ಬೆಂಗಳೂರು (ಜೂ 15): 11ನೇ ಮಹಡಿಯಿಂದ ಹಾರಿ ವೈದ್ಯ ಆತ್ಮಹತ್ಯೆ (Doctor Suicide) ಮಾಡಿಕೊಂಡಿರೋ ಘಟನೆ ಬೆಂಗಳೂರಿನ ಅಮೃತಹಳ್ಳಿ (Amrutahalli) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅನಾರೋಗ್ಯ (Illness) ಹಾಗೂ ಖಿನ್ನತೆಯಿಂದ (Depression) ಬಳಲುತ್ತಿದ್ದ ಪೃಥ್ವಿರಾಜ್ ರೆಡ್ಡಿ ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 31 ವರ್ಷದ ಪೃಥ್ವಿರಾಜ್ ರೆಡ್ಡಿ, ಆಂಧ್ರದ ಕಡಪ ಮೂಲದವರಾಗಿದ್ದಾರೆ. ಅನಾರೋಗ್ಯ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ತಿಳಿದು ಬಂದಿದೆ. ಕಳೆದ ಮೂರು ತಿಂಗಳ ಹಿಂದೆ ವಿವಾಹವಾಗಿ (Marriage) ಅಮೃತಹಳ್ಳಿಯಲ್ಲಿ ವಾಸವಾಗಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ರು.
ಹೆಂಡತಿ ಮಲಗಿದ್ದ ವೇಳೆ ಆತ್ಮಹತ್ಯೆ
ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಪೃಥ್ವಿರಾಜ್ ಮಾನಸಿಕ ಖಿನ್ನತೆಗೂ ಒಳಗಾಗಿದ್ದರು. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಪತ್ನಿ ಮಲಗಿರಬೇಕಾದರೆ 11ನೇ ಮಹಡಿ ಮೇಲೆ ಹೋಗಿ ಅಲ್ಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಸಾವಿಗೂ ಮುನ್ನ ಮೊಬೈಲ್ ನಲ್ಲಿ ತೆಲುಗಿನಲ್ಲಿ ಡೆತ್ ನೋಟ್ ಬರೆದಿದ್ದಾನೆ ಎಂದು ಹೇಳಲಾಗುತ್ತಿದ್ದು ಈ ಸಂಬಂಧ ಸ್ಥಳಕ್ಕೆ ದೌಡಾಯಿಸಿರುವ ಅಮೃತಹಳ್ಳಿ ಪೊಲೀಸರು ಮೊಬೈಲ್ ಪರಿಶೀಲನೆ ನಡೆಸುತ್ತಿದ್ದಾರೆ.
ಸೂಟ್ ಕೇಸ್ನಲ್ಲಿ ತೇಲಿ ಬಂತು ಮಹಿಳೆ ಶವ
ನೆಲಮಂಗಲ ನಗರದ ಹೊರ ವಲಯದ ದಾಬಸ್ ಪೇಟೆಯ ಕೆರೆಯಲ್ಲಿ ಸೂಟ್ ಕೇಸ್ ನಲ್ಲಿ ಮಹಿಳೆ ಶವ ತೇಲಿ ಬಂದಿದ್ದು, ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಹೊನ್ನೇನಹಳ್ಳಿ ಗ್ರಾಮದ ಗ್ರಾಮ ಪಂಚಯತಿಯ ಕೆಂಗಲ್ ಗ್ರಾಮದ ಅಗಳಿ ಕಟ್ಟೆಯ ಸಣ್ಣಕೆರೆಯಲ್ಲಿ ತೇಲಿಬಂದ ಸೂಟ್ಕೇಸ್ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳೀಯರು ಕೊಳೆತ ವಾಸನೆ ಹಾಗೂ ಅನುಮಾನಾಸ್ಪದ ಸೂಟ್ಕೇಸ್ ತೇಲುತ್ತಿರುವುನ್ನು ಗಮನಿಸಿ ದಾಬಸ್ ಪೇಟೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Shivamogga: ಅಂದು ಗೋಕಾಕ್ ಚಳವಳಿ, ಇಂದು ಕುಪ್ಪಳ್ಳಿ ಕಹಳೆ: ಹಂಸಲೇಖ
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಕೂಡಲೇ ಸ್ಥಳಕ್ಕಾಗಮಿಸಿದ ದಾಬಸ್ ಪೇಟೆ ಪೋಲೀಸರು ಸೂಟ್ಕೇಸ್ ವಶಕ್ಕೆ ಪಡೆದು ತೆರೆದು ನೋಡಿದಾಗ ಅಲ್ಲಿ ಸುಮಾರು 30 ರಿಂದ 35 ವರ್ಷದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಮಹಿಳೆಯನ್ನು ಬೇರೆಡೆ ಕೊಲೆಗೈದು ತಂದು ಎಸೆದಿರುವ ಶಂಕೆಯಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿ ಕೃಷ್ಣ, ನೆಲಮಂಗಲ ವೃತ್ತ ನಿರೀಕ್ಷಕ ರಾಜೀವ್, ದಾಬಸ್ ಪೇಟೆ ಠಾಣೆ ಆರಕ್ಷಕ ಉಪನಿರೀಕ್ಷಕ ಎಂ.ಎನ್.ಮುರಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂರೇ ಗಂಟೆಯಲ್ಲಿ ಮ್ಯಾಟರ್ ಫಿನೀಶ್
ಬೆಂಗಳೂರು: ತನಗೆ ಮದುವೆಯಾದರೂ ತಾನು ಪ್ರೀತಿಸುತ್ತಿದ್ದ ಮತ್ತೊಬ್ಬ ಯುವತಿ ಪರಪುರುಷನೊಂದಿಗೆ ಓಡಾಡುತ್ತಿರುವುದಾಗಿ ಅನುಮಾನ ವ್ಯಕ್ತಪಡಿಸಿ ಲಾಡ್ಜ್ಗೆ ಕರೆದೊಯ್ದು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ದುಷ್ಕರ್ಮಿಯನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ಬಂಧಿಸಿದ್ರು. ಇಂದು ಲಾಡ್ಜ್ನ ಸಿಸಿಟಿವಿ ದೃಶ್ಯ ಸಿಕ್ಕಿದೆ.
ಸಿಸಿಟಿವಿ ದೃಶ್ಯ ಸೆರೆ
ಮೂರೇ ಗಂಟೆಯಲ್ಲಿ ಎಲ್ಲಾ ಮುಗಿಸಿ ಹೋದ ಆರೋಪಿ, 7:45ಕ್ಕೆ ಲಾಡ್ಜ್ ಒಳಗೆ ಬಂದವನು 10:45 ಕ್ಕೆ ಹೊರಬಂದಿದ್ದ. ಲಿಫ್ಟ್ ನಲ್ಲೇ ದೀಪಾಳನ್ನ ಹಿಡಿದುಕೊಂಡಿದ್ದ ಆರೋಪಿ ಅನ್ಮೋಲ್, ಲಾಡ್ಜ್ ಸಿಸಿಟಿವಿಯಲ್ಲಿ ಎಲ್ಲಾ ದೃಶ್ಯ ಸೆರೆ. ಹೋಗುವಾಗ ಇಬ್ಬರು, ಬರುವಾಗ ಒಬ್ಬನೆ ಬಂದಿದ್ದ ಉಸಿರುಗಟ್ಟಿಸಿ ಸಾಯಿಸಿ ರೂಂ ಲಾಕ್ ಮಾಡಿ ಬಂದಿದ್ದ ಅನ್ಮೋಲ್ ಎಸ್ಕೇಪ್ ಆಗಿದ್ದ.
ಇದನ್ನೂ ಓದಿ: Chitradurga: ನಾವು ಇನ್ನೊಬ್ಬರ ಆಸ್ತಿ, ಮಠ ಆಕ್ರಮಿಸಲ್ಲ, ನಮ್ಮದನ್ನು ಬಿಡಲ್ಲ ಎಂದ ಡಾ. ಶಿವಮೂರ್ತಿ ಮುರುಘಾ ಶ್ರೀಗಳು
ಯಶವಂತಪುರ ರೈಲ್ವೆ ಠಾಣೆ ಬಳಿಯಿರುವ ಲಾಡ್ಜ್ನಲ್ಲಿ ಒಡಿಶಾ ಮೂಲದ ದೀಪಾ ಬದನ್ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇನ್ಸ್ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಅನ್ಮಲ್ ರತನ್ಕಂ ದರ್ ಪತ್ತೆ ಹೆಚ್ಚಿ ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ