ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣ; ಇಡಿಗೆ 5 ಸಾವಿರ ಪುಟಗಳ ದಾಖಲೆ ಸಲ್ಲಿಸಿದ ಡಿಕೆ ಸುರೇಶ್

ಇಡಿ ಅಧಿಕಾರಿಗಳ ಕೋರಿಕೆ ಮೇರೆಗೆ  ವಕೀಲರೊಂದಿಗೆ ಆಗಮಿಸಿ ಡಿ.ಕೆ.ಸುರೇಶ್​ ಅವರು ಡಿ.ಕೆ ಶಿವಕುಮಾರ್ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸುಮಾರು ಐದು ಸಾವಿರ ಪುಟಗಳ ದಾಖಲೆ ಸಲ್ಲಿಸಿದರು.

HR Ramesh | news18-kannada
Updated:October 21, 2019, 8:08 PM IST
ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣ; ಇಡಿಗೆ 5 ಸಾವಿರ ಪುಟಗಳ ದಾಖಲೆ ಸಲ್ಲಿಸಿದ ಡಿಕೆ ಸುರೇಶ್
ಡಿಕೆ ಸುರೇಶ್
  • Share this:
ನವದೆಹಲಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಂಸದ ಡಿ.ಕೆ.ಸುರೇಶ್ ಅವರು ಇಡಿ ಕಚೇರಿಗೆ ರಾಶಿ ರಾಶಿ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಇಡಿ ಅಧಿಕಾರಿಗಳ ಕೋರಿಕೆ ಮೇರೆಗೆ  ವಕೀಲರೊಂದಿಗೆ ಆಗಮಿಸಿ ಡಿ.ಕೆ.ಸುರೇಶ್​ ಅವರು ಡಿ.ಕೆ ಶಿವಕುಮಾರ್ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸುಮಾರು ಐದು ಸಾವಿರ ಪುಟಗಳ ದಾಖಲೆ ಸಲ್ಲಿಸಿದರು.

ದಾಖಲೆ‌ ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ಡಿಕೆಶಿ ಆರ್ಥಿಕ ವ್ಯವಹಾರಗಳ ಸಂಬಂಧ ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದರು. ಡಿ.ಕೆ ಶಿವಕುಮಾರ್ ಬಂಧನದಲ್ಲಿದ್ದಾರೆ. ಹೀಗಾಗಿ ಅವರ ಪರವಾಗಿ ದಾಖಲೆ ಸಲ್ಲಿಸಿದ್ದೇನೆ. ಹೆಚ್ಚಿನ ದಾಖಲೆ ಬೇಕಾದರೆ ಕೊಡುತ್ತೇವೆ.  ರಿಂದ 5 ಸಾವಿರ ಪುಟಗಳ ದಾಖಲೆ‌ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.

ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ನನಗೆ ಈ ಬಗ್ಗೆ ಮಾಹಿತಿ ಇಲ್ಲ, ಟಿವಿಯಲ್ಲಿ ಬರುತ್ತಿದೆ. ಇನ್ನು ಏನೇನ್ ಆಗಿದೆ ನೋಡಬೇಕು. ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿದೆ. ಹಾಗಾಗೀ ಸಿಬಿಐ ಸೇರಿ ಎಲ್ಲ ವಿಚಾರಣೆ ಸಿದ್ದವಾಗಿದ್ದೇವೆ. ಸಮನ್ಸ್ ಪ್ರಶ್ನೆ ಮಾಡಿದ ಅರ್ಜಿ ಅಕ್ಟೋಬರ್ 24ಕ್ಕೆ ಮುಂದೂಡಿಕೆ ಆಗಿದೆ. ಜಾಮೀನು ಅರ್ಜಿ ತೀರ್ಪು ಏನಾಗುತ್ತೆ ಕಾದು ನೋಡಬೇಕು ಎಂದರು.

ಇದನ್ನು ಓದಿ: ಡಿ.ಕೆ. ಶಿವಕುಮಾರ್ ಭೇಟಿಯಾಗಲು ತಿಹಾರ್ ಜೈಲಿಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ

First published: October 21, 2019, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading