Underpass Fine: ಮಳೆ ಬರ್ಲಿ, ಗುಂಡಿನೇ ಇರ್ಲಿ ಹೋಗ್ತಿರ್ಬೇಕು ಅಷ್ಟೇ! ಇಲ್ಲಾಂದ್ರೆ ಫೈನ್ ಗ್ಯಾರೆಂಟಿ

ಮಳೆ ಬಂದಾಗ ಅಂಡರ್​ಪಾಸ್ ಅಥವಾ ಫ್ಲೈಓವರ್​ ಅಡಿಯಲ್ಲಿ ಆಶ್ರಯ ಪಡೆಯೋವಾಗ ಹುಷಾರ್. ಯಾಕಂದ್ರೆ ಮಳೆ ತಪ್ಪಿಸೋಕೆ ಹೋಗಿ ದಂಡ ಕಟ್ಬೇಕಾದೀತು. ಹಾಗಾಗಿ ಬಿರುಮಳೆಯೇ ಬರಲಿ, ಗುಂಡಿಯೇ ಇರಲಿ ನಮ್ಮ ಬೆಂಗಳೂರಿನ ರಸ್ತೆಯಲ್ಲಿ ಹೋಗ್ತಾ ಇರ್ಬೇಕು ಅಷ್ಟೇ. ಯಾಕೆ ಅಂತೀರಾ ಈ ಸ್ಟೋರಿ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನಲ್ಲಿ (Bengaluru) ಮಳೆ ಬಂದ್ರೆ ಅವಾಂತರಗಳು (Rain Problem) ಸೃಷ್ಟಿಯಾಗೋದು ನಿಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಕೆಲಸ ಮುಗಿಸಿ ಮನೆಗೆ ಹೋಗೋವಾಗ ಮಳೆ ಬಂದ್ರೆ ಹಿಡಿಶಾಪ ಹಾಕ್ತೀವಿ. ಅದರಲ್ಲೂ ಬೈಕ್ ಸವಾರರು (Bike Riders)  ಪರದಾಟ ಕೇಳೋದೇ ಬೇಡ. ಅತ್ತ ಮಳೆಯಲ್ಲೂ ಹೋಗೋಕ್ಕಾಗದೇ, ಬೈಕ್ ಪಾರ್ಕ್ ಕೂಡ ಮಾಡಕ್ಕಾಗದೇ ಒದ್ದಾಡ್ತಾರೆ. ಆದರೂ ಬೈಕ್ ಸವಾರರು ಮಳೆಯಿಂದ ತಪ್ಪಿಸಿಕೊಳ್ಳೋಣ ಅಂತಾ ಅಂಡರ್​ಪಾಸ್ (Underpass) ಅಥವಾ ಫ್ಲೈಓವರ್ (Flyover) ಕೆಳಗೆ ನಿಂತುಕೊಳ್ತಾರೆ. ಹಾಗಾದ್ರೆ ಇನ್ಮುಂದೆ ಅಂಡರ್​ಪಾಸ್ ಅಥವಾ ಫ್ಲೈಓವರ್ ಕೆಳಗೆ ನಿಂತುಕೊಳ್ಳೋವಾಗ ಯೋಚಿಸಿ, ಇಲ್ಲಾಂದ್ರೆ ದಂಡ ಕಟ್ಟಲು ರೆಡಿಯಾಗಿ. ಯಾಕಂದ್ರೆ ನಮ್ಮ ಬೆಂಗಳೂರಿನಲ್ಲಿ ಹೊಸ ರೂಲ್ಸ್ ಜಾರಿಯಾಗ್ತಿದೆ.

ಮಳೆ ಬಂದಾಗ ಅಂಡರ್​ಪಾಸ್ ಅಥವಾ ಫ್ಲೈಓವರ್​ ಅಡಿಯಲ್ಲಿ ಆಶ್ರಯ ಪಡೆಯೋವಾಗ ಹುಷಾರ್. ಯಾಕಂದ್ರೆ ಮಳೆ ತಪ್ಪಿಸೋಕೆ ಹೋಗಿ ದಂಡ ಕಟ್ಬೇಕಾದೀತು. ಹಾಗಾಗಿ ಬಿರುಮಳೆಯೇ ಬರಲಿ, ಗುಂಡಿಯೇ ಇರಲಿ ನಮ್ಮ ಬೆಂಗಳೂರಿನ ರಸ್ತೆಯಲ್ಲಿ ಹೋಗ್ತಾ ಇರ್ಬೇಕು ಅಷ್ಟೇ.

ಅಂಡರ್​ಪಾಸ್ ಅಥವಾ ಫ್ಲೈಓವರ್ ಕೆಳಗೆ ನಿಂತರೆ ಫೈನ್
ಮಳೆಯ ಸಮಯದಲ್ಲಿ ಅಂಡರ್​ಪಾಸ್ ಮತ್ತು ಫ್ಲೈಓವರ್​ ಕೆಳಗೆ ಆಶ್ರಯ ಪಡೆಯುವ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ಮಳೆಗಾಲದಲ್ಲಿ ಅಂಡರ್​ಪಾಸ್ ಮತ್ತು ಫ್ಲೈಓವರ್​ ಕೆಳಗಿನ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿದಾಗ ಅಪಘಾತಗಳಿಗೆ ಕಾರಣವಾಗುತ್ತದೆ ಅಂತಾ ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.

Do you stand under an underpass or flyover in the rain time Fine will fall be careful
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: ಒಂದೇ ಮಳೆಗೆ ಸಿಲಿಕಾನ್ ಸಿಟಿ ಬರ್ಬಾದ್! 255 ಕೋಟಿ ನಷ್ಟ, ಐಟಿ ಕಂಪೆನಿಗಳಿಂದ ಬೆಂಗಳೂರು ತೊರೆಯುವ ಎಚ್ಚರಿಕೆ

ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸರ ಕ್ರಮ
ಬೆಂಗಳೂರಿನಲ್ಲಿ ನಾರ್ಮಲ್ ದಿನಗಳಲ್ಲೇ ಟ್ರಾಫಿಕ್ ಜಾಮ್ ಆಗ್ತಿರುತ್ತೆ. ಅದರಲ್ಲೂ ಮಳೆ ಬಂದರಂತೂ ಕೇಳೋದೇ ಬೇಡ. ಎಲ್ಲಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿರುತ್ತೆ. ಇದಕ್ಕೆ ಅಂಡರ್​ಪಾಸ್ ಅಥವಾ ಫ್ಲೈಓವರ್ ಅಡಿ ಆಶ್ರಯ ಪಡೆಯುವುದು ಕೂಡ ಒಂದು ಕಾರಣ. ಹಾಗಾಗಿ ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.

ಮೊದಲ ಬಾರಿ 500 ರೂಪಾಯಿ ಫೈನ್
ಮಳೆ ಸುರಿಯುತ್ತಿರುವ ಹೊತ್ತಲ್ಲಿ ಅಂಡರ್ಪಾಸ್ ಅಥವಾ ಫ್ಲೈಓವರ್ ಕೆಳಗೆ ಬೈಕ್ ಪಾರ್ಕಿಂಗ್ ಮಾಡಿದ್ರೆ ದಂಡ ಕೂಡ ಹಾಕಲಾಗುತ್ತದೆ. ಮೊದಲ ಬಾರಿ ಅಪರಾಧ ಎಸಗುವವರಿಗೆ ₹500 ದಂಡ ವಿಧಿಸಲು ನಿರ್ಧರಿಸಲಾಗಿದೆ. ಅಲ್ಲದೇ ಮತ್ತೆ ಮತ್ತೆ ಇದು ರಿಪೀಟ್ ಆದರೆ ಅವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ಮಳೆಗೆ ಬೆಂಗಳೂರಿನಲ್ಲಿ 255 ಕೋಟಿ ರೂ. ನಷ್ಟ
ಐಟಿ ಬಿಟಿ ಸಿಟಿ ಬೆಂಗಳೂರಿಗೆ ಶಾಕಿಂಗ್ ಎದುರಾಗಿದೆ. ಒಂದೇ ಒಂದು ಮಳೆಗೆ ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗಿದೆ. ಕಳೆದ ಆಗಸ್ಟ್ 30ರಂದು ಸುರಿದ ಮಳೆಗೆ ಐಟಿ ಬಿಟಿ ಏರಿಯಾಗಳು ಸಂಪೂರ್ಣ ಜಲಾವೃತವಾಗಿ ಬೆಂಗಳೂರಿನ ನಿಜ ದರ್ಶನ ಮಾಡಿಸಿದೆ. ಒತ್ತುವರಿ, ಚರಂಡಿ ಅವ್ಯವಸ್ಥೆ, ಕಿತ್ತೋದ ಫುಟ್​​ಪಾತ್​ಗಳಿಂದ ನೀರು ನಿಂತಲ್ಲೇ ನಿಂತಿತ್ತು.

ಇದನ್ನೂ ಓದಿ: ಏ ಸುಮ್ನೆ ಇರು, ಬೇರೆ ಭಾಷೆ ಬರುತ್ತೆ, ನಾಚಿಕೆ ಆಗಲ್ವಾ ನಿಂಗೆ, ಒದ್ದು ಒಳಗೆ ಹಾಕಿ: ಮನವಿ ನೀಡಲು ಬಂದ ಮಹಿಳೆ ಮೇಲೆ ಲಿಂಬಾವಳಿ ದರ್ಪ

ಬೆಂಗಳೂರಿನಿಂದ ಐಟಿ ಕಂಪನಿಗಳ ವಲಸೆ ಎಚ್ಚರಿಕೆ..!
ಮಳೆಯಿಂದಾದ ಅವಾಂತರದಿಂದ ಕೊಟ್ಯಾಂತರ ನಷ್ಟ ಉಂಟಾಗಿತ್ತು. ಇದರಿಂದ ಆಕ್ರೋಶಗೊಂಡಿರುವ ಬೆಂಗಳೂರು ಐಟಿ ಕಂಪೆನಿಗಳು ವಲಸೆ ಹೋಗುವ ಎಚ್ಚರಿಕೆ ನೀಡಿದೆ. ಖ್ಯಾತ ಉದ್ಯಮಿ ಮೋಹನ್ ದಾಸ್ ಪೈಯವರ ಅಧ್ಯಕ್ಷತೆಯ ಸಂಘದಿಂದ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ. ನಾವು ಬೆಂಗಳೂರು ಬಿಡಬೇಕಾದೀತು ಅಂತಾ ಐಟಿ ಕಂಪೆನಿಗಳು ಸರ್ಕಾರಕ್ಕೆ ಎಚ್ಚರಿಸಿದೆ.

ಆ.30ರ ಮಳೆಗೆ 255 ಕೋಟಿ ರೂ ನಷ್ಟ..!
ಆಗಸ್ಟ್ 30ರಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಪರಿಣಾದ 5 ಗಂಟೆಗಳ ಕಾಲ ಔಟರ್ ರಿಂಗ್ ರೋಡ್ನಲ್ಲಿ ನೂರಾರು ಟೆಕ್ಕಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ರು. ಇದೆಲ್ಲದರ ಪರಿಣಾಮ ಅಂದು ಒಂದೇ ದಿನ ಬರೋಬ್ಬರಿ 255 ಕೋಟಿ ರೂಪಾಯಿ ನಷ್ಟವಾಗಿದೆ.
Published by:Thara Kemmara
First published: