• Home
  • »
  • News
  • »
  • state
  • »
  • Basavaraj Bommai: ನನ್ನನ್ನು ಶ್ರೀರಾಮನಿಗೆ ಹೋಲಿಸಬೇಡಿ: ಸಿಎಂ ಬೊಮ್ಮಾಯಿ

Basavaraj Bommai: ನನ್ನನ್ನು ಶ್ರೀರಾಮನಿಗೆ ಹೋಲಿಸಬೇಡಿ: ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ನರಜೀವಿಗಳಿಗೆ ಗುಲಾಮನಾಗಬಾರದು ಇನ್ನೊಮ್ಮೆ ಈ ಮಾತು ನಿನ್ನ ಬಾಯಿಂದ ಬರಬಾರದು ಅಂತ ರಾಜುಗೌಡರಿಗೆ ಮುಖ್ಯಮಂತ್ರಿಗಳು ತಿಳಿ ಹೇಳಿದರು.

  • Share this:

ನಿನ್ನೆ ಎಸ್​ಸಿ ಎಸ್​ಟಿ ಸಮುದಾಯಕ್ಕೆ ಮೀಸಲಾತಿ (SC ST Reservation) ಏರಿಕೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಘೋಷಣೆ ಮಾಡಿದ್ದಾರೆ. ಇಂದು ವಿಧಾನಸೌಧದ ಮುಂದೆಯೇ ಸರ್ಕಾರದಿಂದ ವಾಲ್ಮೀಕಿ ಜಯಂತಿ (Valmiki Jayanti )ಆಚರಣೆ ಮಾಡಲಾಯ್ತು. ಸಿಎಂ ಹಾಗೂ ಸಚಿವ ಶ್ರೀರಾಮುಲು (Minister Sriramulu) ಸೇರಿ ಸಮುದಾಯದ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮೀಸಲಾತಿ ಏರಿಕೆ ಮಾಡಿದ್ದಕ್ಕೆ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಸಿಎಂಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದರು. ಸಮುದಾಯದ ನಾಯಕರು ಕೂಡ ಸಿಎಂ ಬೊಮ್ಮಾಯಿಗೆ ಗೌರವ ಸಲ್ಲಿಸಿದರು. ಸಿಎಂ ಬಗ್ಗೆ ಸಮುದಾಯದ ನಾಯಕರು ಹಾಗೂ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಿಎಂ ಬೊಮ್ಮಾಯಿ ಶ್ರೀರಾಮ ಇದ್ದಂತೆ ಎಂದು ಶ್ರೀರಾಮುಲು ಬಣ್ಣಿಸಿದರು. ಇದೇ ವೇದಿಕೆಯಲ್ಲಿ ಮಾತಾಡಿದ ಸಿಎಂ, ನನ್ನನ್ನ ಶ್ರೀರಾಮನಿಗೆ ಹೋಲಿಸಬೇಡಿ ಎಂದರು.


ಶ್ರೇಷ್ಠ ಕುಲಕ್ಕೆ ಸೇರಿದ್ದೀರಿ, ನೀವು ಯಾರಿಗೂ ಕಡಿಮೆ ಇಲ್ಲ. ಬೇಡರ ಕಣ್ಣಪ್ಪ, ಮದಕರಿ ನಾಯಕರು, ಒಣಕೆ ಓಬವ್ವ ಪ್ರತಿನಿಧಿಸಿರುವ ಸಮುದಾಯ ನಿಮ್ಮದಾಗಿದೆ. ಇದೆಲ್ಲ ನಿಮ್ಮ ರಕ್ತಗತವಾಗಿ ಬಂದಿದೆ. ಕೆಲವರು ನಿಮ್ಮನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದರು.


ನರಜೀವಿಗಳಿಗೆ ಗುಲಾಮನಾಗಬಾರದು


ಶಾಸಕ ರಾಜುಗೌಡ ಗುಲಾಮನಾಗ್ತೀನಿ ಎಂದು ಹೇಳಿದ್ದಾನೆ. ಗುಲಾಮನಾಗಬಾರದು, ನಮಗೆ ಜೀವ ಕೊಟ್ಟಿರುವ ದೇವರಿಗೆ ಮಾತ್ರ ಗುಲಾಮನಾಗಬೇಕು. ನರಜೀವಿಗಳಿಗೆ ಗುಲಾಮನಾಗಬಾರದು ಇನ್ನೊಮ್ಮೆ ಈ ಮಾತು ನಿನ್ನ ಬಾಯಿಂದ ಬರಬಾರದು ಅಂತ ರಾಜುಗೌಡರಿಗೆ ಮುಖ್ಯಮಂತ್ರಿಗಳು ತಿಳಿ ಹೇಳಿದರು.


ಬೆಕ್ಕು ಅಡ್ಡಿ ಬಂತು ಅಂತ ಮನೆಯಲ್ಲಿಯೇ ಇದ್ರೆ ಹೇಗೆ?


ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಭಾಷಣ ಮಾಡಿದರೆ ಆಗಲ್ಲ. ಗಾಂಧಿಜೀ ರಾಮರಾಜ್ಯ ಆಗಬೇಕು ಎಂದಿದ್ದರು. ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶ ಸಿಗಬೇಕು ಎಂದು ಹೇಳಿದ್ದರು. ಮೀಸಲಾತಿ ಕೊಡುವ ವಿಚಾರದಲ್ಲಿ ಹಲವರು ನನಗೆ ಕೋರ್ಟ್ ಹಾಗೆ ಹೇಳುತ್ತದೆ. ಮುಂದೆ ಹೀಗೆ ಆಗುತ್ತದೆ ಎಂದು ಸಲಹೆ ಕೊಟ್ಟರು. ಒಂದು ಹೆಜ್ಜೆ ಇಡೋಣ, ಹೆಜ್ಜೆ ಇಡಕ್ಕೆ ಬೆಕ್ಕು ಅಡ್ಡಿ ಬಂತು ಅಂತ ಮನೆಯಲ್ಲಿಯೇ ಇದ್ರೆ ಹೇಗೆ ಎಂದು ಹೇಳಿದರು.


21ನೇ ಶತಮಾನ ಜ್ಞಾನ ಇದ್ದವರದ್ದು ಆಗಿದೆ. ಆ ಜ್ಞಾನವನ್ನು ನಿಮ್ಮ ಮಕ್ಕಳಿಗೆ ಸಿಗಬೇಕು. ಅದಕ್ಕೆ ಇಚ್ಛಾಶಕ್ತಿಯಿಂದ ಹೆಜ್ಜೆ ಇಟ್ಟಿದ್ದೇನೆ, ಕಾಕತಾಳೀಯ ಎನೊ ಗೊತ್ತಿಲ್ಲ ಎಲ್ಲಾ ಒಂದೇ ವಯಸ್ಸಿನ ಸ್ವಾಮೀಜಿಗಳಿದ್ದಾರೆ. ಭವಿಷ್ಯ ಬರೆಯುವ ಸ್ವಾಮೀಜಿ ಇಲ್ಲಿದ್ದಾರೆ.


ಸಮುದಾಯದವರ ಆರ್ಥಿಕ ಭಾರ ಕಡಿಮೆ ಮಾಡೋದು ನಮ್ಮ ಉದ್ದೇಶ


ಪರಿಶಿಷ್ಟ ಜಾತಿ ಪಂಗಡದ ಮಕ್ಕಳಿಗೆ 101 ಹಾಸ್ಟೆಲ್ ಹೆಚ್ಚು ಮಾಡಿದ್ದೇವೆ. 28 ಸಾವಿರ ಕೋಟಿ ಎಸ್​​ಇಪಿಟಿಎಸ್​​ಪಿ ನಲ್ಲಿ ಇಟ್ಟಿದ್ದೇವೆ. ಮನೆ ಕಟ್ಟಲು 2 ಲಕ್ಷ ನೀಡಿ, ಉಚಿತ ವಿದ್ಯುತ್ ನೀಡಲಾಗುವುದು. ಸಮುದಾಯದವರ ಆರ್ಥಿಕ ಭಾರ ಕಡಿಮೆ ಮಾಡೋದು ನಮ್ಮ ಯೋಜನೆಗಳ ಉದ್ದೇಶ ಎಂದು ಹೇಳಿದರು.


ಮಾದರಿ ಕರ್ನಾಟಕ ಮಾಡೋಣ


ಮಾದಿಗರ ಚನ್ನಯ್ಯ, ಅಂಬಿಗರ ಚೌಡಯ್ಯ ಎಲ್ಲಾ ಇದ್ರು ಜ್ಞಾನವಂತರು. ನನಗೆ ಎಷ್ಟು ಶಕ್ತಿ ಇದೆ ವಿಧಾನಸೌಧದಿಂದ ಹೊರಡುವ ಆದೇಶ ಸಾಮಾಜಿಕ ನ್ಯಾಯವಾಗಿ ಇರುತ್ತದೆ. ಹುಟ್ಟುವಾಗ ಅರ್ಜಿ ಹಾಕಿ ಜಾತಿ ಬೇಕು ಅಂತ ಹುಟ್ಟಿರಲ್ಲ. ದೇಶದಲ್ಲಿ ಮಾದರಿ ಕರ್ನಾಟಕ ಮಾಡೋಣ ಎಂದು ಜನತೆಗೆ ಕರೆ ನೀಡಿದರು.


ಇದನ್ನೂ ಓದಿ:  Tippu Express: ಅವರೆಲ್ಲ ಮೌನವಾಗಿರೋದು ಯಾಕೆ? ರೈಲಿನ ಹೆಸರು ಮರುನಾಮಕರಣಕ್ಕೆ ಟಿಪ್ಪು ವಂಶಸ್ಥರ ಪ್ರತಿಕ್ರಿಯೆ


ನುಡಿದಂತೆ ನಡೆಯಲು ಸರ್ಕಾರ ಬದ್ಧ


ಎಸ್. ಸಿ., ಎಸ್‌.‌ ಟಿ. ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ಹಿನ್ನಲೆಯಲ್ಲಿ ತಮ್ಮ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸಿದ ಸಮಸ್ತ ಸಮಾಜ ಬಾಂಧವರಿಗೆ ಚಿರಋಣಿಯಾಗಿದ್ದೇನೆ. ನಾಡಿನ ಸಮಗ್ರ ಏಳಿಗೆಗಾಗಿ, ಸಾಮಾಜಿಕ ನ್ಯಾಯ ಒದಗಿಸಲು ಹಾಗೂ ನುಡಿದಂತೆ ನಡೆಯಲು ನಾನು ಹಾಗೂ ನಮ್ಮ ಸರ್ಕಾರ ಸದಾ ಕಟ್ಟಿಬದ್ಧವಾಗಿದೆ ಸ್ಪಷ್ಟಪಡಿಸುತ್ತೇನೆ ಎಂದು ಸಿಎಂ ಶನಿವಾರ ಟ್ವೀಟ್ ಮಾಡಿದ್ದರು.

Published by:Mahmadrafik K
First published: