಾಗಿರುವ ಜಾವೇದ್​ ಅಮೆರಿಕದಲ್ಲಿ ದೊಡ್ಡ ಸರ್ಜನ್​ ಆಗಿದ್ದು, ಅಲ್ಲಿಯೇ ನೆಲೆಸಿದ್ದಾರೆ. ನಗರದ ಮಲ್ಲೇಶ್ವರಂನ ರೇಷ್ಮಾ  ಅಜೀಜ್​ ಎಂಬ ಮಹಿಳೆಯೊಂದಿಗೆ 16 ವರ್ಷಗಳ ಕಾಲ ಜೀವನ ನಡೆಸಿದ ಜಾವೇದ್​ಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.

ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ಜಾವೇದ್​ ಇತ್ತೀಚೆಗೆ ಹೆಂಡತಿಗೆ ಸುಳ್ಳು ಹೇಳಿ ಅಮೆರಿಕದಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಹೆಂಡತಿಯನ್ನು ಬಿಟ್ಟು ಮಕ್ಕಳನ್ನು ಮಾತ್ರ ಅಮೆರಿಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಈ ವೇಳೆ ಹೆಂಡತಿಯ ಪಾಸ್ ಪೋರ್ಟ್, ಐಡೆಂಟಿಟಿ ಕಾರ್ಡ್, ವೀಸಾ ದಾಖಲೆಗಳು, ಮಾರ್ಕ್ಸ್ ಕಾರ್ಡ್ ಎಲ್ಲವನ್ನೂ ತೆಗೆದುಕೊಂಡು ಜಾವೆದ್ ಹೋಗಿದ್ದಾರೆ.

ಅಮೆರಿಕಕ್ಕೆ ಹೋಗುತ್ತಿದ್ದಂತೆ ಹೆಂಡತಿಗೆ ಕರೆ ಮಾಡಿದ ಅವರು ವಾಟ್ಸಾಪ್​ ವಾಯ್ಸ್​ ಕಾಲ್​ನಲ್ಲಿ ಮೂರು ಬಾರಿ ತಲಾಖ್​ ಹೇಳಿದ್ದಾರೆ. ಅಲ್ಲದೆ ವಾಟ್ಸಾಪ್​ ಮೇಸೆಜ್​ ಮಾಡಿ ಸಂದೇಶ ರವಾನಿಸಿ, ಸಂಬಂಧ ಕಡಿದುಕೊಂಡಿದ್ದಾರೆ.

'ನಿನಗೆ ವಯಸ್ಸಾಗಿದೆ. ನೀನು ನೋಡಲು ಸುಂದರವಾಗಿಲ್ಲ. ಇದಕ್ಕಾಗಿ ನೀನು ನನಗೆ ಬೇಡ' ಎಂದು ತಲಾಖ್​ ನೀಡಲು ಕಾರಣ ನೀಡಿದ್ದಾನೆ.

ಇದನ್ನು ಓದಿ: ಲೋಕಸಭೆಯಲ್ಲಿ ತ್ರಿವಳಿ ತಲಾಕ್​​​: ವಿಪಕ್ಷಗಳ ವಿರೋಧದ ನಡುವೆಯೂ ಮಸೂದೆಗೆ ಅಸ್ತು!

ಏಕಾಏಕಿ ಗಂಡ ಈ ರೀತಿ ಮಾಡಿದ್ದು, ತನ್ನೆಲ್ಲಾ ದಾಖಲೆಗಳನ್ನು ಕೊಂಡೊಯ್ದಿರುವ ಗಂಡನ ಈ ವರ್ತನೆಯಿಂದ ಮಹಿಳೆ ಕಂಗಲಾಗಿದ್ದಾಳೆ.  ಈ ಕುರಿತು ಕಾನೂನು ಮೊರೆಕೂಡ ಹೋಗಿದ್ದಾರೆ. ತನ್ನ ದಾಖಲೆಗಳನ್ನು ತನ್ನ ಸುಪರ್ದಿಗೆ  ಕೊಡಿಸಬೇಕು ಎಂದು ಶಾಸಕ ಸುರೇಶ್​ ಕುಮಾರ್​ ಹಾಗೂ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರನ್ನು ಭೇಟಿಮಾಡಿ ಸಹಾಯ ಕೇಳಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಪತಿಯಿಂದ ಕಿರುಕುಳ ನೀಡುತ್ತಿದ್ದರು. ಈಗ ಈ ರೀತಿ ಮಾಡಿ ನನ್ನಿಂದ ಮಕ್ಕಳನ್ನು ಕಿತ್ತುಕೊಂಡಿದ್ದಾರೆ.  ಕಾನೂನು ಪ್ರಕಾರ ತನಗೆ ವಿಚ್ಛೇದನ, ಪರಿಹಾರ, ಜೀವನಾಂಶ ಮತ್ತು ಮಕ್ಕಳ ಸುಪರ್ದಿಯನ್ನು ನೀಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ.

First published: