Kolara: ದಯಮಾಡಿ ಬಿಜೆಪಿ, ಜೆಡಿಎಸ್​ಗೆ ಮತ ಹಾಕಬೇಡಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಶಿವಾರಪಟ್ಟಣ ಗ್ರಾಮಕ್ಕೆ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ, ಪಟಾಕಿ ಸಿಡಿಸಿ, ಪೂರ್ಣಕುಂಭ ಸ್ವಾಗತದಿಂದ ಸಾವಿರಾರು ಅಭಿಮಾನಿಗಳು, ವೇದಿಕೆ ವರೆಗು ರಸ್ತೆಯುದ್ದಕ್ಕು ಹೂವಿನ ಸುರಿಮಳೆಗೈದರು.

ಸಿದ್ದರಾಮಯ್ಯಗೆ ಹೂವಿನ ಸುರಿಮಳೆ

ಸಿದ್ದರಾಮಯ್ಯಗೆ ಹೂವಿನ ಸುರಿಮಳೆ

  • Share this:
ಕೋಲಾರ(ಆ.07): ಕೋಲಾರ (Kolara) ಜಿಲ್ಲೆಯ ಮಾಲೂರು ತಾಲೂಕಿನ  ಶಿವಾರಪಟ್ಟಣ ಗ್ರಾಮಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ (Siddaramaiah) ಭರ್ಜರಿ ಸ್ವಾಗತ ದೊರೆಯಿತು,  75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪ್ರಯುಕ್ತ ಕಾಂಗ್ರೆಸ್ (Congress) ಪಾದಯಾತ್ರೆ ಹಾಗು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನ,  ಶಿವಾರಪಟ್ಟಣ ಗ್ರಾಮದಲ್ಲಿ  ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಆಯೋಜಿಸಿದ್ದರು.  ಶಿವಾರಪಟ್ಟಣ ಗ್ರಾಮಕ್ಕೆ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ, ಪಟಾಕಿ ಸಿಡಿಸಿ, ಪೂರ್ಣಕುಂಭ ಸ್ವಾಗತದಿಂದ ಸಾವಿರಾರು ಅಭಿಮಾನಿಗಳು, ವೇದಿಕೆ ವರೆಗು ರಸ್ತೆಯುದ್ದಕ್ಕು ಹೂವಿನ ಸುರಿಮಳೆಗೈದರು. ಕಾರ್ಯಕ್ರಮಕ್ಕೆ ಆಗಮಿಸಿದ  ಮಾಜಿ ಸಿಎಂ ಸಿದ್ದರಾಮಯ್ಯ ರಿಗೆ 3 ಕೆಜಿ ತೂಕದ ಬೆಳ್ಳಿ ಗಧೆಯನ್ನ  ನೀಡಿ  ಕಾಂಗ್ರೆಸ್ (Congress) ಮುಖಂಡರು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್, ಶಾಸಕರಾದ,  ನಾರಾಯಣಸ್ವಾಮಿ   ನಂಜೇಗೌಡ, ಅನಿಲ್ ಕುಮಾರ್, ಶ್ರೀನಿವಾಸ್, ನಸೀರ್ ಅಹಮದ್,  ಕೊತ್ತೂರು ಮಂಜುನಾಥ್ ಭಾಗಿಯಾಗಿದ್ದರು, ಕಾರ್ಯಕ್ರಮದ ಬ್ಯಾನರ್ ನಲ್ಲಿ ಕೆಎಚ್ ಮುನಿಯಪ್ಪ ಪೋಟೊ ಇದ್ದರು, ಕಾರ್ಯಕ್ರಮದಲ್ಲಿ ಮುನಿಯಪ್ಪ ಅನುಪಸ್ಥಿತಿ ಎದ್ದು ಕಾಣುತ್ತಿತ್ತು,

ಸಿದ್ದರಾಮಯ್ಯ ರನ್ನ  ಹಾಡಿ ಹೊಗಳಿದ ರಮೇಶ್ ಕುಮಾರ್.

ಶಿವಾರಪಟ್ಟಣ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಪಾತ್ರ ಇಲ್ಲ, ಆಸ್ತಿ ಒಬ್ಬರದ್ದು, ಸಾಬೂನು ಮತ್ತೊಬ್ಬರದ್ದು ಎನ್ನುವಂತಾಗಿದೆ, ಸ್ವಾತಂತ್ರ್ಯಕ್ಕಾಗಿ 62 ವರ್ಷ ಹೋರಾಟ ಮಾಡಿದ್ದು ಕಾಂಗ್ರೆಸ್, RSS ನ  ಮನುಸ್ಮೃತಿ ಸಿದ್ದಾಂತ ಸಂವಿಧಾನ ಒಪ್ಪಲ್ಲ,  ಬಿಜೆಪಿ ಸರ್ಕಾರದ ನಡವಳಿಕೆಯಿಂದ,  ಇಂದು ಕಾಂಗ್ರೆಸ್ ಪಕ್ಷದವರು  ದೇಶದ್ರೋಹಿಗಳು ಎನ್ನುವಂತಾಗಿದೆ.ಧ್ವನಿ ಇಲ್ಲದವರ ಪರ ಸಿದ್ದರಾಮಯ್ಯ

ಬ್ರಾಹ್ಮಣ ಎನ್ನುವ ಕಾರಣಕ್ಕೆ ಜನರು ನಮ್ಮ ಕಾಲಿಗೆ ಬೀಳುವುದಲ್ಲ, ಎಲ್ಲರು ಸಮಾನತೆಯಿಂದ ಇರಬೇಕು ಅದನ್ನು ಮೊದಲು ಹೇಳಿದ್ದು ಸಂವಿಧಾನ ಎಂದರು, ಸಿದ್ದರಾಮಯ್ಯ ಮೇಲೆ  ಜನರ ಅಭಿಮಾನ ಹೆಚ್ಚಿದೆ.ಸಿದ್ದರಾಮಯ್ಯ ರಾಜ್ಯ ಒಬ್ಬ ದೊಡ್ಡ ನಾಯಕ, ದಿವಂಗತ ದೇವರಾಜು ಅರಸು ರಂತೆ, ಸಿದ್ದರಾಮಯ್ಯ ಅವರಿಗು ಜನ ಮನ್ನಣೆ ಲಭಿಸಿದೆ. ಇಂದು ದೇವರಾಜ್ ಅರಸು ಬದುಕಿದ್ದರೆ ಅಂತಹ ಜನಮನ್ನಣೆ ಅವರಿಗೆ ಸಿಗುತ್ತಿತ್ತು, ನಮ್ಮಲ್ಲಿ ಅನೇಕ ಜನರಿಗೆ ಮಾತು ಬರಲ್ಲ, ಧ್ವನಿ ಇಲ್ಲದವರ ಪರ ಸಿದ್ದರಾಮಯ್ಯ ಇರುತ್ತಾರೆ.ಸಿದ್ದರಾಮೋತ್ಸವ ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿದೆ. ಅಂದು ಸಿದ್ದರಾಮಯ್ಯ ಹೆಸರು ಆಕಾಶಕ್ಕೆ ಮುಟ್ಟಿತ್ತು, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ರಾಜ್ಯಕ್ಕೆ ಅನೇಕ ಭಾಗ್ಯ ನೀಡಿದರು. ಆದರೆ ಅನೇಕರ  ಕುತಂತ್ರದಿಂದ ಸಿದ್ದರಾಮಯ್ಯ ಸೋತರು ಎಂದು ಬೇಸರ ಹೊರಹಾಕಿದರು.

ಬಿಜೆಪಿ ಯವರು ಬ್ರಿಟೀಷರ ಗುಲಾಮರು

ಮಾಲೂರಿನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ  ಮಾಜಿ ಸಿಎಂ ಸಿದ್ದರಾಮಯ್ಯ.  ಬಿಜೆಪಿ ಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದರು, ಅಲ್ಪದೆ ಬ್ರಿಟೀಷರ ಜೊತೆಗೆ ಬಿಜೆಪಿ ನಾಯಕರು ಶಾಮೀಲಾಗಿದ್ದರು,  ಇವತ್ತು ಹರ್ ಘರ್ ತಿರಂಗ ಎಂಬ ಕಾರ್ಯಕ್ರಮ ಬಿಜೆಪಿಯವರು ಮಾಡಲು ಯಾವ ನೈತಿಕತೆ ಇದೆ, ಸ್ವಾತಂತ್ರ್ಯ ಕ್ಕಾಗಿ ತ್ಯಾಗ, ಬಲಿದಾನ, ಆಸ್ತಿ ಕಳೆದುಕೊಂಡಿದ್ದು ಕಾಂಗ್ರೆಸ್ ನವರು,  ವೀರ ಸಾವರ್ಕರ್, ಗೋರ್ವಾರ್ಕರ್ ರಾಷ್ಟ್ರ ಧ್ವಜದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.

ಇದನ್ನೂ ಓದಿ: Road Sign: ಸದ್ಯ ಸೋಶಿಯಲ್ ಮೀಡಿಯಾ ತುಂಬಾ ಚಾಲ್ತಿಯಲ್ಲಿರೋದು ಈ ಸೂಚನಾ ಫಲಕ

ಈಗ  ಘರ್ ಪರ್ ತಿರಂಗಾ ಎನ್ನುವ ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು, ಬಿಜೆಪಿ ಗೆ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಬೇಕಿಲ್ಲ,  ಸಂವಿಧಾನ ಬದಲಾವಣೆ ಮಾಡಲು ಬಿಜೆಪಿ ಹೊರಟಿದೆ,  ತೇಜಸ್ವಿ ಸೂರ್ಯ ಒಬ್ಬ ಅಮಾವಾಸ್ಯೆ, ಅವನನ್ನ ನಾನು ಹಾಗೆ ಕರೆಯೋದು,  ಸಂವಿಧಾನ ಬದಲಾವಣೆ ಮಾಡೊದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ ಎಂದು ಕಿಡಿಕಾರಿದರು.ಜೆಡಿಎಸ್ ನವರದ್ದು ಬೆಂಕಿ ಕಾಣಿಸಿಕೊಳ್ಳುವು ಜಾಯಮಾನ

ಕೋಲಾರದ ಮಾಲೂರಿನಲ್ಲಿ ಜೆಡಿಎಸ್ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ,  ಜೆಡಿಎಸ್ ಯಾವತ್ತು ಅಧಿಕಾರಕ್ಕೆ ಬರೊಲ್ಲ,  ಎಲ್ಲಿ ಬೆಂಕಿ ಸಿಗುತ್ತೊ ಅಲ್ಲಿ ಬೆಂಕಿ ಕಾಯಿಸಿಕೊಳ್ಳೋಕೆ ಬರ್ತಾರೆ, ಜೆಡಿಎಸ್ ನವರ ಬಗ್ಗೆ ಬಹಳ ಹುಶಾರಾಗಿರಿ.

ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಗ್ತಾರಾ? ಶೆಟ್ಟರ್ ಹೇಳಿದ್ದು ಹೀಗೆ

ಜೆಡಿಎಸ್ ನವರು ಅವಕಾಶ ವಾದಿಗಳು, ಯಾರು ಅಧಿಕಾರಕ್ಕೆ ಬರದೊ ಅಗ್ನಿಗೆ ಇಷ್ಟವಿಲ್ಲ,  ಜೆಡಿಎಸ್ ಹಾಗು ಬಿಜೆಪಿ ಎರಡಕ್ಕು ಮತ ನೀಡಬೇಡಿ ಎಂದು ಕರೆ ನೀಡಿದ ಸಿದ್ದರಾಮಯ್ಯ,  ಕೋಲಾರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದರು.
Published by:Divya D
First published: