ಬಿಎಸ್​ವೈ ಇಳಿಸಲು ಮುಂದಾಗಿರುವ ಮೀರ್​ ಸಾದಿಕ್​ ಯಾರೆಂಬುದು ಗೊತ್ತು; ಡಿಕೆ ಸುರೇಶ್

ಯಡಿಯೂರಪ್ಪ ಅವರನ್ನು ಕೆಳಗಿಳಿಸಲು  ಹೊರಟಿರುವ ಮೀರ್​ ಸಾದಿಕ್​ ಕೂಡ ಈತನೆ. ಈತನ ಹೆಸರನ್ನು ನಾನು ಹೇಳಲ್ಲ. ಮೀರ್ ಸಾದಿಕ್ ತನ ಬಿಜೆಪಿಯವರಿಗೆ ಸಂಬಂಧಿಸಿದ್ದೇ ಹೊರತು ಡಿಕೆಶಿ ಗಲ್ಲ.

ಸಂಸದ ಡಿ ಕೆ ಸುರೇಶ್

ಸಂಸದ ಡಿ ಕೆ ಸುರೇಶ್

  • Share this:
ಬೆಂಗಳೂರು (ಅ.20): ಮೀರ್​ ಸಾದಿಕ್​ ಯಾರೆಂದು ಬಿಜೆಪಿಗರಿಗೆ ಗೊತ್ತು. ಈಗ ಬಿಎಸ್​ವೈ ಇಳಿಸೋದಕ್ಕೂ ಯತ್ನಿಸುತ್ತಿದ್ದಾರೆ. ಯಾರು ಯಾರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂಬ ಕುರಿತು ಬಿಜೆಪಿ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್​ ಸಂಸದ ಡಿಕೆ ಸುರೇಶ್​ ವಾಗ್ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್​ ಒಬ್ಬ ಮೀರ್​ ಸಾದಿಕ್​ ಎಂಬ ಡಿಸಿಎಂ ಅಶ್ವತ್ಥ್​ ನಾರಾಯಣ ಹೇಳಿಕೆಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಅವರು,  ಮಿತ್ರ ಮಂಡಳಿ ಏನೆಲ್ಲ ಲೂಟಿ ಮಾಡಿದ್ದಾರೆ. 2000 ಕೋಟಿ ಲೂಟಿ ಹೊಡೆದಿದ್ದು ಯಾರು ಎಂಬ ಬಗ್ಗೆ ಅಷ್ಟದಿಕ್ಪಾಲಕರು, ಪಂಚಪಾಂಡವರು ಉತ್ತರಿಸಲಿ ಎಂದು ಸವಾಲ್​ ಹಾಕಿದರು. 

ಯಡಿಯೂರಪ್ಪ ಅವರನ್ನು ಕೆಳಗಿಳಿಸಲು  ಹೊರಟಿರುವ ಮೀರ್​ ಸಾದಿಕ್​ ಕೂಡ ಈತನೆ. ಈತನ ಹೆಸರನ್ನು ನಾನು ಹೇಳಲ್ಲ. ಮೀರ್ ಸಾದಿಕ್ ತನ ಬಿಜೆಪಿಯವರಿಗೆ ಸಂಬಂಧಿಸಿದ್ದೇ ಹೊರತು ಡಿಕೆಶಿ ಗಲ್ಲ. ನಾಳೆ ಬೆಳಗ್ಗೆ ಬಿಡಲಿ ಬೇಕಿದರೆ ಆಡಿಯೋವನ್ನು, ಅದೇನು ಡಬ್ಬಾ ಬಿಡೋದಕ್ಕೆ ಚಿತ್ರ ಕೆಟ್ಟೋಯ್ತಾ ಎಂದು ಹರಿಹಾಯ್ದರು.

ಚಿಕ್ಕ ವಯಸ್ಸಲ್ಲಿ ಬಿಜೆಪಿಯವರು ಏನೋ ಅವಕಾಶ ಕೊಟ್ಡಿದ್ದಾರೆ. ಯಡಿಯೂರಪ್ಪ ಇಳಿಸೋದಕ್ಕೆ ಮೀರ್ ಸಾದಕ್ ತನ ಮಾಡಿ ಮಾಧ್ಯಮದ ಮುಂದೆ ಪ್ರಾಮಾಣಿಕ ಫೋಸ್​ ಕೊಡುತ್ತಾನೆ. ಬೆಂಗಳೂರು ಹಣವನ್ನು ಲೂಟಿ ಹೊಡೆದಿದ್ದಾರೆ. ಇವರು ಲೂಟಿ ಹೊಡೆಯೋದು, ಬೇಕಿದರೆ ನಿಮ್ಮ ಜೀವ ನೀವೇ ಉಳಿಸಿಕೊಳ್ಳಿಅಂತ ಜನರಿಗೆ ಹೇಳೋದು. ಕೇಂದ್ರದಿಂದ ಒಂದೇ ಒಂದು ಪರಿಹಾರ ತರೋ ಯೋಗ್ಯತೆ ಇಲ್ಲ ಇವರಿಗೆ. ಬರೀ ಲೂಟಿಕೋರರು ಎಂದು ಉಪಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಭೀಮಾ ನದಿಯಿಂದ ಬಿಟ್ಟ 8 ಲಕ್ಷ ಕ್ಯೂಸೆಕ್ ನೀರು ಎಲ್ಲಿ ಹೋಯಿತು? ಮಹಾರಾಷ್ಟ್ರ ತಪ್ಪು ಲೆಕ್ಕ ಕೊಟ್ಟಿತಾ?

ಇವನಿಗೆ ಡಿಕೆಶಿ ಬಳಿ ಪ್ರಮಾಣ ಮಾಡಿಸೋ ಯೋಗ್ಯತೆ ಇದೆಯಾ ಇವನಿಗೆ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಡಿಸಿಎಂ ವಿರುದ್ಧ ಏಕವಚನದಲ್ಲಿಯೇ ಹರಿಹಾಯದ್ದರು.
Published by:Seema R
First published: