news18-kannada Updated:November 6, 2020, 1:23 PM IST
ಸಂಸದ ಡಿ ಕೆ ಸುರೇಶ್
ಬೆಂಗಳೂರು(ನ. 06): ರಾಜ್ಯ ಸರ್ಕಾರ ಜನತೆ ಬೇಕಾಗಿರುವ ಕೆಲಸವನ್ನ ಮಾಡುವುದಿಲ್ಲ. ಯಾವುದು ಜನಕ್ಕೆ ಬೇಡವೋ ಅದನ್ನೇ ಈ ಸರ್ಕಾರ ಮಾಡುವುದು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಟೀಕಿಸಿದರು. ರಾಜ್ಯ ಸರ್ಕಾರದಿಂದ ಮತಾಂತರ ನಿಷೇಧ, ಗೋಹತ್ಯೆ ನಿಷೇಧದಂಥ ಕಾನೂನುಗಳ ಜಾರಿಗೆ ಚಿಂತನೆ ನಡೆದಿರುವ ಬಗ್ಗೆ ಮಾಧ್ಯಮಗಳಿಗೆ ಡಿಕೆ ಸುರೇಶ್ ಮೇಲಿನ ರೀತಿಯಾಗಿ ಪ್ರತಿಕ್ರಿಯೆ ನೀಡಿದರು. ಅವರದ್ದೇ ಸರ್ಕಾರ ಇದೆ. ಯಾವ ಕಾನೂನಾನದರೂ ತರಲಿ, ಯಾರು ಬೇಡ ಎಂತಾರೆ ಎಂದೂ ಅವರು ವ್ಯಂಗ್ಯ ಮಾಡಿದರು.
ಶಾಲಾರಂಭ ವಿಚಾರದಲ್ಲಿ ಸರ್ಕಾರದ ಧೋರಣೆಗೆ ವಿಷಾದಿಸಿದ ಡಿಕೆ ಸುರೇಶ್, ರಾಜ್ಯ ಸರ್ಕಾರಕ್ಕೆ ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ಇಲ್ಲ. ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಸುರಕ್ಷತೆ ಕೊಡುವುದು ಗೊತ್ತು. ಆದರೆ, ಮಕ್ಕಳ ವಿಚಾರದಲ್ಲಿ ಸರ್ಕಾರಕ್ಕೆ ನಿರ್ಲಕ್ಷ್ಯತೆ ಇದೆ ಎಂದು ಬೇಸರಪಟ್ಟರು.
ಬೇರೆ ಬೇರೆ ದೇಶಗಳಲ್ಲಿ ಶಾಲೆಗಳ ಆರಂಭಕ್ಕೆ ವೈಜ್ಞಾನಿಕ ಮಾನದಂಡಗಳನ್ನ ಅನುಸರಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಎಂಟು ತಿಂಗಳಿನಿಂದಲೇ ಯೋಜಿಸಬೇಕಿತ್ತು. ಅದು ಬಿಟ್ಟು ಈಗ ಜನಾಭಿಪ್ರಾಯ ಪಡೆಯುತ್ತೇವೆ ಅಂತಿದ್ದಾರೆ. ಬಿಐಇಎಲ್ನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು ದುಡ್ಡು ಹೊಡೆಯುವ ಯೋಜನೆ ಮಾಡುವ ಈ ಸರ್ಕಾರ ಮಕ್ಕಳ ಸುರಕ್ಷತೆ ನೋಡುತ್ತಿಲ್ಲ. ಚೀನಾದಲ್ಲಿ ಮೂರ್ನಾಲ್ಕು ತಿಂಗಳಲ್ಲೇ ಸುರಕ್ಷಿತವಾಗಿ ಶಾಲೆ ತೆರೆಯಲಾಗಿದೆ. ಒಂದು ವೇಳೆ ಇಲ್ಲಿಯೂ ಶಾಲೆ ತೆರೆದರೆ ಎಲ್ಲ ಅಗತ್ಯ ಸುರಕ್ಷತೆ ವಹಿಸಬೇಕು ಎಂದು ಡಿಕೆ ಸುರೇಶ್ ಒತ್ತಾಯಿಸಿದರು.
ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಮೋದಿ, ಅಮಿತ್ ಶಾ ಫೋನ್ ಮಾಡಿ ಹೇಳಿದ್ರಾ?; ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಕಿಡಿ
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಕಾಂಗ್ರೆಸ್ ಸಂಸದರು ಇದೇ ವೇಳೆ ಸಮರ್ಥಿಸಿಕೊಂಡರು. ಬಿಹಾರ ಚುನಾವಣೆ ಬಳಿಕ ನೋಡಿ ನಿಮಗೇ ಗೊತ್ತಾಗುತ್ತೆ. ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆಗ ಆಗಬಹುದು. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ಯತ್ನಾಳ್ ವಿರುದ್ಧ ಇನ್ನೂ ಅವರು ಯಾಕೆ ಕ್ರಮ ಕೈಗೊಂಡಿಲ್ಲ? ಅದರರ್ಥ, ಯತ್ನಾಳ್ಗೆ ಸುಮ್ನಿರಪ್ಪ ಅಂದಿರಬೇಕು. ಬಿಜೆಪಿಯೊಳಗೆ ಏನೋ ನಡೆಯುತ್ತಿದೆ ಎನ್ನೋದನ್ನ ಇದು ತೋರಿಸುತ್ತಿದೆ. ಈ ತಿಂಗಳಲ್ಲಿ ಏನೇನು ಬದಲಾವಣೆ ಆಗುತ್ತೆ ಕಾದು ನೋಡೋಣ. ದೀಪಾವಳಿಗೆ ಮೋದಿಯವರು ರಾಜ್ಯಕ್ಕೆ ಏನು ಗಿಫ್ಟ್ ಕೊಡುತ್ತಾರೆ ನೋಡೋಣ ಎಂದು ಡಿಕೆ ಸುರೇಶ್ ಚುಚ್ಚಿದರು.
ಇನ್ನು, ಉಪಚುನಾವಣೆ ಬಳಿಕ ವಿಪಕ್ಷ ನಾಯಕರ ಬದಲಾವಣೆ ಆಗುತ್ತೆ ಎಂಬ ಸಿಎಂ ಹೇಳಿಕೆಯನ್ನು ಡಿಕೆ ಸುರೇಶ್ ತಳ್ಳಿಹಾಕಿದರು. ಕಾಂಗ್ರೆಸ್ನ ಯಾವ ಶಾಸಕರೂ ಸಿದ್ದರಾಮಯ್ಯರ ಬದಲಾವಣೆ ಬಗ್ಗೆ ಮಾತನಾಡಿಲ್ಲ. ನಮ್ಮ ಹೈಕಮಾಂಡ್ ಕೂಡ ಸಿದ್ದರಾಮಯ್ಯರನ್ನು ಬದಲಾಯಿಸುವ ಮಾತನಾಡಿಲ್ಲ. ಅಂಥದ್ದರಲ್ಲಿ ಯಡಿಯೂರಪ್ಪ ಅವರಿಗೆ ಕನಸು ಬಿದ್ದಿರಬೇಕು. ಅವರಿಗೆ ಇತ್ತೀಚೆಗೆ ಕನಸು ಬೀಳುವುದು ಜಾಸ್ತಿಯಾಗಿರಬೇಕು. ಅದಕ್ಕೆ ಹೀಗೆಲ್ಲಅ ಮಾತನಾಡುತ್ತಿದ್ಧಾರೆ ಎಂದರು.
ಇದನ್ನೂ ಓದಿ: ಮಾರ್ಷಲ್ಗಳ ಮೇಲೆ ಹಲ್ಲೆ ಮಾಡಿದರೆ ಜೈಲು ಶಿಕ್ಷೆ; ಪೊಲೀಸ್ ಆಯುಕ್ತ ಕಮಲ್ ಪಂತ್ಇನ್ನು, ಆರ್ ಆರ್ ನಗರ ಉಪಚುನಾವಣೆ ಬಗ್ಗೆ ಮಾತನಾಡಿದ ಡಿಕೆ ಸುರೇಶ್, ಈ ಬಾರಿ ಕಾಂಗ್ರೆಸ್ ಪರ ಅಂಡರ್-ಕರೆಂಟ್ ಇದ್ದು ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜರಾಜೇಶ್ವರಿ ನಗರದಲ್ಲಿ ಈ ಬಾರಿ ಯಾವುದೇ ನಿರ್ದಿಷ್ಟ ವಿಷಯ ಇರಲಿಲ್ಲ. ಜೊತೆಗೆ ಕೋವಿಡ್ ಇತ್ತು. ಹೀಗಾಗಿ, ಇಲ್ಲಿ ಮತದಾನ ಆಗಿದೆ. ಆದರೆ, ಕಾಂಗ್ರೆಸ್ಗೆ ಈ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಕಾರ್ಯಕರ್ತರು ಗೆಲುವಿನ ಉತ್ಸಾಹದಲ್ಲಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಅಭ್ಯರ್ಥಿ ಮುನಿರತ್ನ ತಮ್ಮ ವಿರುದ್ಧದ ಕೇಸ್ ಖುಲಾಸೆಗೊಂಡಿದೆ ಎಂದು ಹೇಳಿಕೊಳ್ಳುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಹೈಕೋರ್ಟ್ನಲ್ಲಿ ಐಡಿ ಪ್ರಕರಣ ಇನ್ನೂ ವಜಾಗೊಂಡಿಲ್ಲ. ಚುನಾವಣೆಯಲ್ಲಿ ಎರಡನೇ ಸ್ಥಾನ ಬಂದಿರುವ ತಮ್ಮನ್ನು ವಿಜಯಿ ಎಂದು ಘೋಷಿಸಿ ಎಂದು ಮಾಡಿದ ಮನವಿಯಷ್ಟೇ ವಜಾ ಆಗಿರುವುದು. ಮುನಿರತ್ನ ಅವರು ಮಾಧ್ಯಮದವರಿಗೇ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಕುಟುಕಿದರು.
ವರದಿ: ಶ್ರೀನಿವಾಸ ಹಳಕಟ್ಟಿ
Published by:
Vijayasarthy SN
First published:
November 6, 2020, 1:23 PM IST