DK Suresh: ಸಂಸದ ಡಿಕೆ ಸುರೇಶ್​ಗೆ ಕೊರೋನಾ ದೃಢ; ಸಿಬಿಐ ಅಧಿಕಾರಿಗಳ ತಪಾಸಣೆಗೆ ಮನವಿ

ಸೋಮವಾರ ಸಿಬಿಐ ದಾಳಿಯಾದ ಸಂದರ್ಭದಲ್ಲಿ ಅಧಿಕಾರಿಗಳು ಸೇರಿದಂತೆ ಅನೇಕರು ಡಿಕೆ ಸುರೇಶ್​ ಸಂಪರ್ಕಕ್ಕೆ ಬಂದಿದ್ದು, ಅವರೆಲ್ಲಾರು ಕೊರೋನಾ ತಪಾಸಣೆ ಮಾಡಿಸಿಕೊಳ್ಳುವಂತೆ ಕೋರಿದ್ದಾರೆ.

ಸಂಸದ ಡಿ ಕೆ ಸುರೇಶ್

ಸಂಸದ ಡಿ ಕೆ ಸುರೇಶ್

  • Share this:
    ಬೆಂಗಳೂರು (ಅ.6): ಸಂಸದ ಡಿಕೆ ಸುರೇಶ್​ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸಂಸದರು ಖುದ್ದು ಮಾಹಿತಿ ನೀಡಿದ್ದಾರೆ. ಕೊರೋನಾ ಪರೀಕ್ಷೆಗೆ ಒಳಗಾಗಿದ್ದ ನನ್ನ ವರದಿ ಪಾಸಿಟಿವ್​ ಬಂದಿದ್ದು, ನನ್ನ ಸಂಪರ್ಕಕ್ಕೆ ಒಳಗಾದವರು ಮುನ್ನೆಚ್ಚರಿಕೆವಹಿಸಿ ಎಂದು ಟ್ವೀಟ್​ ಮಾಡಿದ್ದಾರೆ. ಇದೇ ವೇಳೆ ನನ್ನ ಆರೋಗ್ಯ ಸ್ಥಿರವಾಗಿದ್ದು, ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ. ಸೋಮವಾರ ಸಿಬಿಐ ಅಧಿಕಾರಿಗಳು ಡಿಕೆ ಶಿವಕುಮಾರ್​ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಡಿಕೆ ಸುರೇಶ್​ ಅವರ ಮನೆ ಮೇಲೆ ಕೂಡ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಸಿಬಿಐ ಅಧಿಕಾರಿಗಳು ಸೇರಿದಂತೆ ಮಾಧ್ಯಮ, ಕಾರ್ಯಕರ್ತರ ನಡುವೆ ನಿನ್ನೆ ಡಿಕೆ ಸುರೇಶ್​ ಕಾಣಿಸಿಕೊಂಡಿದ್ದರು. ಈ ಹಿನ್ನಲೆ ಎಲ್ಲರೂ ಈ ಬಗ್ಗೆ ಎಚ್ಚರವಹಿಸುವಂತೆ ತಿಳಿಸಿದ್ದಾರೆ. 



    ಸದ್ಯ ಡಿಕೆ ಸುರೇಶ್​ ಪ್ರತ್ಯೇಕ ವಾಸಕ್ಕೆ ಮುಂದಾಗಿದ್ದು, ಯಾರ ಸಂಪರ್ಕಕ್ಕೂ ಬಾರದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮಾಸ್ಕ್​ ಧರಿಸಿದ್ದ ಡಿಕೆ ಸುರೇಶ್​ ಕುಮಾರ್​ ಪತ್ರಿಕಾ ಹೇಳಿಕೆ ನೀಡುವ ಸಂದರ್ಭದಲ್ಲಿ ಅನೇಕ ವೇಳೆ ಮಾಸ್ಕ್​ ತೆಗೆದಿರುವುದು ಕಂಡು ಬಂದಿದೆ. ಈ ಹಿನ್ನಲೆ ಸಂಪರ್ಕಿತರು ಮುನ್ನೆಚ್ಚರಿಕೆ ಅಗತ್ಯವಾಗಿದೆ.

    ಇನ್ನು ನಿನ್ನೆ ಅನೇಕರು ಡಿಕೆ ಸುರೇಶ್​ ಸಂಪರ್ಕಕ್ಕೆ ಬಂದಿದ್ದು, ಅವರೆಲ್ಲಾರು ಕೊರೋನಾ ತಪಾಸಣೆ ಮಾಡಿಸಿಕೊಳ್ಳುವಂತೆ ಕೋರಿದ್ದಾರೆ.
    Published by:Seema R
    First published: