ಮಂಡ್ಯ: ಸಂಸದ ಡಿಕೆ ಸುರೇಶ್ (MP DK Suresh) ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ತಮ್ಮನ ಮುಂದೆ ಅಸಹಾಯಕರಾಗಿದ್ದಾರೆ ಎಂದು ಮದ್ದೂರು (Maddur) ಟಿಕೆಟ್ ವಂಚಿತ ಗುರುಚರಣ್ (Gurucharan) ಆರೋಪಿಸಿದ್ದಾರೆ. ಮದ್ದೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಗುರುಚರಣ್ ಇಂದು ಜೆಡಿಎಸ್ನಿಂದ (JDS) ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇಂದು ಬೆಳಗ್ಗೆ ಗುರುಚರಣ್ ನಿವಾಸಕ್ಕೆ ಆಗಮಿಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy) ತಿಂಡಿ ಸೇವನೆ ಮಾಡಿದರು.
ಟಿಕೆಟ್ ಸಿಗದ ಹಿನ್ನೆಲೆ ಡಿ.ಕೆ.ಶಿವಕುಮಾರ್ - ಡಿ.ಕೆ.ಸುರೇಶ್ ವಿರುದ್ಧ ಗುರುಚರಣ್ ವಾಗ್ದಾಳಿ ನಡೆಸಿದರು. ಮದ್ದೂರಿನ ಸೋಮನಹಳ್ಳಿ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗುರುಚರಣ್, ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಟೆರರಿಸ್ಟ್ ಗಳು ಹಣ ತಂದರೆ ಅವರಿಗೂ ಟಿಕೆಟ್ ಸಿಗಲಿದೆ ಎಂದು ಆರೋಪಿಸಿದರು.
ಡಿಕೆ ಶಿವಕುಮಾರ್ ಅಸಹಾಯಕರಾದ್ರಾ?
ಡಿ.ಕೆ.ಸುರೇಶ್ ಕಾಂಗ್ರೆಸ್ ಪಕ್ಷವನ್ನ ಹಾಳು ಮಾಡ್ತಿದ್ದಾರೆ. ಅವರ ಸ್ವಂತ ಮನೆಯ ಆಸ್ತಿ ಮಾಡಿಕೊಂಡಿದ್ದಾರೆ. ತಮ್ಮನ ಮುಂದೆ ಡಿ.ಕೆ.ಶಿವಕುಮಾರ್ ಸಹ ಅಸಹಾಯಕರಾಗಿದ್ದಾರೆ. ಎಸ್.ಎಂ.ಕೃಷ್ಣರಿಗೂ (Former CM SM Krishna) ನಾನು ಸಂಪರ್ಕ ಮಾಡಿದ್ದೇನೆ. ಅವರು ಸಹ ನನ್ನ ಪರವಾಗಿ ಮಾತನಾಡಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ: Mangaluru North: ತಪ್ಪಿದ ಕಾಂಗ್ರೆಸ್ ಟಿಕೆಟ್ ಮಿಸ್; ಜೆಡಿಎಸ್ನತ್ತ ಹೊರಟ ಮೊಯಿದ್ದಿನ್ ಬಾವಾ
ಜೆಡಿಎಸ್ನಿಂದ ಸ್ಪರ್ಧೆ
ಆದರೆ ಎಸ್ಎಂ ಕೃಷ್ಣ ಅವರ ಮಾತಿಗೂ ಕಿವಿಗೊಡಲಿಲ್ಲ, ಇಲ್ಲಿ ಡಿ.ಕೆ.ಶಿವಕುಮಾರ್ ಅಸಹಾಯಕರಾಗಿದ್ದಾರೆ. ನಾನು ಈಗ ಜೆಡಿಎಸ್ ಸೇರಲು ಬಯಸಿದ್ದೇನೆ. ಇನ್ನೆಷ್ಟು ವರ್ಷ ದುಡಿಯಲು ಸಾಧ್ಯ. ನನ್ನ ಕಾರ್ಯಕರ್ತರು, ಹಿತೈಷಿಗಳ ಜೊತೆ ಮಾತನಾಡಿ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ