• Home
  • »
  • News
  • »
  • state
  • »
  • Bengaluru: ಬೆಂಗಳೂರಿನಲ್ಲಿ ನಗರೀಕರಣಗೊಂಡ ಅರಣ್ಯ ಪ್ರದೇಶವೆಷ್ಟು ಗೊತ್ತಾ? ತಜ್ಞರು ಹೇಳಿದ್ದೇನು ನೋಡಿ

Bengaluru: ಬೆಂಗಳೂರಿನಲ್ಲಿ ನಗರೀಕರಣಗೊಂಡ ಅರಣ್ಯ ಪ್ರದೇಶವೆಷ್ಟು ಗೊತ್ತಾ? ತಜ್ಞರು ಹೇಳಿದ್ದೇನು ನೋಡಿ

ಬೆಂಗಳೂರು

ಬೆಂಗಳೂರು

Bangalore: ಭವಿಷ್ಯದ ಪ್ರವಾಹದ ಬಿಕ್ಕಟ್ಟುಗಳನ್ನು ತಪ್ಪಿಸಲು ಬೆಂಗಳೂರು ನಗರವು ತನ್ನ ಕಳೆದುಹೋದ ಕಾಡುಗಳು, ಚರಂಡಿಗಳು ಮತ್ತು ಕೆರೆಗಳನ್ನು ಮರಳಿ ಪಡೆಯಬೇಕಾಗಿದೆ.

  • Share this:

ಬೆಂಗಳೂರು ಕಳೆದ ಕೆಲವೇ ದಿನಗಳ ಹಿಂದೆ ಪ್ರವಾಹದ (Flood) ಪರಿಸ್ಥಿತಿಯನ್ನು ಎದುರಿಸಿ ನಿಂತಿದೆ. ಈ ವರ್ಷ ಮಾತ್ರವಲ್ಲದೇ ಪ್ರತಿ ಮಳೆಗಾಲದಲ್ಲೂ ರಾಜಧಾನಿಯ ಕಥೆ ಇದೇ. ಮನೆಗಳಿಗೆ ನೀರು (Water) ನುಗ್ಗುವುದು, ಕೆರೆ ಕೋಡಿ ಒಡೆಯುವುದು, ಜನ ಕೊಚ್ಚಿ ಹೋಗುವುದು ಹೀಗೆ ಈ ರೀತಿಯ ಸನ್ನಿವೇಶಗಳು (Seen) ಸಿಲಿಕಾನ್‌ ಸಿಟಿಯಲ್ಲಿ (City) ಅಪಾರ ಪ್ರಮಾಣದ ಮಳೆ (Rain) ಸುರಿದಾಗ ನೋಡುವ ಸಾಮಾನ್ಯ ದೃಶ್ಯಗಳಾಗಿ ಬಿಟ್ಟಿವೆ. ಹಾಗಾದರೆ ಇದಕ್ಕೆ ಕಾರಣವೇನು ಅಂತಾ ನೋಡಿದರೆ, ಸಹಜವಾಗಿಯೇ ನಗರೀಕರಣ ಎನ್ನಬಹುದು. ಹೌದು ಈ ಬಗ್ಗೆ ತಜ್ಞರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮಳೆ ಬಂದರೆ ಏಕೆ ಮುಳುಗುತ್ತದೆ ಎಂಬ ಪ್ರಶ್ನೆಗೆ IISc ತಜ್ಞ ಟಿ.ವಿ ರಾಮಚಂದ್ರ ನಗರೀಕರಣ (Urbanization) ಎಂದು ಉತ್ತರಿಸಿದ್ದಾರೆ. ಬೆಂಗಳೂರು ನಗರೀಕರಣದ ಸಲುವಾಗಿ ಶೇ.88ರಷ್ಟು ಅರಣ್ಯ, ಶೇ.75ರಷ್ಟು ಜಲಮೂಲಗಳನ್ನು ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.


ಭವಿಷ್ಯದ ಪ್ರವಾಹದ ಬಿಕ್ಕಟ್ಟುಗಳನ್ನು ತಪ್ಪಿಸಲು ಬೆಂಗಳೂರು ನಗರವು ತನ್ನ ಕಳೆದುಹೋದ ಕಾಡುಗಳು, ಚರಂಡಿಗಳು ಮತ್ತು ಕೆರೆಗಳನ್ನು ಮರಳಿ ಪಡೆಯಬೇಕು ಎಂದು IISc ತಜ್ಞ ಟಿ ವಿ ರಾಮಚಂದ್ರ ಹೇಳಿದ್ದಾರೆ. ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ ಭಾನುವಾರ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಐಐಎಸ್‌ಸಿಯ ಎನರ್ಜಿ ಮತ್ತು ವೆಟ್‌ಲ್ಯಾಂಡ್ ರಿಸರ್ಚ್‌ನ ಸಂಯೋಜಕ ರಾಮಚಂದ್ರ, ಬೆಂಗಳೂರು ತನ್ನ ಶೇ 88 ರಷ್ಟು ಸಸ್ಯವರ್ಗವನ್ನು ಮತ್ತು ಶೇ 75 ರಷ್ಟು ಜಲಮೂಲಗಳನ್ನು ನಗರೀಕರಣದ ಅಭಿವೃದ್ಧಿಗಾಗಿ ಕಳೆದುಕೊಂಡಿದೆ.


ಸರ್ಕಾರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು


ಬೆಂಗಳೂರು ಭವಿಷ್ಯದಲ್ಲೂ ಪ್ರವಾಹದಂತಹ ಸಮಸ್ಯೆಗಳನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.ಅರಣ್ಯ ಅತಿಕ್ರಮಣಕ್ಕೆ ಕಡಿವಾಣ ಹಾಕಬೇಕು ಹಾಗೂ ಶೇ.33ರಷ್ಟು ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕು ಎಂಬ ಸಲಹೆ ನೀಡಿದ್ದಾರೆ.ರಾಜಕಾಲುವೆಗಳ ನಿರಂತರ ಒತ್ತುವರಿ, ಚರಂಡಿಗೆ ತಡೆಗೋಡೆ ಇಲ್ಲದಿರುವುದು, ಕಣಿವೆಗಳ ಮೇಲೇ ಕಟ್ಟಡಗಳ ನಿರ್ಮಾಣ, ಕೃಷಿ ಭೂಮಿಗಳ ನಿರಂತರ ನಾಶ, ಅಕ್ರಮ ಲೇಔಟ್, ಬಡಾವಣೆಗಳಲ್ಲಿ ನೀರು ಹೋಗೋದಕ್ಕೂ ಜಾಗವಿಲ್ಲದಿರುವುದು, ನೂರಾರು ಕೆರೆಗಳ ಒತ್ತುವರಿ ಇವೇ ಪ್ರಮುಖವಾಗಿ ಬೆಂಗಳೂರಿನ ದೊಡ್ಡ ಸಮಸ್ಯೆಗಳು. ಈ ಬಗ್ಗೆ ಸರ್ಕಾರ ಗಮನಹರಿಸಿದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನೂ ಸ್ವಲ್ಪವಾದರೂ ನಿಯಂತ್ರಿಸಬಹುದು ಎಂಬುವುದು ಹಿರಿಯ ತಜ್ಞರ ಅಭಿಪ್ರಾಯ.


ಇದನ್ನೂ ಓದಿ: ಹುಡುಗಿಯರೇ ಮತಾಂತರಕ್ಕೆ ಟಾರ್ಗೆಟ್; ಸಲ್ಮಾನ್ ಸ್ಫೋಟಕ ಹೇಳಿಕೆ


ಆರೋಗ್ಯಕ್ಕೂ ಕುತ್ತು


ಐಸಿಎಂಆರ್-ವೆಕ್ಟರ್ ಕಂಟ್ರೋಲ್ ರಿಸರ್ಚ್ ಸೆಂಟರ್‌ನ ಮತ್ತೋರ್ವ ವಿಜ್ಞಾನಿ ಬಿ ಡಾ.ಶ್ರೀಕಾಂತ್ ಶ್ರೀರಾಮ ಮಾತನಾಡಿ ಪ್ರವಾಹ ಮತ್ತು ಅಸಮರ್ಪಕ ನೀರಿನ ಒಳಚರಂಡಿಯು ಕೇವಲ ಆಸ್ತಿ-ಪಾಸ್ತಿ ಹಾನಿಗೆ ಮಾತ್ರ ಕಾರಣವಾಗದೇ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಪ್ರವಾಹ ಪರಿಸ್ಥಿತಿ ಮತ್ತು ಅಸಮರ್ಪಕ ನೀರಿನ ಒಳಚರಂಡಿಯಿಂದಾಗಿ ನೀರಿನ ಮಾಲಿನ್ಯ ಉಂಟಾಗುತ್ತದೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ನೀರಿನಿಂದ ಹರಡುವ ರೋಗಗಳಾದ ಮಲೇರಿಯಾ, ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂ, ಚರ್ಮದ ಕಾಯಿಲೆಗಳಾದ ಎಸ್ಜಿಮಾ ಮತ್ತು ರಿಂಗ್‌ವರ್ಮ್ ಜೊತೆಗೆ ಉಸಿರಾಟ ಮತ್ತು ಮಾನಸಿಕ ಸಮಸ್ಯೆಗಳು ಪ್ರವಾಹದಿಂದಾಗಿ ಸಂಭವಿಸಬಹುದು ಎಂದು ಶ್ರೀಕಾಂತ್ ಶ್ರೀರಾಮ ತಿಳಿಸಿದ್ದಾರೆ.


ಹವಾಮಾನ ಬದಲಾವಣೆಯಿಂದಲೂ ಪರಿಣಾಮ
ಫ್ರೈಡೇಸ್ ಫಾರ್ ಫ್ಯೂಚರ್, ಕರ್ನಾಟಕದ ಕಾರ್ಯಕರ್ತೆ ಸಂಜನಾ ಎ ಮಾತನಾಡಿ, ಹವಾಮಾನ ಬದಲಾವಣೆಯು ಈಗಾಗಲೇ ರಾಜ್ಯದ ಹಲವಾರು ಭಾಗಗಳಲ್ಲಿ ಪರಿಣಾಮ ಬೀರುತ್ತಿದ್ದು, ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ರಾಷ್ಟ್ರಪತಿಗೆ ಪೌರ ಸನ್ಮಾನ; ಇದು ದೇಶದ ಮಹಿಳಾ ವರ್ಗಕ್ಕೆ ಸಂದ ಸತ್ಕಾರ ಎಂದ್ರು ಮುರ್ಮು


ಹೆಚ್ಚಿದ ನಗರೀಕರಣದಿಂದಾಗಿ, ನಗರದಲ್ಲಿ ಅಧಿಕ ಶಾಖದ ವಿಕಿರಣವು ಮೋಡಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಈ ಹಿಂದೆ ಐಎಂಡಿಯ ಅಧಿಕಾರಿಗಳು ತಿಳಿಸಿದ್ದರು. ನಗರದಲ್ಲಿನ ಮಳೆಯ ನಮೂನೆಗಳ ವ್ಯತ್ಯಾಸಕ್ಕೂ ಮಾಲಿನ್ಯವು ಕೊಡುಗೆ ನೀಡುತ್ತದೆ. ನಗರದಲ್ಲಿನ ತಾಪಮಾನವೂ ಬದಲಾಗುತ್ತದೆ. ದಕ್ಷಿಣ ಮತ್ತು ಪೂರ್ವ ಬೆಂಗಳೂರಿನಲ್ಲಿ ಕೈಗಾರಿಕೆಗಳು, ಐಟಿ ಕಂಪನಿಗಳು ಮತ್ತು ವಸತಿ ಗೃಹಗಳ ದೊಡ್ಡ ಕಟ್ಟಡಗಳಿವೆ. ಇದು ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದರು.

First published: