Breaking: ಕನಕಪುರದಿಂದ ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್

ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ

ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ

DK Suresh Nomination: ಯಾರಿಗೂ ಮಾಹಿತಿ ನೀಡದೇ ಆಪ್ತರೊಂದಿಗೆ ಕನಕಪುರ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Ramanagara, India
  • Share this:

ರಾಮನಗರ: ಸಂಸದ ಡಿಕೆ ಸುರೇಶ್ (MP DK Suresh) ಕನಕಪುರ ವಿಧಾನಸಭಾ ಕ್ಷೇತ್ರದಿಂದ (Kanakapur Constituency) ಪಕ್ಷೇತರ  ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸೋದರ ಡಿಕೆ ಶಿವಕುಮಾರ್  (KPCC President DK Shivakumar) ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮೂರು ದಿನಗಳ ಹಿಂದೆ ಮೆಗಾ ರೋಡ್ ಶೋ ಮೂಲಕ ಡಿಕೆ ಶಿವಕುಮಾರ್ ನಾಮಪತ್ರ (Nomination) ಸಲ್ಲಿಸಿದ್ದಾರೆ. ಯಾರಿಗೂ ಮಾಹಿತಿ ನೀಡದೇ ಆಪ್ತರೊಂದಿಗೆ ಕನಕಪುರ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.


ಡಿಕೆ ಶಿವಕುಮಾರ್ ಅವರನ್ನು ಸೋಲಿಸಲು ಬಿಜೆಪಿ ಸಚಿವ ಆರ್ ಅಶೋಕ್​ ಅವರನ್ನು ಕಣಕ್ಕಿಳಿಸಿದೆ. ಆರ್ ಅಶೋಕ್ ಕನಕಪುರ ಮತ್ತು ಪದ್ಮನಾಭನಗರದಿಂದಲೂ ಸ್ಪರ್ಧೆ ಮಾಡಿದ್ದಾರೆ.


ವಿಎಸ್ ಉಗ್ರಪ್ಪ ಸ್ಪಷ್ಟನೆ 


ಈ ಕುರಿತು ನ್ಯೂಸ್ 18 ಜೊತೆ ಮಾತನಾಡಿದ ಮಾಜಿ ಸಂಸದ ವಿಎಸ್ ಉಗ್ರಪ್ಪ, ಎರಡು ಕ್ಷೇತ್ರಗಳಲ್ಲಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇದರ ಹಿಂದೆ ರಾಜಕೀಯ ತಂತ್ರಗಾರಿಗೆ ಇರಲಿದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಮೇಲೆ ಪ್ರಕರಣಗಳಿರೋದು ನಿಜ. ಆದ್ರೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿಲ್ಲ. ಆದ್ದರಿಂದ  ನಾಮಪತ್ರ ತಿರಸ್ಕೃತ ಆಗಲ್ಲ. ಇದೊಂದು ರಾಜಕೀಯ ಆಟ ಎಂದು ಖಚಿತಪಡಿಸಿದರು.


ಇದನ್ನೂ ಓದಿ: Madal Virupakshappa ಮನೆಗೆ ಬಂದಿದ್ದ 10 ಸಾವಿರ ಜನರು ಹೇಳಿದ್ದೇನು?


ಯುಟಿ ಖಾದರ್ ನಾಮಪತ್ರ ಸಲ್ಲಿಕೆ

top videos


    ಮಾಜಿ ಸಚಿವ ಯು ಟಿ ಖಾದರ್ ನಾಮಪತ್ರ ಸಲ್ಲಿಕೆ ಮುಂಚೆ ಮೂರೂ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ನಂತರ ಸಾವಿರಾರು ಕಾರ್ಯಕರ್ತರೊಂದಿಗೆ ಉಳ್ಳಾಲ ಬೈಲ್ ನಿಂದ ಮೆರವಣಿಗೆ ಮೂಲಕ ಬಂದು ಉಳ್ಳಾಲ ನಗರಸಭೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

    First published: